ಮನೆ ಬಾಗಿಲು ಮೀಟಿ 1.30 ಲಕ್ಷ ರೂ ದೋಚಿದ ಕಳ್ಳರು

ಮೈಸೂರು:ನ.3: ಮನೆ ಬಾಗಿಲು ಮೀಟಿ ಒಳ ನುಗ್ಗಿರುವ ಕಳ್ಳರು 1.30 ಹಣ 1 ಮೊಬೈಲ್ ಮತ್ತು ಬೆಳ್ಳಿತಟ್ಟೆ ದೋಚಿ ಪರಾರಿಯಾಗಿರುವ ಘಟನೆ ಮೈಸೂರಿನ ವಿಜಯನಗರ 4 ನೇ ಹಂತದಲ್ಲಿ ನಡೆದಿದೆ.

ಗ್ಯಾಸ್ ಸಿಲಿಂಡರ್ ಡೀಲರ್ ಆಗಿರುವ ಯಶವಂತ್ ಎಂಬುವರಿಗೆ ಸೇರಿದ ಮನೆಯಲ್ಲಿ ಕಳ್ಳತನ ನಡೆದಿದೆ.

ಯಶವಂತ್ ಅವರು ಬೆಂಗಳೂರಿಗೆ ಹೋಗಿದ್ದ ವೇಳೆ ಕಳ್ಳರು ಬಾಗಿಲು ಮೀಟಿ 1.30 ಲಕ್ಷ ನಗದು,5 ಸಾವಿರ ಮೌಲ್ಯದ ಮೊಬೈಲ್ ಮತ್ತು ಬೆಳ್ಳಿ ತಟ್ಟೆ ದೋಚಿದ್ದಾರೆ.

ಈ ಸಂಬಂಧ ವಿಜಯನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಮನೆ ಬಾಗಿಲು ಮೀಟಿ 1.30 ಲಕ್ಷ ರೂ ದೋಚಿದ ಕಳ್ಳರು Read More

ಡೋರ್ ಲಾಕ್ ಮುರಿದು 200 ಪೌಂಡ್ ಕರೆನ್ಸಿ, 40 ಸಾವಿರ, ಚಿನ್ನಾಭರಣ‌ ಕಳವು

ಮೈಸೂರು: ಡೋರ್ ಲಾಕ್ ಮುರಿದು ಮನೆಯಲ್ಲಿದ್ದ 200 ಪೌಂಡ್ ಕರೆನ್ಸಿ, 40 ಸಾವಿರ ರೂ. ಹಣ ಮತ್ತು ಚಿನ್ನಾಭರಣ‌ ದೋಚಿರುವ ಘಟನೆ ಮೈಸೂರಿನ ಬೋಗಾದಿಯಲ್ಲಿ ನಡೆದಿದೆ.

ಪರಮೇಶ್ ಎಂಬುವರ ಮನೆಯಲ್ಲಿ ಈ ಕಳ್ಳತನ ನಡೆದಿದ್ದು,ಕರೆನ್ಸಿ,ನಗದು ಜತೆಗೆ
90 ಗ್ರಾಂ ಚಿನ್ನಾಭರಣ ಹಾಗೂ 2.5 ಕಜಿ ಬೆಳ್ಳಿ
ವಸ್ತುಗಳನ್ನು ಕಳ್ಳರು ದೋಚಿದ್ದಾರೆ.

ಪರಮೇಶ್ ರವರ ಪತ್ನಿ, ಮಗ, ಸೊಸೆ ವಿಜಯವಾಡಕ್ಕೆ ತೆರಳಿದ್ದರು. ಪರಮೇಶ್ ಅವರು ಹಬ್ಬದ ಹಿನ್ನಲೆ ಬಿಳಿಗೆರೆ ಗ್ರಾಮಕ್ಕೆ ತೆರಳಿದ್ದರು ಈ‌‌ ವೇಳೆ ಕಳ್ಳರು ಮನೆ ಡೋರ್ ಲಾಕ್ ಮುರಿದು ಕಳ್ಳತನ ಮಾಡಿದ್ದಾರೆ.

ಬಿಳಿಗೆರೆಯಿಂದ ಪರಮೇಶ್ ಹಿಂದಿರುಗಿದಾಗ ಮನೆಯಲ್ಲಿ ಕಳ್ಳತನ ನಡೆದಿರುವುದು ಗೊತ್ತಾಗಿದ್ದು, ಸರಸ್ವತಿಪುರಂ ಪೊಲೀಸರಿಗೆ ದೂರು ನೀಡಿದ್ದಾರೆ.

ಡೋರ್ ಲಾಕ್ ಮುರಿದು 200 ಪೌಂಡ್ ಕರೆನ್ಸಿ, 40 ಸಾವಿರ, ಚಿನ್ನಾಭರಣ‌ ಕಳವು Read More

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ

ಮೈಸೂರು,ನ.1: ಇನ್ಸ್ಟಾಗ್ರಾಂ, ಸ್ನಾಪ್ ಚಾಟ್ ಫಾಲೋಯರ್ಸ್ ಹೆಚ್ಚಾಗಿದ್ದಕ್ಕೆ ಅಸೂಯೆಗೊಂಡ ಯುವತಿ ಸ್ನೇಹಿತರ ಜೊತೆ ಸೇರಿ ಮನೆಗೆ ನುಗ್ಗಿ ವಿಧ್ಯಾರ್ಥಿನಿಗೆ ಹಲ್ಲೆ ಮಾಡಿದ ಘಟನೆ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಶ್ರೀಕಂಠೇಶ್ವರ ಕಾಲೇಜಿನ ಎರಡನೇ ವರ್ಷದ ಪದವಿ ವಿದ್ಯಾರ್ಥಿನಿ ಶಾಫಿಯಾ ಮೇಲೆ ಹಲ್ಲೆ ನಡೆಸಲಾಗಿದೆ.

ಜೋಯಾ ಎಂಬಾಕೆ ಫರಾಜ್ ಹಾಗೂ ಮೋಹಿನ್ ಜೊತೆ ಸೇರಿ ಶಾಫಿಯಾಗೆ ಹಲ್ಲೆ ನಡೆಸಿದ್ದು ಮೂವರ ವಿರುದ್ದ ಎಫ್ ಐ ಆರ್ ದಾಖಲಾಗಿದೆ.

ಶಾಫಿಯಾ ಸುಮಾರು 2 ವರ್ಷಗಳಿಂದ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ನಲ್ಲಿ ಸಕ್ರೀಯಳಾಗಿದ್ದಾಳೆ. ಹಾಗಾಗಿ ಫಾಲೋಯರ್ಸ್ ಸಂಖ್ಯೆ ಹೆಚ್ಚಾಗಿದೆ.
ಇದರಿಂದ ಅಸೂಯೆಗೊಂಡ ಜೋಯಾ ಇನ್ಸ್ಟಾಗ್ರಾಂ ಹಾಗೂ ಸ್ನಾಪ್ ಚಾಟ್ ಅಕೌಂಟ್ ಗಳನ್ನ ಡಿಲೀಟ್ ಮಾಡುವಂತೆ ಒತ್ತಾಯಿಸಿದ್ದಾಳೆ.

ಇದೇ ವಿಷಯವಾಗಿ ಇಬ್ಬರ ನಡುವೆ ಗಲಾಟೆ ನಡೆಯುತ್ತಲೆ ಇತ್ತು,ಅ. 28 ರಂದು ಜೋಯಾ ತನ್ನ ಸ್ನೇಹಿತರಾದ ಫರಾಜ್ ಹಾಗೂ ಮೋಹಿನ್ ಜೊತೆ ರಾಜೀವ್ ನಗರದಲ್ಲಿರುವ ಮನೆಗೆ ನುಗ್ಗಿ ಶಾಫಿಯಾ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿ ಶೋಕೇಸ್ ಗಾಜು ಪುಡಿ ಮಾಡಿದ್ದಾರೆ.

ಮಾಹಿತಿ ತಿಳಿದು ಉದಯಗಿರಿ ಠಾಣೆ ಪೊಲೀಸರು ಸ್ಥಳಕ್ಕೆ ಬಂದಿದ್ದಾರೆ, ಪೊಲೀಸರನ್ನ ಕಂಡ ಕೂಡಲೆ ಮೂವರು ಆರೊಪಿಗಳು ಪರಾರಿಯಾಗಿದ್ದಾರೆ.

ಹಲ್ಲೆ ನಡೆಸಿ ಬೆದರಿಕೆ ಹಾಕಿರುವ ಜೋಯಾ,ಫರಾನ್,ಮೊಹೀನ್ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಶಾಫಿಯಾ ಉದಯಗಿರಿ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದಾಳೆ.

ಇನ್ಸ್ಟಾಗ್ರಾಂ,ಸ್ನಾಪ್ ಚಾಟ್ ನಲ್ಲಿ ಫಾಲೋಯರ್ಸ್ ಹೆಚ್ಚಳ: ಯುವತಿಗೆ ಹಲ್ಲೆ Read More

ಹಣ ಕೊಡುವಂತೆ ಉದ್ಯಮಿಗೆ ಜೈಲಿನಿಂದಲೇ ರೌಡಿ ಶೀಟರ್ ಆವಾಜ್

ಮೈಸೂರು: ರಿಯಲ್ ಎಸ್ಟೇಟ್ ಉದ್ಯಮಿಯೊಬ್ಬರಿಗೆ ಹಣ ಕೊಡುವಂತೆ ರೌಡಿ ಶೀಟರ್ ಒಬ್ಬ ಜೈಲಿನಿಂದಲೇ ಆವಾಜ್ ಹಾಕಿರುವ ಪ್ರಕರಣ ನಡೆದಿದೆ.

ರೌಡಿಶೀಟರ್ ಮಂಜೇಶ್ ಸೇರಿದಂತೆ ನಾಲ್ವರ ವಿರುದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರೌಡಿಶೀಟರ್ ಮಂಜೇಶ್ ಹಾಗೂ ಆತನ ಸ್ನೇಹಿತರಾದ ಚಂದ್ರಶೇಖರ್,ಅನಿಲ್ ಹಾಗೂ ಸುರೇಶ್ ವಿರುದ್ದ ರಿಯಲ್ ಎಸ್ಟೇಟ್ ಉದ್ಯಮಿ ಹೆಬ್ಬಾಳದ ನಿವಾಸಿ ರಾಜೇಂದ್ರ ರಾವ್ ದೂರು ನೀಡಿದ್ದಾರೆ.

ರಾಜೇಂದ್ರ ರಾವ್ ಹಾಗೂ ಚಂದ್ರಶೇಖರ್ ಮತ್ತು ಮಹದೇವು ಎಂಬುವರ ನಡುವೆ ರಿಯಲ್ ಎಸ್ಟೇಟ್ ವ್ಯವಹಾರ ಇತ್ತು.ಇದೇ ವ್ಯವಹಾರದ ವಿಚಾರದಲ್ಲಿ ರಾಜೇಂದ್ರ ರಾವ್ ರವರು ಚಂಧ್ರಶೇಖರ್ ಗೆ ಹಣ ನೀಡಬೇಕಿತ್ತು.

ಹಂತ ಹಂತವಾಗಿ ಚಂಧ್ರಶೇಖರ್ ಗೆ 27 ಲಕ್ಷ ಪಾವತಿಸಿದ್ದಾರೆ.ಆದರೂ ಇನ್ನೂ 40 ಲಕ್ಷ ಕೊಡಬೇಕೆಂದು ಕಾರಣ ನೀಡಿ ಚಂದ್ರಶೇಖರ್ ಯುವಕರನ್ನ ಕರೆತಂದು ಧಂಕಿ ಹಾಕಿದ್ದಾರೆ.

ಈ ಪೈಕಿ ಒಬ್ಬ ತಾನು ರೌಡಿ ಮಂಜೇಶ್ ಕಡೆಯವನು ಹಣ ಕೊಡದಿದ್ದಲ್ಲಿ ಬದುಕಲು ಬಿಡುವುದಿಲ್ಲ ಎಂದು ಜೋರು ಮಾಡಿದ್ದಾನೆ.ಅಲ್ಲದೆ ತನ್ನ ಫೋನ್ ಮುಖಾಂತರ ಜೈಲಿನಲ್ಲಿರುವ ಮಂಜೇಶ್ ಸಂಪರ್ಕಿಸಿ ಆತನಿಂದಲೂ ಧಂಕಿ ಹಾಕಿಸಿದ್ದಾನೆ.

ಮೊಬೈಲ್ ನಲ್ಲಿ ಮಾತನಾಡಿದ ಮಂಜೇಶ್ 40 ಲಕ್ಷ ನೀಡುವಂತೆ ಬೆದರಿಕೆ ಹಾಕಿದ್ದಾನೆ.ಹಣ ಕೊಡದಿದ್ದಲ್ಲಿ ಬದುಕಲು ಬಿಡುವುದಿಲ್ಲ ಎಂದು ಬೆದರಿಕೆ ಹಾಕಿರುವ ಚಂದ್ರಶೇಖರ್,ಮಂಜೇಶ್,ಅನಿಲ್ ಹಾಗೂ ಸುರೇಶ್ ಎಂಬುವರ ವಿರುದ್ದ ಕಾನೂನು ಕ್ರಮ ಕೈಗೊಂಡು ತಮಗೆ ರಕ್ಷಣೆ ನೀಡುವಂತೆ ರಾಜೇಂದ್ರ ರಾವ್ ಹೆಬ್ಬಾಳ ಠಾಣೆ ಪೊಲೀಸರಿಗೆ ಮನವಿ ಮಾಡಿದ್ದಾರೆ.

ಪೊಲೀಸರು ಈ ಸಂಬಂಧ ಎಫ್.ಐ.ಆರ್.ದಾಖಲಿಸಿದ್ದಾರೆ.

ಹಣ ಕೊಡುವಂತೆ ಉದ್ಯಮಿಗೆ ಜೈಲಿನಿಂದಲೇ ರೌಡಿ ಶೀಟರ್ ಆವಾಜ್ Read More

ಹನಿಟ್ರ್ಯಾಪ್ ಆರೋಪ ಕಲಬುರಗಿ ಕಾಂಗ್ರೆಸ್ ನಾಯಕಿ,ಪತಿ ಬಂಧನ

ಕಲಬುರಗಿ: ಮಾಜಿ ಸಚಿವರೊಬ್ಬರಿಗೆ ಹನಿಟ್ರಾಪ್ ಮಾಡಿದ ಆರೋಪದಲ್ಲಿ ಕಲಬುರಗಿ ಕಾಂಗ್ರೆಸ್ ‌ನಾಯಕಿ ಮತ್ತು ‌ಆಕೆಯ ಪತಿಯಿ ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಲಬುರಗಿ ಸಿಸಿಬಿ ಪೊಲೀಸರು ಕಲಬುರಗಿ ನಲಪಾಡ್‌ ಬ್ರಿಗೇಡ್‌ ಅಧ್ಯಕ್ಷೆ ಮಂಜುಳಾ ಪಾಟೀಲ್ ಹಾಗೂ ಆಕೆಯ ಪತಿ ಶುವರಾಜ್ ಪಾಟೀಲ್ ನನ್ನು ಹನಿಟ್ರ್ಯಾಪ್ ಆರೋಪದ ಮೇಲೆ ಬಂಧಿಸಿದ್ದಾರೆ.

ಈಕೆ ಮೊದಲಿಗೆ ವಾಟ್ಸ್ ಆಪ್ ನಲ್ಲಿ ಮಾಜಿ ಸಚಿವರೊಂದಿಗೆ ಚಾಟ್ ಆರಂಭ ಮಾಡಿ ಸಲುಗೆ ಬೆಳೆಸಿಕೊಂಡು ನಂತರ ವಿಡಿಯೋ ಕಾಲ್ ಮಾಡಲು ಆರಂಭಿಸಿದ್ದಾಳೆ.

ನಂತರ ಖಾಸಗಿ ಕ್ಷಣಗಳನ್ನ ವಿಡಿಯೋ ಚಿತ್ರಿಕರಿಸಿಕೊಂಡು ಬ್ಲಾಕ್ ಮೇಲ್ ಮಾಡಲು ಆರಂಭಿಸಿದ್ದಾಳೆ, ನನ್ನ ಬಳಿ ನಿಮ್ಮ ವಿಡಿಯೋ ಇದೆ. 20 ಲಕ್ಷ ಕೊಡಬೇಕು ಇಲ್ಲದಿದ್ದರೆ ವಿಡಿಯೋ ವೈರಲ್ ಮಾಡುವುದಾಗಿ ಬ್ಲಾಕ್ ಮೇಲ್ ಮಾಡಿದ್ದಾಳೆ.

ಈ ಬಗ್ಗೆ ಮಾಜಿ ಸಚಿವರ ಪುತ್ರ ಸಿಸಿಬಿಗೆ ದೂರು ನೀಡಿದ್ದಾರೆ. ನಂತರ 20 ಲಕ್ಷ ನೀಡುವುದಾಗಿ ಈಕೆಯನ್ನು ಬೆಂಗಳೂರಿಗೆ ಕರೆಸಿ, ಹಣ ಪಡೆಯಲು ಬೆಂಗಳೂರಿಗೆ ಬಂದ ಮಂಜುಳಾ ಮತ್ತು ಆಕೆಯ ಪತಿ ಶಿವರಾಜ್ ಪಾಟೀಲ್ ನನ್ನು ಸಿಸಿಬಿ ಪೊಲೀಸರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ.

ಹನಿಟ್ರ್ಯಾಪ್ ಆರೋಪ ಕಲಬುರಗಿ ಕಾಂಗ್ರೆಸ್ ನಾಯಕಿ,ಪತಿ ಬಂಧನ Read More

ಸರಗಳ್ಳನ ಬಂಧಿಸಿದ ಕುವೆಂಪುನಗರ ಠಾಣೆ ಪೊಲೀಸರು

ಮೈಸೂರು: ರಸ್ತೆಯಲ್ಲಿ ಹೋಗುತ್ತಿದ್ದ ಮಹಿಳೆಯೊಬ್ಬರ ಚಿನ್ನದ ಸರ ಕಸಿದು ಪರಾರಿಯಾಗಿದ್ದ ಸರಗಳ್ಳನನ್ನು ಕುವೆಂಪುನಗರ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಚಾಮರಾಜನಗರ ನಿವಾಸಿ ವಿನಯ್ ಕುಮಾರ್ (27) ಬಂಧಿತ ಆರೋಪಿ.

ಪೊಲೀಸರು ಬಂಧಿತನಿಂದ 40 ಗ್ರಾಂ ತೂಕದ ಎರಡು ಚಿನ್ನದ ಸರ ಹಾಗೂ ಕೃತ್ಯಕ್ಕೆ ಬಳಸಿದ ಹೋಂಡಾ ಆಕ್ಟಿವಾ ವಶಪಡಿಸಿಕೊಂಡಿದ್ದಾರೆ.

18-10-2024 ರಂದು ಕುವೆಂಪುನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುವನ ಬಡಾವಣೆ ಬಳಿ ಕಮಲ ಎಂಬುವರು ನಡೆದು ಹೋಗುತ್ತಿದ್ದಾಗ ಹೋಂಡಾ ಆಕ್ಟಿವಾದಲ್ಲಿ ಬಂದ ವಿನಯ್ ಕುಮಾರ್ 30 ಗ್ರಾಂ ಚಿನ್ನದ ಸರ ಕಸಿದು ಪರಾರಿಯಾಗಿದ್ದ.

ಈ ಕುರಿತು ಕಮಲ ಕುವೆಂಪುನಗರ ಠಾಣೆಗೆ ದೂರು ನೀಡಿದ್ದರು.ಕೂಡಲೇ ಕಾರ್ಯೋನ್ಮುಖರಾದ ಪೊಲೀಸರು ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿ ಆರೋಪಿಯನ್ನ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅಪರಾಧ ಮತ್ತು ಸಂಚಾರ ಡಿಸಿಪಿ ಜಾಹ್ನವಿ ಅವರ ಮಾರ್ಗದರ್ಶನದಲ್ಲಿ, ಕೃಷ್ಟರಾಜ ವಿಭಾಗದ ಎಸಿಪಿ ರಮೇಶ್ ಕುಮಾರ್ ಉಸ್ತುವಾರಿಯಲ್ಲಿ ಇನ್ಸ್ಪೆಕ್ಟರ್ ಅರುಣ್ ಎಲ್ ಹಾಗೂ ಪಿಎಸ್ಸೈ ಗೋಪಾಲ್ ನೇತೃತ್ವದಲ್ಲಿ ಸಿಬ್ಬಂದಿಗಳಾದ ಆನಂದ್,ಮಂಜುನಾಥ್,ಮಹೇಶ್ವರ್,ಮಂಜು,ನಾಗೇಶ್,ಯಶವಂತ್,ಹಜರತ್ ಹಾಗೂ ಸುರೇಶ್ ರವರನ್ನೊಳಗೊಂಡ ತಂಡ ರಚಿಸಲಾಗಿತ್ತು.

ಘಟನೆ ನಡೆದ ಎರಡೆ ದಿನಗಳಲ್ಲಿ ಆರೋಪಿಯನ್ನ ಬಂಧಿಸುವಲ್ಲಿ ತಂಡ ಯಶಸ್ವಿಯಾಗಿದೆ.

ಆರೋಪಿಯಿಂದ 70 ಸಾವಿರ ಮೌಲ್ಯದ ಹೋಂಡಾ ಆಕ್ಟಿವಾ ಹಾಗೂ 2.80 ಲಕ್ಷ ಮೌಲ್ಯದ ಎರಡು ಚಿನ್ನದ ಸರಗಳನ್ನ ವಶಪಡಿಸಿಕೊಳ್ಳಲಾಗಿದೆ.

ಪತ್ತೆ ಕಾರ್ಯವನ್ನ ಕಾನೂನು ಮತ್ತು ಸುವ್ಯವಸ್ಥೆ ಡಿಸಿಪಿ ಮುತ್ತುರಾಜ್ ಹಾಗೂ ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಪ್ರಶಂಸಿಸಿದ್ದಾರೆ.

ಸರಗಳ್ಳನ ಬಂಧಿಸಿದ ಕುವೆಂಪುನಗರ ಠಾಣೆ ಪೊಲೀಸರು Read More

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ

(ವರದಿ: ರಾಮಸಮುದ್ರ ಎಸ್.ವೀರಭದ್ರಸ್ವಾಮಿ)

ಚಾಮರಾಜನಗರ: ತಾಲ್ಲೂಕಿ ಅಯ್ಯನಪುರ ಗ್ರಾಮದ ಸಮೀಪವಿರುವ ಕೋಟೆತಿಟ್ಟು ಬಳಿ ವಿದ್ಯುತ್ ತಂತಿ ತಗುಲಿ ಇಬ್ಬರು ಸಾವನ್ಬಪ್ಪಿರುವ ಘಟನೆ ನಡೆದಿದೆ.

ಮಲ್ಲೇಶ್ (40) ನಾಗೇಂದ್ರ (48) ಮೃತಪಟ್ಟ ದುದೈವಿಗಳು.

ರಾತ್ರಿ ವೇಳೆ ಜಮೀನಿಗೆ ಹೋಗಿ ನೀರು ಹಾಯಿಸಿ ಬೈಕ್ ನಲ್ಲಿ ಬರುವಾಗ ಜೋತು ಬಿದ್ದ ವಿದ್ಯುತ್ ತಂತಿ ತಗುಲಿ ಇಬ್ಬರು ಮೃತಪಟ್ಟಿದ್ದಾರೆ.

ಈ ಸಂಬಂಧ ರಾಮಸಮುದ್ರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಸ್ಥಳಕ್ಕೆ ಡಿವೈಸ್ಪಿ, ಎಸ್ಪಿ ಭೇಟಿ ನೀಡಿ ಪರಿಶೀಲಿಸಿದ್ದಾರೆ‌.

ಸ್ಥಳಕ್ಕೆ ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳು ಬರಬೇಕು ಎಂದು ಅಯ್ಯನಪುರ ಗ್ರಾಮಸ್ಥರು ಪ್ರತಿಭಟನೆ ಕೂಡಾ ನಡೆಸಿದರು.

ವಿದ್ಯುತ್ ತಂತಿ ತಗುಲಿ ಇಬ್ಬರ ದುರ್ಮರಣ Read More

ಕತ್ತು ಕುಯ್ದು ಯುವಕನ‌ ಹತ್ಯೆ:ವಾಮಾಚಾರ ಶಂಕೆ

ನಂಜನಗೂಡು: ತಾಲೂಕಿನ ಗ್ರಾಮ ಒಂದರಲ್ಲಿ ಕತ್ತು ಕುಯ್ದು ಯುವಕನ‌ ಹತ್ಯೆ ಮಾಡಲಾಗಿದ್ದು,ವಾಮಾಚಾರದ ಶಂಕೆ‌ ವ್ಯಕ್ತವಾಗಿದೆ.

ಮಾಲ್ಕುಂಡಿ ಗ್ರಾಮದ ಸದಾಶಿವ(43) ಕೊಲೆಯಾಗಿರುವ ವ್ಯಕ್ತಿ.

ನಂಜನಗೂಡು ತಾಲೂಕಿನ ಮಡುವಿನಹಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆ ಸಮೀಪ ನೀರು ಹರಿಯುವ ಸ್ಥಳದಲ್ಲಿ
ರಕ್ತದ ಮಡುವಿನಲ್ಲಿ ನರಳಾಡುತ್ತಿದ್ದ
ವ್ಯಕ್ತಿಯನ್ನ ನೋಡಿದ ಸ್ಥಳೀಯರು ಹುಲ್ಲಹಳ್ಳಿ ಠಾಣೆಗೆ ಮಾಹಿತಿ ನೀಡಿದ್ದಾರೆ.

ಪಿಎಸ್ಸೈ ಚೇತನ್ ಕುಮಾರ್ ಮತ್ತು ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ನರಳಾಡುತ್ತಿದ್ದ ಸದಾಶಿವ (43) ನನ್ನು ಆಸ್ಪತ್ರೆಗೆ ಸಾಗಿಸಿದ್ದಾರೆ.
ಆದರೆ ಆತ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ.

ಸ್ಥಳದಲ್ಲಿ ಮಂತ್ರಿಸಿರುವ ನಿಂಬೆಹಣ್ಣು,101 ರೂಪಾಯಿ,ಎಲೆ, ಅಡಿಕೆ ಪತ್ತೆಯಾಗಿದ್ದು,
ಹುಣ್ಣಿಮೆ ಹಿನ್ನಲೆ ವಾಮಾಚಾರ ನಡೆಸಿ ಕೊಲೆ ಮಾಡಿರಬಹುದೆಂದು ಗ್ರಾಮಸ್ಥರು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಂಬಂಧ ಹುಲ್ಲಹಳ್ಳಿ ಠಾಣೆ ಪೊಲೀಸರು ಪ್ರಕರಣ‌ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕತ್ತು ಕುಯ್ದು ಯುವಕನ‌ ಹತ್ಯೆ:ವಾಮಾಚಾರ ಶಂಕೆ Read More

ಭಾವಮೈದುನನ ಕೊಂದ ಭಾವ

ಮೈಸೂರು: ಕುಡಿದ ಮತ್ತಲ್ಲಿ ಬಾಮೈದನನ್ನು ಭಾವ ಕೊಚ್ಚಿ ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಸಾಂಸ್ಕೃತಿಕ ನಗರಿಯಲ್ಲಿ ನಡೆದಿದೆ.

ಮೈಸೂರಿನ ಮೇಟಗಳ್ಳಿಯಲ್ಲಿ ಈ ಘಟನೆ ನಡೆದಿದ್ದು,ಮೈಸೂರು ಜಿಲ್ಲೆ
ಪಿರಿಯಾಪಟ್ಟಣದ ಈಡಿಗರ ಬೀದಿ ನಿವಾಸಿ.ಮನೋಜ್ ( 26) ಕೊಲೆಯಾದ ದುರ್ದೈವಿ.ವಿನೋದ್ ಬಾಮೈದನನ್ನ ಕೊಲೆಗೈದ ಬಾವ.

ಹಣಕಾಸಿನ ವಿಚಾರಕ್ಕೆ ಮನೆಯಲ್ಲಿ ನಿತ್ಯ ಜಗಳವಾಗುತ್ತಿತ್ತು.ಕುಡಿದು ಮನೋಜ್ ಮನೆಗೆ ಬಂದು ಗಲಾಟೆ ಮಾಡುತ್ತಿದ್ದ,
ಮನೋಜ್ ನ ಉಪಟಳ ತಾಳಲಾರದೆ ವಿನೋದ್ ಕೊಲೆ ಮಾಡಿದ್ದಾನೆ.

ಟ್ರೂ ಸ್ಪಿರಿಟ್ ಬಾರ್ ನಲ್ಲಿ ಕುಡಿದು ಗಲಾಟೆ ನಡೆದ ನಂತರ ವಿನೋದ್ ಈ ಹತ್ಯೆ ಮಾಡಿದ್ದಾನೆ.

ಬಾರ್ ನಲ್ಲಿ ರೂಮ್ ಬಾಡಿಗೆ ಪಡೆದು ಬಾವಾ,ಬಾಮೈದನ ಜೊತೆಯಲ್ಲೆ ಕುಡಿದಿದ್ದಾರೆ.ಕಂಠಪೂರ್ತಿ ಕುಡಿಸಿ ಪ್ರಜ್ಞೆ ತಪ್ಪಿದ ಮೇಲೆ ಮನಸೋ ಇಚ್ಛೆ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿ ಬಾವ ವಿನೋದ್ ಪರಾರಿಯಾಗಿದ್ದಾನೆ.

ಮೇಟಗಳ್ಳಿ ಠಾಣೆ ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ವಿನೋದ್ ಬಂಧನಕ್ಕೆ ಬಲೆ ಬೀಸಿದ್ದಾರೆ.

ಭಾವಮೈದುನನ ಕೊಂದ ಭಾವ Read More

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ

ಕಾರ್ಕಳ: ಮಿನಿ ಲಾರಿ ಹಾಗೂ ಬೈಕ್ ಡಿಕ್ಕಿಯಾಗಿ ಒಂದೇ ಕುಟುಂಬದ ನಾಲ್ಕು ಮಂದಿ ದುರ್ಮರಣ ಅಪ್ಪಿದ ಘಟನೆ ಕಾರ್ಕಳ ಬಳಿ ನಡೆದಿದೆ.

ಕಾರ್ಕಳ ತಾಲೂಕಿನ ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರುನ ಪಾಜೆಗುಡ್ಡೆ ಬಳಿ ಈ ಅಪಘಾತ ಸಂಭವಿಸಿದೆ.

ಸುರೇಶ್ ಆಚಾರ್ಯ (36), ಸಮೀಕ್ಷಾ (7) ಸುಶ್ಮೀತಾ (5) ಮತ್ತು ಸುಶಾಂತ್ (2) ಎಂದು ಗುರುತಿಸಲಾಗಿದೆ. ಮೀನಾಕ್ಷಿ ಆಚಾರ್ಯ (32) ಎಂಬವರು ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದಾರೆ.

ಈ‌ ನತದೃಷ್ಟರು ಒಂದೇ ಬೈಕ್ ನಲ್ಲಿ ಹೋಗುತ್ತಿದ್ದರು.ಅಪಘಾತದಲ್ಲಿ ಬೈಕ್ ನಜ್ಜುಗುಜ್ಜಾಗಿದೆ.

ಸುದ್ದಿ ತಿಳಿದ ತಕ್ಷಣ ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದರು,ಗಾಯಾಳುವನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಿದರು.

ಬೈಕ್, ಲಾರಿ ಡಿಕ್ಕಿ ಒಂದೇ ಕುಟುಂಬದ ನಾಲ್ವರ ದುರ್ಮರಣ Read More