ನುಗ್ಗೇಕಾಯಿ ಕೆಜಿಗೆ 600 – 700ರೂ!

ಮೈಸೂರು: ದಿನದಿಂದ ದಿನಕ್ಕೆ ತರಕಾರಿ ಬೆಲೆ ಗಗನಕ್ಕೇರುತ್ತಿದ್ದು, ನುಗ್ಗೇಕಾಯಿ ಬೆಲೆ ಮಟನ್‌ ದರದಷ್ಟು ಏರಿಕೆಯಾಗಿದೆ ಅಂದ್ರೆ ನಂಬ್ತೀರಾ ಖಂಡಿತಾ ನಂಬಲೇಬೇಕು!

ನುಗ್ಗೇಕಾಯಿ ಕೆಜಿಗೆ 600 ರಿಂದ 700ರೂಗೆ ಮಾರಾಟವಾಗುತ್ತಿದ್ದು, ನುಗ್ಗೇಕಾಯಿ ಖರೀದಿ ಅಸಾಧ್ಯ ಎಂದು ಜನ ಬೇಸರ ಪಡುತ್ತಿದ್ದಾರೆ.
ಇದುವರೆಗಿನ ತರಕಾರಿ ಇತಿಹಾಸದಲ್ಲೇ ಈ ಮಟ್ಟದ ರೇಟ್ ನೋಡಿಯೇ ಇರಲಿಲ್ಲ ಎನ್ನುತ್ತಿದ್ದಾರೆ ನುಗ್ಗೆಕಾಯಿ ಪ್ರಿಯರು.

ಹವಾಮಾನ ವೈಪರೀತ್ಯದಿಂದ ಈ ಬಾರಿ ನುಗ್ಗೇಕಾಯಿ ಬೆಳೆ ಬಂದಿಲ್ಲ. ಆದ್ದರಿಂದ ನುಗ್ಗೇಕಾಯಿ ಹೆಚ್ಚು ಸರಬರಾಜಾಗುತ್ತಿಲ್ಲ. ಬೆಲೆ ಕೂಡ ಗಗನಕ್ಕೇರಿದೆ.ಮಾರುಕಟ್ಟೆಗಳಲ್ಲಿ ಸೊಪ್ಪು, ತರಕಾರಿಗಳ ಬೆಲೆ ತೀವ್ರ ಏರಿಕೆ ಆಗುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳುತ್ತಿದೆ.

ಹಿಂಗಾರು ಮಳೆ ವಿಳಂಬದಿಂದ ಕಡಿಮೆ ಇಳುವರಿ ಹಾಗೂ ಬೆಳೆಗಳಿಗೆ ರೋಗ ಬಂದ ಕಾರಣ ಬೇಡಿಕೆಗೆ ತಕ್ಕಂತೆ ಮಾರುಕಟ್ಟೆಗಳಿಗೆ ತರಕಾರಿ ಪೂರೈಕೆಯಾಗುತ್ತಿಲ್ಲ.ಹಾಗಾಗಿ ಬೆಲೆ ಗಗನಕ್ಕೇರಿದೆ.

ಆದರೂ ನುಗ್ಗೇಕಾಯಿ ಬೆಲೆ ಈ ಪಾಟಿ ಏರಿಬಿಟ್ಟೈತಲ್ಲಾ ಅದೇ ಮಹಿಳೆಯರ ತಲೆ ಕೆಡಿಸಿದೆ.

ಆದರೆ ಮಾಲ್ ಗಳಲ್ಲಿ ಆಫರ್ ಬಿಟ್ಟಿದ್ದಾರೆ ಒಂದು ಕೆಜಿ ನುಗ್ಗೆಕಾಯಿ ಬೆಲೆ 380 ರಿಂದ 400 ರೂ.ಕೊಳ್ಳೊರು ಕೊಳ್ಳಬಹುದು.

ನುಗ್ಗೇಕಾಯಿ ಕೆಜಿಗೆ 600 – 700ರೂ! Read More

ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿ ಆಚರಣೆ

ಮೈಸೂರು: ಮೈಸೂರಿನ ಗೋಕುಲಮ್ ನಲ್ಲಿರುವ ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿಯನ್ನು ಶ್ರದ್ಧಾ,ಭಕ್ತಿಯಿಂದ ಆಚರಿಸಲಾಯಿತು.
ಶ್ರೀ ಗುರು ದತ್ತಾತ್ರೇಯ ಸ್ವಾಮಿಗೆ ಬೆಳಿಗ್ಗೆ ಕ್ಷೀರಾಭಿಷೇಕ ನೆರವೇರಿಸಿ ನಂತರ ಅಷ್ಟೋತ್ತರ, ಪಾದುಕ ಪೂಜೆ ಮಾಡಲಾಯಿತು.
ಈ ವೇಳೆ ಸ್ವಾಮಿ ಕಾಶಿಕಾನಂದ ಜಿ ಯವರು ದತ್ತಾತ್ರೇಯ ಮೂರ್ತಿಗೆ ಕ್ಷೀರಭಿಷೇಕವನ್ನು ನೆರವೇರಿಸಿದರು.
ನಂತರ ಭಜನೆ,ಮಹಾ ಮಂಗಳಾರತಿ ನೆರವೇರಿಸಿ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು.
ಚಿನ್ಮಯ ಮಿಷನ್ ಮಂಡ್ಯ ಕೇಂದ್ರದ ಸ್ವಾಮಿ ಆದಿತ್ಯನಂದಜಿ ಅವರು ದತ್ತ ಜಯಂತಿ ಕಾರ್ಯಕ್ರಮ ದಲ್ಲಿ ಪಾಲ್ಗೊಂಡು ದತ್ತಾತ್ರೇಯ ಪೂಜೆ ಕುರಿತು ಭಕ್ತರಿಗೆ ವಿವರಿಸಿದರು.ನೂರಾರು ಮಂದಿ ಪಾಲ್ಗೊಂಡು ಭಕ್ತಿ ಸಮರ್ಪಿಸಿದರು.

ಚಿನ್ಮಯ ಮಿಷನ್ ನಲ್ಲಿ ದತ್ತ ಜಯಂತಿ ಆಚರಣೆ Read More

ಬಿಸಿಲು ಮಾರಮ್ಮ ದೇವಾಲಯದಲ್ಲಿದತ್ತಾತ್ರೇಯ ಜಯಂತಿ

ಮೈಸೂರು: ದತ್ತಾತ್ರೇಯ ಜಯಂತಿಯನ್ನು ಮೈಸೂರಿನ ದೇವರಾಜ ಅರಸು ರಸ್ತೆಯಲ್ಲಿರುವ ಬಿಸಿಲು ಮಾರಮ್ಮ ದೇವಾಲಯದಲ್ಲಿ ದತ್ತಾತ್ರೇಯ ಬಳಗದ ವತಿಯಿಂದ ವಿಜೃಂಭಣೆಯಿಂದ ಆಚರಿಸಲಾಯಿತು.
ಭಜನೆ, ಪೂಜೆ, ಹೋಮ–ಹವನಗಳು, ಹಾಗೂ ವಿಶೇಷ ಆರತಿ ಕಾರ್ಯಕ್ರಮದ ಮೂಲಕ ಭಕ್ತರು ಭಕ್ತಿ–ಭಾವದಿಂದ ಪ್ರಾರ್ಥನೆ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಹಿತರಕ್ಷಣಾ ವೇದಿಕೆಯ ಅಧ್ಯಕ್ಷ ವಿನಯ್ ಕುಮಾರ್,
ನಗರ ಪಾಲಿಕೆ ಮಾಜಿ ಸದಸ್ಯ ಜಗದೀಶ್,
ಪ್ರಮೋದ್ ಗೌಡ, ಸಚಿನ್ ನಾಯಕ್,
ಶ್ರೀ ಕನಕ ಪುತ್ತಿನ ಸಹಕಾರಿ ಸಂಘದ ನಿರ್ದೇಶಕ ರವಿಚಂದ್ರ,ಹರೀಶ್ ಗೌಡ,
ಎಸ್.ಎನ್. ರಾಜೇಶ್,ನೀತು, ರವಿ, ಯತೀಶ್ ಬಾಬು, ಶ್ರೀನಿವಾಸ್,ಮಂಜುಳಾ‌ ಮತ್ತು ಅನೇಕ ಭಕ್ತರು, ಬಳಗದ ಸದಸ್ಯರು ಉಪಸ್ಥಿತರಿದ್ದರು.

ಬಿಸಿಲು ಮಾರಮ್ಮ ದೇವಾಲಯದಲ್ಲಿದತ್ತಾತ್ರೇಯ ಜಯಂತಿ Read More

ಆರೋಗ್ಯ- ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್

ನಂಜನಗೂಡು: ಆರೋಗ್ಯ ಮತ್ತು ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು. ಪೌಷ್ಟಿಕ ಆಹಾರ ಹಾಗೂ ಗುಣಮಟ್ಟದ ಶಿಕ್ಷಣ ಒಟ್ಟಿಗೆ ದೊರಕಿದಾಗ ಮಾತ್ರ ಸಮಗ್ರ ಬೆಳವಣಿಗೆ ಸಾಧ್ಯ ಎಂದು ಸರ್ಕಾರಿ ಬಾಲಕರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಸಿ.ಆರ್. ದಿನೇಶ್ ಹೇಳಿದರು.

ನಂಜನಗೂಡಿನ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ ಪೋಶನ್ ಬಿ-ಪಡಾಯಿ ಬಿ ಕಾರ್ಯಕ್ರಮದಲ್ಲಿ ನಂಜನಗೂಡು ವಿಭಾಗದ ಅಂಗನವಾಡಿ ಕಾರ್ಯಕರ್ತರಿಗೆ ಮೂರು ದಿನದ ತರಬೇತಿ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಶು ಅಭಿವೃದ್ಧಿ ಅಧಿಕಾರಿ ಕೆ.ಎಸ್. ಭವ್ಯಶ್ರೀ ಅವರು ಮಾತನಾಡಿ ಮಕ್ಕಳಲ್ಲಿ ಪೌಷ್ಟಿಕತೆ ಮತ್ತು ಕಲಿಕೆಯ ಗುಣಮಟ್ಟವನ್ನು ಏರಿಕೆ ಮಾಡುವ ಉದ್ದೇಶದಿಂದ ಜಾರಿಗೆ ತಂದಿರುವ ಈ ಕಾರ್ಯಗಾರದ ಮೂಲಕ ಹೆಚ್ಚು ತರಬೇತಿಯನ್ನು ಪಡೆದುಕೊಂಡು ಅಂಗನವಾಡಿ ಕಾರ್ಯಕರ್ತೆಯರು ತಮ್ಮ ಕಾರ್ಯವನ್ನು ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಸಹಾಯಕ ಶಿಶು ಅಭಿವೃದ್ಧಿ ಅಧಿಕಾರಿ ಎಂ. ಶಿವಕುಮಾರ್, ಮೇಲ್ವಿಚಾರಕರಾದ ಹೇಮ ಕುಮಾರಿ, ಸವಿತಾ ಕುಮಾರಿ, ಶೈಲಾ ,ಸುಶೀಲ ಉಪಸ್ಥಿತರಿದ್ದರು.

ಆರೋಗ್ಯ- ಶಿಕ್ಷಣ ಮಕ್ಕಳ ಭವಿಷ್ಯದ ಎರಡು ಚಕ್ರಗಳು- ಸಿ.ಆರ್ ದಿನೇಶ್ Read More

ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 9ಲಕ್ಷ ದೇಣಿಗೆ ನೀಡಿದ ಶ್ರೀಗಳು

ಮೈಸೂರು: ಅವಧೂತ ದತ್ತಪೀಠದ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ 9ಲಕ್ಷ ದೇಣಿಗೆ ನೀಡಿದ್ದಾರೆ.

ಮೈಸೂರಿನ ಕೆ. ಆರ್. ವನಂನಲ್ಲಿರುವ ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ ಸೋಲಾರ್ ಗ್ರಿಡ್ ಅಳವಡಿಕೆಗಾಗಿ ದತ್ತ ಜಯಂತಿ ಅಂಗವಾಗಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಕೊಡುಗೆಯಾಗಿ 9 ಲಕ್ಷ ರೂ. ಗಳ ಚೆಕ್ ಅನ್ನು ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ. ಆರ್. ಸತ್ಯನಾರಾಯಣ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಕೆ.ಆರ್. ಸತ್ಯನಾರಾಯಣ ಅವರು,ಸ್ವಾಮೀಜಿ ಯವರು ಮೊದಲಿನಿಂದಲೂ ನಮ್ಮ ಸಂಘದ ಮೇಲೆ ಕೃಪೆ ಇಟ್ಟು ಪೋಷಿಸುತ್ತಾ ಬಂದಿದ್ದಾರೆ ಎಂದು ತಿಳಿಸಿದರು.
ಶ್ರೀ ಗಳ ಮಾತೃಶ್ರೀ ಮಾತಾ ಜಯಲಕ್ಷ್ಮಿ ಅಮ್ಮ ನವರ ಸ್ಮರಣರ್ಥ ಅನ್ನಪೂರ್ಣ ಮಂದಿರ ವನ್ನು ಕೊಡುಗೆ ನೀಡಿದ್ದಾರೆ, ಈಗ ಆಶೀರ್ವಾದ ಪೂರ್ವಕವಾಗಿ ಸೋಲಾರ್ ಗ್ರಿಡ್ ನೀಡುತ್ತಿರುವುದು ವಿದ್ಯಾರ್ಥಿಗಳಿಗೆ ಬಹಳ ಸಹಕಾರಿ ಯಾಗಲಿದೆ, ಸ್ವಾಮೀಜಿ ಗಳ ಈ ಕೊಡುಗೆ ನಮ್ಮೆಲ್ಲರಿಗೆ ಪ್ರಾತಃ ಸ್ಮರಣೀಯ ಎಂದು ತಿಳಿಸಿದರು.

ಈ ಸಂಧರ್ಭದಲ್ಲಿ ಆಶ್ರಮದ ಕಿರಿಯ ಸ್ವಾಮೀಜಿ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರು, ಆಶ್ರಮದ ವಿನಯ್ ಬಾಬು,ಸಂಘದ ಕಾರ್ಯದರ್ಶಿ ಎನ್. ಎಸ್. ಜಯಸಿಂಹ, ಸಹ ಕಾರ್ಯದರ್ಶಿ ಎಚ್. ಎ. ವಿಜಯಕುಮಾರ್, ಸಂಘದ ನಿರ್ದೇಶಕರುಗಳಾದ ಬಿ. ಕೆ. ವೆಂಕಟೇಶ ಪ್ರಸಾದ್, ವೀಣಾ ಜಿ. ಆರ್, ಲಕ್ಷ್ಮಿ ಎಂ. ಆರ್. ಹಾಸ್ಟೆಲ್‌ನ ವಾರ್ಡನ್ ಎಚ್. ಕೆ. ನಾಗೇಶ್, ವಿಶ್ವಜಿತ್ ಮತ್ತಿತರರು ಹಾಜರಿದ್ದರು.

ಹೊಯ್ಸಳ ಕರ್ನಾಟಕ ಸಂಘದ ಬಾಲಕರ ವಿದ್ಯಾರ್ಥಿ ನಿಲಯಕ್ಕೆ 9ಲಕ್ಷ ದೇಣಿಗೆ ನೀಡಿದ ಶ್ರೀಗಳು Read More

ಕುಂತೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ತಾಲ್ಲೂಕಿನ ಕುಂತೂರು ಗ್ರಾ.ಪಂ.ವ್ಯಾಪ್ತಿಯ ಗ್ರಾಮಗಳಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಎ.ಆರ್.ಕೃಷ್ಣಮೂರ್ತಿಯವರು ಚಾಲನೆ ನೀಡಿದರು.

ಮಲ್ಲಹಳ್ಳಿಮಾಳ ಗ್ರಾಮದಲ್ಲಿ ನಿರ್ಮಾಣವಾಗಿರುವ ಡಾ.ಬಿ.ಆರ್. ಅಂಬೇಡ್ಕರ್ ಸಮುದಾಯ ಭವನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಮೋಳೆ ಗ್ರಾಮದಲ್ಲಿ ನಿರ್ಮಾಣವಾಗಿರುವ ಭಗೀರಥ ಉಪ್ಪಾರ ಸಮುದಾಯ ಭವನ ನೂತನ ಕಟ್ಟಡ ಉದ್ಘಾಟನೆ ಹಾಗೂ ಕುಂತೂರು ಗ್ರಾಮದಲ್ಲಿ 10 ಲಕ್ಷ ವೆಚ್ಚದಲ್ಲಿ ಅಂಬೇಡ್ಕರ್ ಭವನ ಮುಂದುವರೆದ ಕಾಮಗಾರಿಗಳಿಗೆ ಶಾಸಕರು ಗುದ್ದಲಿಪೂಜೆ ನೆರವೇರಿಸಿದರು.

ಈ ವೇಳೆ ಮಾತನಾಡಿದ ಶಾಸಕರು ಕ್ಷೇತ್ರದ ಜನತೆಯ ಆಶೀರ್ವಾದದಿಂದ ನಾನು ಶಾಸಕನಾಗಿ ಆಯ್ಕೆಯಾದ ಮೇಲೆ ಸರ್ಕಾರದಿಂದ ಮೊದಲ ಬಾರಿಗೆ 25 ಕೋಟಿ ಅನುದಾನವನ್ನು ತಂದು ಅದರಲ್ಲಿ ಕ್ಷೇತ್ರದ ಎಲ್ಲಾ ಸಮುದಾಯದ ಎಲ್ಲಾ ವರ್ಗದ ಸಮುದಾಯಗಳ ಅಪೂರ್ಣ ಹಂತದಲ್ಲಿದ್ದ ಸಮುದಾಯ ಭವನಗಳ ಮುಂದುವರಿದ ಕಾಮಗಾರಿಗೆ ನೀಡಲಾಗಿತ್ತು ಎಂದು ತಿಳಿಸಿದರು.

ಅಂಬೇಡ್ಕ‌ರ್ ಭವನ, ಬಸವ ಭವನ, ಭಗೀರಥ ಭವನ, ವಾಲ್ಮೀಕಿ ಭವನ, ಕನಕ ಭವನ,ಶಾಧಿ ಮಹಲ್, ಕ್ರಿಶ್ಚಿಯನ್ ಸಮುದಾಯ ಭವನ, ಮಡಿವಾಳ ಭವನ ಈಗೆ ಎಲ್ಲಾ ವರ್ಗದ ಭವನಗಳ ಮುಂದುವರಿದ ಕಾಮಗಾರಿಗಳಿಗೆ 20 ಲಕ್ಷ 30 ಲಕ್ಷ 50 ಲಕ್ಷ, ಒಂದು ಕೋಟಿ ವರೆಗೂ ಅನುದಾನವನ್ನು ಕೊಡಲಾಗಿದೆ, ಕ್ಷೇತ್ರದಲ್ಲಿ ಎಲ್ಲಾ ಸಮುದಾಯದ ಜನರು ನನಗೆ ಮತ ನೋಡಿ ನನ್ನ ಗೆಲುವಿಗೆ ಸಹಕರಿಸಿದ್ದಾರೆ ಎಂದು ಕೃತಜ್ಞತೆ ಸಲ್ಲಿಸಿದರು.

ಈಗ 50 ಕೋಟಿ ಅನುದಾನವನ್ನು ಕೊಟ್ಟು ಸರ್ಕಾರ ರಸ್ತೆ ಅಭಿವೃದ್ಧಿಗೆ ಬಳಸಿಕೊಳ್ಳಬೇಕು ಎಂದು ಆದೇಶವನ್ನು ನೀಡಿತ್ತು ಆದ್ದರಿಂದ ಲೋಕೋಪಯೋಗಿ ಇಲಾಖೆ, ಕೆ. ಆ‌ರ್. ಐ. ಡಿ. ಎಲ್, ಜಿಲ್ಲಾ ಪಂಚಾಯತ್ ಇಲಾಖೆಗಳಿಗೆ ಸಂಬಂಧ ಪಟ್ಟ ರಸ್ತೆಗಳು ಕ್ಷೇತ್ರದಲ್ಲಿ ಎಲ್ಲಾ ಗ್ರಾಮಗಳ ಎಲ್ಲಾ ಸಮುದಾಯದ ಬೀದಿಗಳಲ್ಲಿ ರಸ್ತೆ ಹಾಗೂ ಚರಂಡಿ ನಿರ್ಮಾಣ ಕಾಮಗಾರಿಗಳಿಗೆ ನೀಡಿ ಭೂಮಿ ಪೂಜೆಯನ್ನು ನೆರವೇರಿಸಲಾಗಿದೆ ಹಾಗೂ ಮುಡಿಗುಂಡ ಸೇತುವೆ ಹಳೆಯದಾಗಿದ್ದು ಪಕ್ಕದಲ್ಲಿ ಮತ್ತೊಂದು ಸೇತುವೆ ನಿರ್ಮಾಣ ಮಾಡಲು 15 ಕೋಟಿ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಕೊಳ್ಳೇಗಾಲದಲ್ಲಿ 250 ಹಾಸಿಗೆಯ ಆಸ್ಪತ್ರೆ ನಿರ್ಮಾಣ ಮಾಡಲು ಮುಡಿಗುಂಡ ರೇಷ್ಮೆ ಇಲಾಖೆ ಜಾಗದಲ್ಲಿ ಸ್ಥಳ ನಿಗದಿ ಮಾಡಲಾಗಿದ್ದು ಸದ್ಯದಲ್ಲಿಯೇ ಮುಖ್ಯಮಂತ್ರಿಗಳಿಂದ ಕೊಳ್ಳೇಗಾಲದ ಅಂಬೇಡ್ಕರ್ ಸಮುದಾಯ ಉದ್ಘಾಟನೆ ಹಾಗೂ ಆಸ್ಪತ್ರೆ ನಿರ್ಮಾಣ ಮತ್ತು ಸೇತುವೆ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆಯನ್ನು ನೆರವೇರಿಸಲಾಗುವುದು ಎಂದು ಎ.ಆರ್.ಕೃಷ್ಣಮೂರ್ತಿ ಮಾಹಿತಿ ನೀಡಿದರು.

ಈ ಸಂಧರ್ಭದಲ್ಲಿ ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ಚಂದ್ರು, ತಾಲ್ಲೂಕು ಅಧ್ಯಕ್ಷ ರಾಜೇಂದ್ರ, ಯಳಂದೂರು ತಾಲ್ಲೂಕು ಅಧ್ಯಕ್ಷ ಪ್ರಭುಪ್ರಸಾದ್, ಉಪ್ಪಾರ ನಿಗಮ ಮಾಜಿ ರಾಜ್ಯಾಧ್ಯಕ್ಷ ಶಿವಕುಮಾರ್, ಕುಂತೂರು ಗ್ರಾ.ಪಂ ಅಧ್ಯಕ್ಷೆ ಗಂಗಮ್ಮಣಿ, ಉಪಾಧ್ಯಕ್ಷೆ ನಾಗರತ್ನಮ್ಮ, ಉಪ್ಪಾರ ಸಂಘದ ಅಧ್ಯಕ್ಷ ರಮೇಶ್, ತಾ.ಪಂ ಮಾಜಿ ಉಪಾಧ್ಯಕ್ಷ ಮಲ್ಲಣ್ಣ, ಮುಖಂಡರಾದ ತೋಟೇಶ್, ಚೇತನ್ ದೊರೆ, ತಾ.ಪಂ ಇಒ ಗುರುಶಾಂತಪ್ಪ ಬೆಳ್ಳುಂಡಗಿ, ನಿರ್ಮಿತಿ ಕೇಂದ್ರ ಉಪಯೋಜನಾ ವ್ಯವಸ್ಥಾಪಕ ಪ್ರತಾಪ್, ಗುತ್ತಿಗೆದಾರ ರಾಚಯ್ಯ ಮತ್ತಿತರರು ಹಾಜರಿದ್ದರು.

ಕುಂತೂರು ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಕೃಷ್ಣಮೂರ್ತಿ ಚಾಲನೆ Read More

ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು:ಎಸ್ ಎಲ್ ಚೆನ್ನಬಸವಣ್ಣ

ಮೈಸೂರು: ವೃತ್ತಿ ಪರತೆಯ ಬಗ್ಗೆ ಇತರರನ್ನು ಅನುಕರಣೆಯನ್ನು ಅಳವಡಿಸಿಕೊಳ್ಳುವ ಬದಲು ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು ಎಂದು ಪೋಲಿಸ್ ಆಕಾಡೆಮಿ ನಿರ್ದೇಶಕ ಎಸ್ ಎಲ್ ಚೆನ್ನಬಸವಣ್ಣ ತಿಳಿಸಿದರು.
ಮೈಸೂರಿನ ಲಕ್ಷ್ಮಿಪುರಂನಲ್ಲಿರುವ ಜ್ಞಾನಬುತ್ತಿ ಕೇಂದ್ರದಲ್ಲಿ ನಡೆದ 2025-26ನೇ ಸಾಲಿನ ಐಎಎಸ್/ಕೆಎಎಸ್ ಮತ್ತು ಇತರ ಸ್ಪರ್ಧಾತ್ಮಕ ಪರೀಕ್ಷೆಗಳ ಉಚಿತ ತರಬೇತಿ ಶಿಬಿರದ ಸಮಾರೋಪ ಸಮಾರಂಭ, ಅಧ್ಯಯನ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಪದವಿ ಮತ್ತು ಸ್ನಾತಕೋತ್ತರ ಪದವಿಯ ಹಾಗೆ ಈ ಸ್ಪರ್ಧಾತ್ಮಕ ಉಚಿತ ತರಬೇತಿ ಶಿಬಿರವು ಅಕಾಡೆಮಿಕ್ ಕೋರ್ಸ್ ಆಗಿರುವುದಿಲ್ಲ, ಅಲ್ಲಿ ಒಂದೇ ರೀತಿಯ ವಿಷಯದ ಬಗ್ಗೆ 3 ವರ್ಷಗಳ ಕಾಲ ಓದುತ್ತೇವೆ ಆದರೆ ಈ ತರಬೇತಿಯಲ್ಲಿ ಹತ್ತಾರು ವಿಷಯಗಳ ಬಗ್ಗೆ ಒಟ್ಟಿಗೆ ನಾವು ಕಲಿಯುತ್ತೇವೆ ಎಂದು ಹೇಳಿದರು.
ಸಿವಿಲ್ ಸರ್ವಿಸ್ ಪರೀಕ್ಷೆ ಎಂದರೆ ವಿದ್ಯಾರ್ಥಿಗಳು ತಮ್ಮ ವಿಷಯದ ಕೌಶಲ್ಯವನ್ನು ಹೇಗೆ ಅರ್ಥ ಮಾಡಿಕೊಂಡು ಪ್ರಪಂಚ ಜ್ಞಾನವನ್ನು ತಿಳಿದುಕೊಂಡಿರುತ್ತಾರೆ ಎಂಬುದನ್ನು ತಿಳಿಯಲು ಸಿವಿಲ್ ಸರ್ವಿಸ್ ಪರೀಕ್ಷೆಯ ಮುಖಾಂತರ ಅಧಿಕಾರಿಯಾಗಿ ಆಯ್ಕೆ ಮಾಡಲಾಗುತ್ತದೆ. ಆದ್ದರಿಂದ ಪ್ರತಿಯೊಬ್ಬರು ಸುತ್ತಮುತ್ತಲಿನ ವಿಚಾರಗಳನ್ನು ತಿಳಿದುಕೊಂಡರೇ ಮಾತ್ರ ಪರೀಕ್ಷೆಯನ್ನು ತೆಗೆದುಕೊಳ್ಳಬೇಕು ಎಂದು ತಿಳಸಿದರು.
ಮೈಸೂರು ವಿಭಾಗದ ಹೆಚ್ಚುವರಿ ಪ್ರಾದೇಶಿಕ ಆಯುಕ್ತರಾದ ಕವಿತಾ ರಾಜರಾಮ್‌ ಮಾತನಾಡಿ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಒಂದು ಹುಚ್ಚುತನದ ಭಾವನೆಯನ್ನು ಅಳವಡಿಸಿಕೊಂಡರೇ ಮಾತ್ರ ಪಾಸ್ ಮಾಡಬಹುದು. ಪ್ರಸ್ತುತ ದಿನಗಳಲ್ಲಿ ಓದುವ ಮನಸ್ಥಿತಿ ಕಡಿಮೆಯಾಗುತ್ತಿದೆ ಅದಕ್ಕೆ ಬದಲಾಗಿ ಇಂದು ಎಐ ಮೂಲಕ ತರಗತಿಗಳಲ್ಲಿ ಮಾನವರ ಬದಲು ಮಾನವರು ತಯಾರಿಸಿದ ಯಂತ್ರಗಳ ಮ‌ೂಲಕವೇ ಉದ್ಯೋಗಗಳು ಕಡಿತಗೊಳಿಸುತ್ತಿವೆ ಅದಕ್ಕೇ ನಾವೇ ನೇರವಾದ ಕಾರಣಕರ್ತರಾಗಿದ್ದೇವೆ. ಗಂಭೀರತೆಯನ್ನು ಅಳವಡಿಸಿಕೊಂಡರೆ ಮಾತ್ರ ಓದುವ ಕಾರ್ಯದಲ್ಲಿ ಮುಂದುವರೆಯಬೇಕು ಇಲ್ಲದಿದ್ದರೆ ಸುಖಾಸುಮ್ಮನೆ ಸಮಯ ಮತ್ತು ವಯಸ್ಸು ಕಳೆಯುತ್ತದೆ. ಆದ್ದರಿಂದ ಪ್ರತಿಯೊಬ್ಬರು ಮೊದಲು ಓದುವ ಗುಣವನ್ನು ಹೊಂದಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಅಧ್ಯಕ್ಷತೆ ವಹಿಸಿ ಮಾತನಾಡಿದ ಖ್ಯಾತ ವ್ಯಾಗ್ಮಿ ಪ್ರೋ ಕೃಷ್ಣೇಗೌಡ, ಇಂದಿನ GEN-Z ವಿದ್ಯಾರ್ಥಿಗಳನ್ನು ಅರ್ಥಮಾಡಿಕೊಳ್ಳುವುದು ಬಹಳ ಕಷ್ಟಕರವಾದ ಸ್ಥಿತಿ, ಸರ್ಕಾರ ಕೆಲಸ ಕೊಡುತ್ತದೆ ಎಂದು ಕಾಯುತ್ತ ಕುಳಿತಿದ್ದರೆ ಯಾವ ಸರ್ಕಾರಗಳು ಸಹ ಕೆಲಸ ಕೊಡುವುದಿಲ್ಲ. ಆದ್ದರಿಂದ ಗಮನದಲ್ಲಿಟ್ಟುಕೊಂಡು ಪರೀಕ್ಷೆಗಳ ಜೊತೆಗೆ ಅನ್ಯ ಉದ್ಯೋಗಗಳನ್ನು ಮಾಡಬೇಕು ಆಗ ಮಾತ್ರ ನಾವು ಬದುಕಲು ಸಾಧ್ಯ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜೈನಹಳ್ಳಿ ಸತ್ಯನಾರಾಯಣ ಗೌಡ, ಪಶುಪತಿ ಜಯಪ್ರಕಾಶ್, ರಾಜೀವ್ ಶರ್ಮ, ಜ್ಞಾನಬುತ್ತಿಯ ಕಾರ್ಯದರ್ಶಿಗಳಾದ ಬಾಲಕೃಷ್ಣ, ಸಹ ಪ್ರಾಧ್ಯಾಪಕರಾದ ಕೃ. ಪಾ. ಗಣೇಶ್ , ಸಿ.ಕೆ ಕಿರಣ್ ಕೌಶಿಕ್ ಮತ್ತು ರೋಹನ್, ರವಿ ಕುಮಾರ್ ಉಪಸ್ಥಿತರಿದ್ದರು.

ಸ್ವ ಇಚ್ಛೆಯಿಂದ ವೃತ್ತಿಪರತೆಗೆ ಬದ್ದರಾಗಬೇಕು:ಎಸ್ ಎಲ್ ಚೆನ್ನಬಸವಣ್ಣ Read More

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ

ಮೈಸೂರು: ಅವಧೂತ ದತ್ತ ಪೀಠದ ಗಣಪತಿ ಸಚ್ಚಿದಾನಂದ ಆಶ್ರಮದಲ್ಲಿ ಹನುಮ ಜಯಂತಿಯನ್ನು ಶ್ರದ್ಧಾ ಭಕ್ತಿಯಿಂದ ಆಚರಿಸಿ ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಆಶೀರ್ವಚನ ನೀಡಿ ಕಾರ್ಯಸಿದ್ಧಿ ಆಂಜನೇಯನ ಮಹತ್ವ ಮತ್ತು ರಾಮಾಯಣದ ಹಿನ್ನೆಲೆಯನ್ನು ವಿವರಿಸಿದರು.
ರಾಮಾಯಣದಲ್ಲಿ ಶ್ರೀರಾಮನು ಸೀತೆಯನ್ನು ಹುಡುಕಿಕೊಡುವಂತೆ ಹನುಮಂತನಿಗೆ ಕೇಳಿಕೊಂಡಾಗ ಮತ್ತು ಲಂಕಾ ಪ್ರವೇಶದ ನಂತರ ಸೀತೆಯು ಶ್ರೀರಾಮನನ್ನು ಸೇರಿಸುವಂತೆ ಹನುಮಂತನನ್ನು ಕೋರಿದಾಗ, ಇಬ್ಬರೂ “ನನ್ನ ಕಾರ್ಯಸಿದ್ಧಿ ಮಾಡಿಕೊಡು” ಎಂದು ಹನುಮಂತನನ್ನೇ ಪ್ರಾರ್ಥಿಸಿದ್ದರು. ಹಾಗಾಗಿ ಹನುಮಂತನು ಭಕ್ತರ ಪಾಲಿನ ‘ಕಾರ್ಯಸಿದ್ಧಿ ಹನುಮಂತ’ನಾಗಿದ್ದಾನೆ ಎಂದು ಶ್ರೀಗಳು ತಿಳಿಸಿದರು.
ಸಾಮಾನ್ಯವಾಗಿ ಭಾರತದಲ್ಲಿ ವರ್ಷಕ್ಕೆ ಆರು ಬಾರಿ ಹನುಮ ಜಯಂತಿ ಬರುತ್ತದೆ. ಆದರೆ ದತ್ತಪೀಠದಲ್ಲಿರುವ ಹನುಮಂತನು ವಿಶೇಷವಾಗಿದ್ದು, ಆಕಾಶ, ಭೂಮಿ ಮತ್ತು ಪಾತಾಳ ಹೀಗೆ ಮೂರು ಲೋಕಗಳನ್ನು ಪ್ರತಿನಿಧಿಸುವ ವಿಶ್ವರೂಪವನ್ನು ಹೊಂದಿದ್ದಾನೆ.
ದಶಕಂಠ ರಾವಣ, ಶತಕಂಠ ಮತ್ತು ಪಾತಾಳ ರಾವಣ (ಮೈರಾವಣ) ಎಂಬ ಮೂವರು ರಾವಣರನ್ನು ಸಂಹರಿಸಿ, ಆ ಅಸುರರಿಗೆ ಮುಕ್ತಿಯನ್ನು ನೀಡಿ ತನ್ನಲ್ಲೇ ಐಕ್ಯ ಮಾಡಿಕೊಂಡ ಸಂಕೇತವಾಗಿ ಇಲ್ಲಿನ ವಿಗ್ರಹವಿದೆ ಎಂದು ತಿಳಿಸಿದರು.
ಇಲ್ಲಿ ‘ಫಲ ಸಮರ್ಪಣೆ’ ಮಾಡುವುದು ಅತ್ಯಂತ ಪ್ರಸಿದ್ಧ ವ್ರತವಾಗಿದ್ದು, ಭಕ್ತರು ಕೇವಲ ಒಂದು ತೆಂಗಿನ ಕಾಯಿ ಸಮರ್ಪಿಸಿದರೆ ಸಾಕು, ಹನುಮಂತನು ಇಷ್ಟಾರ್ಥಗಳನ್ನು ನೆರವೇರಿಸುತ್ತಾನೆ ಎಂದು ಹೇಳಿದರು.
ಜಗತ್ತಿನಲ್ಲಿ ಯುದ್ಧದ ಭೀತಿ ತೊಲಗಿ, ಎಲ್ಲೆಡೆ ಶಾಂತಿ ನೆಲೆಸಲಿ ಮತ್ತು ಸಮಸ್ತ ಜನರಿಗೂ ಒಳಿತಾಗಲಿ ಎಂದು ಈ ಶುಭದಿನದಂದು ಸ್ವಾಮೀಜಿ ಪ್ರಾರ್ಥಿಸಿದರು.
ಭಕ್ತರು ಜೈ ವೀರ ಹನುಮಾನ್ ಎಂಬ ಘೋಷಣೆ ಕೂಗುತ್ತಾ ಪ್ರಾರ್ಥನೆ ಮಾಡಿದರು.
ಗರ್ ವಾಪಸಿ:
ಇದೆ ವೇಳೆ ಚಾಮರಾಜನಗರ, ಗುಂಡ್ಲುಪೇಟೆ ಮತ್ತಿತರ ಕಡೆಯಿಂದ ಸುಮಾರು ಇನ್ನೂರಕ್ಕೂ ಹೆಚ್ಚು ಮಂದಿ ಬೇರೆ ಧರ್ಮಕ್ಕೆ ಮತಾಂತರಗೊಂಡಿದ್ದವರು ಇಂದು ಸ್ವಾಮೀಜಿಯವರ ಸಮ್ಮುಖದಲ್ಲಿ ಮತ್ತೆ ಹಿಂದೂ ಧರ್ಮಕ್ಕೆ ವಾಪಸಾಗಿದ್ದು ನಿಜಕ್ಕೂ ವಿಶೇಷವಾಗಿತ್ತು.
ಶ್ರೀ‌ ಗಣಪತಿ ಸಚ್ಚಿದಾನಂದ ಸ್ವಾಮೀಜಿಯವರು ಹಿಂದೂ ಧರ್ಮಕ್ಕೆ ವಾಪಸಾದವರೆಲ್ಲರಿಗೂ ಆಶೀರ್ವಾದ ನೀಡಿ,ಪ್ರತಿದಿನ ಯಾವುದಾದರೂ ಒಂದು ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ದೇವರಿಗೆ‌ ನಮಸ್ಕರಿಸಬೇಕೆಂದು ಸಲಹೆ ನೀಡಿದರು.
ಒಂದು ವೇಳೆ ದೇವಸ್ಥಾನಕ್ಕೆ ಹೋಗಲಾಗದೇ ಇದ್ದರೆ ನಾವೇ ಒಂದು ದೇವಸ್ಥಾನವನ್ನೇ ಕಟ್ಟೋಣ ಎಂದು ನುಡಿದರು.
ಈ‌ ವೇಳೆ ಶ್ರೀಗಳು ಮಹಿಳೆಯರಿಗೆ ಸೀರೆಗಳನ್ನು ವಿತರಿಸಿ ಆಶೀರ್ವದಿಸಿ ದರು.

ದತ್ತಪೀಠದಲ್ಲಿ ಹನುಮ ಜಯಂತಿ ಸಂಭ್ರಮ: ಲೋಕ ಕಲ್ಯಾಣಕ್ಕಾಗಿ ವಿಶೇಷ ಪ್ರಾರ್ಥನೆ Read More

ಜ್ಯೋತಿಷ್ಯ ಮತ್ತು ವಾಸ್ತು ಕುರಿತು ವಿಚಾರ ಸಂಕಿರಣ

ಮೈಸೂರು: ಭಾರತೀಯ ಜ್ಯೋತಿಷ್ಯ ವಿಜ್ಞಾನ ಮಂಡಳಿ ಮೈಸೂರು ಅಧ್ಯಾಯವು ಜ್ಯೋತಿಷ ದ್ವಾರ ಎಂಬ ಶೀರ್ಷಿಕೆ ಕುರಿತು ವಿಚಾರ ಸಂಕಿರಣ‌ ಹಮ್ಮಿಕೊಂಡಿತು.
ವಿಚಾರ ಸಂಕಿರಣದಲ್ಲಿ ಮೈಸೂರಿನ ವಿದ್ಯಾರ್ಥಿಗಳು, ಜ್ಯೋತಿಷ್ಯ ಮತ್ತು ವಾಸ್ತು ವಿದ್ಯಾ ಅನ್ವೇಷಕರು ಭಾಗವಹಿಸಿದ್ದರು.
ಈ ಕಾರ್ಯಕ್ರಮವು ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷ ಮತ್ತು ಶಿಕ್ಷಣ ಮಂಡಳಿಯ ಅಧ್ಯಕ್ಷರ ಉಪಸ್ಥಿತಿಯಲ್ಲಿ ನಡೆಯತು, ಅವರು ವೈದಿಕ ಜ್ಯೋತಿಷ್ಯ ಮತ್ತು ವಾಸ್ತುವಿನ ಪ್ರಾಯೋಗಿಕ ಅನ್ವಯಿಕೆಗಳ ಕುರಿತು ಪ್ರಬುದ್ಧ ಉಪನ್ಯಾಸಗಳ ಸರಣಿಯನ್ನು ನೀಡಿದರು.
ವಿಶೇಷ ದೃಷ್ಟಿ: ಚಾರ್ಟ್ ವಿಶ್ಲೇಷಣೆಯಲ್ಲಿ ವಿಶೇಷ ದೃಷ್ಟಿಯ ಚಲನಶಾಸ್ತ್ರ ಅಂದರೆ ಸಾಮಾನ್ಯವಾಗಿ ತಿಳಿದಿರುವ ಏಳನೇ ದೃಷ್ಟಿಯನ್ನು ಮೀರಿ ಗ್ರಹಗಳ ವಿಶೇಷ ದೃಷ್ಟಿಗಳ ಆಳವಾದ ಪರಿಣಾಮ
ವಾಸ್ತು ದೋಷಗಳು: ವಾಸ್ತು ದೋಷಗಳನ್ನು ಅರ್ಥಮಾಡಿಕೊಳ್ಳುವುದು, ಆರೋಗ್ಯ ಮತ್ತು ಸಮೃದ್ಧಿಯ ಮೇಲೆ ವಾಸ್ತು-ಸಂಬಂಧಿತ ಪ್ರಭಾವಗಳನ್ನು ಗುರುತಿಸುವ ಮತ್ತು ಸರಿಪಡಿಸುವ ಬಗ್ಗೆ ಅಮೂಲ್ಯವಾದ ಒಳನೋಟ.
ಜಾತಕ ವಿಶ್ಲೇಷಣೆಯಲ್ಲಿ ಆರೂಢದ ಬಳಕೆ ನಿಖರವಾದ ಚಾರ್ಟ್ ಮೌಲ್ಯಮಾಪನಕ್ಕಾಗಿ ಆರೂಢ ಪರಿಕಲ್ಪನೆಗಳನ್ನು ಬಳಕೆ ಜಾತಕ ವಿಶ್ಲೇಷಣೆಗಾಗಿ ನಕ್ಷತ್ರ ಮತ್ತು ಅದರ ವಾದ ನಕ್ಷತ್ರಗಳು ಹಾಗೂ ಪಾದಗಳ ಮೂಲಕ ಜಾತಕವನ್ನು ನಿಖರವಾಗಿ ಅರ್ಥೈಸಿಕೊಳ್ಳುವುದು.
ಐಸಿಎಎಸ್ ರಾಷ್ಟ್ರೀಯ ಉಪಾಧ್ಯಕ್ಷರಾದ ಸೌಮ್ಯ ಕುಮಾರ್ ಮತ್ತು ಮೈನೂರು ಅಧ್ಯಾಯದ ಅಧ್ಯಕ್ಷ ಮತ್ತು ರಾಷ್ಟ್ರೀಯ ಉಪಾಧ್ಯಕ್ಷ ಸುಬ್ರಹ್ಮಣ್ಯ ತಂತ್ರಿ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಯಿತು.
ಭಾಗವಹಿಸಿದ ಎಲ್ಲರಿಗೂ ಭಾಗವಹಿಸುವಿಕೆಯ ಪ್ರಮಾಣಪತ್ರಗಳನ್ನು ನೀಡಲಾಯಿತು. ಹೆಚ್ಚುವರಿಯಾಗಿ, ಜ್ಯೋತಿಷ ಪ್ರವೀಣ.
ಜ್ಯೋತಿಷ ದ್ವಾರಕಾರ್ಯಕ್ರಮವು ಸಮಾಜದ ಪ್ರಯೋಜನಕ್ಕಾಗಿ ಅಧಿಕೃತ ವೈದಿಕ ಜ್ಞಾನವನ್ನು ಎತ್ತಿಹಿಡಿಯುವ ಮತ್ತು ಪ್ರಸಾರ ಮಾಡುವ ಐಸಿಎಎನ್ ಮೈಸೂರು ಅಧ್ಯಾಯದ ಬದ್ಧತೆಯನ್ನು ಪುನರುಚ್ಚರಿಸಿತು.
ಕಾರ್ಯದರ್ಶಿ ರವೀಂದ್ರ ಭಟ್, ಮೋಹನ್ ಬಾಬು, ರಘೋಥಮ್, ಎಸ ಸುಜಾತ ಜೋಶಿ, ಶ್ರೀದೇವಿ ಮತ್ತಿತರರು ಹಾಜರಿದ್ದರು

ಜ್ಯೋತಿಷ್ಯ ಮತ್ತು ವಾಸ್ತು ಕುರಿತು ವಿಚಾರ ಸಂಕಿರಣ Read More

ಸಿದ್ದಾರ್ಥ ನಗರದಲ್ಲಿ ಹನುಮ ಜಯಂತಿ

ಮೈಸೂರು: ಮೈಸೂರಿನ ‌ಸಿದ್ದಾರ್ಥ ನಗರದ
ಶ್ರೀ ವೀರಭದ್ರೇಶ್ವರ ಮೆಡಿಕಲ್ ಮುಂಭಾಗ ಹನುಮ ಜಯಂತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.
ಯುವರಾಜ್ ಕುಮಾರ್ ನೇತೃತ್ವದಲ್ಲಿ ಆರ್. ಮನು ಕುಮಾರ್, ಸೋಮಣ್ಣ, ಮುದ್ದುರಾಜ್ ಮಂಜುನಾಥ್, ಎನ್ ಮಹೇಶ್, ಮಧು, ಶಿವು, ಸಂದೇಶ, ಚೆನ್ನಪ್ಪ ಮತ್ತು ಹನುಮ ಭಕ್ತರುಗಳ ನೆರವಿನಲ್ಲಿ ಹನುಮ ಜಯಂತಿ ನೆರವೇರಿಸಲಾಯಿತು.

ಸಿದ್ದಾರ್ಥ ನಗರದಲ್ಲಿ ಹನುಮ ಜಯಂತಿ Read More