ಮೈಸೂರು: ಶ್ರೀ ದುರ್ಗಾ ಫೌಂಡೇಶನ್ ವತಿಯಿಂದ ಮಕ್ಕಳಿಗೆ ಪರಿಸರ ಸ್ನೇಹಿ ಜೇಡಿ ಮಣ್ಣಿನ ಗಣಪತಿ ಕಾರ್ಯಾಗಾರ ವನ್ನು ಸೆ.3 ರಂದು ಹಮ್ಮಿಕೊಳ್ಳಲಾಗಿದೆ.
ಮಂಚೆಗೌಡನ ಕೊಪ್ಪಲು ವೃತ್ತದಲ್ಲಿರುವ ಮಂಚೆಗೌಡನ ಕೊಪ್ಪಲು ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಸೆ 3 ರಂದು ಬೆಳಗ್ಗೆ 10 ಗಂಟೆಗೆ ಕಲಾವಿದರಾದ ಆರ್ ಲಕ್ಷ್ಮಿ ಚಲಪತಿ ಅವರು ಮಕ್ಕಳಿಗೆ ಕಾರ್ಯಾಗಾರದಲ್ಲಿ ಗಣಪತಿ ತಯಾರಿ ಬಗ್ಗೆ ಹೇಳಿಕೊಡಲಿದ್ದಾರೆ.
ಕಮುಖ್ಯ ಅತಿಥಿಗಳಾಗಿ ಶಾಸಕ ಹರೀಶ್ ಗೌಡ,ಇಂದಿರಾ ಗಾಂಧಿ ಬ್ಲಾಕ್ ಅಧ್ಯಕ್ಷ ರವಿ ಮಂಚೇಗೌಡನ ಕೊಪ್ಪಲು, ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಹಾಗೂ ಶಾಲೆಯ ಶಿಕ್ಷಕ ವೃಂದ ಭಾಗವಹಿಸಲಿದ್ದಾರೆ ಎಂದು ಶ್ರೀ ದುರ್ಗಾ ಫೌಂಡೇಶನ್ ಟ್ರಸ್ಟ್ ಅಧ್ಯಕ್ಷರಾದ ರೇಖಾ ಶ್ರೀನಿವಾಸ್ ತಿಳಿಸಿದ್ದಾರೆ.
ಮೈಸೂರು: ಶ್ರೀ ಉಚ್ಛಿಷ್ಟಗಣಪತಿ ವರಿವಸ್ಯಾ ಎಂಬ ಉಚ್ಛಿಷ್ಟಗಣಪತಿ ಉಪಾಸನೆ, ಸಹಸ್ರನಾದಿಗಳನ್ನು ಒಳಗೊಂಡಿರುವ ಪುಸ್ತಕವನ್ನು ಅವಧೂತ ದತ್ತ ಪೀಠಾಧಿಪತಿ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮಿಗಳು ಲೋಕಾರ್ಪಣೆ ಮಾಡಿದರು.
ಈ ವೇಳೆ ಮಾತನಾಡಿದ ಶ್ರೀಸ್ವಾಮೀಜಿಯವರು ಈ ಪುಸ್ತಕದಲ್ಲಿನ ವಿಷಯವು ಈ ಸಂದರ್ಭದಲ್ಲಿ ಲೋಕಕ್ಕೆ ಬೇಕಾದದ್ದೇ ಆಗಿದೆ ಇದರಿಂದ ಎಲ್ಲರಿಗೂ ಅನುಗ್ರಹವಾಗಲಿ ಎಂದು ಹಾರೈಸಿದರು.
ಇದು ವೈಶಿಷ್ಟ್ಯಪೂರ್ಣ ಗಣಪತಿ ಪೂಜೆಯ ರೂಪವಾಗಿದೆ, ಇದರ ವಿಶೇಷತೆ ಕುರಿತು ಹೆಚ್ಚು ಜನರಿಗೆ ತಿಳಿದಿಲ್ಲ.”ಉಚ್ಛಿಷ್ಟ” ಎಂಬ ಶಬ್ದವು “ಅಧಿಕ” ಅಥವಾ “ಶ್ರೇಷ್ಠ” ಎಂಬ ಅರ್ಥವನ್ನು ಹೊಂದಿದೆ, ಇದು ಗಣಪತಿಯ ಅತ್ಯಂತ ಶ್ರೇಷ್ಟ ರೂಪವನ್ನು ಸೂಚಿಸುತ್ತದೆ ಎಂದು ತಿಳಿಸಿದರು.
ಈ ಪುಸ್ತಕವು ಗಣಪತಿಯ ಶಕ್ತಿಯುಳ್ಳ ರೂಪವನ್ನು ಪೂಜಿಸುವ ಮೂಲಕ, ಎಲ್ಲ ಅಹಂಕಾರ ಮತ್ತು ಹಾನಿ ನಿವಾರಣೆ ಮಾಡುತ್ತದೆ.
ಈ ಪೂಜೆಯು ಜನರಿಗೆ ಶಕ್ತಿ, ಶಾಂತಿ ಮತ್ತು ಸಮೃದ್ಧಿಯ ಸುಲಭ ಮಾರ್ಗವನ್ನು ನೀಡುತ್ತದೆ. ಇದು ನಿಮ್ಮ ಜೀವನವನ್ನು ಶ್ರೇಷ್ಟಗೊಳಿಸಲು ಸಹಾಯ ಮಾಡುತ್ತದೆ ಮತ್ತು ಪ್ರೇರಣೆಯ ವ್ಯಕ್ತಿತ್ವವನ್ನು ಹೆಚ್ಚಿಸುತ್ತದೆ ಎಂದು ಹೇಳಿದರು.
ಹೆಚ್ಚು ಆಧ್ಯಾತ್ಮಿಕ ಮತ್ತು ಶ್ರೇಷ್ಠ ಜೀವನದ ಕಡೆಗೆ ಹೆಜ್ಜೆ ಹಾಕಲು, ಈ ಪೂಜೆಯ ಮಹತ್ವವನ್ನು ಅರ್ಥಮಾಡಿಕೊಳ್ಳುವುದು ನಿಜಕ್ಕೂ ಅಗತ್ಯವಾಗಿದೆ. ಉಚ್ಛಿಷ್ಟಗಣಪತಿಯು ಎಲ್ಲರನ್ನೂ ಕಾಪಾಡಲಿ ಎಂದು ಶ್ರೀಗಳು ಆಶೀರ್ವದಿಸಿದರು.
ಈ ವೇಳೆ ಯುವ ಮುಖಂಡರಾದ ವಿಕಾಸ್ ಶಾಸ್ತ್ರಿ, ಗ್ರಂಥಕರ್ತರಾದ ಡಾ|| ಸುಮನ್ ಭಾರದ್ವಾಜ್, ಪ್ರಕಾಶಕ ನವೀನ್ ಟಿ. ಪುರುಷೋತ್ತಮ್, ಶ್ರೀ ಸಧೀಂದ್ರಶರ್ಮ ಹಾಗೂ ಆಶ್ರಮದ ಕಲ್ಯಾಣ್ ಮತ್ತಿತರರು ಹಾಜರಿದ್ದರು.
ಮೈಸೂರು: ಮುಂದಿನ 30 ವರ್ಷ ಮೂಲಭೂತ ಸೌಕರ್ಯಗಳಿಗೆ ಸಮಸ್ಯೆ ಆಗದಂತೆ ಅಭಿವೃದ್ಧಿ ಮಾಡುವುದೇ ನನ್ನ ಆದ್ಯತೆ ಎಂದು ಶಾಸಕ ಕೆ. ಹರೀಶ್ ಗೌಡ ತಿಳಿಸಿದರು.
ಮೈಸೂರಿನ ಚಾಮರಾಜ ವಿಧಾನಸಭಾ ಕ್ಷೇತ್ರದ 21ನೇ ವಾರ್ಡ್ ವ್ಯಾಪ್ತಿಯ ಕುದುರೆಮಾಳ ಹಾಗೂ ಕುಕ್ಕರಹಳ್ಳಿಯಲ್ಲಿ ಸಮಾಜ ಕಲ್ಯಾಣ ಇಲಾಖೆ ವತಿಯಿಂದ ಪ್ರಗತಿ ಕಾಲೋನಿ ಅಭಿವೃದ್ಧಿ ಯೋಜನೆಯಡಿ 2 ಕೋಟಿ ರೂ. ವೆಚ್ಚದಲ್ಲಿ ದೊಡ್ಡ ಮಳೆ ನೀರು ಚರಂಡಿ, ಸೋಲಾರ್ ಸ್ಟ್ರೀಟ್ ಲೈಟ್, ಚೈನ್ ಲಿಂಕ್ ಅಳವಡಿಕೆ, ಎಲ್ ಶೇಪ್ ಚರಂಡಿ, ರಸ್ತೆ ಅಭಿವೃದ್ದಿ, ಕುಕ್ಕರಹಳ್ಳಿಯಲ್ಲಿ ಒಳ ಚರಂಡಿ, ಕುಡಿಯುವ ನೀರಿನ ಪೈಪ್ ಅಳವಡಿಕೆ ಹಾಗೂ ಸಿ.ಸಿ ರಸ್ತೆ ಅಭಿವೃದ್ದಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರೆವೇರಿಸಿದರು
ನಂತರ ಕುಕ್ಕರಹಳ್ಳಿಯಲ್ಲಿ ರಂಗಮಂಟಪ ಹಾಗೂ ಅಂಬೇಡ್ಕರ್ ಸಮುದಾಯ ಭವನದ ಒಂದನೇ ಮಹಡಿಯ ಕಟ್ಟಡದ ಉದ್ಘಾಟನೆ ನೆರೆವೇರಿಸಿ ಹರೀಶ್ ಗೌಡ ಮಾತನಾಡಿದರು.
ಅತಿಹೆಚ್ಚು ಮತಗಳನ್ನು ಈ ಭಾಗದ ಜನತೆ ನನಗೆ ನೀಡಿ ಆಶೀರ್ವದಿಸಿದ್ದಾರೆ, ಹಳೆಯದಾದ ಒಳಚರಂಡಿ ವ್ಯವಸ್ಥೆ ಅಭಿವೃದ್ಧಿ ಯೋಜನೆ ರೂಪಿಸಲಾಗಿದೆ ಎಂದು ಹೇಳಿದರು.
ಕುಕ್ಕರಹಳ್ಳಿಯಲ್ಲಿ ನಿರ್ಮಿಸಲಾಗಿರುವ 13 ಮನೆಗಳಿಗೆ ಹಕ್ಕುಪತ್ರ ಕೊಡಿಸುವ ನಿಟ್ಟಿನಲ್ಲಿ ಪಾಲಿಕೆ ಆಯುಕ್ತರನ್ನೇ ಕರೆದು ಸಮಸ್ಯೆ ಇತ್ಯರ್ಥಕ್ಕೆ ಸೂಚಿಸಿದ್ದೇನೆ. ಒಂದು ತಿಂಗಳಲ್ಲಿ ಹಕ್ಕು ಪತ್ರ ಸಿಗಲಿದೆ ಎಂದು ಶಾಸಕರು ಭರವಸೆ ನೀಡಿದರು.
ನನಗೆ ಸಿಕ್ಕ ಅವಕಾಶದಲ್ಲಿ ಸಾಧ್ಯವಾದಷ್ಟು ಅಭಿವೃದ್ಧಿ ಕೆಲಸ ಮಾಡುತ್ತೇನೆ ಎಂದು ಹರೀಶ್ ಗೌಡ ಆಶ್ವಾಸನೆ ನೀಡಿದರು.
ಈ ಸಂದರ್ಭದಲ್ಲಿ ವಾರ್ಡ್ ಅಧ್ಯಕ್ಷ ವಿಶ್ವನಾಥ್, ಸುಧೀರ್, ಮಂಚಯ್ಯ, ಪುರುಷೋತಮ್, ಸುಧೀರ್ ಮತ್ತಿತರರು ಹಾಜರಿದ್ದರು.
ಮೈಸೂರು: ನಗರದ ವಲಯ 3ರ ವ್ಯಾಪ್ತಿಯ ವಾರ್ಡ್ ನಂಬರ್ 47ರಲ್ಲಿ ಮನೆಗಳಿಗೆ ತೆರಳಿ ಸಾರ್ವಜನಿಕರ ಸಮಸ್ಯೆಗಳನ್ನು ಶಾಸಕ ಟಿ.ಎಸ್. ಶ್ರೀವತ್ಸ ಆಲಿಸಿದರು.
ಮುಂಜಾನೆ 7.30 ಕ್ಕೆ ಕುವೆಂಪು ಶಾಲೆಯಿಂದ ಪಾದಯಾತ್ರೆ ಪ್ರಾರಂಭ ಮಾಡಿದ ಶಾಸಕರು ಸರಸ್ವತಿಪುರಂ 15,14,13,12 ನೆ ಕ್ರಾಸ್ ಭಾಗದ ಎಲ್ಲಾ ಮನೆ ಮನೆಗೆ ತೆರಳಿ ಸಮಸ್ಯೆಯನ್ನು ಆಲಿಸಿದರು.
ಸಮಸ್ಯೆಗಳನ್ನು ಬೇಗ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದರು.
ರಸ್ತೆಗಳಲ್ಲಿ ಕಸ ತೆಗೆಸುವುದು, ಮಳೆ ಬಂದಾಗ ನೀರು ನಿಲ್ಲುವುದನ್ನು ಸರಿಪಡಿಸಬೇಕು, ಸುತ್ತಮುತ್ತ ಹಾಗೂ ಪಾರ್ಕ್ ಗಳಲ್ಲಿ ರಾತ್ರಿ ಸಮಯದಲ್ಲಿ ಕೆಲವು ಪುಂಡ ಯುವಕರು ಮಧ್ಯಪಾನ ಮಾಡಿ ಬಾಟಲಿ ತಂದು ಹಾಕುತ್ತಾರೆ ಇದಕ್ಕೆ ಕಡಿವಾಣ ಹಾಕಿ,ಬೆಳ್ಳಗಿನ ಸಮಯ ವಾಯು ವಿಹಾರಿಗಳು ಹಿರಿಯ ನಾಗರೀಕರು ಪಾರ್ಕಿನಲ್ಲಿ ವಾಕಿಂಗ್ ಮಾಡುವುದರಿಂದ ಶೌಚಾಲಯ ವ್ಯವಸ್ಥೆ ಮಾಡಿಕೊಡಿ ಎಂದು ಸಾರ್ವಜನಿಕರು ಶಾಸಕರಲ್ಲಿ ಮನವಿ ಮಾಡಿದರು.
ಈ ವೇಳೆ ಸ್ಥಳದಲ್ಲಿದ್ದ ಪೊಲೀಸ್ ಅಧಿಕಾರಿ ನಾಗರಾಜು ಅವರನ್ನು ಕರೆದು ಈ ಪಾರ್ಕಿನ ಸುತ್ತಮುತ್ತ ಮತ್ತು ಈ ಭಾಗಗಳಲ್ಲಿ ದಿನನಿತ್ಯ ಬೀಟ್ ಪೊಲೀಸ್ ವ್ಯವಸ್ಥೆಯನ್ನು ಮಾಡಬೇಕೆಂದು ಶಾಸಕ ಶ್ರೀವತ್ಸ ತಿಳಿಸಿದರು.
ಆರೋಗ್ಯ ಅಧಿಕಾರಿ ಪ್ರಭಾಕರ್ ಅವರಿಗೆ ಇಲ್ಲೆಲ್ಲೂ ಕೂಡ ಕಸ ಹಾಕುವ ಮತ್ತು ಗುಡಿಸುವವರ ಬಗ್ಗೆ ಹೆಚ್ಚು ಗಮನ ಹರಿಸಬೇಕು ಈ ಭಾಗದಲ್ಲಿ ಮಳೆ ನೀರು ನಿಂತು ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಕೂಡಲೇ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಶಾಸಕ ಟಿ.ಎಸ್. ಶ್ರೀವತ್ಸ ಸೂಚಿಸಿದರು.
ಎಇಇ ಧನುಷ್,ಅಧಿಕಾರಿ ಬಸವಣ್ಣ, ವಾಟರ್ ಸಪ್ಲೈಯರ್ ಮಂಜುನಾಥ್, ಮಾಜಿ ಮಹಾಪೌರ ಶಿವಕುಮಾರ್, ಉಪೇಂದ್ರ, ಶ್ರೀನಿವಾಸ್, ರಮೇಶ್, ಲಕ್ಷ್ಮಣ್, ರಾಮದಾಸ್, ದೀಪಕ್, ಜೋಗಿ ಮಂಜು, ರಾಕೇಶ್ ಗೌಡ, ಜಯರಾಮ್, ಪ್ರದೀಪ್, ಕಿಶೋರ್,ಗುರುದತ್ತ, ಪಾರ್ಥ ಸಾರಥಿ, ನಿಶಾಂತ್, ಆಪ್ತ ಸಹಾಯಕ ಆದಿತ್ಯ ಮತ್ತಿತರರು ಹಾಜರಿದ್ದರು.
ಮೈಸೂರು: ಕೇಶವ ಕೃಪಾ ಸಂವರ್ಧನ ಸಮಿತಿಯು ಅಭ್ಯುದಯದ ಮೂಲಕ ಮೈಸೂರಿನ ಬಡ ವಿದ್ಯಾರ್ಥಿಗಳಿಗೆ ವಿದ್ಯಾನಿಧಿ ವಿದ್ಯಾರ್ಥಿ ವೇತನವನ್ನು ನೀಡುವ ಮೂಲಕ ಪ್ರೋತ್ಸಾಹಿಸಿತು.
ಬಿಎ, ಬಿಎಸ್ಸಿ ಡಿಪ್ಲೊಮಾ, ಐಟಿಐ ಬಿಇ ಮುಂತಾದ ವಿವಿಧ ಕೋರ್ಸ್‌ಗಳನ್ನು ವಿದ್ಯಾರ್ಥಿಗಳು ಓದುತ್ತಿದ್ದು ಅಭ್ಯುದಯವು ಎಲ್ಲಾ ಮಕ್ಕಳಿಗೂ ಉಜ್ವಲ ಭವಿಷ್ಯವನ್ನು ಹಾರೈಸಿತು.
ಪ್ರತಿ ವರ್ಷ ಅಭ್ಯುದಯವು ಕರ್ನಾಟಕದಾದ್ಯಂತ 300 ಮತ್ತು ಮೈಸೂರಿನಾದ್ಯಂತ 30 ವಿದ್ಯಾರ್ಥಿಗಳಿಗೆ ವಿದ್ಯಾನಿಧಿಯನ್ನು ಒದಗಿಸುತ್ತಿದೆ.
ಅಭ್ಯುದಯ ಮುಖ್ಯಕಾರ್ಯದರ್ಶಿ ಲಕ್ಷ್ಮೀನಾರಾಯಣ , ಸೇವಾ ಭಾರತಿಯಿಂದ ಡಾ ಚಂದ್ರಶೇಖರ್, ಸಕ್ಷಮದಿಂದ ಜಯರಾಮ್, ಪ್ರಮುಖ ಶಿಕ್ಷಕ ಗೋಕುಲ್, ಕೆ.ಎನ್ ಕೃಷ್ಣ ಪ್ರಸಾದ್, ವಾಮನ್, ಸೀತಾರಾಮ್, ಮಣಿವಣ್ಣನ್, ವನವಾಸಿ ಕಲ್ಯಾಣದಿಂದ ಭರತ್, ನವೀನ್ ಕುಂಬಾರ ಕೊಪ್ಪಲು, ಅನಿತಾ, ಆದಿ ನಾರಾಯಣ ಮಂಡ್ಯ, ಅನುರಾಧ ಮಾಜಿ ವೈದ್ಯ, ಆಶಾ ಲತಾ, ರಮಾಮಣಿ, ರಾಹುಲ್, ನಾಗರಾಜ ರಾವ್ ವಿದ್ಯಾರ್ಥಿಗಳಿಗೆ ಚೆಕ್ ಹಸ್ತಾಂತರಿಸಿದರು.
ಇದೇ ವೇಳೆ ಅಭ್ಯುದಯ 20 ವರ್ಷಗಳು ಮತ್ತು ಕೇಶವ ಕೃಪಾ ಸಂವರ್ಧನ ಸಮಿತಿಯು 60 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಅಭ್ಯುದಯದ ಸ್ವಯಂಸೇವಕರಿಗೆ ಫಲಕಗಳನ್ನು ನೀಡಲಾಯಿತು.
ಮೈಸೂರು ಅಭ್ಯುದಯ ಯೋಜನೆಯ ಸಮನ್ವಯ ಮನೀಶ್ ಮತ್ತು ಸುಮತಿ ಉಪಸ್ಥಿತರಿದ್ದರು.
ಮೈಸೂರು, ಮಂಡ್ಯ, ಚಾಮರಾಜನಗರದಿಂದ ಆಗಮಿಸಿದ್ದ ಅಭ್ಯುದಯ ಉಚಿತ ಕಲಿಕಾ ಕೇಂದ್ರದ ಸ್ವಯಂ ಸೇವಕ ಶಿಕ್ಷಕರಿಗೆ ಅಭ್ಯುದಯ ಕಾರ್ಯಕಾರಿ ತಂಡದ ವೇಣುಗೋಪಾಲ್ ಅವರು ಅಭ್ಯುದಯ ಕುರಿತು ರಸಪ್ರಶ್ನೆ ನಡೆಸಿದರು. ಹರ್ಷ ಹಾಜರಿದ್ದರು.
ಮೈಸೂರು: ನಮ್ಮ ಧರ್ಮ ಅತ್ಯಂತ ಹಳೆಯದಾದ ಸನಾತನ ಧರ್ಮ, ನಮ್ಮ ಹಿಂದೂ ಧರ್ಮವನ್ನು ಉಳಿಸಲು ಮಕ್ಕಳು ಪಣ ತೊಡಬೇಕು ಎಂದು ಅವಧೂತ ದತ್ತ ಪೀಠದ ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಕರೆ ನೀಡಿದರು.
ಅವಧೂತ ದತ್ತಪೀಠದ ವತಿಯಿಂದ ನಡೆದ 10ನೇ ಕರ್ನಾಟಕ ರಾಜ್ಯ ಮಟ್ಟದ ಅಂತರಶಾಲಾ ಸಾಮೂಹಿಕ ಭಜನೆ ಸ್ಪರ್ಧೆಯ ಜಿಲ್ಲಾಮಟ್ಟದ ಪ್ರಥಮ ಬಹುಮಾನ ವಿಜೇತರಿಗೆ ಮತ್ತು ರಾಜ್ಯಮಟ್ಟದ (ಫೈನಲ್ಸ್ ಅಂತಿಮ) ಸ್ಪರ್ಧೆಯ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ಉದ್ಘಾಟಿಸಿ ಶ್ರೀ ಗಳು ಆಶೀರ್ವಚನ ನೀಡಿದರು.
ನಮ್ಮ ಧರ್ಮವನ್ನು ಬಿಟ್ಟು ಬೇರೆಡೆಗೆ ಹೋಗಬಾರದು ಹಾಗೆ ಹೋದರೆ ನಮ್ಮನ್ನು ನಾವು ಕೊಂದುಕೊಂಡಂತೆ ಎಂದು ಶ್ರೀಗಳು ಹೇಳಿದರು.
ಮಕ್ಕಳಿಂದ ಹಿಡಿದು ಮನೆಯ ಹಿರಿಯರು ಕೂಡ ಭಗವದ್ಗೀತೆ ಓದಬೇಕು,ಕೇಳಬೇಕು, ನಮ್ಮ ಭೂಮಿ ನಮ್ಮ ದೇಶವನ್ನು ಪ್ರೀತಿಸಬೇಕು ಬೇರೆ ದೇಶಗಳಲ್ಲಿ ಬದುಕುವುದು ಕಷ್ಟ ನಮ್ಮ ದೇಶದಲ್ಲೇ ಇದ್ದು ನಮ್ಮಲ್ಲಿ ಬೆಳೆದ ಅನ್ನವನ್ನು ತಿನ್ನಬೇಕು ಎಂದು ತಿಳಿ ಹೇಳಿದರು.
ಭಗವದ್ಗೀತೆಯಿಂದ ನಮ್ಮ ದೇಶ ನಮ್ಮ ಧರ್ಮವನ್ನು ಉಳಿಸಬಹುದು, ನಮ್ಮ ಧರ್ಮವನ್ನು ಉಳಿಸಿ ಬೆಳೆಸಿ, ದೇಶದ ಪ್ರಗತಿಗೆ ಶ್ರಮಿಸಿ ಎಂದು ಮಕ್ಕಳಿಗೆ ಕಿವಿ ಮಾತು ಹೇಳಿದರು.ಪ
ಅಮೆರಿಕದಲ್ಲಿ ಶಾಲೆಯಲ್ಲೇ ಭಗವದ್ಗೀತೆ ಕಲಿಸುತ್ತಾರೆ, ಅಲ್ಲಿನ ಮಕ್ಕಳು ಭಗವದ್ಗೀತೆಯನ್ನು ಕಂಠಪಾಠ ಮಾಡಿದ್ದಾರೆ,ಭಗವದ್ಗೀತೆಯಿಂದ ಜ್ಞಾಪಕ ಶಕ್ತಿ ಹೆಚ್ಚಾಗುತ್ತದೆ ಭಗವದ್ಗೀತೆಯನ್ನು ಶಾಲೆಗಳಲ್ಲಿ ಪರಿಚಯ ಮಾಡಬೇಕು ಎಂದು ಶಿಕ್ಷಕರಿಗೆ ಇದೆ ವೇಳೆ ಶ್ರೀಗಳು ತಿಳಿಸಿದರು.
ಅಮೆರಿಕದಲ್ಲಿ ಮೂರು ವರ್ಷದ ಮಗು ಭಗವದ್ಗೀತೆಯನ್ನು ಕಂಠಪಾಠ ಮಾಡಿದೆ, ಅದೇ ರೀತಿ ನಾಲ್ಕು ವರ್ಷದ ಒಂದು ಮಗು ಸೌಂದರ್ಯ ಲಹರಿಯನ್ನು ಕಲಿತಿದೆ, ಮಾತು ಬಾರದ ಆಟಿಸಂ ಕಾಯಿಲೆ ಉಳ್ಳ ಮಗು ಭಗವದ್ಗೀತೆಯ ಎಲ್ಲಾ ಶ್ಲೋಕಗಳನ್ನು ಕಲಿತು ಹೇಳುತ್ತದೆ ನನಗೆ ಇದು ಅದ್ಭುತ ಎನಿಸುತ್ತದೆ ಇದಕ್ಕೆ ಭಗವದ್ಗೀತೆಯಲ್ಲಿರುವ ಶಕ್ತಿ ಕಾರಣ ದಯವಿಟ್ಟು ಎಲ್ಲರೂ ಭಗವದ್ಗೀತೆಯನ್ನು ಕೇಳಿ, ಕಲಿಯಿರಿ ಎಂದು ಮತ್ತೆ ಮತ್ತೆ ಸಚ್ಚಿದಾನಂದ ಸ್ವಾಮೀಜಿ ಉಚ್ಛರಿಸಿದರು.
ನಮ್ಮ ಆಶ್ರಮದ ವತಿಯಿಂದಲೇ ಆನ್ಲೈನ್ ಮೂಲಕ ಉಚಿತವಾಗಿ ಭಗವದ್ಗೀತೆಯನ್ನು ಕಲಿಸಿಕೊಡಲಾಗುತ್ತದೆ ಎಲ್ಲರೂ ಇದಕ್ಕೆ ನೋಂದಣಿ ಮಾಡಿಕೊಳ್ಳಿ ಎಂದು ಶ್ರೀಗಳು ಹೇಳಿದರು.
ಮಕ್ಕಳೇ ಯಾರೂ ಕೂಡ ಮೊಬೈಲ್ ಫೋನ್ ಗಳನ್ನು ನೋಡಬೇಡಿ ಅದನ್ನು ಮುಟ್ಟಲೂ ಬೇಡಿ ಇದರಿಂದ ಸಮಯ ಹಾಳು ಮನಸ್ಸು ಹಾಳು, ಜೀವನವೇ ನಾಶವಾಗಿ ಬಿಡುತ್ತದೆ ಈಗಲೇ ಇದನ್ನು ಬಿಟ್ಟುಬಿಡಿ, ತಂದೆ ತಾಯಿಗಳು ಕೂಡ ಮಕ್ಕಳಿಗೆ ಮೊಬೈಲ್ ಫೋನ್ ಕೊಟ್ಟು ಅಭ್ಯಾಸ ಮಾಡಬೇಡಿ ಎಂದು ಪದೇ ಪದೇ ಶ್ರೀಗಳು ತಿಳಿಸಿದರು.
ಡಾಕ್ಟರ್, ಇಂಜಿನಿಯರ್, ಟೀಚರ್ ಹೀಗೆ ನೀವು ಚೆನ್ನಾಗಿ ಓದಿ ಮುಂದೆ ಬಂದು ಜನಸೇವೆ ಮಾಡಬೇಕು ತಂದೆ, ತಾಯಿ, ಮತ್ತು ಶಿಕ್ಷಕರಿಗೆ, ನಾಡಿಗೆ ಕೀರ್ತಿ ತರಬೇಕು ಎಂದು ಶ್ರೀಗಳು ತಿಳಿಸಿದರು.
ಮನೆಗೆ ಯಾರಾದರೂ ಅತಿಥಿಗಳು ಬಂದಾಗ ನಮ್ಮ ರೂಮನ್ನೇ ಬಿಟ್ಟುಕೊಟ್ಟುಬಿಡುತ್ತೇವೆ ಅದು ನಮ್ಮ ಅತಿಥಿ ಸತ್ಕಾರ. ಹಾಗೆಂದು ಇಡೀ ಮನೆಯನ್ನೇ ಬಿಟ್ಟುಕೊಡುವುದು ಸರಿಯಲ್ಲ ಈಗಾಗಲೇ ನಾವು ದೇಶವನ್ನೇ ಬಿಟ್ಟು ಬಿಟ್ಟಿದ್ದೇವೆ. ಹಿಂದೂ ಮಕ್ಕಳು ಹೆಚ್ಚಾಗಬೇಕು, ನಾವು ಹಿಂದುಗಳಾಗಿಯೇ ಉಳಿಯಬೇಕು ನಮ್ಮ ಧರ್ಮದಲ್ಲೇ ಮುಂದುವರಿಯಬೇಕು ಎಂದು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಸಲಹೆ ನೀಡಿದರು.
ಹೆಣ್ಣು ಮಕ್ಕಳು, ಮಹಿಳೆಯರು ಹಣೆಗೆ ಬೊಟ್ಟು ಇಟ್ಟುಕೊಳ್ಳುವುದನ್ನು ಮರೆಯಬಾರದು ಹೀಗೆ ಹಣೆಯಲ್ಲಿ ತಿಲಕ ಇಟ್ಟುಕೊಂಡರೆ ನಮ್ಮ ಮೆಮೊರಿ ಪವರ್ ಹೆಚ್ಚಾಗುತ್ತದೆ. ಇದು ವೈಜ್ಞಾನಿಕವಾಗಿಯೂ ಸಾಬೀತಾಗಿದೆ ಎಂದು ಸ್ವಾಮೀಜಿ ತಿಳಿಸಿದರು.
ದಿವ್ಯ ನಾಮ ಸಂಕೀರ್ತನೆ ಭಗವಂತನೆಡೆಗೆ ತೆರಳಲು ಸುಲಭದ ದಾರಿಯಾಗಿದೆ ಇದು ಜ್ಞಾನ ವೃದ್ಧಿಸಿಕೊಳ್ಳಲು ಸಹಕಾರಿಯಾಗಿದೆ ಹಾಗಾಗಿ ಇದನ್ನು ಹೆಚ್ಚು ಪ್ರಚಾರ ಮಾಡಬೇಕು ಮಕ್ಕಳೇ ಕೆಟ್ಟ ದಾರಿಗೆ ಹೋಗದೆ ನಮ್ಮ ಧರ್ಮವನ್ನು ಕಾಪಾಡಿ ಎಂದು ಹೇಳಿದರು.
ಯಾವುದೇ ಮಗು ತನಗೆ ಬಹುಮಾನ ಬರಲಿಲ್ಲ ಎಂದು ಚಿಂತೆ ಮಾಡಬಾರದು ಖಿನ್ನತೆಗೆ ಒಳಗಾಗಬಾರದು. ಇಲ್ಲಿ ಬಂದು ಪ್ರಯತ್ನ ಮಾಡಿರುವುದೇ ಒಂದು ಪುಣ್ಯ ಹಾಗಾಗಿ ಮತ್ತೆ ಮತ್ತೆ ಪ್ರಯತ್ನ ಮಾಡಿ ಮುಂದೆ ಬನ್ನಿ ಎಲ್ಲವೂ ಒಳ್ಳೆಯದೇ ಆಗುತ್ತದೆ ಎಂದು ಮಕ್ಕಳಿಗೆ ಗಣಪತಿ ಸ್ವಾಮೀಜಿ ಹಿತವಚನ ಹೇಳಿದರು
ಕುಮಾರಿ ಜನನಿ, ಅಕ್ಷತಾ ಭಟ್ ಶ್ರೀಮತಿ ಲಲಿತಾಶ್ರೀ ಮತ್ತು ರಮ್ಯ ಅನಿಲ್ ಪ್ರಾರ್ಥನೆ ಮಾಡಿದರು.
ಮೊದಲು ಶ್ರೀ ಗಣಪತಿ ಸಚ್ಚಿದಾನಂದ ಸ್ವಾಮೀಜಿ ಹಾಗೂ ಕಿರಿಯ ಶ್ರೀಗಳಾದ ಶ್ರೀ ದತ್ತ ವಿಜಯಾನಂದ ತೀರ್ಥ ಸ್ವಾಮೀಜಿಯವರಿಗೆ ಫಲಪುಷ್ಪ ಸಮರ್ಪಣೆ ಮಾಡಲಾಯಿತು.
ಕರ್ನಾಟಕದ 25 ಜಿಲ್ಲೆಗಳಲ್ಲಿ ಜುಲೈ-ಆಗಸ್ಟ್ ನಲ್ಲಿ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಜಿಲ್ಲಾ ಮಟ್ಟದ ಸ್ಪರ್ಧೆಯ ವಿಜೇತರಿಗೆ ಬಹುಮಾನವನ್ನು ಪೂಜ್ಯ ಗಣಪತಿ ಶ್ರೀಗಳು ವಿತರಿಸಿ ಮಕ್ಕಳನ್ನು ಆಶೀವರ್ದಿಸಿದರು.
ನಿನ್ನೆ ನಡೆದ ರಾಜ್ಯಮಟ್ಟದ ಅಂತಿಮ ಭಜನೆ ಗಾಯನ ಸ್ಪರ್ಧೆಯ ಜೂನಿಯರ್ ಮತ್ತು ಸೀನಿಯರ್ ವಿಭಾಗದ ಫಲಿತಾಂಶವನ್ನು ದತ್ತಪೀಠ ಆಸ್ಥಾನ ವಿದ್ವಾನ್ ಶ್ರೀ ಶಂಕರ್ ರಮೇಶ್ ನೀಡಿದರು.
ಭಜನೆ ಸೀನಿಯರ್ ವಿಭಾಗದಲ್ಲಿ ಪ್ರಥಮ ಬಹುಮಾನವನ್ನು ಹುಬ್ಬಳ್ಳಿಯ ಚಿನ್ಮಯ ವಿದ್ಯಾಲಯ ಶಾಲೆ ಪಡೆದುಕೊಂಡಿತು. ದ್ವಿತೀಯ ಬಹುಮಾನವನ್ನು ಮೈಸೂರಿನ ಡಿ ಎ ವಿ ಪಬ್ಲಿಕ್ ಸ್ಕೂಲ್ ಪಡೆದುಕೊಂಡಿತು. ಮೂರನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರೋತ್ಥಾನ ವಿದ್ಯಾ ಕೇಂದ್ರ ಪಡೆದುಕೊಂಡಿತು.
ಜೂನಿಯರ್ ವಿಭಾಗದಲ್ಲಿ ಮೊದಲನೇ ಬಹುಮಾನವನ್ನು ಬೆಂಗಳೂರಿನ ರಾಷ್ಟ್ರಮಾನ ವಿದ್ಯಾಕೇಂದ್ರ ಪಡೆದುಕೊಂಡರೆ ದ್ವಿತೀಯ ಬಹುಮಾನವನ್ನು ಬೆಂಗಳೂರಿನ ವಿ ಇ ಎಸ್ ಮಾಡೆಲ್ ಕಾನ್ವೆಂಟ್ ಮತ್ತು ಮಂಗಳೂರಿನ ಶಾರದ ವಿದ್ಯಾಲಯ ಪಡೆದುಕೊಂಡವು. ಮೂರನೇ ಬಹುಮಾನವನ್ನು ಬಳ್ಳಾರಿಯ ಡ್ರೀಮ್ ವರ್ಲ್ಡ್ ಸ್ಕೂಲ್ ಪಡೆದುಕೊಂಡಿತು.
ಇದೇ ವೇಳೆ ಪಕ್ಕವಾದ್ಯ ನುಡಿಸಿದ ಎಲ್ಲರಿಗೂ ವಿಶೇಷ ಬಹುಮಾನವನ್ನು ವಿತರಿಸಲಾಯಿತು
ಮೈಸೂರು: ಶ್ರಾವಣ ಶನಿವಾರ ಪ್ರಯುಕ್ತ ಮೈಸೂರು ದಸರಾ ವಸ್ತುಪ್ರದರ್ಶನ ಆವರಣದಲ್ಲಿರುವ ಶ್ರೀ ವೀರಾಂಜನೇಯ ಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಏರಗಪಡಿಸಲಾಗಿತ್ತು
ಪೂಜೆಯ ನಂತರ ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಲಾಯಿತು, ಅವಧೂತ ಅರ್ಜುನ ಗುರೂಜಿ ಮತ್ತು ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ ಅವರು ಪ್ರಸಾದ ವಿನಿಯೋಗಕ್ಕೆ ಚಾಲನೆ ನೀಡಿದರು.
ಈ ವೇಳೆ ಅವಧೂತ ಅರ್ಜುನ ಗುರೂಜಿ ಅವರು ಮಾತನಾಡಿ ವೀಣೆ ಕುಪ್ಪಣ ಅವರ ಸುಪುತ್ರ ವೀಣೆ ವೆಂಕಟಕೃಷ್ಣ ಸುಬ್ಬಯ್ಯ ಮೈಸೂರು ಸಂಸ್ಥಾನದಲ್ಲಿ ಸಂಗೀತ ಆಸ್ಥಾನ ಪಂಡಿತರಾಗಿದ್ದರು ಅವರ ನಿಧನದ ಬಳಿಕ 1840ರಲ್ಲಿ ಅವರ ಧರ್ಮಪತ್ನಿ ವೀಣೆ ವೆಂಕಮ್ಮ ಅವರು ಶ್ರೀ ಸಾಂಬಸದಾಶಿವ ದೇವಾಲಯ ಹಾಗೂ ಶ್ರೀವೀರಾಂಜನೇಯ ಸ್ವಾಮಿ ದೇವಾಲಯವನ್ನ ದೊಡ್ಡಕೆರೆ ದಡದಲ್ಲಿ ನಿರ್ಮಿಸಿದರು ಎಂದು ಮಾಹಿತಿ ನೀಡಿದರು.
ಈ ಪುಣ್ಯಸನ್ನಿಧಿಯಲ್ಲಿ ನೂರಾರು ವರುಷಗಳು ಸಾವಿರಾರು ಮದುವೆಗಳು, ನಾಮಕರಣದಂತಹ ಶುಭಸಮಾರಂಭಗಳು ಜರುಗಿದೆ, ಪಕ್ಕದಲ್ಲಿ ಕುಸ್ತಿ ಅಖಾಡ ಅಭ್ಯಾಸ ಮಾಡುತ್ತಿದ್ದ ಪೈಲ್ವಾನರು ಪ್ರತಿದಿನ ವಿಶೇಷ ಪ್ರಾರ್ಥನೆ ಸಲ್ಲಿಸುತ್ತಿದ್ದರು ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರ ಬಡಜನರಿಗೆ ಅನೂಕೂಲವಾಗುವಂತೆ ಆಚರಣೆಗಳು ಕಾರ್ಯಕ್ರಮಗಳಿಗೆ ಈ ಜಗವನ್ನು ನೀಡಿದರೆ ಸಹಕಾರಿಯಾಗುತ್ತದೆ ಎಂದು ಸಲಹೆ ನೀಡಿದರು.
ಈ ಸಂಧರ್ಭದಲ್ಲಿ ಕಾಂಗ್ರೆಸ್ ನಗರಾಧ್ಯಕ್ಷ ಆರ್. ಮೂರ್ತಿ, ಕರ್ನಾಟಕ ವಸ್ತುಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಕಾರ್ಯನಿರ್ವಾಹಣಾಧಿಕಾರಿ ಕೆ.ರುದ್ರೇಶ್, ಕೆಪಿಸಿಸಿ ಸದಸ್ಯರಾದ ನಜರಬಾದ್ ನಟರಾಜ್, ರಾಕೇಶ್ ಕುಮಾರ್, ವಿನಯ್ ಕಣಗಾಲ್, ಪ್ರಧಾನ ಕಾರ್ಯದರ್ಶಿ ಗಿರೀಶ್, ಸಿ.ಎಸ್ ರಘು, ಕೆಆರ್ ಬ್ಯಾಂಕ್ ಉಪಾಧ್ಯಕ್ಷ ಬಸವರಾಜು ಬಸಪ್ಪ, ಜಿ.ರಾಘವೇಂದ್ರ, ರಂಗಸ್ವಾಮಿ ಪಾಪು, ಗುರುರಾಜ್, ರಂಗನಾಥ್, ನವೀನ್, ಭರತ್ ಮತ್ತಿತರರು ಹಾಜರಿದ್ದರು.
ಮೈಸೂರು,ಸೆ.1:ಈ ಬಾರಿಯ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲಿರುವ ಆನೆಗಳಿಗೆ ಭಾರ ಹೊರುವ ತಾಲೀಮು ಭಾನುವಾರದಿಂದ ಆರಂಭಿಸಲಾಯಿತು.
ದಸರಾ ಪ್ರಮುಖ ಆಕರ್ಷಣೆಯಾದ ಜಂಬೂಸವಾರಿ ಮೆರವಣಿಗೆ ದಿನ ಕ್ಯಾಪ್ಟನ್ ಅಭಿಮನ್ಯು 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ನಾಡ ದೇವತೆ ಚಾಮುಂಡೇಶ್ವರಿಯನ್ನು ಹೊತ್ತು ಐದು ಕಿಲೋಮೀಟರ್ ದೂರ ಸಾಗಲಿದ್ದಾನೆ.
ಹಾಗಾಗಿ ಅಭಿಮನ್ಯು ಸೇರಿದಂತೆ ಇತರ ಆನೆಗಳಿಗೂ ಇಂದಿನಿಂದ ಭಾರ ಹೊರುವ ತಾಲೀಮು ಆರಂಭಿಸ ಲಾಯಿತು.
ಮೈಸೂರು ಅರಮನೆ ಆವರಣದಲ್ಲಿ ಬೀಡು ಬಿಟ್ಟಿರುವ ಗಜಪಡೆ ಶೆಡ್ ನಲ್ಲಿ ಬೆಳಿಗ್ಗೆ 7.30ಕ್ಕೆ ಪೂಜೆ ಸಲ್ಲಿಸಿ ಆನಂತರ ಅಭಿಮನ್ಯು ಮೇಲೆ 600 ಕೆಜಿ ತೂಕದ ಮರಳಿನ ಮೂಟೆಯನ್ನು ಹೊರಿಸಿ ಮೈಸೂರು ಅರಮನೆಯಿಂದ ಬನ್ನಿಮಂಟಪದವರೆಗೂ ತಾಲೀಮು ನಡೆಸಲಾಯಿತು.
ಮುಂದಿನ ದಿನಗಳಲ್ಲಿ ಇನ್ನುಳಿದ ಆನೆಗಳಿಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.
ಮೈಸೂರು: ಕುವೆಂಪುನಗರದ ಮಹಾಬೋಧಿ ಸಂಸ್ಥೆಯ ಮೆತ್ತಲೋಕ ವಿದ್ಯಾರ್ಥಿಗಳಿಗೆ ಎಸ್ ಪ್ರಕಾಶ್ ಪ್ರಿಯಾದರ್ಶನ್ ಸ್ನೇಹ ಬಳಗದಿಂದ ಹಣ್ಣುಗಳು ಮತ್ತು ಲೇಖನಿ ಸಾಮಗ್ರಿಗಳನ್ನು ವಿತರಿಸುವ ಮೂಲಕ ಮದರ್ ತೆರೇಸಾ ಹುಟ್ಟುಹಬ್ಬವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು.
ಈ ವೇಳೆ ಮಾತನಾಡಿದ ಮೈಸೂರು ನಗರ ಜೆ ಡಿಎಸ್. ಕಾರ್ಯಧ್ಯಕ್ಷ ಎಸ್ ಪ್ರಕಾಶ್ ಪ್ರಿಯಾದರ್ಶನ್, ಮದರ್ ತೆರೆಸಾ ಅನಾಥರು, ಬಡವರು, ನಿರ್ಗತಿಕರ ಸೇವೆಯಲ್ಲಿಯೇ ಬದುಕಿನ ಪ್ರೀತಿ ಕಂಡ ಮಹಾನ್ ಚೇತನ ಎಂದು ಹೇಳಿದರು.
ಭಾರತದಲ್ಲಿ ಸುಮಾರು ನಲವತ್ತೈದಕ್ಕೂ ಹೆಚ್ಚು ವರ್ಷಗಳ ಕಾಲ ಬಡರೋಗಿಗಳ ಸೇವೆ ಮಾಡಿದರು, ಅವರ ಸೇವೆ ಪರಿಗಣಿಸಿ ನೊಬೆಲ್ ಶಾಂತಿ ಪ್ರಶಸ್ತಿ ತೆರೆಸಾ ಮುಡಿಗೇರಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ವಿಶುದ್ಧ ಸಿಲವರ್ಧನ ಬಂತೆ ಜಿ, ಮೆತ್ತಲೋಕದ ಪಾಂಡು, ಪತ್ರಿಕಾ ವಿತರಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೋಮದೇವ,ಸುಬ್ರಮಣ್ಯ, ಛಾಯಾ, ಯಶವಂತ್ ಕುಮಾರ್, ಸ್ವಾಮಿ , ಮಹೇಶ್, ಮಹದೇವ್,ಎಸ್.ಪಿ. ಅಕ್ಷಯ್ ಪ್ರಿಯಾದರ್ಶನ್, ,ಹರ್ಷಿತ್ ಎಸ್ ನಾಗೇಶ್ ಮತ್ತಿತರರು ಉಪಸ್ಥಿತರಿದ್ದರು.
ಮೈಸೂರು: ಶ್ರೀ ಕೃಷ್ಣ ಜನ್ಮಾಷ್ಟಮಿ ಪ್ರಯುಕ್ತ ಮೈಸೂರಿನ ನಂಜುಮಳಿಗೆ ಸಮೀಪ ಇರುವ ಶ್ರೀ ವೇಣುಗೋಪಾಲ ಕೃಷ್ಣ ಸ್ವಾಮಿ ದೇವಸ್ಥಾನ ಮುಂಭಾಗ ಅಪೂರ್ವ ಸ್ನೇಹ ಬಳಗದ ವತಿಯಿಂದ ಗೋ ಪೂಜೆ ನೆರವೇರಿಸಿ ಗೋವುಗಳಿಗೆ ಮೇವು ವಿತರಿಸಲಾಯಿತು.
ಈ ವೇಳೆ ಮಾತನಾಡಿದ ನಗರಪಾಲಿಕೆ ಮಾಜಿ ಸದಸ್ಯ ಮ ವಿ ರಾಮಪ್ರಸಾದ್, ಕೃಷ್ಣ ಪರಮಾತ್ಮ ಬೋಧಿಸಿದ ಗೀತೋಪದೇಶದ ತತ್ವಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ಉತ್ತಮವಾದ ಸಮಾಜ ನಿರ್ಮಾಣ ಮಾಡೋಣ ಎಂದು ಕರೆ ನೀಡಿದರು.
ಅಪೂರ್ವ ಸ್ನೇಹ ಬಳಗದ ಅಧ್ಯಕ್ಷ ಅಪೂರ್ವ ಸುರೇಶ್ ಮಾತನಾಡಿ,ಶ್ರೀಕೃಷ್ಣನ ಕೊಳಲು ಪ್ರೀತಿ ಸಹೋದರತ್ವದ ಸಂಕೇತವಾಗಿದೆ ಎಂದು ಹೇಳಿದರು.
ಸೋದರತ್ವದ ಸಂಕೇತವಾದ ಶ್ರೀಕೃಷ್ಣನ ಕೊಳಲನ್ನು ನಾವಿಂದು ಮರೆತು ಬಿಟ್ಟಿದ್ದೇವೆ, ಮಹಾಭಾರತ ಯುದ್ಧ ಮನುಷ್ಯನ ಜೀವನದಲ್ಲಿ ನಿತ್ಯ ನಡೆಯುವ ಘಟನೆಗಳೇ ಆಗಿವೆ. ಪ್ರೀತಿ, ವಿಶ್ವಾಸದಿಂದ ಬದುಕಿದರೆ ಎಲ್ಲರ ಮನಸ್ಸನ್ನು ಗೆಲ್ಲಬಹುದು ಎಂಬ ಸಂದೇಶ ಶ್ರೀಕೃಷ್ಣ ದೇವರು ನೀಡಿದ್ದಾರೆ.
ಸತ್ಯ, ನ್ಯಾಯಕ್ಕಾಗಿ ಹೋರಾಟ ನಡೆಸಿದ ಶ್ರೀಕೃಷ್ಣ. ಸಮಾಜದಲ್ಲಿ ಇಂದಿಗೂ ಕಂಸ, ದುರ್ಯೋಧನರು ಇದ್ದಾರೆ, ಅಂತಹ ಶಕ್ತಿಯ ನಾಶಕ್ಕೆ ಪ್ರಯತ್ನ ಮಾಡುವ ಚಿಂತನೆ ಮಾಡಬೇಕಾಗಿದೆ ಎಂದು ತಿಳಿಸಿದರು.
ಈ ವೇಳೆ ಅಂಬಲೆ ಶಿವಣ್ಣ, ರಾಕೇಶ್ , ಆನಂದ್, ಪ್ರಕಾಶ್, ಧನರಾಜ್ ಮತ್ತಿತರರು ಹಾಜರಿದ್ದರು.