ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ: ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ.

ಅಗಟಹಳ್ಳಿಗ್ರಾಮದ ತ್ರಿಪುರ ಸುಂದರ (42)ಆತ್ಮಹತ್ಯೆ ಮಾಡಿಕೊಂಡ ರೈತ.

ಬೆಳೆ ಸಾಲ, ಕೈ ಸಾಲ, ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಸೇರಿ ಸುಮಾರು 10 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದರು.

ರೇಷ್ಮೆಗೆ ಸಿಂಪಡಿಸುವ ಔಷಧಿ ಸೇವಿಸಿ ತ್ರಿಪುರ ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಂಡವಪುರ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ Read More

ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದ ಬೈಕ್ ಸವಾರ!

ಮೈಸೂರು: ತಪ್ಪು ಮಾಡಿದ ಮೇಲೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಏನೇನೊ ತಲೆ ಉಪಯೋಗಿಸುತ್ತಾರೆ.
ಹಾಗೇನೆ‌ ಮೈಸೂರಿನಲ್ಲೊಬ್ಬ ಸವಾರ ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

ಈತ ಮಾಡಿದ್ದಿಷ್ಟೆ.ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ವಾಹನ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈಗ ಎಫ್.ಐ.ಆರ್.
ದಾಖಲಾಗಿದೆ.

ಯಮಹಾ ಬೈಕ್ KA09JY 0275 ನೊಂದಣಿ ಸಂಖ್ಯೆಯ ಪ್ಲೇಟ್ ನ ಕೊನೆಯ ಎರಡು ಸಂಖ್ಯೆ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಚಾಲನೆ ಮಾಡುತ್ತಿದ್ದ ವೇಳೆ ಕೆ.ಆರ್.ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಈಗ ದಂಡ‌ ಪೀಕಲೇಬೇಕಿದೆ.

ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದ ಬೈಕ್ ಸವಾರ! Read More

ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ:ಎಫ್ ಐ ಆರ್

ಮೈಸೂರು: ಕರ್ತವ್ಯನಿರತ ಮಹಿಳಾ ಪೇದೆ ಮೇಲೆ ಠಾಣೆಯಲ್ಲೇ ಮಹಿಳೆಯೊಬ್ಬಳು ಅವಾಚ್ಯ ಶಬ್ದ ಬಳಕೆ ಮಾಡಿ ಹಲ್ಲೆ ನಡೆಸಿದ ಘಟನೆ ಮೈಸೂರಿನ ವಿದ್ಯಾರಣ್ಯಪುರಂ ಪೊಲೀಸ್ ಠಾಣೆಯಲ್ಲಿ ನಡೆದಿದೆ.

ಹಲ್ಲೆ ನಡೆಸಿದ ಮಹಿಳೆ ವಿರುದ್ದ ಈಗ ಎಫ ಐ ಆರ್‌ ದಾಖಲಾಗಿದೆ.ಲತಾ ಎಂಬಾಕೆ ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದ್ದಾಳೆ.

ರಂಜಿತಾ ಎಂಬುವರ ಜೊತೆ ಲತಾ ಹಣಕಾಸಿನ ವಿಚಾರದಲ್ಲಿ ಗಲಾಟೆ ಮಾಡಿಕೊಂಡು ಇಬ್ಬರೂ ಠಾಣೆಗೆ ಬಂದಿದ್ದಾರೆ.

ಈ ಸಂಬಂಧ ಎಸ್.ಹೆಚ್.ಒ.ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಸ್ವಾಮಿ ಅವರು ವಿಚಾರಣೆ ಮಾಡಿದ್ದಾರೆ.ನಂತರ ಠಾಣೆಯಿಂದ ಹೊರ ಆವರಣಕ್ಕೆ ಬಂದ ಇಬ್ಬರು ಮಹಿಳೆಯರು ಗಲಾಟೆ ಮಾಡಿ ಕಿರುಚಾಡಿದ್ದಾರೆ.

ಈ ವೇಳೆ ಕರ್ತವ್ಯ ನಿರ್ವಹಿಸುತ್ತಿದ್ದ ಸರಸ್ವತಿ ರವರು ಗಲಾಟೆ ಮಾಡದಂತೆ ಮನವಿ ಮಾಡಿದ್ದಾರೆ.ಆಗ ಲತಾ ಎಂಬಾಕೆ ಸರಸ್ವತಿ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ ಹಲ್ಲೆ ಮಾಡಿದ್ದಾಳೆ.

ನಂತರ ನೇರವಾಗಿ ಇನ್ಸ್ಪೆಕ್ಟರ್ ಚೇಂಬರ್ ಗೆ ಹೋಗಿ ಕುಳಿತಿದ್ದಾಳೆ,ಇನ್ಸ್ಪೆಕ್ಟರ್ ಇಲ್ಲದ ಕಾರಣ ಪಿಎಸ್ಸೈ ಚೇಂಬರ್ ನಲ್ಲಿ ಕುಳಿತುಕೊಳ್ಳುವಂತೆ ಸರಸ್ವತಿ ಅವರು ಹೇಳಿದಾಗ ಕೋಪಗೊಂಡ ಮಹಿಳೆ ಸಿಬ್ಬಂದಿಗಳ ಮುಂದೆಯೇ ಏಕಾಏಕಿ ಸರಸ್ವತಿ ಅವರ ಮುಖ,ಕೈ,ಹಾಗೂ ಕಣ್ಣಿನ ಮೇಲೆ ಹಲ್ಲೆ ನಡೆಸಿ ದುರ್ವರ್ತನೆ ಪ್ರದರ್ಶಿಸಿದ್ದಾರೆ.

ವಿಷಯ ಗೊತ್ತಾಗುತ್ತಿದ್ದಂತೆ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.ಠಾಣೆಯಲ್ಲೇ ಒಬ್ಬ ಮಹಿಳಾ ಪೇದೆ ಮೇಲೆ ಹಲ್ಲೆ ನಡೆಸಿದರೂ ಆಕೆಯನ್ನ ಏಕೆ ಅರೆಸ್ಟ್ ಮಾಡಿಲ್ಲವೆಂದು ಪ್ರಶ್ನಿಸಿದ್ದಾರೆ.

ಠಾಣೆಯಲ್ಲಿ ಸಿಬ್ಬಂದಿಗಳಿಗೇ ರಕ್ಷಣೆ ಇಲ್ಲದಿದ್ದರೆ ಹೇಗೆ ಎಂದು ಜನತೆ ಕಿಡಿಕಾರಿದ್ದಾರೆ.

ಠಾಣೆಯಲ್ಲೇ ಮಹಿಳಾ ಪೇದೆ ಮೇಲೆ ಹಲ್ಲೆ:ಎಫ್ ಐ ಆರ್ Read More

ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್

(ವರದಿ:ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ತುಂಡು ಮಾಡಿ ಪಾಲು ಹಾಕುತ್ತಿದ್ದ ಇಬ್ಬರನ್ನು ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು
ಬಂಧಸಿದ್ದಾರೆ.

ತಾಲ್ಲೂಕಿನ ಇಕ್ಕಡಹಳ್ಳಿ ಗ್ರಾಮದ ಮಹದೇವ (42) ಹಾಗೂ ದೊಡ್ಡಿಂದುವಾಡಿ ಗ್ರಾಮದ ಕಿರಣ್ (30) ಬಂಧಿತ ಆರೋಪಿಗಳು.

ಆರೋಪಿಗಳಿಂದ 41 ಕೆ.ಜಿ ಮಾಂಸ, ಒಂದು ತಲೆ ಐದು ಕಾಲುಗಳು, ಒಂದು ಮಚ್ಚು, 4 ಚೂರಿಗಳು, 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಈ ‌ಬಂಧಿತರು ಸೇರಿದಂತೆ ಐವರು ಆರೋಪಿಗಳು ಜಿಂಕೆಯನ್ನು ಬೇಟೆಯಾಡಿ ತಂದು ದೊಡ್ಡಿಂದುವಾಡಿ ಕಬಿನಿ ಚಾನೆಲ್ ಬಳಿ ತುಂಡು ಮಾಡಿ ಅದರ ಮಾಂಸವನ್ನು ಪಾಲು ಹಾಕುತ್ತಿದ್ದರು.

ಈ ಬಗ್ಗೆ ಬಂದ ಖಚಿತ ಮಾಹಿತಿ ಆಧರಿಸಿ ಕೊಳ್ಳೇಗಾಲ ಅರಣ್ಯ ಸಂಚಾರಿ ದಳದ ಪೊಲೀಸರು ಕೂಡಲೆ ಮಡಿಕೇರಿ ಅರಣ್ಯ ಘಟಕದ ಪ್ರಭಾರ ಪೊಲೀಸ್ ಅಧೀಕ್ಷಕ ಸುದರ್ಶನ್ ಅವರ ಮಾರ್ಗದರ್ಶನದಲ್ಲಿ ದಾಳಿ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ.

ನಂತರ ಸ್ಥಳದಲ್ಲಿ ಪರಿಶೀಲನೆ ನಡೆಸಿದ ಪೊಲೀಸರು 41 ಕೆಜಿ ಜಿಂಕೆಯ ಹಸಿ ಮಾಂಸ, ಜಿಂಕೆಯ ಒಂದು ತಲೆ ಐದು ಕಾಲುಗಳು, ಮಾಂಸವನ್ನು ಕತ್ತರಿಸಲು ಬಳಸಿದ್ದ ಒಂದು ಮಚ್ಚು ಹಾಗೂ 4 ಚೂರಿಗಳು ಹಾಗೂ 3 ಮೋಟಾರ್ ಬೈಕ್ ಗಳನ್ನು ವಶಪಡಿಸಿಕೊಂಡು ವನ್ಯಜೀವಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ಆರೋಪಿತರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಿದ್ದು, ನ್ಯಾಯಾಧೀಶರು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಉಳಿದ ಆರೋಪಿಗಳು ಪೊಲೀಸರನ್ನು ಕಂಡು ಸ್ಥಳದಿಂದ ಪರಾರಿಯಾಗಿ ತಲೆಮರಿಸಿಕೊಂಡಿದ್ದಾರೆ. ದಾಳಿಯಲ್ಲಿ ಪಿ.ಎಸ್‌.ಐ ವಿಜಯರಾಜ್ ಮುಖ್ಯ ಪೇದೆಗಳಾದ ಸ್ವಾಮಿ, ಬಸವರಾಜು, ರಾಮಚಂದ್ರ, ಜಮಿಲ್, ಪ್ರಭಾಕರ ಹಾಗೂ ಮಹಿಳಾ ಮುಖ್ಯ ಪೇದೆ ಲತಾ ಮತ್ತು ಪೇದೆ ಬಸವರಾಜು ರವರು ಭಾಗವಹಿಸಿದ್ದರು.

ಜಿಂಕೆ ಬೇಟೆಯಾಡಿ ಮಾಂಸ ಪಾಲು ಮಾಡಿದ್ದ ಇಬ್ಬರು ಅಂದರ್ Read More

ದ್ವಿಚಕ್ರ ವಾಹನ ಚಾಲನೆ ಮಾಡಿದ ಅಪ್ರಾಪ್ತ:25 ರೂ ದಂಡ ವಿಧಿಸಿದ ಪೊಲೀಸರು

ಮೈಸೂರು: ನಗರದಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕ ದ್ವಿಚಕ್ರ ವಾಹನ ಚಾಲನೆ ಮಾಡಿದ ಪ್ರಕರಣ ಸಂಬಂಧ ಸಂಚಾರಿ ಪೊಲೀಸರು ಭಾರೀ ದಂಡ‌ ವಿಧಿಸುವ ಮೂಲಕ ಕಠಿಣ ಕ್ರಮ ಕೈಗೊಂಡಿದ್ದಾರೆ.

ಚಾಲನೆಗೆ ಅನುಮತಿ ಇಲ್ಲದಿದ್ದರೂ ಬಾಲಕ ಬೈಕ್ ಓಡಿಸುತ್ತಿದ್ದುದ್ದನ್ನು ಪತ್ತೆಹಚ್ಚಿದ ಪೊಲೀಸರು, ವಾಹನ ಮಾಲೀಕರ ವಿರುದ್ಧ ಪ್ರಕರಣ ದಾಖಲಿಸಿ 25,000 ರೂ ದಂಡ ವಿಧಿಸಿದ್ದಾರೆ.

ವಿಜಯನಗರದ ಬಸವನಹಳ್ಳಿ ಸಮೀಪದ ರಿಂಗ್‌ ರಸ್ತೆ ಬಳಿ ಕಳೆದ ಮೂರುದಿನಗಳ ಹಿಂದೆ, ಸ್ಥಳದಲ್ಲಿ ಕರ್ತವ್ಯದಲ್ಲಿದ್ದ ವಿವಿ ಪುರಂ ಸಂಚಾರಿ ಠಾಣೆ ಪೊಲೀಸರ ಕೈಗೆ ಚಾಲನೆ ಮಾಡುವಾಗಲೇ ಬಾಲಕ ಸಿಕ್ಕಿ ಬಿದ್ದಿದ್ದ.

ಈ ವೇಳೆ ಹೆಲ್ಮೆಟ್ ಇಲ್ಲದೆ, ನಿಯಮ ಉಲ್ಲಂಘನೆ ಮಾಡಿ ಬೈಕ್ ಓಡಿಸುತ್ತಿದ್ದ ಬಾಲಕನನ್ನು ಟ್ರಾಫಿಕ್ ಪೊಲೀಸರು ತಡೆದು ವಿಚಾರಣೆ ಮಾಡಿದಾಗ, ಆತ 18 ವರ್ಷ ಪೂರೈಸಿಲ್ಲ ಎಂಬುದು ಗೊತ್ತಾಗಿದೆ.

ಬಾಲಕ ಅಪ್ರಾಪ್ತ ವಯಸ್ಸಿನವ ನಾಗಿರುವುದರಿಂದ ಮೋಟಾರು ವಾಹನ ಕಾಯ್ದೆ ಪ್ರಕಾರ ಗಂಭೀರ ಉಲ್ಲಂಘನೆ, ವಾಹನ ಮಾಲೀಕರಿಗೆ 25,000 ದಂಡ ವಿಧಿಸಿ ವಾಹನವನ್ನು ತಾತ್ಕಾಲಿಕವಾಗಿ ಜಪ್ತಿ ಮಾಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಮೈಸೂರಿನಲ್ಲಿ ಅಪ್ರಾಪ್ತರು ಬೈಕ್ ಮತ್ತು ಕಾರು ಚಾಲನೆ ಮಾಡುವ ಘಟನೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಟ್ರಾಫಿಕ್ ಇಲಾಖೆ ವಿಶೇಷ ನಿಗಾವಹಿಸಿದ್ದು,ಸಾರ್ವಜನಿಕರು ತಮ್ಮ ಮಕ್ಕಳು ವಾಹನ ಚಾಲನೆ ಮಾಡದಂತೆ ಜಾಗರೂಕತೆಯಿಂದ ಇರಬೇಕೆಂದು ಮನವಿ ಮಾಡಿದ್ದಾರೆ.

ದ್ವಿಚಕ್ರ ವಾಹನ ಚಾಲನೆ ಮಾಡಿದ ಅಪ್ರಾಪ್ತ:25 ರೂ ದಂಡ ವಿಧಿಸಿದ ಪೊಲೀಸರು Read More

ಉಸಿರುಗಟ್ಟಿ ಮೂವರು ಯುವಕರು ಸಾವು

ಬೆಳಗಾವಿ: ಹೊಗೆಯಿಂದ ಉಸಿರುಗಟ್ಟಿ
ಮೂವರು ಯುವಕರು ದಾರುಣವಾಗಿ ಮೃತಪಟ್ಟಿರುವ ಘಟನೆ
ಬೆಳಗಾವಿಯ ಅಮನ್ ನಗರದಲ್ಲಿ ನಡೆದಿದೆ.

ರಾತ್ರಿ ರೂಮ್​​ನಲ್ಲಿ ಮಲಗಿದ್ದ ನಾಲ್ವರು ಯುವಕರಲ್ಲಿ ಮೂವರು ಯುವಕರು ಹೊಗೆಯಿಂದ ಉಸಿರುಗಟ್ಟಿ ಸಾವನ್ನಪ್ಪಿದ್ದಾರೆ.ಒಬ್ಬನ ಸ್ಥಿತಿ ಚಿಂತಾಜನಕವಾಗಿದೆ.

ರಿಹಾನ್ ಮತ್ತಿ(22), ಸರ್ಫರಾಜ್(22), ಮೊಯಿನ್‌ ನಲಬಂದ್‌(22) ಮೃತಪಟ್ಟ‌ ದುರ್ದೈವಿಗಳು.

ಬೆಳಗಾವಿಯ ಮಾಳಮಾರುತಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು ಶವ ಪರೀಕ್ಷೆ ನಡೆಸಿ,ವಾರಸುದಾರರಿಗೆ ಹಸ್ತಾಂತರಿಸಲಾಯಿತು.

ರಾತ್ರಿ ನಾಮಕರಣ ಕಾರ್ಯಕ್ರಮ ಮುಗಿಸಿಕೊಂಡು ನಾಲ್ವರು ಯುವಕರು ಬಂದಿದ್ದಾರೆ. ಬಹಳ ಚಳಿ ಇದ್ದ ಕಾರಣ ರೂಮ್‌ನಲ್ಲಿ ಬೆಂಕಿ ಹಾಕಿಕೊಂಡು ಮಲಗಿದ್ದಾರೆ.ಜತೆಗೆ ಸೊಳ್ಳೆ ಕಾಟ‌ ತಪ್ಪಿಸಲು ನಾಲ್ಕೈದು ಮಸ್ಕಿಟೋ ಕಾಯಿಲ್ ಹಾಕಿ ಮಲಗಿದ್ದಾರೆ.

ಕಿಟಕಿಗಳನ್ನು ಬಂದ್ ಮಾಡಿದ್ದರಿಂದ‌ ಹೊಗೆ ಹೊರಹೋಗಲು ಸಾಧ್ಯವಾಗದೆ ಇಡೀ ಕೊಠಡಿ ತುಂಬಾ ಹೊಗೆ ಆವರಿಸಿ ಉಸಿರುಗಟ್ಟಿ ಮೂವರು ಸಾವನ್ನಪ್ಪಿದ್ದಾರೆ. ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿದೆ.

ಉಸಿರುಗಟ್ಟಿ ಮೂವರು ಯುವಕರು ಸಾವು Read More

ಪಾದಚಾರಿಗೆ ಬೈಕ್ ಡಿಕ್ಕಿ:ಹಿಂಬದಿ ಸವಾರ‌ ಸಾವು

ಹನೂರು: ಮಲೈ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ತೆರಳುತ್ತಿದ್ದ ದ್ವಿಚಕ್ರ ವಾಹನವೊಂದು ಕೊಂಗರಹಳ್ಳಿ ಸಮೀಪ
ಪಾದಚಾರಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಯುವಕ ಸ್ಥಳದಲ್ಲೇ ಮೃತ ಪಟ್ಟ ಘಟನೆ ನಡೆದಿದೆ.

ಮತ್ತೊಬ್ಬ ಗಂಭೀರವಾಗಿ ಗಾಯಗೊಂಡಿದ್ದು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಯುವಕರ ತಂಡ ನಾಲ್ಕು ದ್ವಿಚಕ್ರ ವಾಹನಗಳಲ್ಲಿ ಮಹದೇಶ್ವರ ಬೆಟ್ಟಕ್ಕೆ ತೆರಳಿ ದರ್ಶನ ಮುಗಿಸಿಕೊಂಡು ಹಿಂದಿರುಗುತ್ತಿದ್ದಾಗ ಕೊಂಗರಹಳ್ಳಿ ಗ್ರಾಮದ ಮಹಿಳಾ ಕಾಲೇಜು ಸಮೀಪ 60 ವರ್ಷದ ಸುರೇಶ್ ರಸ್ತೆ ದಾಟುತ್ತಿದ್ದ ವೇಳೆ ಡಿಕ್ಕಿ ಹೊಡೆದಿದೆ.

ಈ ವೇಳೆ ಬೈಕ್ ನ ಹಿಂಬದಿಯಲ್ಲಿ ಕುಳಿತಿದ್ದ ಮಂಡ್ಯ ಮೂಲದ ಮಳವಳ್ಳಿ ತಾಲೂಕಿನ ರಾಮಾಂದೂರು ಗ್ರಾಮದ ಮನೋಹರ್ ಮೃತ ಪಟ್ಟಿದ್ದಾನೆ.

ಪಾದಚಾರಿ ಸುರೇಶ್ ಗೆ ತಲೆ ಮತ್ತು ಕಾಲುಗಳಿಗೆ ಗಂಭೀರ ಗಾಯಗಳಾಗಿದೆ. ಹಾಗೂ ಸವಾರ ರವಿಕುಮಾರ್ ಗೆ ಸಣ್ಣ ಪುಟ್ಟ ಗಾಯಗಳಾಗಿದೆ.

ಕೊಳ್ಳೇಗಾಲ ಗ್ರಾಮಾಂತರ ಠಾಣೆಯ ಪೊಲೀಸರು ಸ್ಥಳಕ್ಕೆ ದಾವಿಸಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಪಾದಚಾರಿಗೆ ಬೈಕ್ ಡಿಕ್ಕಿ:ಹಿಂಬದಿ ಸವಾರ‌ ಸಾವು Read More

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್

ಮೈಸೂರು: ಇಂಜಿನಿಯರಿಂಗ್ ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಹಿನ್ನಲೆಯಲ್ಲಿ ಮೈಸೂರಿನ ಜಯಲಕ್ಷ್ಮಿಪುರಂ ಪೊಲೀಸರು ಉಪನ್ಯಾಸಕರೊಬ್ಬರನ್ನು ಬಂಧಿಸಿದ್ದಾರೆ.

ಈ ಬಗ್ಗೆ ಜಯಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿತ್ತು.

ಮೈಸೂರಿನ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿನಿ ದೂರು ನೀಡಿದ್ದು,ಭರತ್ ಭಾರ್ಗವ ಎಂಬ ಉಪನ್ಯಾಸಕನ ವಿರುದ್ದ ಎಫ್ ಐ ಆರ್ ದಾಖಲು ಮಾಡಿಕೊಂಡು ಬಂಧಿಸಲಾಗಿದೆ.

ಬಿ ಎನ್ ಎಸ್ ಸೆಕ್ಷನ್ 126 (2) 75 (2) 351 (2) ಅಡಿಯಲ್ಲಿ ಎಫ್ ಐ ಆರ್ ದಾಖಲಾಗಿದೆ.
ಪ್ರತಿನಿತ್ಯ ಈ ಉಪನ್ಯಾಸಕ ಕಿರುಕುಳ ನೀಡುತ್ತಿದ್ದರೆಂದು ವಿದ್ಯಾರ್ಥಿನಿ ಆರೋಪ ಮಾಡಿದ್ದಾರೆ.

ಮಾರ್ಕ್ಸ್ ಹೆಚ್ಚು ನೀಡುತ್ತೇನೆ ಒಳ್ಳೆಯ ಕೆಲಸ ಕೊಡಿಸುತ್ತೇನೆ ಎಂದು ಆಮಿಷ ಒಡ್ಡಿ, ಹೊರಗಡೆ ಪಬ್‌ಗೆ ಹೋಗಿ ಮಜಾ ಮಾಡೋಣ ಬಾ ಅಂತಾ ಕರೆಯುತ್ತಿದ್ದನೆಂದು ಮಹಿಳಾ ಉಪನ್ಯಾಸಕರಿಗೆ ವಿಧ್ಯಾರ್ಥಿನಿ ದೂರು ನೀಡಿದ್ದರು.

ದೂರು ನೀಡಿದ ಕಾರಣ ಭರತ್ ಭಾರ್ಗವ್ ಕರೆ ಮಾಡಿ ಬೆದರಿಕೆ ಕೂಡಾ ಹಾಕಿದ್ದ.ಜತೆಗೆ ವಿದ್ಯಾರ್ಥಿನಿ ಅಂಗಾಂಗಗಳ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದ.ಅಲ್ಲದೆ ತಾನು ಹೇಳಿದಂತೆ ಕೇಳದಿದ್ದರೆ ಫೇಲ್ ಮಾಡುವುದಾಗಿ ಬೆದರಿಕೆ ಹಾಕಿದ್ದನೆಂದು ಆಕೆ‌ ದೂರಿದ್ದಾರೆ.

ಈಗ ಉಪನ್ಯಾಸಕ ಕಂಬಿ ಎಣಿಸುವಂತಾಗಿದೆ.

ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಆರೋಪ:ಉಪನ್ಯಾಸಕ ಅರೆಸ್ಟ್ Read More

ಬಂಟ್ವಾಳದ ಬಿ ಸಿ ರೋಡ್ ವೃತ್ತದ ಬಳಿ ಅಪಘಾತ:ಮೂವರ ದುರ್ಮರಣ

ಮಂಗಳೂರು: ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂಟ್ವಾಳ ತಾಲ್ಲೂಕಿನ ಬಿ ಸಿ ರೋಡ್ ವೃತ್ತದ ಬಳಿ ಶನಿವಾರ ಭೀಕರ ಅಪಘಾತ ಸಂಭವಿಸಿ ಮೂವರು ಮೃತಪಟ್ಟಿದ್ದಾರೆ.

ಬೆಂಗಳೂರಿನಿಂದ ಒಂಬತ್ತು ಮಂದಿ ಇನೋವಾ ಕಾರಿನಲ್ಲಿ ಉಡುಪಿಯ ಶ್ರೀ ಕೃಷ್ಣ ಮಠಕ್ಕೆ ಹೋಗುತ್ತಿದ್ದರು.

ಕಾರು ಬಂಟ್ವಾಳದ ಬಿ.ಸಿ. ರಸ್ತೆ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ನಾರಾಯಣ ಗುರು ವೃತ್ತಕ್ಕೆ ಡಿಕ್ಕಿ ಹೊಡೆದಿದೆ.

ರವಿ (64), ನಂಜಮ್ಮ (75) ರಮ್ಯಾ (23) ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಸುಶೀಲಾ, ಕೀರ್ತಿ ಕುಮಾರ್, ಕಿರಣ್, ಬಿಂದು, ಪ್ರಶಾಂತ್ ಮತ್ತು ಚಾಲಕ ಸುಬ್ರಹ್ಮಣ್ಯ ತೀವ್ರ ಗಾಯಗೊಂಡಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಬಂಟ್ವಾಳದ ಬಿ ಸಿ ರೋಡ್ ವೃತ್ತದ ಬಳಿ ಅಪಘಾತ:ಮೂವರ ದುರ್ಮರಣ Read More

ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂ.ಡಿ, ಜಿ.ಎಂ ವಿರುದ್ದ ಎಫ್ಐಆರ್

ಮೈಸೂರು: ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ನ ಎಂ ಡಿ ಮತ್ತು ಜಿ ಎಂ ವಿರುದ್ಧ ಎಫ್ ಐ ಆರ್ ದಾಖಲಾಗಿದೆ.

ಈ ಫ್ಯಾಂಟಸಿ ಪಾರ್ಕ್ ನ ಆಟಗಳಲ್ಲಿ ಲೋಪ ಕಂಡು ಬಂದು ವ್ಯಕ್ತಿಯೊಬ್ಬರ ಕಾಲು ಯಂತ್ರಗಳ ಮಧ್ಯೆ ಸಿಲುಕಿ ಎರಡು ಬೆರಳುಗಳನ್ನ ಕಳೆದುಕೊಂಡಿದ್ದಾರೆ.

ದೆಹಲಿ ಮಹಾನಗರ ಪಾಲಿಕೆಯ ಅಸಿಸ್ಟೆಂಟ್ ಅಸೆಸರ್ ವಿಶಾಂತ್ ಯಾದವ್ ಬೆರಳುಗಳನ್ನ ಕಳೆದುಕೊಂಡವರು.

ಶಾಶ್ವತ ಅಂಗವಿಕಲರಾದ ಹಿನ್ನಲೆಯಲ್ಲಿ ಕಾನೂನು ಕ್ರಮ ಕೈಗೊಳ್ಳುವಂತೆ ವಿಶಾಂತ್ ಯಾದವ್ ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಮ್ಯಾನೇಜಿಂಗ್ ಡೈರೆಕ್ಟರ್ ಹಾಗೂ ಜನರಲ್ ಮ್ಯಾನೇಜರ್ ವಿರುದ್ದ ಮೇಟಗಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಅಕ್ಟೋಬರ್ ನಲ್ಲಿ ಮೈಸೂರಿಗೆ ಬಂದಿದ್ದ ವಿಶಾಂತ್ ಯಾದವ್ ತಮ್ಮ ಸಹೋದರನ ಜೊತೆ GRS ಫ್ಯಾಂಟಸಿ ಪಾರ್ಕ್ ಗೆ ಆಟವಾಡಲು ತೆರಳಿದ್ದಾರೆ.

ಈ ವೇಳೆ ಸೂಪರ್ ಡ್ರಾಪರ್ ವಾಟರ್ ಸ್ಲೈಡರ್ ನಲ್ಲಿ ಆಟವಾಡುವ ವೇಳೆ ಯಂತ್ರದ ಮಧ್ಯೆ ಕಾಲುಗಳು ಸಿಲುಕಿವೆ.ತೀವ್ರ ಗಾಯಗೊಂಡ ವಿಶಾಂತ್ ಯಾದವ್ ರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು.

ಘಟನೆಯಲ್ಲಿ ವಿಶಾಂತ್ ಯಾದವ್ ಎರಡು ಬೆರಳುಗಳನ್ನ ಶಾಶ್ವತವಾಗಿ ಕಳೆದುಕೊಂಡಿದ್ದಾರೆ.ಸುರಕ್ಷಾ ಕ್ರಮ ಅನುಸರಿಸದೆ ದೋಷಪೂರಿತ ಯಂತ್ರದಿಂದಾಗಿ ತಾವು ಶಾಶ್ವತ ಅಂಗವಿಕಲನಾಗಬೇಕಾಯಿತು ಎಂದು ಆರೋಪಿಸಿ ಕಾನೂನು ಕ್ರಮ ಜರುಗಿಸುವಂತೆ ಎಂಡಿ ಹಾಗೂ ಜಿಎಂ ವಿರುದ್ದ ಅವರು ಪ್ರಕರಣ ದಾಖಲಿಸಿದ್ದಾರೆ.

ಜಿ ಆರ್ ಎಸ್ ಫ್ಯಾಂಟಸಿ ಪಾರ್ಕ್ ಎಂ.ಡಿ, ಜಿ.ಎಂ ವಿರುದ್ದ ಎಫ್ಐಆರ್ Read More