ಮಹಾದಾಯಿ ಜಲವಿವಾದ: ವರದಿ ನೀಡುವ ಅವಧಿ ವಿಸ್ತರಿಸಿದ ಸಚಿವಾಲಯ

ನವದೆಹಲಿ,ಆ.22: ಮಹಾದಾಯಿ ಜಲವಿವಾದ ಕುರಿತು ಇನ್ನಷ್ಟು ವರದಿ ಸಲ್ಲಿಸಬೇಕಾಗಿರುವುದರಿಂದ ಮಹಾದಾಯಿ ನ್ಯಾಯಮಂಡಳಿಗೆ 6 ತಿಂಗಳವರೆಗೆ ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಲಾಗಿದೆ.

ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ ರಾಜ್ಯಗಳ ನಡುವಿನ ಮಹದಾಯಿ ನೀರು ಹಂಚಿಕೆ ವಿವಾದ ಕುರಿತು ಪರಿಹಾರ ಕಂಡುಕೊಳ್ಳಲು ಮಹದಾಯಿ ನ್ಯಾಯಮಂಡಳಿಯನ್ನು ಸ್ಥಾಪಿಸಲಾಗಿದೆ.

ಆದರೆ ಈ ಮಂಡಳಿಯು ಇನ್ನೂ ಹೆಚ್ಚಿನ ವರದಿಯನ್ನು ನೀಡುವ ಕುರಿತು ಕಾಲಾವಕಾಶ ಕೋರಿ ಜಲಶಕ್ತಿ ಸಚಿವಾಲಯಕ್ಕೆ ಮನವಿ ಸಲ್ಲಿಸಿತ್ತು.

ಹಾಗಾಗಿ ನಿನ್ನೆಯೇ ಸಚಿವಾಲಯವು ಅವಧಿಯನ್ನು ವಿಸ್ತರಿಸಿ ಅಧಿಸೂಚನೆ ಹೊರಡಿಸಿದೆ,ಈ ಅವಧಿಯು ಆ.20ರಿಂದಲೇ ಅನ್ವಯವಾಗಲಿದೆ.

ಮಹಾದಾಯಿ ಜಲವಿವಾದ: ವರದಿ ನೀಡುವ ಅವಧಿ ವಿಸ್ತರಿಸಿದ ಸಚಿವಾಲಯ Read More

ರಾಜ್ಯ ಅಭಿವೃದ್ದಿ ಮಾಡದೆ ಭ್ರಷ್ಟಾಚಾರ ಮಾಡಿದ್ದಾರೆ-ವಿಜಯೇಂದ್ರ ಕಿಡಿ

ಮಂಡ್ಯ: ಕಾಂಗ್ರೆಸ್‌ ನವರು ಅನೇಕ ಭರವಸೆ ನೀಡಿ ಅಧಿಕಾರಕ್ಕೆ ಬಂದರು, ಆದರೆ ರಾಜ್ಯವನ್ನು ಅಭಿವೃದ್ದಿ ಮಾಡದೆ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.

ಬಿಜೆಪಿ ಜೆಡಿಎಸ್ ಜಂಟಿಯಾಗಿ ಹಮ್ಮಿಕೊಂಡಿರುವ ಮೈಸೂರು ಚಲೋ ಪಾದಯಾತ್ರೆಯ ನಾಲ್ಕನೇ ದಿನದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ರಾಜ್ಯದಲ್ಲಿರುವ ಭ್ರಷ್ಟ ಕಾಂಗ್ರೆಸ್ ಸರ್ಕಾರವನ್ನ ಕಿತ್ತೆಸೆಯಬೇಕೆಂಬ ಸಂಕಲ್ಪ ಮಾಡಯೇ ಪಾದಯಾತ್ರೆ ಮಾಡುತ್ತಿದ್ದೇವೆ, ರಾಜ್ಯದ ಜನರಿಗೆ ಇದು ಚುನಾಯಿತ ಸರಕಾರ ಎಂದು ಅನಿಸುತ್ತಿಲ್ಲ ಇಂತಹ ಭ್ರಷ್ಟ ಸರಕಾರ ಮತ್ತು ಭ್ರಷ್ಟ ಮುಖ್ಯ ಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕಿತ್ತೆಸೆಯಬೇಕು ಎಂದು ವಿಜಯೇಂದ್ರ ಹೇಳಿದರು.

ರಾಜ್ಯ ಅಭಿವೃದ್ದಿ ಮಾಡದೆ ಭ್ರಷ್ಟಾಚಾರ ಮಾಡಿದ್ದಾರೆ-ವಿಜಯೇಂದ್ರ ಕಿಡಿ Read More

ಹಾಸನ ಜಿಲ್ಲೆ ಬಾಳ್ಳುಪೇಟೆ ಬಳಿ ಭೂಕುಸಿತ: ಮಂಗಳೂರು ರೈಲ್ವೆ ಮಾರ್ಗ ಬಂದ್

ಹಾಸನ: ಬೆಂಗಳೂರು- ಹಾಸನ-ಮಂಗಳೂರು ಮಾರ್ಗದ ರೈಲ್ವೆ ಹಳಿ ಮೇಲೆ ಮತ್ತೆ ಭಾರಿ ಪ್ರಮಾಣದ ಮಣ್ಣು ಕುಸಿದ ಪರಿಣಾಮ ಮಂಗಳೂರಿಗೆ ಸಂಪರ್ಕ ಕಲ್ಪಿಸುವ ರೈಲು ಮಾರ್ಗ ಸ್ಥಗಿತವಾಗಿದೆ.

ಸಕಲೇಶಪುರ ತಾಲೂಕಿನ ಬಾಳ್ಳುಪೇಟೆ ರೈಲು ನಿಲ್ದಾಣ ಬಳಿ ರೈಲ್ವೆ ಹಳಿ ಮೇಲೆಯೇ ಭಾರಿ ಪ್ರಮಾಣದ ಕಲ್ಲು ಬಂಡೆ ಮತ್ತು ಮಣ್ಣು ಕುಸಿದು ಬಿದ್ದಿದ್ದು ರೈಲು ಸ್ಥಗಿತಗೊಂಡ‌ ಕಾರಣ ಸಾವಿರಾರು ಪ್ರಯಾಣಿಕರು ಮಾರ್ಗ ಮಧ್ಯೆ ಸಿಲುಕಿ ಪಡಿಪಾಟಲು ಪಟ್ಟರು.

ಮಧ್ಯರಾತ್ರಿಯಿಂದ ಈ ಮಾರ್ಗದಲ್ಲಿ ಸಂಚರಿಸುವ ರೈಲುಗಳನ್ನು ಆಯಾ ನಿಲ್ದಾಣಗಳಲ್ಲಿ ನಿಲ್ಲಿಸಲಾಗಿದೆ.

ಹಾಸನ -ಮಂಗಳೂರು ಮಾರ್ಗದ ಕಿಲೋಮಿಟರ್ 42/ 43ರ ಮಧ್ಯೆ ಮರಗಳ ಸಮೇತ ಮಣ್ಣು ಕುಸಿತವಾಗಿದೆ ರೈಲ್ವೆ ಹಳಿ ಮೇಲೆ ಭಾರಿ ಪ್ರಮಾಣದಲ್ಲಿ ಮಣ್ಣಿನ ಗುಡ್ಡ,ಕಲ್ಲು ಬಂಡೆ ಬಿದ್ದಿದೆ.

ಹಾಸನ ಜಿಲ್ಲೆ ಬಾಳ್ಳುಪೇಟೆ ಬಳಿ ಭೂಕುಸಿತ: ಮಂಗಳೂರು ರೈಲ್ವೆ ಮಾರ್ಗ ಬಂದ್ Read More

ರಾಜಾ ಕಾಲುವೆ ಮೇಲೆ‌ ಕಟ್ಟಿದ್ದ ಕಟ್ಟಡ ತೆರವು

ಮೈಸೂರು: ರಾಜಾ ಕಾಲುವೆಯನ್ನೆ ಆಕ್ರಮಿಸಿಕೊಂಡು ನಿರ್ಮಿಸಲಾಗಿದ್ದ ಕಟ್ಟಡವನ್ನ ತಾಲೂಕು ಆಡಳಿತ ತೆರವು ಗೊಳಿಸಿತು.

ಅಕ್ರಮ ಕಟ್ಟಡದ ಬಗ್ಗೆ ಆರ್.ಟಿ.ಐ
ಕಾರ್ಯಕರ್ತ ಬಿ.ಎನ್.ನಾಗೇಂದ್ರ ನೀಡಿದ ದೂರಿನ ಅನ್ವಯ ದಾಖಲೆಗಳನ್ನ ಪರಿಶೀಲಿ ಸಿದ ತಹಸೀಲ್ದಾರ್ ಮಹೇಶ್ ಕುಮಾರ್ ಕಟ್ಟಡವನ್ನ ತೆರುವುಗೊಳಿಸಿದ್ದಾರೆ.

ಮೈಸೂರಿನ ಕುರುಬಾರಹಳ್ಳಿ ಗ್ರಾಮದ ಸರ್ವೆ ನಂ.4ರ ಕೆ.ಸಿ.ಬಡಾವಣೆಯಲ್ಲಿ ಹಾದು ಹೋಗಿರುವ ರಾಜಾಕಾಲುವೆಯನ್ನು ಆಕ್ರಮಿಸಿಕೊಂಡು ಚಂದ್ರಶೇಖರ್ ಎಂಬಾತ ನಕಲಿ ದಾಖಲೆಗಳನ್ನ ಸೃಷ್ಟಿಸಿ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದಲ್ಲದೆ ವಿದ್ಯುತ್ ಹಾಗೂ ನೀರಿನ ಸಂಪರ್ಕ ಪಡೆದಿದ್ದರು.

ಜೆಸಿ ನಗರ ನಿವೇಶನ ಸಂಖ್ಯೆ 309/1 ರ ಹೆಸರಿನಲ್ಲಿ ವಲಯ ಕಚೇರಿ 1ರಲ್ಲಿ ಕಂದಾಯ ಪಾವತಿಸಿ ನಕಲಿ ದಾಖಲೆ ಸೃಷ್ಟಿಸಿಕೊಂಡು ಕೆಸಿ ಬಡಾವಣೆಯಲ್ಲಿ ರಾಜಾಕಾಲುವೆ ಮತ್ತು ಬಫರ್ ಜೋನ್ ಮೇಲೆ ಅಕ್ರಮವಾಗಿ ಕಟ್ಟಡ ನಿರ್ಮಿಸಿದ್ದರು.

ಆರ್ ಟಿ ಐ ಮೂಲಕ ಈ ಬಗ್ಗೆ ಮಾಹಿತಿ ಪಡೆದ ಬಿ.ಎನ್.ನಾಗೇಂದ್ರ ತಹಸೀಲ್ದಾರ್ ರವರಿಗೆ ಲಿಖಿತ ದೂರು ನೀಡಿದ್ದರು.

ರಾಜಾ ಕಾಲುವೆ ಮೇಲೆ‌ ಕಟ್ಟಿದ್ದ ಕಟ್ಟಡ ತೆರವು Read More

ವಕ್ಫ್ ಬೋರ್ಡ್‌ ಅಧಿಕಾರ ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ

ನವದೆಹಲಿ: ವಕ್ಫ್ ಬೋರ್ಡ್‌ ಅಧಿಕಾರವನ್ನು ಕಡಿಮೆ ಮಾಡುವ ವಕ್ಫ್ ತಿದ್ದುಪಡಿ ಮಸೂದೆ 2024 ಅನ್ನು ಕೇಂದ್ರ ಸರ್ಕಾರ ಲೋಕಸಭೆಯಲ್ಲಿ ಮಂಡಿಸಿದೆ.

ಕೇಂದ್ರ ಸಂಸದೀಯ ವ್ಯವಹಾರ ಮತ್ತು ಅಲ್ಪಸಂಖ್ಯಾತ ಖಾತೆಯ ಸಚಿವ ಕಿರಣ್‌ ರಿಜುಜು ಅವರು ಮಸೂದೆಯನ್ನು ಮಂಡಿಸಿದರು. ಈ ಮಸೂದೆ ಈಗ ರಾಜಕೀಯ ಸಂಘರ್ಷಕ್ಕೆ ಕಾರಣವಾಗಿದೆ.

ಪ್ರಸ್ತುತ ವಕ್ಫ್ ಬೋರ್ಡ್ ಹೊಂದಿರುವ ಏಕಪಕ್ಷೀಯ ಅಧಿಕಾರಗಳನ್ನು ಕಡಿಮೆ ಮಾಡಲು ಕೇಂದ್ರ ಉದ್ದೇಶಿಸಿದೆ. ಹಿಂದಿನ ಕಾಯ್ದೆಯಲ್ಲಿ ವಕ್ಫ್‌ ಬೋರ್ಡ್‌ಗೆ ಹೆಚ್ಚಿನ ಅಧಿಕಾರ ನೀಡಿತ್ತು.

ಇದರ ಪ್ರಕಾರ ಭೂಮಿಯನ್ನು ವಕ್ಫ್ ಬೋರ್ಡ್‌ನಿಂದ ಹಿಂಪಡೆಯುವುದು ಅಸಾಧ್ಯವಾಗಿತ್ತು. ಇದಾದ ನಂತರ ವಕ್ಫ್ ಬೋರ್ಡ್ ತೆಗೆದುಕೊಳ್ಳುವ ನಿರ್ಣಯಗಳು ಪದೇ ಪದೇ ವಿವಾದಕ್ಕೆ ಕಾರಣವಾಗುತ್ತಿದ್ದವು. ಇದನ್ನು ತಡೆಯುವುದಕ್ಕಾಗಿಯೇ ವಕ್ಫ್ ಕಾಯ್ದೆಗೆ ತಿದ್ದುಪಡಿ ತರಲಾಗಿದೆ.

ಮಸೂದೆಗೆ ಸಂಸತ್ ಅನುಮೋದನೆ ನೀಡಿದಲ್ಲಿ ಮುಂದೆ ಯಾವುದೇ ಆಸ್ತಿಯನ್ನು ಇದು ತನ್ನದು ಎಂದು ಘೋಷಿಸಿಕೊಳ್ಳಲು ವಕ್ಫ್‌ಬೋರ್ಡ್‌ಗೆ ಸಾಧ್ಯವಾಗುವುದಿಲ್ಲ.

ವಕ್ಫ್ ಬೋರ್ಡ್‌ ಅಧಿಕಾರ ಕಡಿಮೆ ಮಾಡುವ ವಕ್ಫ್‌ ತಿದ್ದುಪಡಿ ಮಸೂದೆ ಮಂಡನೆ Read More

ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈನಲ್ಲಿ ಏನು ಮಾಡಲಾಗಲ್ಲ-ಡಿಕೆಶಿ ಟಾಂಗ್

ಮೈಸೂರು: ಈ ಬಂಡೆ ಸಿದ್ದರಾಮಯ್ಯ  ಜೊತೆಗಿದೆ. ನನ್ನ ಜೊತೆ 136 ಶಾಸಕರಿದ್ದಾರೆ. ನಿಮ್ಮ ಕೈಯಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಡಿಸಿಎಂ ಡಿಕೆ ಶಿವಕುಮಾರ್‌ ಬಿಜೆಪಿ,ಜೆಡಿಎಸ್ ಗೆ ಟಾಂಗ್ ನೀಡಿದರು.

ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ನಡೆದ ಜನಾಂದೋಲನ ಸಭೆಯಲ್ಲಿ ಮಾತನಾಡಿದ ಅವರು, ಏ ಕುಮಾರಸ್ವಾಮಿ, ಏ ಅಶೋಕಾ, ಏ ವಿಜಯೇಂದ್ರ ನಿಮಗೆ ಸಿದ್ದರಾಮಯ್ಯನವರ ರಾಜೀನಾಮೆ ಬೇಕಾ ಎಂದು ಕಾರವಾಗಿ ಪ್ರಶ್ನಿಸಿದರು.

ನಮ್ಮ ಸರ್ಕಾರವನ್ನು10 ತಿಂಗಳಲ್ಲಿ ತೆಗೆಯುತ್ತೇವೆ ಎಂದು ಹುನ್ನಾರ ನಡೆಸಿದ್ದಾರೆ,ಆದರೆ ನಮ್ಮ ಯೋಜನೆಗಳ ರಕ್ಷಣೆಗಾಗಿ ಈ ಹೋರಾಟ ಮಾಡುತ್ತಿದ್ದೇವೆ ಎಂದು ಹೇಳಿದರು.

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲಾ ಜನರು ಅಧಿಕಾರಕ್ಕೆ ಬಂದ ಹಾಗೆ. ನಮ್ಮ ಜನಾಂದೋಲನ ರಾಜ್ಯದ, ಸಂವಿಧಾನದ ರಕ್ಷಣೆಗಾಗಿ ತಿಳಿದುಕೊಳ್ಳಿ ಎಂದರು ಬಂಡೆ.

ಕುಮಾರಸ್ವಾಮಿ ನಿನ್ನ ಅಧ್ಯಕ್ಷತೆಯಲ್ಲಿ ಜೆಡಿಎಸ್‌ 19 ಸೀಟ್ ಗೆದ್ದಿದೆ. ಈ ಡಿ.ಕೆ ಶಿವಕುಮಾರ್ ನೇತೃತ್ವದಲ್ಲಿ 136 ಸ್ಥಾನ ಗೆದ್ದಿದೆ. ಬ್ರಿಟಿಷರಿಂದ ಕಾಂಗ್ರೆಸ್ ತೆಗೆಯಲು ಆಗಲಿಲ್ಲ. ನೀನು ಎರಡು ಜನ್ಮ ಎತ್ತಿದರೂ ನಮ್ಮನ್ನ ತೆಗೆಯಲು ಆಗೋದಿಲ್ಲ ಎಂದು ಡಿ.ಕೆಶಿ ಏಕವಚನದಲ್ಲೇ ಎಚ್ಚರಿಕೆ ಕೊಟ್ಟರು.

ಈ ಬಂಡೆ ಸಿದ್ದರಾಮಯ್ಯ ಜೊತೆಗಿದೆ, ನಿಮ್ಮ ಕೈನಲ್ಲಿ ಏನು ಮಾಡಲಾಗಲ್ಲ-ಡಿಕೆಶಿ ಟಾಂಗ್ Read More