ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ

ಮೈಸೂರು: ಸಾಮಾನ್ಯವಾಗಿ ಬೈಕ್ ನಲ್ಲಿ ಬಂದು ಕಳ್ಳರು ಚೈನ್ ಸ್ನ್ಯಾಚ್ ಮಾಡಿರೋದನ್ನ ಕೇಳಿದ್ದೇವೆ,ಆದರೆ ಮೈಸೂರಿನಲ್ಲಿ ಮಹಳೆಯೊಬ್ಬಳು ಚಿನ್ನದ ಸರ ದೋಚಿರುವ ಹೇಯ ಘಟನೆ ನಡೆದಿದೆ.

ನಗರ ಬಸ್ ನಿಲ್ದಾಣದಲ್ಲಿ
ಮಹಿಳೆಯೊಬ್ಬರ ಗಮನವನ್ನು ಬೇರೆಡೆ ಸೆಳೆದು 40 ಗ್ರಾಂ ಚಿನ್ನದ ಸರವನ್ನು ಮಹಿಳೆ ಕಿತ್ತು ಪರಾರಿಯಾಗಿದ್ದಾಳೆ.

ಕುವೆಂಪುನಗರ ನಿವಾಸಿ ಜ್ಯೋತಿ ಎಂಬುವರು ಚಿನ್ನದ ಸರ ಕಳೆದುಕೊಂಡಿದ್ದಾರೆ.ಈಕೆ ತಮ್ಮ ತಾಯಿ ಮನೆಗೆ ಹೋಗಿ ಹಿಂದಿರುಗುವಾಗ ನಗರ ಬಸ್ ನಿಲ್ದಾಣದಲ್ಲಿ ಅಪರಿಚಿತ ಮಹಿಳೆ ಒಬ್ಬಳು ಚಿಲ್ಲರೆ ಕಾಸನ್ನ ಕೆಳಗೆ ಬೀಳಿಸಿದ್ದಾಳೆ.

ನಂತರ ಬಿದ್ದಿದ್ದ ಕಾಸನ್ನು ಎತ್ತಿಕೊಡುವಂತೆ ಜ್ಯೋತಿ ಅವರಿಗೆ ಕೇಳಿದ್ದಾಳೆ.ಜ್ಯೋತಿ ಕೆಳಗೆ ಬಿದ್ದ ಚಿಲ್ಲರೆ ಹಣ ತೆಗೆದುಕೊಡುವಾಗ ಕಳ್ಳ ಮಹಿಳೆ ಅದು ಹೇಗೋ 40 ಗ್ರಾಂ ಚಿನ್ನದ ಸರ ಎಗರಿಸಿ ಪರಾರಿಯಾಗಿದ್ದಾಳೆ.

ಈ ಸಂಬಂಧ ಜ್ಯೋತಿ ಅವರು ದೇವರಾಜ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಗಮನ ಬೇರೆಡೆ ಸೆಳೆದು ಚಿನ್ನದ ಸರ ದೋಚಿದ ಮಹಿಳೆ Read More

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ

ಮೈಸೂರು: ಮೈಸೂರಿನ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಇಬ್ಬರು ಮನೆಗಳ್ಳರನ್ನು ಬಂಧಿಸಿ 17 ಲಕ್ಷ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಸಿದ್ದಾರ್ಥ ನಗರದ ಮನೆಯೊಂದರಲ್ಲಿ ಆರೋಪಿಗಳು ಕಳುವು ಮಾಡಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ನಜರಬಾದ್ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಪೊಲೀಸರು 17 ಲಕ್ಷ ರೂ. ಮೌಲ್ಯದ 245 ಗ್ರಾಂ ಚಿನ್ನಾಭರಣ ಹಾಗೂ 2.5 ಕೆಜಿ ಬೆಳ್ಳಿ ವಶಪಡಿಸಿಕೊಂಡಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ ದೇವರಾಜ ಉಪವಿಭಾಗದ ಎಸಿಪಿ ಶಾಂತಮಲ್ಲಪ್ಪ ಉಸ್ತುವಾರಿಯಲ್ಲಿ ನಜರಬಾದ್ ಠಾಣೆ ಇನ್ಸ್ ಪೆಕ್ಟರ್ ಮಹದೇವಸ್ವಾಮಿ ಅವರ ನೇತೃತ್ವದಲ್ಲಿ ಪಿ ಎಸ್ ಐ ಗಳಾದ ಶ್ರೀನಿವಾಸ ಪಾಟೀಲ್, ನಟರಾಜು, ಶೇಖ್ ಫಿರೋಜ್, ಚಂದ್ರಶೇಖರ್ ರಾವ್ ಹಾಗೂ ಸಿಬ್ಬಂದಿ ಪ್ರದೀಪ್, ಪ್ರಕಾಶ್, ರಮೇಶ್, ಸತೀಶ್ ಕುಮಾರ್, ಸಂಜು, ವೆಂಕಟೇಶ್, ಮೊಹಮ್ಮದ್ ಇಸ್ಮಾಯಿಲ್, ಕುಮಾರ್ ಅವರು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.

ಇಬ್ಬರು ಮನೆಗಳ್ಳರ ಬಂಧನ: 17 ಲಕ್ಷ ಮೌಲ್ಯದ ಚಿನ್ನಾಭರಣ, ಬೆಳ್ಳಿ ವಶ Read More

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ

ಬಾಗಲಕೋಟ: ಅಧಿಕಾರಿಗಳ ಕಿರುಕುಳದಿಂದ ಮನನೊಂದು ಕೆಎಸ್ಆರ್ ಟಿ ಸಿ ಬಸ್ ಚಾಲಕ ಕಂ ನಿರ್ವಾಹಕ ಆತ್ಮಹತ್ಯೆ ಮಾಡಿಕೊಂಡ ಘಟನೆ ಜಿಲ್ಲೆಯ ಬೀಳಗಿಯಲ್ಲಿ ನಡೆದಿದೆ.

ಶ್ರೀಶೈಲ್ ವಿಭೂತಿ (45) ಆತ್ಮಹತ್ಯೆ ಮಾಡಿಕೊಂಡ ಬಸ್ ಚಾಲಕ.

ಬೀಳಗಿಯಲ್ಲಿರುವ ತಮ್ಮ ನಿವಾಸದಲ್ಲೇ ಶ್ರೀಶೈಲ್ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೇಲಧಿಕಾರಿಗಳ ಕಿರುಕುಳದಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಕುಟುಂಬ ಆರೋಪ ಮಾಡಿದೆ.

ಬೀಳಗಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಧಿಕಾರಿಗಳ ಕಿರುಕುಳ: ಬಸ್ ಚಾಲಕ ಆತ್ಮಹತ್ಯೆ Read More

ವಿದ್ಯಾರ್ಥಿಗಳ ಮೇಲೆ ಹರಿದ ಬಸ್

ಬೆಳಗಾವಿ: ರಸ್ತೆ ಬದಿ ನಿಂತಿದ್ದ ವಿದ್ಯಾರ್ಥಿಗಳ ಮೇಲೆಯೇ ಬಸ್ ಹರಿದು ಒಬ್ಬ ಬಾಲಕ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಜಿಲ್ಲೆಯ ಅಥಣಿ ತಾಲೂಕಿನ ಗಲಗಲಿಯಲ್ಲಿ ನಡೆದಿದೆ.

ಸುನೀಲ್ (10) ಮೃತ ಬಾಲಕ.

ಆಗತಾನೇ ಟ್ಯೂಷನ್ ಮುಗಿಸಿಕೊಂಡು ಬಂದ ವಿದ್ಯಾರ್ಥಿಗಳು ರಸ್ತೆಬದಿ ನಿಂತಿದ್ದರು. ಈ ವೇಳೆ ಸರ್ಕಾರಿ ಬಸ್ ಮಕ್ಕಳ ಮೇಲೆಯೇ ಹರಿದಿದ್ದು ಈ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದರಿಂದ ಒಬ್ಬ ವಿದ್ಯಾರ್ಥಿ ಸ್ಥಳದಲ್ಲೇ ಸಾವನ್ನಪ್ಪಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಸ್ ಚಾಲಕನ ನಿರ್ಲಕ್ಷ್ಯವೇ ಅಪಘಾತಕ್ಕೆ ಕಾರಣ ಎಂದು ಸ್ಥಳೀಯರು ಆರೋಪಿಸಿದ್ದು,ಕೂಡಲೇ‌ ಚಾಲಕನ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿದ್ಯಾರ್ಥಿಗಳ ಮೇಲೆ ಹರಿದ ಬಸ್ Read More

ಕಳವು ಮಾಲು ಮಾರಾಟ ಮಾಡಲು ಸಹಕಾರ: ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್

ಮೈಸೂರು: ಕಳವು ಮಾಡಿದ ಚಿನ್ನಾಭರಣ ಮಾರಾಟ ಮಾಡಲು ಸಹಕರಿಸಿದ ಆರೋಪದ ಮೇಲೆ ಅಶೋಕಾಪುರಂ ಠಾಣೆ ಮುಖ್ಯಪೇದೆ ರಾಜು ಅಮಾನತುಗೊಂಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಮುಖ್ಯಪೇದೆ ರಾಜು ಅವರನ್ನು ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳನ್ನ ಬಂಧಿಸಲಾಗಿತ್ತು.
ವಿಚಾರಣೆ ವೇಳೆ ದೇವರಾಜ, ಶ್ರೀರಂಗಪಟ್ಟಣ,ವಿದ್ಯಾರಣ್ಯ ಪುರಂ ಸೇರಿದಂತೆ ಕೆಲವು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣಗಳು ಬಯಲಿಗೆ ಬಂದಿತ್ತು.

ಕಳವು ಮಾಲುಗಳನ್ನ ವಶಪಡಿಸಿಕೊಳ್ಳಲು ವಿಚಾರಣೆ ನಡೆಸಿದ ವೇಳೆ ಆರೋಪಿಗಳ ಜೊತೆ ಅಶೋಕಾಪುರಂ ಠಾಣೆಯ ಮುಖ್ಯಪೇದೆ ರಾಜು ಕಳವು ಪದಾರ್ಥಗಳನ್ನ ಮಾರಾಟ ಮಾಡಲು ಸಹಕರಿಸಿದ್ದುದು ಖಚಿತವಾಗಿದೆ.

ಹಾಗಾಗಿ ಕಮಿಷನರ್ ಸೀಮಾ ಲಾಟ್ಕರ್ ರಾಜುನನ್ನು ಸಸ್ಪೆಂಡ್ ಮಾಡಿದ್ದಾರೆ.

ಕಳವು ಮಾಲು ಮಾರಾಟ ಮಾಡಲು ಸಹಕಾರ: ಹೆಡ್ ಕಾನ್ ಸ್ಟೇಬಲ್ ಸಸ್ಪೆಂಡ್ Read More

ಗಣೇಶ ತರಲು ಹೋಗುತ್ತಿದ್ದಾಗ ಇಬ್ಬರು ಯುವಕರ ದುರ್ಮರಣ

ತರೀಕೆರೆ: ಪ್ರತಿಬಾರಿ ಗೌರಿ,ಗಣೇಶ‌ ಹಬ್ಬ ಬಂದಾಗ ಎಲ್ಲಾದರೂ ಒಂದು ಕಡೆ ಅವಘಡ ನಡೆಯುತ್ತಲೇ ಇರುತ್ತದೆ,ಆದರೂ ಯುವಜನತೆ ಎಚ್ಚೆತ್ತುಕೊಳ್ಳದಿರುವುದು ನಿಜಕ್ಕೂ ದುರ್ಧೈವ.

ಎಲ್ಲಡೆ ಗಣೇಶ ಚತುರ್ಥಿಯ ಸಂಭ್ರಮ ಮನೆ ಮಾಡಿದೆ ಆದರೆ ಗಣೇಶ ಪ್ರತಿಷ್ಠಾಪನೆಗೆ ಗಣೇಶ ಮೂರ್ತಿ ತರಲು ಹೋಗುವ ವೇಳೆ ಇಬ್ಬರ ಯುವಕರು ಸಾವನ್ನಪ್ಪಿರುವ ಘಟನೆ ತರೀಕೆರೆ ತಾಲೂಕಿನಲ್ಲಿ ನಡೆದಿದೆ.

ಲಿಂಗದಹಳ್ಳಿ ನಿವಾಸಿಗಳಾದ
ಶ್ರೀಧರ್ (20) ಧನುಷ್ (20) ಮೃತ ಯುವಕರಾಗಿದ್ದಾರೆ.

ಗಣಪತಿ ತರಲು ಟಾಟಾ ಏಸ್ ವಾಹನದಲ್ಲಿ 9 ಮಂದಿ ಯುವಕರು ಹೋಗುತ್ತಿದ್ದಾಗ ವಾಹನ ಉರಿಳಿಬಿದ್ದ ಪರಿಣಾಮ ಇಬ್ಬರು ಯುವಕರು ಮೃತಪಟ್ಟಿದ್ದು ಊರಿನಲ್ಲಿ ಸೂತಕದ ಛಾಯೆ ಮನೆ ಮಾಡಿದೆ.

ತರೀಕೆರೆ ತಾಲೂಕಿನ ಭೈರಾಪುರ ಗೇಟ್ ಬಳಿ ನಡೆದ ಈ ದುರ್ಘಟನೆಯಲ್ಲಿ ಗಾಯಗೊಂಡ ಇಬ್ಬರು ಯುವಕರನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ದಾಖಲಿಸಲಾಗಿದ್ದು ಇನ್ನು ಮೂವರು ತರೀಕೆರೆ ತಾಲೂಕು ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಲಿಂಗದಹಳ್ಳಿ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಗಣೇಶ ತರಲು ಹೋಗುತ್ತಿದ್ದಾಗ ಇಬ್ಬರು ಯುವಕರ ದುರ್ಮರಣ Read More

ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ: ಹೆಡ್ ಕಾನ್ಸ್‌ಟೇಬಲ್, ಇಬ್ಬರು ಮನೆಗಳ್ಳರ ವಶ

ಮೈಸೂರು: ಕಳುವು ಮಾಡಿದ ಚಿನ್ನಾಭರಣಗಳನ್ನ ಪಡೆದು ಮಾರಾಟ ಮಾಡಿಸಲು ಯತ್ನಿಸಿದ ಹೆಡ್ ಕಾನ್ಸ್‌ಟೇಬಲ್ ಹಾಗೂ ಇಬ್ಬರು ಮನೆಗಳರನ್ನು ಮಂಡಿ ಠಾಣೆ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಅಶೋಕ ಪುರಂ ಪೊಲೀಸ್ ಠಾಣೆಯ ಮುಖ್ಯಪೇದೆ ರಾಜು ಮೇಲೆ ಆರೋಪ ಕೇಳಿ ಬಂದಿದೆ. ಇಬ್ಬರು ಮನೆಗಳ್ಳರಾದ ನಜರುಲ್ಲಾ ಬಾಬು ಮತ್ತು ಅಲೀಂ ಬಂಧಿತರಾಗಿದ್ದಾರೆ.

ಮೈಸೂರಿನ ವಿವಿದ ಪೊಲೀಸ್ ಠಾಣೆಗಳಲ್ಲಿ ನಡೆದ ಮನೆಗಳುವು ಪ್ರಕರಣಗಳಿಗೆ ಸಂಭಂಧಿಸಿದಂತೆ ಸುಮಾರು 400 ಗ್ರಾಂ ಚಿನ್ನಾಭರಣಗಳನ್ನ ವಶಪಡಿಸಿಕೊಳ್ಳಲಾಗಿದೆ.

ಈ ಪೈಕಿ ಮುಖ್ಯಪೇದೆ ರಾಜು ಸುಮಾರು 300 ಗ್ರಾಂ ಚಿನ್ನಾಭರಣ ಪಡೆದಿದ್ದರೆಂದು ಆರೋಪಿಸಲಾಗಿದೆ.

ಮಂಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಕಳುವು ಪ್ರಕರಣವೊಂದರಲ್ಲಿ ನಜರುಲ್ಲಾ ಬಾಬು ಹಾಗೂ ಅಲೀಂ ಸಿಕ್ಕಿಬಿದ್ದಿದ್ದರು.

ವಿಚಾರಣೆ ವೇಳೆ ಆರೋಪಿಗಳು ದೇವರಾಜ,ಶ್ರೀರಂಗಪಟ್ಟಣ ಹಾಗೂ ಇನ್ನಿತರ ಪೊಲೀಸ್ ಠಾಣೆಯಲ್ಲಿ ಕಳುವು ಮಾಡಿದ್ದಾಗಿ ಒಪ್ಪಿಕೊಂಡು ಸುಮಾರು 400 ಗ್ರಾಂ ಚಿನ್ನಾಭರಣ ಕಳುವು ಮಾಡಿರುವುದಾಗಿ ಬಾಯಿಬಿಟ್ಟಿದ್ದಾರೆ.

ಅದರಲ್ಲಿ ಸುಮಾರು 300 ಗ್ರಾಂ ಚಿನ್ನಾಭರಣವನ್ನು ಮುಖ್ಯಪೇದೆ ರಾಜು ಪಡೆದಿದ್ದರೆಂದು ವಿಚಾರಣೆ ವೇಳೆ ತಿಳಿಸಿದ್ದಾರೆ.

ಹಾಗಾಗಿ ಮಂಡಿ ಠಾಣೆ ಪೊಲೀಸರು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹಾಗೂ ಡಿಸಿಪಿಗಳಾದ ಮುತ್ತುರಾಜ್ ಮತ್ತು ಜಾಹ್ನವಿ ರವರ ಗಮನಕ್ಕೆ ತಂದಿದ್ದಾರೆ.

ಮುಖ್ಯಪೇದೆ ರಾಜು ನನ್ನು ವಿಚಾರಣೆಗೆ ಒಳಪಡಿಸಿದಾಗ ಚಿನ್ನಾಭರಣ ಪಡೆದಿರುವುದಾಗಿ ಮಾಹಿತಿ ನೀಡಿದ್ದಾರೆ.

ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಆದೇಶದಂತೆ ಇಬ್ಬರು ಮನೆಗಳ್ಳರು ಹಾಗೂ ಮುಖ್ಯಪೇದೆ ರಾಜು ಮೇಲೆ ಮಂಡಿ ಠಾಣಾ ಪೊಲೀಸರು ಪ್ರಕರಣ ದಾಖಲಿಸಿ ಕಳುವು ಮಾಲನ್ನ ವಶಪಡಿಸಿಕೊಂಡಿದ್ದಾರೆ.

ಕಳುವು ಮಾಡಿದ ಚಿನ್ನಾಭರಣ ಮಾರಾಟ ಮಾಡಿಸಲು ಯತ್ನ: ಹೆಡ್ ಕಾನ್ಸ್‌ಟೇಬಲ್, ಇಬ್ಬರು ಮನೆಗಳ್ಳರ ವಶ Read More

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ

ಮೈಸೂರು: ಗಂಡನ ಮನೆಯವರ ವರದಕ್ಷಿಣೆ ಕಿರುಕುಳ ದಿಂದ ಬೇಸತ್ತು ಮಹಿಳೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಮೈಸೂರಿನ ಬೆಳಬಾಡಿ ಗ್ರಾಮದಲ್ಲಿ ನಡೆದಿದೆ.

ಬೆಳವಾಡಿ ಗ್ರಾಮದ ಶಿಲ್ಪಾ (22) ಆತ್ಮಹತ್ಯೆ ಮಾಡಿಕೊಂಡ ಮಹಿಳೆ.

ವರದಕ್ಷಿಣೆ ತರುವಂತೆ ಪೀಡಿಸಿದ ಗಂಡ ಮಹೇಶ್ ಹಾಗೂ ಅತ್ತೆ ರತ್ನಮ್ಮ ವಿರುದ್ದ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

2021ರಲ್ಲಿ ಶಿಲ್ಪಾ ಹಾಗೂ ರಾಮನಗರದ ಬಿಡದಿ ನಿವಾಸಿ ಮಹೇಶ್ ವಿವಾಹವಾಗಿತ್ತು, ಮದುವೆ ಸಮಯದಲ್ಲಿ ವರದಕ್ಷಿಣೆ ನಿರಾಕರಿಸಿದ್ದರು,ಆದರೆ ಕೆಲದಿನಗಳಲ್ಲೇ ಹಂತ ಹಂತವಾಗಿ ವರದಕ್ಷಿಣೆ ಪಡೆಯುವುದಾಗಿ ತಿಳಿಸಿ ಮದುವೆ ಮಾಡಿಕೊಡುವಂತೆ ಪತಿಯ ಮನೆಯವರು ಹೇಳಿದ್ದರು.

ಪ್ರಾರಂಭದಲ್ಲಿ ಅನ್ಯೋನ್ಯತೆಯಿಂದ ನೋಡಿಕೊಂಡ ಪತಿ ಮನೆಯವರು ನಂತರ ವರದಕ್ಷಿಣೆಗಾಗಿ ಪೀಡಿಸಲಾರಂಭಿಸಿದರು.

ಶಿಲ್ಪಾ ತಾಯಿ ಲಕ್ಷ್ಮಮ್ಮ ಕೂಲಿ ಕೆಲಸ ಮಾಡಿ ಸಂಸಾರ ನಡೆಸುತ್ತಿದ್ದರು, ಹೀಗಿದ್ದೂ ಹಣ ಹೊಂದಿಸಿ ಚಿನ್ನ ಕೊಡಿಸಿದ್ದರು. ಶಿಲ್ಪ ಗಂಡು ಮಗುವಿಗೆ ಜನ್ಮ ನೀಡಿದ್ದರು.ಈ ಸಮಯದಲ್ಲೂ ವರದಕ್ಷಿಣೆ ನೀಡುವಂತೆ ಮಹೇಶ್ ಹಾಗೂ ಈತನ ತಾಯಿ ರತ್ನಮ್ಮ ಒತ್ತಾಯಿಸಿದ್ದರು.

ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತ ಶಿಲ್ಪ ಕೆಲವು ದಿನಗಳ ಹಿಂದೆ ತವರು ಮನೆ ಬಂದರು
ಲಕ್ಷ್ಮಮ್ಮ ಅವರ ಹೆಸರಿನಲ್ಲಿದ್ದ ಹಳೆ ಮನೆಯನ್ನ ಮಹೇಶ್ ಹೆಸರಿಗೆ ಬರೆದುಕೊಡುವಂತೆ ಒತ್ತಡ ಹಾಕಿದ್ದರು.

ವರದಕ್ಷಿಣೆ ಕೊಟ್ಟರೆ ಮಾತ್ರ ಅತ್ತೆ ಮನೆಯಲ್ಲಿ ನೆಮ್ಮದಿ ಎಂದು ತಾಯಿ ಜೊತೆ ಆಗಾಗ ಶಿಲ್ಪ ಹೇಳುತ್ತಿದ್ದಳು,ಆಗ ಗಂಡನ ಜೊತೆ ಬಾಳುವಂತೆ ತಾಯಿ ಬುದ್ದಿವಾದ ಹೇಳಿದ್ದರು.

ಮನೆಯಲ್ಲಿ ಯಾರು ಇಲ್ಲದ ವೇಳೆ ಶಿಲ್ಪ ನೇಣಿಗೆ ಶರಣಾಗಿದ್ದಾಳೆ.

ಶಿಲ್ಪ ಸಾವಿಗೆ ವರದಕ್ಷಿಣೆ ಕಿರುಕುಳ ಎಂದು ಆರೋಪಿಸಿ ತಾಯಿ ಲಕ್ಷ್ಮಮ್ಮ ವಿಜಯನಗರ ಪೊಲೀಸ್ ಠಾಣೆಯಲ್ಲಿ ಅಳಿಯ ಮಹೇಶ್ ಹಾಗೂ ಆತನ ತಾಯಿ ರತ್ನಮ್ಮ ವಿರುದ್ದ ದೂರು ನೀಡಿದ್ದಾರೆ.

ವರದಕ್ಷಿಣೆ ಕಿರುಕುಳದಿಂದ ಬೇಸತ್ತು ಮಹಿಳೆ ಆತ್ಮಹತ್ಯೆ Read More

ಕರ್ಕಶ ಶಬ್ದ ಮಾಡುವ ವಾಹನ ಸವಾರರಿಗೆಚಳಿ ಬಿಡಿಸಿದ ಪೊಲೀಸರು

ಮೈಸೂರು: ಬೆಳ್ಳಂ ಬೆಳಿಗ್ಗೆ ಪೊಲೀಸರು ಕರ್ಕಶ ಶಬ್ದ ಮಾಡಿಕೊಂಡು ಹೋಗುವ ವಾಹನ ಸವಾರರಿಗೆ ಚಳಿ ಬಿಡಿಸಿದ್ದಾರೆ.

ಮೈಸೂರಿನ ಸಿದ್ದಾರ್ಥ ನಗರ ಸಂಚಾರಿ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ ದ್ವಿಚಕ್ರ ವಾಹನ ಸವಾರರಿಗೆ ಶಾಕ್ ನೀಡಿದರು.

ಕರ್ಕಶ ಶಬ್ದ ಮಾಡುತ್ತಿದ್ದ ಬೈಕ್‌ ಗಳನ್ನು ಸೀಜ್ ಮಾಡಿ ಕಠಿಣ ಎಚ್ಚರಿಕೆ ನೀಡಿದರು.

ಮೈಸೂರು ಪೊಲೀಸ್‌ ಕಮಿಷನರ್‌ ಸೀಮಾ ಲಾಟ್ಕ‌ರ್ ನೇತೃತ್ವದಲ್ಲಿ ಕಳೆದ 3 ದಿನದಿಂದ ಕಾರ್ಯಚರಣೆ ನಡೆದಿದ್ದು, 94 ಬೈಕ್ ಗಳನ್ನು ಸೀಜ್ ಮಾಡಿದ್ದಾರೆ.

217 ಸೈಲನ್ಸರ್ ಗಳನ್ನು ರಸ್ತೆಯಲ್ಲಿ ಸಾಲಾಗಿ ಜೋಡಿಸಿ ರೋಡ್ ರೋಲರ್ ಮೂಲಕ ಪುಡಿ ಗಟ್ಟಿದರು.

ಕಾನೂನು ನಿಯಮ ಉಲ್ಲಂಘನೆ ಮಾಡಿದವರ ವಿರುದ್ದ ಕಠಿಣ ಕ್ರಮಕ್ಕೆ ಮುಂದಾದ ಸಿದ್ದಾರ್ಥ ನಗರ ಸಂಚಾರಿ ಠಾಣೆ ಪೊಲೀಸರು, ಮತ್ತೆ ಹೀಗೆ ಮಾಡಿದರೆ ವಾಹನ ಕೊಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.

ಸೀಜ್ ಮಾಡಿದ ವಾಹನಗಳಿಗೆ ಫೈನ್ ಹಾಕಿ ವಾರ್ನಿಂಗ್ ಕೊಟ್ಟು ಕಳುಹಿಸಿದ ಪೊಲೀಸರು ಇನ್ನುಳಿದ ವಾಹನಗಳ ಸೈಲನ್ಸ‌ರ್ ಮೇಲೆ ರೋಡ್ ರೋಲರ್ ಹತ್ತಿಸಿ ಪುಡಿಮಾಡಿದರು.

ಕರ್ಕಶ ಶಬ್ದ ಮಾಡುವ ವಾಹನ ಸವಾರರಿಗೆಚಳಿ ಬಿಡಿಸಿದ ಪೊಲೀಸರು Read More

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ

ಮೈಸೂರು: ಪತ್ನಿಯ ಮೇಲೆ ಬೇರೆ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿದ ದೃಶ್ಯಗಳನ್ನ ಪತಿಯೇ ಮೊಬೈಲ್ ನಲ್ಲಿ ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಅಸಹ್ಯಕರ ಪ್ರಕರಣ ಮೈಸೂರಿನಲ್ಲಿ ನಡೆದಿದೆ.

ಇಂತಹ ಹೇಯ ಘಟನೆ ಮೈಸೂರಿನ ಕಲ್ಯಾಣಗಿರಿಯಲ್ಲಿ ನಡೆದಿದೆ

ಘಟನೆ ಸಂಬಂಧ ಪತ್ನಿ ಮುನ್ನಿ(ಹೆಸರು ಬದಲಿಸಲಾಗಿದೆ) ಪತಿ ಅಬ್ದುಲ್ ಫಾರೂಖ್,ನಜೀರ್ ಮಹಮದ್ ಹನೀಫಾ ಸೇರಿದಂತೆ 9 ಮಂದಿ ವಿರುದ್ದ ದೂರು ನೀಡಿದ್ದು‌ ಎಪ್ಐಆರ್ ದಾಖಲಾಗಿದೆ.

19 ವರ್ಷಗಳ ಹಿಂದೆ ಮುನ್ನಿ ಹಾಗೂ ಅಬ್ದುಲ್ ಫಾರೂಖ್ ವಿವಾಹವಾಗಿದ್ದು ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಅಬ್ದುಲ್ ಫಾರೂಖ್ ಮತ್ತೊಬ್ಬ ಮಹಿಳೆ ಜೊತೆ ಸಂಭಂಧ ಬೆಳೆಸಿ ಪತ್ನಿಯನ್ನ ನಿರ್ಲಕ್ಷಿಸಿದ್ದಾನೆ.

ಜೀವನೋಪಾಯಕ್ಕಾಗಿ ಮುನ್ನಿ ಹೈದರಾಬಾದ್ ಗೆ ತೆರಳಿ ನಂತರ ಮೈಸೂರಿಗೆ ಹಿಂದಿರುಗಿ ಕಲ್ಯಾಣಗಿರಿಯಲ್ಲಿ ಮನೆ ಬಾಡಿಗೆ ಪಡೆದು ಜೀವಿಸುತ್ತಿದ್ದಾರೆ.

ಜೀವನಾಂಶಕ್ಕಾಗಿ ಮುನ್ನಿ ನ್ಯಾಯಾಲಯದ ಮೊರೆ ಹೋಗಿದ್ದಾರೆ.ಜೀವನಾಂಶ ನೀಡುವಂತೆ ನ್ಯಾಯಾಲಯ ಆದೇಶ ನೀಡಿದ್ದರೂ ಅಬ್ದುಲ್ ಫಾರೂಖ್ ಪಾಲಿಸಿಲ್ಲ.

ಜೀವನೋಪಾಯಕ್ಕಾಗಿ ಮುನ್ನಿ ಸಾಕಷ್ಟು ಸಾಲ ಮಾಡಿದ್ದು,ಎರಡು ತಿಂಗಳ ಹಿಂದೆ ಸಾಲದ ಹಣ ಪಡೆಯಲು ಹರ್ಷದ್ ಖಾನ್ ಎಂಬಾತ ಮನೆಗೆ ಬಂದಿದ್ದಾನೆ.

ಈ ವೇಳೆ ಮನೆಗೆ ನುಗ್ಗಿದ ಅಬ್ದುಲ್ ಫಾರೂಖ್,ನಾಸಿರ್,ಮಹಮದ್ ಹನೀಫ್ ಹಾಗೂ ಇತರರು ಮುನ್ನಿ ಹಾಗೂ ಹರ್ಷದ್ ಖಾನ್ ಮೇಲೆ ಹಲ್ಲೆ ನಡೆಸಿದ್ದಾರೆ.

ನಂತರ ಮುನ್ನಿಯ ಬಟ್ಟೆಗಳನ್ನ ಹರಿದುಹಾಕಿ ವಿಡಿಯೋ ಚಿತ್ರೀಕರಿಸಿದ್ದಾರೆ.ಅಬ್ದುಲ್ ಫಾರೂಖ್ ಜೊತೆ ಬಂದಿದ್ದ ನಾಜಿರ್ ಎಂಬಾತ ಮುನ್ನಿ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ.

ಈ ದೃಶ್ಯಗಳನ್ನ ಪತಿ ಅಬ್ದುಲ್ ಫಾರೂಖ್ ತನ್ನ ಮೊಬೈಲ್ ನಲ್ಲಿ ಚಿತ್ರೀಕರಿಸಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಅಪ್ ಲೋಡ್ ಮಾಡಿದ್ದಾನೆ.

ಕೆಲ ಸಮಯದಲ್ಲಿ ವಿಡಿಯೋ ಡಿಲೀಟ್ ಮಾಡಿ ನಂತರ ಎಡಿಡ್ ಮಾಡಿ ಮತ್ತೆ ಅಪ್ ಲೋಡ್ ಮಾಡಿ ಪತ್ನಿಯನ್ನ ತೇಜೋವಧೆ ಮಾಡಿದ್ದಾನೆ.

ಇದೆಲ್ಲದರಿಂದ ನೊಂದ ಮುನ್ನಿ ಉದಯಗಿರಿ ಠಾಣೆಗೆ ದೂರು ನೀಡಿದ್ದಾರೆ.
ಉದಯಗಿರಿ ಠಾಣೆ ಪೊಲೀಸರು ಅಬ್ದುಲ್ ಫಾರೂಕ್, ನಾಜೀರ್,ಮಹಮದ್ ಹನೀಫ್ ಸೇರಿ 6 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಪತ್ನಿಯ ಮೇಲೆ‌ ಬೇರೊಬ್ಬ ಅತ್ಯಾಚಾರಕ್ಕೆ ಯತ್ನ: ಚಿತ್ರೀಕರಿಸಿದ ಪಾಪಿ ಪತಿ Read More