ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಸಾವು ಪ್ರಕರಣ-ಪೊಲೀಸರ ತಲೆದಂಡ

ಪುರಿ: ಒಡಿಶಾದ ಜಗದ್ವಿಖ್ಯಾತ ಪುರಿ ಜಗನ್ನಾಥ ದೇಗುಲದ ಐತಿಹಾಸಿಕ ರಥಯಾತ್ರೆ ವೇಳೆ ಸಂಭವಿಸಿದ ಕಾಲ್ತುಳಿತ ದುರಂತದಲ್ಲಿ ಮೂವರು ಸಾವನ್ನಪ್ಪಿದ್ದು,ಈ ಸಂಬಂಧ ಒಡಿಶಾ ಸರ್ಕಾರ ಕಠಿಣ ಕ್ರಮ ಕೈಗೊಂಡಿದೆ.

ಒಡಿಶಾದ ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ ಉಂಟಾಗಿದ್ದು, ಮೂವರು ಸಾವನ್ನಪ್ಪಿದ್ದು,30ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಜಗನ್ನಾಥ, ಬಲಭದ್ರ ಮತ್ತು ಸುಭದ್ರ ದೇವಿಯ ವಿಗ್ರಹಗಳನ್ನು ಹೊತ್ತ ಮೂರು ರಥಗಳ ಯಾತ್ರೆ ಪ್ರಾರಂಭವಾಗಿ,ಜಗನ್ನಾಥ ದೇವಸ್ಥಾನದಿಂದ ಸುಮಾರು ಮೂರು ಕಿಲೋಮೀಟರ್ ದೂರದಲ್ಲಿರುವ ಶ್ರೀ ಗುಂಡಿಚಾ ದೇವಸ್ಥಾನದ ಬಳಿ ಬಂದಾಗ ಈ ಘಟನೆ ಸಂಭವಿಸಿದೆ.

ಬೆಳಗಿನ ಜಾವ 4.30 ರ ಸುಮಾರಿಗೆ ಪವಿತ್ರ ರಥಗಳು ಗುಂಡಿಚಾ ದೇವಸ್ಥಾನದಲ್ಲಿ ಇದ್ದವು ಮತ್ತು ದರ್ಶನಕ್ಕಾಗಿ ದೊಡ್ಡ ಜನಸಮೂಹ ಜಮಾಯಿಸಿತ್ತು. ಜನಸಂದಣಿ ಹೆಚ್ಚಾದಾಗ ಕೆಲವರು ಬಿದ್ದು ಕಾಲ್ತುಳಿತ ಪ್ರಾರಂಭವಾಯಿತು.

ಮೂವರು ಸ್ಥಳದಲ್ಲೇ ಸಾವನ್ನಪ್ಪಿದರು. ಇವರಲ್ಲಿ ಇಬ್ಬರು ಮಹಿಳೆಯರು, ಪ್ರಭಾತಿ ದಾಸ್ ಮತ್ತು ಬಸಂತಿ ಸಾಹು ಮತ್ತು 70 ವರ್ಷದ ಪ್ರೇಮಕಾಂತ್ ಮೊಹಂತಿ ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟ ಮೂವರೂ ಖುರ್ದಾ ಜಿಲ್ಲೆಯವರು, ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಪರೀಕ್ಷೆಯಿಂದ ಸಾವಿಗೆ ನಿಖರವಾದ ಕಾರಣ ತಿಳಿದುಬರುತ್ತದೆ ಎಂದು ಪುರಿ ಜಿಲ್ಲಾಧಿಕಾರಿ ಸಿದ್ಧಾರ್ಥ್ ಶಂಕರ್ ಸ್ವೈನ್ ಹೇಳಿದ್ದಾರೆ.

ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಒಡಿಶಾ ಸರ್ಕಾರ ಅಧಿಕಾರಿಗಳ ತಲೆದಂಡ ಮಾಡಿದೆ. ಪುರಿ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಿದೆ.ಅಲ್ಲದೆ ಹಲವು ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದೆ.

ಈ ಬಗ್ಗೆ ಮಾಹಿತಿ ನೀಡಿರುವ ಒಡಿಶಾ ಮುಖ್ಯಮಂತ್ರಿ ಮೋಹನ್ ಚರಣ್ ಮಾಝಿ, ದೇವಾಲಯದ ಕಾಲ್ತುಳಿತದ ನಂತರ ಪುರಿ ಕಲೆಕ್ಟರ್ ಸಿದ್ಧಾರ್ಥ್ ಎಸ್ ಸ್ವೈನ್ ಮತ್ತು ಎಸ್ಪಿ ಬಿನಿತ್ ಅಗರ್ವಾಲ್ ಅವರನ್ನು ವರ್ಗಾವಣೆ ಮಾಡಲಾಗಿದೆ” ಎಂದು ಹೇಳಿದ್ದಾರೆ.

ಕಾಲ್ತುಳಿತದ ಹಿನ್ನೆಲೆಯಲ್ಲಿ ಪುರಿ ಡಿಸಿಪಿ ಬಿಷ್ಣು ಚರಣ್ ಪತಿ ಮತ್ತು ಪೊಲೀಸ್ ಕಮಾಂಡೆಂಟ್ ಅಜಯ್ ಪಧಿ ಅವರನ್ನು ಅಮಾನತುಗೊಳಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಪುರಿ ಜಗನ್ನಾಥ ರಥಯಾತ್ರೆ ವೇಳೆ ಕಾಲ್ತುಳಿತ; ಸಾವು ಪ್ರಕರಣ-ಪೊಲೀಸರ ತಲೆದಂಡ Read More

ಹೃದಯಾಘಾತದಿಂದ ನಟಿ ಶೆಫಾಲಿ ಜರಿವಾಲಾ ನಿಧನ

ಮುಂಬೈ: ಕಳೆದ ಒಂದೆರಡು ವರ್ಷಗಳಿಂದ ಹೃದಯಾಘಾತ ಪ್ರಕರಣಗಳು ಹೆಚ್ಚಾಗುತ್ತಿದೆ,ಅದರಲ್ಲೂ‌ ಹರೆಯದವರು,ಮಧ್ಯವಯಸ್ಕರಲ್ಲೇ ಅತೀ ಹೆಚ್ಚು.

ಅದರಲ್ಲೂ ಹಾಸನ ಜಿಲ್ಲೆಯಲ್ಲಿ ಮೇ ತಿಂಗಳಿಂದ ಜೂನ್ 25‌ ರ ವರಗೆ ನಾಲ್ಕೈದು ಮಂದಿ ಯುವಜನರು ಹೃದಯಾಘಾತಕ್ಕೆ ಬಲಿಯಾದ ಉದಾಹರಣೆ ಇದೆ.

ಅಭಿಷೇಕ್ ಮೇ.20,ಸಂಧ್ಯ ಮೇ,ನಿಶಾಂತ್ ಜೂನ್, ಸುಪ್ರೀತಾ ಜೂನ್ 25,ಚೇತನ್, ಹೀಗೆ ಹಲವು ಮಂದಿ ಯುವಜನರೇ ಹೃದಯಾಘಾತದಿಂದ ನಿಧನರಾಗಿದ್ದು ಆತಂಕ ಸಹಾ ಮೂಡಿದೆ.

ಇದೀಗ ಹಿಂದಿ ಬಿಗ್ ಬಾಸ್ 13ರ ಸ್ಪರ್ಧಿಯಾಗಿದ್ದ ನಟಿ ಶೆಫಾಲಿ ಜರಿವಾಲಾ ಕೂಡಾ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.

42 ವರ್ಷದ ಶೆಫಾಲಿ ಮುಂಬೈನ ಅಂಧೇರಿ ಲೋಖಂಡ್‌ವಾಲಾದಲ್ಲಿ ವಾಸಿಸುತ್ತಿದ್ದರು. ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಶೆಫಾಲಿ ಅವರನ್ನು ಹತ್ತಿರದ ಆಸ್ಪತ್ರೆಗೆ ಕರೆದೊಯ್ಯಲಾಯಿತು.ಆದರೆ ಅಷ್ಟರಲ್ಲೆ ಮೃತಪಟ್ಟಿದ್ದರು.

ಪುನೀತ್ ರಾಜ್‌ಕುಮಾರ್ ಜೊತೆ ಹುಡುಗರು ಚಿತ್ರದಲ್ಲಿ ನಾ ಬೋರ್ಡು ಇರದ ಬಸ್ಸನು… ಹಾಡಿಗೆ ಶೆಫಾಲಿ ಮಸ್ತ್ ನೃತ್ಯ ಮಾಡಿ ಕನ್ನಡದಲ್ಲೂ ಸದ್ದು ಮಾಡಿದ್ದರು.

ಶೆಫಾಲಿ ಅವರ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಕೂಪರ್ ಆಸ್ಪತ್ರೆಗೆ ಕಳುಹಿಸಲಾಗಿದೆ.

1982ರ ಡಿಸೆಂಬರ್ 15ರಂದು ಜನಿಸಿದ ಶೆಫಾಲಿ ಮುಂಬೈನಲ್ಲಿ ಬೆಳೆದರು. 2004ರಲ್ಲಿ ಹರ್ಮೀತ್ ಸಿಂಗ್ ಜೊತೆ ವಿವಾಹವಾದರು.
ಬಳಿಕ ವಿಚ್ಛೇದನ ಪಡೆದು 2014ರಲ್ಲಿ ಪರಾಗ್ ತ್ಯಾಗಿ ಅವರನ್ನು ಮದುವೆಯಾಗಿ ಸಂಸಾರ ನಡೆಸುತ್ತಿದ್ದರು.

ಕಾಂತಾ ಲಗಾ ಹಾಡಿನ ಮೂಲಕ ಬಾಲಿವುಡ್ ನಲ್ಲೂ ಅವರು ಹೆಸರು ಮಾಡಿದ್ದರು. ಶುಕ್ರವಾರ ತಡರಾತ್ರಿ 11.15ರ ಸುಮಾರಿಗೆ ತೀವ್ರ ಹೃದಯಾಘಾತವಾಗಿದೆ, ಶೆಫಾಲಿ ಅವರನ್ನು ತಕ್ಷಣ ಪತಿ ಪರಾಗ್ ತ್ಯಾಗಿ ಮುಂಬೈನ ಬೆಲ್ಲೆವ್ಯೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆಗೆ ಕರೆತಂದಿದ್ದಾರೆ.

ಆದರೆ ಅಷ್ಟುಹೊತ್ತಿಗಾಗಲೇ ಶೆಫಾಲಿ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಹೃದಯಾಘಾತದಿಂದ ನಟಿ ಶೆಫಾಲಿ ಜರಿವಾಲಾ ನಿಧನ Read More

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ: ಶುಭಾಂಶು ಶುಕ್ಲಾ ಸೇರಿ ನಾಲ್ವರು ಅಂತರಿಕ್ಷಕ್ಕೆ

ನವದೆಹಲಿ: ಆಕ್ಸಿಯಂ-4 ಅಂತರಿಕ್ಷ ಕಾರ್ಯಕ್ರಮದ ಭಾಗವಾಗಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ಸೇರಿದಂತೆ ನಾಲ್ವರು ಗಗನಯಾತ್ರಿಗಳನ್ನು ಹೊತ್ತ ಸ್ಪೇಸ್‌ಎಕ್ಸ್‌ನ ಫಾಲ್ಕನ್‌-9 ರಾಕೆಟ್‌ ಫ್ಲಾರಿಡಾದ ಕೆನಡಿ ಬಾಹ್ಯಾಕಾಶ ಕೇಂದ್ರದಿಂದ ಯಶಸ್ವಿಯಾಗಿ ನಭಕ್ಕೆ ಹಾರಿತು.

ಬುಧವಾರ ಮಧ್ಯಾಹ್ನ 12.3ರ ಸುಮಾರಿಗೆ ಆಕ್ಸಿಯಂ-4 ನೌಕೆ ಯಶಸ್ವಿಯಾಗಿ ಉಡಾವಣೆ ಆಯಿತು.

ಅಮೆರಿಕದ ಕಮಾಂಡರ್ ಪೆಗ್ಗಿ ವಿಟ್ಸನ್ ಈ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದಾರೆ.

ಭಾರತದ ಐಎಎಫ್ ಗ್ರೂಪ್ ಕ್ಯಾಪ್ಟನ್ ಶುಭಾಂಶು ಶುಕ್ಲಾ ಮಿಷನ್ ಪೈಲಟ್ ಆಗಿ ಮತ್ತು ಹಂಗೇರಿಯನ್ ಗಗನಯಾತ್ರಿ ಟಿಬೋರ್ ಕಾಪು ಮತ್ತು ಪೋಲೆಂಡ್‌ನ ಸ್ಲಾವೋಸ್ಜ್ ಉಜ್ನಾನ್ಸ್ಕಿ-ವಿಸ್ನಿವ್ಸ್ಕಿ ಮಿಷನ್ ತಜ್ಞರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

ಶುಭಾಂಶು ಶುಕ್ಲಾ ಅವರ ತಂದೆ-ತಾಯಿ ಪುತ್ರನಿಗೆ ಶುಭ ಹಾರೈಸಿದರು. ನೌಕೆ ಯಶಸ್ವಿಯಾಗಿ ಉಡಾವಣೆ ಆಗುತ್ತಿದ್ದಂತೆ ಖುಷಿ ವ್ಯಕ್ತಪಡಿಸಿದರು.

ಆಕ್ಸಿಯಮ್ -4 ಗಗನಯಾತ್ರಿಗಳು ಸುಮಾರು 28 ಗಂಟೆಗಳ ಕಕ್ಷೆಯ ಪ್ರಯಾಣದ ನಂತರ ನಾಳೆ ಸಂಜೆ 4.30 ರ ಸುಮಾರಿಗೆ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ತಲುಪಲಿದ್ದಾರೆ.

1984 ರಲ್ಲಿ ಸೋವಿಯತ್ ಕಾರ್ಯಾಚರಣೆಯ ಭಾಗವಾಗಿ ವಿಂಗ್ ಕಮಾಂಡರ್ ರಾಕೇಶ್ ಶರ್ಮಾ ಬಾಹ್ಯಾಕಾಶ ಪ್ರಯಾಣ ಮಾಡಿದ ನಾಲ್ಕು ದಶಕಗಳ ನಂತರ, ಗ್ರೂಪ್ ಕ್ಯಾಪ್ಟನ್ ಶುಕ್ಲಾ ಬಾಹ್ಯಾಕಾಶಕ್ಕೆ ಪ್ರಯಾಣಿಸಿರುವ ಎರಡನೇ ಭಾರತೀಯ ಗಗನಯಾತ್ರಿಯಾಗಿದ್ದಾರೆ‌

ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಐತಿಹಾಸಿಕ ಸಾಧನೆ: ಶುಭಾಂಶು ಶುಕ್ಲಾ ಸೇರಿ ನಾಲ್ವರು ಅಂತರಿಕ್ಷಕ್ಕೆ Read More

ಸತತ ಮಳೆಗೆ ತತ್ತರಿಸಿದ ಉತ್ತರಾಖಂಡ್

ಡೆಹ್ರಾಡೂನ್​: ಉತ್ತರಾಖಂಡ್​ನಲ್ಲಿ ಕಳೆದ 48 ಗಂಟೆಗಳಿಂದ ಒಂದೇ ಸಮನೆ ಮಳೆ ಸುರಿಯುತ್ತಿದ್ದು ಬಹಳಷ್ಟು ರಸ್ತೆಗಳು ಬಂದ್ ಆಗಿವೆ.

ಗುಡ್ಡಗಾಡು ಪ್ರದೇಶದಲ್ಲಿ ಮಳೆಯಿಂದ ಹೆದ್ದಾರಿ, ಗಡಿ ರಸ್ತೆಗಳು ಸೇರಿದಂತೆ 24 ರಸ್ತೆಗಳು ಸಂಪೂರ್ಣ ಹಾಳಾಗಿದ್ದು ಸಂಚಾರ ಬಂದ್​ ಆಗವೆ,ಹಾಗಾಗಿ ಪ್ರಯಾಣಿಕರು ಸಂಕಷ್ಟಕ್ಕೆ ಸಿಲುಕಿದ್ದಾರೆ.

ಮಳೆ ನಿರಂತರವಾಗಿ ಸುರಿಯುತ್ತಿರುವುದರಿಂದ ಗುಡ್ಡ ಕುಸಿತ ಸೇರಿದಂತೆ ಅನೇಕ ನೈಸರ್ಗಿಕ ವಿಪತ್ತುಗಳು ಸಂಭವಿಸಿದೆ. ಇದರಿದಾಗಿ 18 ಜನರು ಸಾವನ್ನಪ್ಪಿದ್ದು, ಇಬ್ಬರು ಕಣ್ಮರೆಯಾಗಿದ್ದಾರೆ.

ಗುಡ್ಡಗಾಡು ಪ್ರದೇಶದಲ್ಲಿ ಸಂಭವಿಸಿದ ನೈಸರ್ಗಿಕ ವಿಪತ್ತಿನ ನಿರ್ವಹಣೆ ಸಂಬಂಧ ಮುಖ್ಯ ಮಂತ್ರಿ ಪುಷ್ಕರ್​ ಸಿಂಗ್​ ಧಾಮಿ ವಿಪತ್ತು ನಿರ್ವಹಣಾ ಇಲಾಖೆ ಅಧಿಕಾರಿಗಳೊಂದಿಗೆ ಹಲವು ಸುತ್ತಿನ ಸಭೆ ನಡೆಸಿದ್ದಾರೆ.

ಮಳೆ ಹೀಗೇ ಮುಂದುವರೆದರೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಲಿದೆ,ಹಾಗಾಗಿ ತಕ್ಷಣವೇ ರಕ್ಷಣೆ ಮತ್ತು ಪರಿಹಾರ ಕಾರ್ಯ ಕೈಗೊಳ್ಳುವಂತೆ ಸೂಚಿಸಿದ್ದಾರೆ‌

ನೈಸರ್ಗಿಕ ವಿಪತ್ತಿನಿಂದ ಜೂನ್​ 1ರಿಂದ ಜೂನ್​ 23ರ ನಡುವೆ 18 ಮಂದಿ ಸಾವನ್ನಪ್ಪಿದ್ದು, 8 ಮಂದಿ ಗಾಯಗೊಂಡಿದ್ದಾರೆ, ಇಬ್ಬರು ನಾಪತ್ತೆಯಾಗಿದ್ದಾರೆ.

ರಸ್ತೆ ಅಪಘಾತದಲ್ಲಿ ನೂನ್​ 1ರಿಂದ 23ರ ವರೆಗೆ 28 ಮಂದಿ ಸಾವನ್ನಪ್ಪಿದ್ದು, 128 ಮಂದಿ ಗಾಯಗೊಂಡಿದ್ದಾರೆ. ಚಾರ್​ಧಾಮ್​ ಯಾತ್ರೆಯಲ್ಲಿ 142 ಯಾತ್ರಾರ್ಥಿಗಳು ಸಾವನ್ನಪ್ಪಿದ್ದಾರೆ.

ಭಗೇಶ್ವರ ಜಿಲ್ಲೆ ಸೇರಿದಂತೆ ಹಲವು ಕಡೆ ಭಾರೀ ಮಳೆಯಿಂದಾಗಿ ಆರೇಂಜ್​ ಅಲರ್ಟ್​ ಘೋಷಣೆ ಮಾಡಲಾಗಿದ್ದು, ಡೆಹ್ರಾಡೂನ್​, ನೈನಿತಾಲ್​ ಮತ್ತು ರುದ್ರಪ್ರಯಾಗ್​ ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಯೆಲ್ಲೊ ಅಲರ್ಟ್​ ಘೋಷಣೆ ಮಾಡಲಾಗಿದೆ.

​​

ಸತತ ಮಳೆಗೆ ತತ್ತರಿಸಿದ ಉತ್ತರಾಖಂಡ್ Read More

ಪಹಲ್ಗಾಮ್ ಪ್ರವಾಸಿಗರ ಬಲಿ ಪಡೆದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್

ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ 26 ಮಂದಿ ಪ್ರವಾಸಿಗರನ್ನು ಬಲಿ ತೆಗೆದುಕೊಂಡಿದ್ದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರನ್ನು ಎನ್‌ಐಎ ಅಧಿಕಾರಿಗಳು ಬಂಧಿಸಿದ್ದಾರೆ.

ಪರ್ವೈಜ್ ಅಹ್ಮದ್ ಜೋಥರ್ ಮತ್ತು ಬಶೀರ್ ಅಹ್ಮದ್ ಜೋಥರ್ ಎಂಬವರನ್ನು ಬಂಧಿಸಲಾಗಿದೆ.

ಇವರಿಬ್ಬರು ಪಹಲ್ಗಾಮ್ ನಿವಾಸಿಗಳಾಗಿದ್ದು, ನಿಷೇಧಿತ ಪಾಕಿಸ್ತಾನ ಮೂಲದ ಲಷ್ಕರ್-ಎ-ತೈಬಾ ಸಂಘಟನೆಗೆ ಸೇರಿದ ಮೂವರು ಉಗ್ರರಿಗೆ ಆಶ್ರಯ ನೀಡಿದ್ದರು.

ತನಿಖೆ ವೇಳೆ, ಬಂಧಿತರು ದಾಳಿಕೋರರ ಗುರುತುಗಳನ್ನು ಬಹಿರಂಗಪಡಿಸಿದ್ದು, ಉಗ್ರರು ಪಾಕಿಸ್ತಾನಿ ಪ್ರಜೆಗಳು ಎಂದು ದೃಢಪಟ್ಟಿದೆ.

ಆರೋಪಿಗಳ ವಿರುದ್ಧ ಯುಎಪಿಎ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದ್ದು, ತನಿಖೆ ನಡೆಯುತ್ತಿದೆ.

ಏಪ್ರಿಲ್ 22 ರಂದು, ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಉಗ್ರರು ಪ್ರವಾಸಿಗರ ಮೇಲೆ ಗುಂಡಿನ ದಾಳಿ ನಡೆಸಿ 26 ಜನರನ್ನು ಹತ್ಯೆಗೈದಿದ್ದರು.

ಪಹಲ್ಗಾಮ್ ಪ್ರವಾಸಿಗರ ಬಲಿ ಪಡೆದ ಉಗ್ರರಿಗೆ ಆಶ್ರಯ ನೀಡಿದ್ದ ಇಬ್ಬರು ಅರೆಸ್ಟ್ Read More

ಉಡುಪಿ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್

ಉಡುಪಿ: ಉಡುಪಿ ಜಿಲ್ಲೆಯ ಪ್ರಸಿದ್ದ ಸಾವಯವ ಕೃಷಿ ತಜ್ಞ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್ ಲಭಿಸಿದೆ.

ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಜೋಸೆಫ್ ಲೋಬೋ ಅವರನ್ನು ಗೌರವ ಡಾಕ್ಟಾರೇಟ್ ನೀಡಿ ಗೌರವಿಸಿದೆ.

ಜೋಸೆಫ್ ಲೋಬೋ ಅವರು
ಪ್ರಸ್ತುತ ಕೃಷಿ ತಜ್ಞರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಇವರ ಸಾಧನೆಗಳು: ಕರ್ನಾಟಕದಲ್ಲಿ ಮೊತ್ತ ಮೊದಲ ಬಾರಿ ಹೈಡ್ರೋಪೋನಿಕ್ ವಿಧಾನದಲ್ಲಿ ಮಲ್ಲಿಗೆ ಕೃಷಿ.
ಮೊತ್ತ ಮೊದಲ ಬಾರಿಗೆ ಭಾರತದಲ್ಲಿ ತಾರಸಿಯಲ್ಲಿ 2,70,000 ಮೌಲ್ಯದ ಮಿಯಾಜಾಕಿ ಮಾವಿನ ಹಣ್ಣಿನ ಬೆಳೆ.
ತಾರಸಿಯಲ್ಲಿ 500 ಕ್ಕೂ ಹೆಚ್ಚು ದೇಶ ವಿದೇಶಗಳ ಗಿಡಗಳ ಯಶಸ್ವಿ ಸಾಧನೆ.
ಸಾವಿರಾರು ಜನರಿಗೆ ಜೋಸೆಫ್ ಲೋಬೋ ಶಂಕರಪುರ ಎಂಬ‌ ಯು ಟ್ಯೂಬ್ ಚಾನೆಲ್ ಮೂಲಕ ಕೃಷಿ ಮಾಹಿತಿ.
ಹಲವಾರು ಶಾಲಾ ಕಾಲೇಜು ಹಾಗೂ ಸಂಘ ಸಂಸ್ಥೆಗಳ 50,000 ಕ್ಕೂ ಅಧಿಕ ಜನರಿಗೆ ಕೃಷಿ ಮಾಹಿತಿ.
ಸಾವಯವ ರೀತಿಯಲ್ಲಿಯೇ ಗಿಡಗಳ ಯಶಸ್ವಿ ಸಾಧನೆ.
ವಿವಿಧ ಶಾಲಾಮಕ್ಕಳಿಗೆ ತಮ್ಮ ತಾರಸಿ ಕೃಷಿ ವೀಕ್ಷಣೆ, ಅದರ ಬಗ್ಗೆ ಮಾಹಿತಿ ಹಾಗೂ ಪ್ರೋತ್ಸಾಹ ನೀಡುತ್ತಿದ್ದಾರೆ.

ಲೋಬೊ ಅವರ ಸಾಧನೆಯನ್ನು ಗುರುತಿಸಿ ಸಂಘ ಸಂಸ್ಥೆಗಳು ಗೌರವಿಸಿವೆ.

ರೋಟರಿ ಶಂಕರಪುರ,
ರೇಡಿಯೋ ಶಿವಮೊಗ್ಗ,
ಲಯನ್ಸ್ ಶಂಕರಪುರ,
ಟೆಂಪೋ ರಿಕ್ಷಾ ಚಾಲಕರ ಸಂಘ,
ರಕ್ಷಣಾಪುರ ಜವನೆರ್ ಕಾಪು,
ಕರೋಕೆ ಗಾಯನ ಉಡುಪಿ,
ಶಿವಪಾಡಿ ಉಡುಪಿ,
ಎಂಜಿಎಂ ಕಾಲೇಜು ಮಣಿಪಾಲ್ ವತಿಯಿಂದ,
ಜಿ. ಶಂಕರ್ ಮಹಿಳಾ ಕಾಲೇಜ್ ಉಡುಪಿ,
ಸಂತ ಜಾನ್ ಹೈಸ್ಕೂಲ್ ಶಂಕರಪುರ ಹಾಗೂ
ಹಲವಾರು ಚರ್ಚ್ ವತಿಯಿಂದ ಗೌರವ ಸನ್ಮಾನ ಲಭ್ಯವಾಗಿವೆ.
ಇದೆಲ್ಲದರ ಮುಕುಟಾ ಎಂಬಂತೆ ಕ್ಷೇತ್ರದ ಶಾಸಕರು ಕೂಡಾ ಸನ್ಮಾನಿಸಿದ್ದಾರೆ.

ಪ್ರಶಸ್ತಿಗಳು:
ರಾಜ್ಯ ಪ್ರಶಸ್ತಿ
ಸಂಘ ಸಂಸ್ಥೆಗಳ ಪ್ರಶಸ್ತಿ
ಪರಿಸರ ಪ್ರೇಮಿ ಪ್ರಶಸ್ತಿ
ರೈತ ರತ್ನ ರಾಷ್ಟ್ರೀಯ ಪ್ರಶಸ್ತಿ
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭ್ಯವಾಗಿವೆ.

ಪ್ರಸ್ತುತ ಜೋಸೆಫ್ ಲೊಬೊ ಅವರು ಕೃಷಿ ಮಾಹಿತಿ ನೀಡುತ್ತಾ ತೋಟ ನಿರ್ವಹಣೆಯಲ್ಲಿ ತಮ್ಮನ್ನು ತೊಡಗಿಸಿಕೊಂಡು ಪತ್ನಿ ಹಾಗೂ ಮಗಳೊಂದಿಗೆ ಉಡುಪಿಯ ಶಂಕರಪುರ ಗ್ರಾಮದಲ್ಲಿ ಸುಖಿ ಸಂಸಾರ ನಡೆಸುತ್ತಿದ್ದಾರೆ.

ಜೋಸೆಫ್ ಲೋಬೋ ಅವರ ಸಾಧನೆಯನ್ನು ಗುರುತಿಸಿ ಗ್ಲೋಬಲ್ ಆಚಿವರ್ಸ್ ಕೌನ್ಸಿಲ್ ಸೌತ್ ವೆಸ್ಟರ್ನ್ ಯೂನಿವರ್ಸಿಟಿ ಯು ಎಸ್ ಎ ಅವರು ಚನ್ನೈ ಅಲ್ಲಿ ನಡೆಸಿದ ರಾಷ್ಟ್ರೀಯ ಗೌರವ್ ಐಕಾನ್ ಅವಾರ್ಡ್ 2025 ಕಾರ್ಯಕ್ರಮ ದಲ್ಲಿ ಗೌರವ ಡಾಕ್ಟಾರೇಟ್ ಕೊಟ್ಟು ಗೌರವಿಸಿದೆ.

ಜೋಸೆಫ್ ಲೋಬೋ ಅವರಿಗೆ ಒಂದು ‌ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ಮತ್ತಿತರರು ಅಭಿನಂದಿಸಿದ್ದಾರೆ.

ಉಡುಪಿ ಜೋಸೆಫ್ ಲೋಬೋ ಶಂಕರಪುರ ಅವರಿಗೆ ಗೌರವ ಡಾಕ್ಟಾರೆಟ್ Read More

ಒಡಿಶಾ ಬೀಚ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ

ಭುವನೇಶ್ವರ: ಒಡಿಶಾದ ಗೋಪಾಲ್‌ಪುರ್‌ ಬೀಚ್ ನಲ್ಲಿ 20 ವರ್ಷದ ಯುವತಿ ಮೇಲೆ ಕಾಮಪಿಪಾಸುಗಳು ಸಾಮೂಹಿಕ ಅತ್ಯಾಚಾರವೆಸಗಿದ್ದಾರೆ

ಇದೀಗ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ.

ಭಾನುವಾರ ರಾತ್ರಿ ಈ ಘಟನೆ ನಡೆದಿದೆ. ರಾಜಾ ಉತ್ಸವದ ಸಂದರ್ಭದಲ್ಲಿ ಪದವಿ ವಿದ್ಯಾರ್ಥಿನಿ ತನ್ನ ಗೆಳೆಯನ ಜೊತೆ ಕಡಲತೀರಕ್ಕೆ ತೆರಳಿದ್ದಳು.

ಖಾಲಿ ಜಾಗದಲ್ಲಿ ಇಬ್ಬರೇ ಕುಳಿತಿದ್ದ ವೇಳೆ 10 ಮಂದಿ ಯುವಕರು ಸುತ್ತುವರಿದು ನನ್ನ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿದರು ಎಂದು ಗೋಪಾಲ್‌ಪುರ ಪೊಲೀಸ್‌ ಠಾಣೆಗೆ ಯುವತಿ ದೂರು ನೀಡಿದ್ದಳು.

ಮೊದಲು ಏಳು ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಲಾಗಿತ್ತು. ನಂತರ, ಎಲ್ಲ 10 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದರು.

ಆರೋಪಿಗಳು ಬೇರೆ ರಾಜ್ಯಕ್ಕೆ ಪರಾರಿಯಾಗಲು ಯತ್ನಿಸಿದ ವೇಳೆ ಅವರನ್ನು ಬಂಧಿಸಲಾಗಿದೆ. ಸಂತ್ರಸ್ತೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಅಧಿಕಾರಿ ಹೇಳಿದ್ದಾರೆ.

ಪ್ರಕರಣ ಕುರಿತು ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಪ್ರವತಿ ಪರಿದಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಸರವಣ ವಿವೇಕ್‌ ಜೊತೆ ಮಾತುಕತೆ ನಡೆಸಿದ್ದು, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಒಡಿಶಾ ಬೀಚ್‌ನಲ್ಲಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ Read More

ಹರಿಯಾಣದ ರೂಪದರ್ಶಿ ಶೀತಲ್ ಹತ್ಯೆ

ಹರಿಯಾಣ: ಹರ್ಯಾಣದ ರೂಪದರ್ಶಿ ಯನ್ನು ದುಷ್ಕರ್ಮಿಗಳು ಹತ್ಯೆ ಮಾಡಿದ್ದು, ಅವರ ಮೃತದೇಹ ಕಾಲುವೆಯಲ್ಲಿ ಪತ್ತೆಯಾಗಿದೆ.

ಹರಿಯಾಣದ ರೂಪದರ್ಶಿ ಶೀತಲ್ ಅವರ ಮೃತದೇಹ‌ ಸೋನಿಪತ್ ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ.

ಈಕೆ ಯಾವುದೋ ಕೆಲಸದ ಮೇಲೆ ಸೋನಿಪತ್ ಗೆ ಬಂದಿದ್ದರು.ಆದರೆ ಎರಡು ದಿನಗಳಿಂದ ನಾಪತ್ತೆಯಾಗಿದ್ದರು.ಶೀತಲ್ ಹೆಸರು ಸಿಮ್ಮಿ ಚೌಧರಿ.

ಇದೀಗ ಅವರು ಶವವಾಗಿ ಪತ್ತೆಯಾಗಿದ್ದಾರೆ. ಸೋನಿಪತ್ನ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದ್ದು ಈಕೆಯ ಹತ್ಯೆಗೆ ಕಾರಣ ಗೊತ್ತಾಗಿಲ್ಲ.

ರೂಪದರ್ಶಿಯಾಗಿ ವೃತ್ತಿ ಮಾಡುತ್ತಿದ್ದ ಶೀತಲ್ ಸಂಗೀತ ವಿಡಿಯೋಗಳ ಮೂಲಕ ಜನಪ್ರಿಯತೆ ಪಡೆದಿದ್ದರು. ಪಾಣಿಪತ್ ನಲ್ಲಿ ತನ್ನ ಸಹೋದರಿಯೊಂದಿಗೆ ವಾಸಿಸುತ್ತಿದ್ದ ಶೀತಲ್, ಜೂನ್ 14 ರಂದು
ಆಲ್ಬಮ್ ಚಿತ್ರೀಕರಣಕ್ಕಾಗಿ ಪಾಣಿಪತ್ ನ ಅಹರ್ ಗ್ರಾಮಕ್ಕೆ ತೆರಳಿದ್ದರು.
ಆದರೆ ಮನೆಗೆ ವಾಪಸಾಗಿರಲಿಲ್ಲ.

ನಂತರ ಆಕೆಯ ಕುಟುಂಬದವರು ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು.

ಪೊಲೀಸರು ರೂಪದರ್ಶಿಗಾಗಿ ಹುಡುಕುತ್ತಿದ್ದರು. ಆದರೆ, ಕಾಣೆಯಾಗಿದ್ದ ಶೀತಲ್ ಮೃತದೇಹ ಸೋನಿಪತ್ ಸಮೀಪದ ಖಾರ್ಖೋಡಾ ಬಳಿಯ ರಿಲಯನ್ಸ್ ಕಾಲುವೆಯಲ್ಲಿ ಪತ್ತೆಯಾಗಿದೆ. ಅವರ ಕೈ ಮತ್ತು ಎದೆಯ ಮೇಲಿನ ಹಚ್ಚೆಗಳ ಆಧಾರದ ಮೇಲೆ ಅಧಿಕಾರಿಗಳು ಮೃತದೇಹವನ್ನು ಗುರುತಿಸಿದ್ದಾರೆ

ಭಾನುವಾರ ಶೀತಲ್ ಗೆಳೆಯ ಸುನೀಲ್ ಇದ್ದ ಕಾರು ಕಾಲುವೆಯಲ್ಲಿ ಪತ್ತೆಯಾಗಿತ್ತು. ಕಾರಿನಲ್ಲಿದ್ದ ಸುನೀಲ್ ನನ್ನು ರಕ್ಷಿಸಲಾಗಿದ್ದು, ಪೊಲೀಸರು ವಶಕ್ಕೆ ಪಡೆದು ವಿಚಾರಿಸುತ್ತಿದ್ದಾರೆ.ಈತನೇ ಶೀತಲ್ ನನ್ನು ಹತ್ಯೆ ಮಾಡಿರಬಹುದೆಂದು ಆಕೆಯ ಕುಟುಂಬದವರು ಶಂಕಿಸಿದ್ದಾರೆ.

ಹರಿಯಾಣದ ರೂಪದರ್ಶಿ ಶೀತಲ್ ಹತ್ಯೆ Read More

ಮಥುರಾದಲ್ಲಿ ಆರು ಮನೆಗಳ ಕುಸಿತ:ಮುಂದುವರಿದ ರಕ್ಷಣಾ ಕಾರ್ಯ

ಮಥುರಾ: ಉತ್ತರ ಪ್ರದೇಶದ ಮಥುರಾದಲ್ಲಿ ಆರು ಮನೆಗಳು ಕುಸಿದಿದ್ದು, ಹಲವಾರು ಜನರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ.

ಶಹಗಂಜ್‌ನ ಮಾಯಾ ಟೀಲಾ ಪ್ರದೇಶದ ಬಳಿ ಈ ಘಟನೆ ನಡೆದಿದೆ. ಗುಡ್ಡ ಕುಸಿತದಿಂದ ಇದು ಸಂಭವಿಸಿರಬಹುದೆಂದು‌ ಶಂಕಿಸಲಾಗಿದೆ.

ಆರು ಮನೆಗಳು ಒಂದಾದ ಮೇಲೆ ಒಂದು ಕುಸಿದು ಬಿದ್ದಿವೆ,ಇದರಿಂದಾಗಿ ತೀವ್ರ ಆತಂಕ ಉಂಟಾಗಿದ್ದು, ಜನನಿಬಿಡ ಪ್ರದೇಶದಲ್ಲಿ ಅವ್ಯವಯಾಯಿತು.ರಕ್ಷಣಾ ಕಾರ್ಯಾ ನಡೆಯುತ್ತಿದ್ದು, ಸ್ಥಳೀಯ ಆಡಳಿತ, ಅಗ್ನಿಶಾಮಕ ದಳ ಮತ್ತು ಪೊಲೀಸರ ತಂಡಗಳು ಸ್ಥಳಕ್ಕೆ ಧಾವಿಸಿವೆ.

ಮಥುರಾದಲ್ಲಿ ಆರು ಮನೆಗಳ ಕುಸಿತ:ಮುಂದುವರಿದ ರಕ್ಷಣಾ ಕಾರ್ಯ Read More

ಪುಣೆಯಲ್ಲಿ ಇಂದ್ರಾಯಣಿ ನದಿ ಸೇತುವೆ ಕುಸಿದು ಹಲವು ಪ್ರವಾಸಿಗರು ನೀರು ಪಾಲು

ಪುಣೆ: ಮಹಾರಾಷ್ಟ್ರದ ಪುಣೆಯಲ್ಲಿ ಇಂದ್ರಾಯಣಿ ನದಿ ಸೇತುವೆ ಕುಸಿದು ಹಲವಾರು ಪ್ರವಾಸಿಗರು ನೀರು ಪಾಲಾಗಿದ್ದಾರೆ‌

ಪಿಂಪ್ರಿ-ಚಿಂಚ್‌ವಾಡ್ ಜಿಲ್ಲೆಯ ಮಾವಲ್ ತಾಲೂಕಿನ ಪ್ರಸಿದ್ಧ ಪ್ರವಾಸಿ ತಾಣ ಕುಂದಮಾಲಾ ಗ್ರಾಮದ ಬಳಿ ಸೇತುವೆ ಕುಸಿದಿದೆ.

ರುದ್ರ,ರಮಣೀಯ ಜಲಪಾತ ಮತ್ತು ನದಿ ದಡ ನೋಡಲು ಪ್ರತಿವರ್ಷ ಪ್ರವಾಸಿಗರು ಇಲ್ಲಿಗೆ ಆಗಮಿಸುತ್ತಾರೆ.ಹಾಗೆಯೇ ಭಾನುವಾರ ರಜಾ ದಿನವಾದುದರಿಂದ ಹೆಚ್ಚು ಪ್ರವಾಸಿಗರು ಬಂದಿದ್ದರು.ಪ್ರವಾಸಿಗರು ನದಿಯಲ್ಲಿ ವಿಹರಿಸುತ್ತಿದ್ದಾಗಲೇ ಸೇತುವೆ ಕುಸಿದಿದೆ.ಹಾಗಾಗಿ ಹಲವಾರು ಮಂದಿ ಕೊಚ್ಚಿ ಹೋಗಿದ್ದಾರೆ.

6 ಜನರನ್ನು ರಕ್ಷಿಸಲಾಗಿದೆ. ಇನ್ನೂ ಹಲವಾರು ಮಂದಿ ಅವಶೇಷಗಳಡಿ ಸಿಲುಕಿದ್ದು ನೀರಿನ ಹರಿವು ಹೆಚ್ಚಾಗಿರುವುದರಿಂದ ರಕ್ಷಣಾ ಕಾರ್ಯಕ್ಕೆ ತೊಡಕಾಗಿದೆ ಎಂದು ಪಿಂಪ್ರಿ-ಚಿಂಚ್‌ವಾಡ್ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯ ಪೊಲೀಸರು, ಅಗ್ನಿಶಾಮಕ ದಳ ಮತ್ತು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ ಯ ರಕ್ಷಣಾ ತಂಡಗಳು ತಕ್ಷಣ ಸ್ಥಳಕ್ಕೆ ಧಾವಿಸಿವೆ, ರಕ್ಷಣಾ ಕಾರ್ಯಕ್ಕೆ ದೋಣಿಗಳು, ಡೈವರ್‌ಗಳು ಮತ್ತು ಡ್ರೋನ್‌ಗಳನ್ನು ನಿಯೋಜಿಸಲಾಗಿದೆ. ಇಲ್ಲಿಯವರೆಗೆ, ಕೆಲವು ಜನರನ್ನು ರಕ್ಷಿಸಲಾಗಿದೆ,ಆದರೆ ಎಷ್ಟು ಮಂದಿ ನಾಪತ್ತೆಯಾಗಿದ್ದಾರೆ ಎಂಬ ಬಗ್ಗೆ ಮಾಹಿತಿ ಲಭ್ಯವಾಗಿಲ್ಲ.

ಈ ನಡುವೆ ಕಾಳಿ ನದಿ ಸೇತುವೆ ಪಿಲ್ಲರ್ ದಿಢೀರ್​ ಕುಸಿದಿದೆ,ಆದರೆ ಭಾರೀ ಅನಾಹುತ ತಪ್ಪದೆ.

ಈ ಪ್ರದೇಶದಲ್ಲಿ ನಿರಂತರ ಮಳೆಯಿಂದಾಗಿ ಇಂದ್ರಾಯಣಿ ನದಿಯ ನೀರಿನ ಮಟ್ಟ ಹೆಚ್ಚಾಗಿದ್ದು, ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿ ಇಂದ್ರಾಯಣಿ ನದಿ ಸೇತುವೆ ಕುಸಿದು ಹಲವು ಪ್ರವಾಸಿಗರು ನೀರು ಪಾಲು Read More