ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ; 5 ಮಂದಿ ವಿರುದ್ಧ ‌ಎಫ್ ಐ ಆರ್

ಮೈಸೂರು: ಮದುವೆ ಆಗುವುದಾಗಿ ನಂಬಿಸಿ ವಕೀಲೆಯೊಬ್ಬರೊಂದಿಗೆ ದೈಹಿಕ ಸಂಪರ್ಕ ಬೆಳೆಸಿ ನಂತರ ಮೋಸ ಮಾಡಿರುವ ಆರೋಪದ ಹಿನ್ನಲೆ ವಕೀಲ ಹಾಗೂ ಅವರ ಕುಟುಂಬದ 5 ಮಂದಿ ವಿರುದ್ದ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮದುವೆ ಆಗುವುದಾಗಿ ವಂಚಿಸಿದ ನವೀನ್ ಪೊನ್ನಯ್ಯ ಹಾಗೂ ಅವರ ತಂದೆ ಪಿ.ಕೆ.ಪೊನ್ನಯ್ಯ,ತಾಯಿ ಎಂ.ಬಿ.ಕುಮಾರಿ,ಪತ್ನಿ ಲಕ್ಷಿತ್ ಚಿಂಗಪ್ಪ,ದೊಡ್ಡಮ್ಮನ ಮಗಳು ಸುಮ್ಮ ಹಾಗೂ ಬೆಳ್ಳಿಯಪ್ಪ ಎಂಬುವರ ವಿರುದ್ದ ಪ್ರಕರಣ ದಾಖಲಾಗಿದೆ.
ಖಾಸಗಿ ಕಂಪನಿಯೊಂದರಲ್ಲಿ ಕಾಜಲ್ ಪ್ರಸಾದ್ ಅವರು ಲೀಗಲ್ ಅಸೋಸಿಯೇಟ್ ಆಗಿ ಕೆಲಸ ಮಾಡುತ್ತಿದ್ದು ವಕೀಲ ನವೀನ್ ಪೊನ್ನಯ್ಯ ಜೊತೆ ಹಲವು ವರ್ಷಗಳಿಂದ ಸಂತ್ರಸ್ತ ವಕೀಲೆಗೆ ಪರಿಚಯ ಇತ್ತು.
ನವೀನ್ ಪೊನ್ನಯ್ಯ ಅವರು ತಮ್ಮಪತ್ನಿ ಜೊತೆ ಹೊಂದಾಣಿಕೆ ಇಲ್ಲವೆಂದು ಕಾರಣ ನೀಡಿ ವಿಚ್ಛೇದನ ಪಡೆದಿರುವುದಾಗಿ ವಕೀಲೆ ಜೊತೆ ಹೆಚ್ಚು ಒಡನಾಟ ಬೆಳೆಸಿಕೊಂಡಿದ್ದಾರೆ.
ನವೀನ್ ಪೊನ್ನಯ್ಯ ಅವರ ತಾಯಿ ಕುಮಾರಿ ಅವರು ವಕೀಲೆ ಮನೆಗೆ ಬಂದು ಮದುವೆ ಪ್ರಸ್ತಾಪ ಮಾಡಿ ಎಂಗೇಜ್ ಮೆಂಟ್ ಮಾಡಿಕೊಂಡು ಡಿಸೆಂಬರ್ 7 ರಂದು ವಿವಾಹ ನಿಶ್ಚಯಿಸಿದ್ದಾರೆ.
ಮದುವೆ ಫಿಕ್ಸ್ ಆದ ಹಿನ್ನಲೆ ಇಬ್ಬರೂ ದೈಹಿಕ ಸಂಪರ್ಕವನ್ನೂ ಬೆಳೆಸಿದ್ದಾರೆ.ಕೆಲವು ದಿನಗಳ ಹಿಂದೆ ನವೀನ್ ಪೊನ್ನಯ್ಯ ಮೊಬೈಲ್ ಮೂಲಕ ತನಗಿನ್ನೂ ವಿಚ್ಛೇದನ ಆಗಿಲ್ಲ,ಪರಿಹಾರ ವಿಚಾರ ಕಂಡುಕೊಳ್ಳುವುದಾಗಿ ಹಾಗೂ ನಮ್ಮ ಯೋಜನೆಯಂತೆ ಮದುವೆ ನಡೆಯಲಿದೆ ಎಂದು ಮೆಸೇಜ್ ಮಾಡಿ ಸ್ವಿಚ್ ಆಫ್ ಮಾಡಿದ್ದಾರೆ.
ಇದೀಗ ಮದುವೆ ಆಮಂತ್ರಣಪತ್ರಿಕೆಗಳನ್ನು ವಿತರಿಸಲಾಗಿದೆ.ಆದರೆ ನವೀನ್ ಪೊನ್ನಯ್ಯ ಸಂಪರ್ಕಕ್ಕೆ ಸಿಗುತ್ತಿಲ್ಲ.ತಂದೆ ತಾಯಿ ಜೊತೆ ಮಾತನಾಡಿದಾಗ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.ಕೋರ್ಟ್ ನಿಂದ ಸುಳ್ಳು ಡಿಕ್ರಿ ಪಡೆದು ನನ್ನನ್ನ ಮದುವೆ ಆಗುವುದಾಗಿ ನಂಬಿಸಿ ದೈಹಿಕ ಸಂಪರ್ಕ ಬೆಳೆಸಿ ಮೋಸ ಮಾಡಿರುವ ನವೀನ್ ಪೊನ್ನಯ್ಯ ಹಾಗೂ ಇತರರ ಮೇಲೆ ಕಾನೂನು ಕ್ರಮ ಜರುಗಿಸುವಂತೆ ವಕೀಲೆ ಪ್ರಕರಣ ದಾಖಲಿಸಿದ್ದಾರೆ.

ಮದುವೆ ಆಗುವುದಾಗಿ ನಂಬಿಸಿ ವಕೀಲೆಗೆ ಮೋಸ; 5 ಮಂದಿ ವಿರುದ್ಧ ‌ಎಫ್ ಐ ಆರ್ Read More

ಇಬ್ಬರ ಬಂಧನ: ಗಾಂಜಾ* 7.30 ಲಕ್ಷ ಹಣ ವಶ

ಮೈಸೂರು: ಮೈಸೂರು ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿ ಇಬ್ಬರು ಆರೋಪಿಗಳನ್ನು‌ ಬಂಧಿಸಿ 10 ತಲವಾರ್ ಗಳು,2 kg ಗಾಂಜಾ ಹಾಗೂ 7.30 ಲಕ್ಷ ರೂ ವಶಪಡಿಸಿಕೊಂಡಿದ್ದಾರೆ.
ಫಿರ್ದೋಶ್ ಹಾಗೂ ರೋಶನ್ ಬಂಧಿತ ಆರೋಪಿಗಳು.
ಖಚಿತ ಮಾಹಿತಿ ಆಧರಿಸಿ ಮಂಡಿ ಪೊಲೀಸ್ ಠಾಣೆ ವ್ಯಾಪ್ತಿಯ ಎರಡು ಮನೆಗಳ ಮೇಲೆ ದಾಳಿ ನಡೆಸಿದಾಗ ಆರೋಪಿಗಳು ಮಾಲು ಸಮೇತ ಸಿಕ್ಕಿಬಿದ್ದಿದ್ದಾರೆ.
ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಅವರ ನೇತೃತ್ವದಲ್ಲಿ ಡಿಸಿಪಿಗಳಾದ ಬಿಂದುಮಣಿ ಹಾಗೂ ಸುಂದರ್ ರಾಜ್ ಅವರ ಮಾರ್ಗದರ್ಶನದಲ್ಲಿ ಮಂಡಿ ಠಾಣಾ ಪೊಲೀಸರು ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ.
ಫಿರ್ದೋಶ್ ಹಾಗೂ ರೋಶನ್ ಬಂಧಿತರು. ಆರೋಪಿಗಳಿಗೆ ಇಷ್ಟು ದೊಡ್ಡ ಪ್ರಮಾಣದ ಗಾಂಜಾ ಬಂದಿದ್ದು ಹೇಗೆ ಇದರ ಹಿಂದಿರುವ ದೊಡ್ಡ ವ್ಯಕ್ತಿಗಳು ಯಾರು ಎಂಬ ಬಗ್ಗೆ ವಿಚಾರಣೆ ನಡೆಸುತ್ತಿದ್ದಾರೆ.
ಹತ್ತು ತಲ್ವಾರ್ ಗಳು ಸಹ ಸಿಕ್ಕಿದ್ದು ಮಾರಕಾಸ್ತ್ರಗಳನ್ನ ಸಂಗ್ರಹಿಸಿದ್ದ ಉದ್ದೇಶ ಏನು ಎಂಬ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ.
ಮಂಡಿ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದೆ.

ಇಬ್ಬರ ಬಂಧನ: ಗಾಂಜಾ* 7.30 ಲಕ್ಷ ಹಣ ವಶ Read More

ಎಟಿಎಂ ಯಂತ್ರ ಹೊತ್ತೊಯ್ದ ಕತರ್ನಾಕ್ ಕಳ್ಳರು!

ಬೆಳಗಾವಿ: ಕತರ್ನಾಕ್‌ ಕಳ್ಳರು ಎಟಿಎಂ ಯಂತ್ರವನ್ನೇ ಹೊತ್ತೊಯ್ದಿರುವ ಘಟನೆ ಬೆಳಗಾವಿ‌ ತಾಲೂಕಿನಲ್ಲಿ ನಡೆದಿದೆ.

ಬೆಳಗಾವಿ ತಾಲೂಕಿನ ಹೊಸ ವಂಟಮೂರಿ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಇಂಡಿಯಾ ಎಂಟಿಎಂ ಯಂತ್ರವನ್ನು ಕಳ್ಳರು ಹೊತ್ತೊಯ್ದಿದ್ದಾರೆ.

ತಳ್ಳುಗಾಡಿ ಸಮೇತ ಎಟಿಎಂ ಬಳಿ ಬಂದ ಮೂವರು, ಮೊದಲು ಎಟಿಎಂಗೆ ನುಗ್ಗಿ ಅಲ್ಲಿದ್ದ ಸೆನ್ಸಾರ್ ಶಬ್ಧ ಮಾಡದಂತೆ ಬ್ಲ್ಯಾಕ್ ಸ್ಪ್ರೇ ಸಿಂಪಡಿಸಿದ್ದಾರೆ.

ನಂತರ ಎಟಿಎಂ ಮಷಿನ್ ಹೊರ ತೆಗೆದು ಅದನ್ನು ತಳ್ಳೊ ಗಾಡಿಯಲ್ಲಿಟ್ಟುಕೊಂಡು ಹೋಗಿ ಅಲ್ಲಿಂದ ತಮ್ಮ ವಾಹನಕ್ಕೆ ಯಂತ್ರವನ್ನು ಹಾಕಿಕೊಂಡು ಪರಾರಿ ಆಗಿದ್ದಾರೆ.

ಕಾಕತಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ಬಲೆ ಬೀಸಿದ್ದಾರೆ.

ಎಟಿಎಂ ಯಂತ್ರ ಹೊತ್ತೊಯ್ದ ಕತರ್ನಾಕ್ ಕಳ್ಳರು! Read More

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ!

ಮೈಸೂರು : ವ್ಯಕ್ತಿಯೊಬ್ಬ ಕೆಲಸ ಬಿಟ್ಟ ನಂತರವೂ ಗ್ರಾಹಕರಿಂದ ಹಣ ಸಂಗ್ರಹಿಸಿ ಬ್ಯಾಂಕ್‌ಗೆ 47,72ಲಕ್ಷ ರೂ. ವಂಚಿಸಿರುವ ಪ್ರಸಂಗ‌ ನಡೆದಿದ್ದು,ಈ ಬಗ್ಗೆ ದೂರು ದಾಖಲಾಗಿದೆ.

ನಂಜನಗೂಡಿನ ನಿವಾಸಿ ಮಹದೇವ ಸ್ವಾಮಿ ಎಂಬಾತ ತಾನು ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೆ ವಂಚಿಸಿದ ವ್ಯಕ್ತಿ.

ಮಹದೇವ ಸ್ವಾಮಿ ಈ ಹಿಂದೆ ಇಂಡಸ್ ಬ್ಯಾಂಕ್‌ನ ವಾಣಿಜ್ಯ ವಿಭಾಗದಲ್ಲಿ ವ್ಯವಸ್ಥಾಪಕರಾಗಿ ಕೆಲಸ ನಿರ್ವಹಿಸುತ್ತಿದ್ದನು.

ಕಳೆದ ಮೇ ತಿಂಗಳಿನಿಂದ ಆತ ಕೆಲಸಕ್ಕೆ ಬಂದಿರಲಿಲ್ಲ. ಅವರ ಮೊಬೈಲ್ ಕೂಡ ಬಂದ್ ಆಗಿತ್ತು. ಹಾಗಾಗಿ ಅನುಮಾನಗೊಂಡ ಸಿಬಂದಿ ಮಹದೇವಸ್ವಾಮಿ ಅವರು ಈ ಹಿಂದೆ ವಾಹನಗಳ ಸಾಲಗಳ ವಸೂಲಾತಿ ಮಾಡುತ್ತಿದ್ದವರ ಖಾತೆಗಳನ್ನು ಪರಿಶೀಲಿಸಿದ ವೇಳೆ ಹಲವು ಮಂದಿ ಸಾಲದ ಕಂತು ಕಟ್ಟಿಲ್ಲದಿರುವುದು ಪರಿಶೀಲನೆ ವೇಳೆ ತಿಳಿದುಬಂದಿದೆ.

ಹೀಗಾಗಿ ಲೆಕ್ಕ ಪತ್ರಗಳನ್ನು ಪರಿಶೀಲಿಸಿದ ವೇಳೆ ಆತ ೪೭,೭೨,೮೧೦ ರೂ. ಹಣವನ್ನು ಗ್ರಾಹಕರಿಂದ ಸಂಗ್ರಹಿಸಿ ಬ್ಯಾಂಕ್‌ಗೆ ಪಾವತಿಸಿಲ್ಲದಿರುವುದು ಗೊತ್ತಾಗಿದೆ,ಈಗ ಆತನ ವಿರುದ್ಧ ಬ್ಯಾಂಕ್‌ನ ಅಧಿಕಾರಿಗಳು ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಕೆಲಸ ಮಾಡುತ್ತಿದ್ದ ಬ್ಯಾಂಕ್‌ ಗೇ‌ 47.72 ಲಕ್ಷವಂಚಿಸಿದ ವಾಣಿಜ್ಯ‌ ವಿಭಾಗದ ವ್ಯವಸ್ಥಾಪಕ! Read More

ಶಾಲಾ ಬಸ್ ಉರುಳಿ ವಿದ್ಯಾರ್ಥಿ ಸಾವು

ಮೈಸೂರು, ಡಿ.1: ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಸುಳೆ ಮುರ್ಕಿ ಬಳಿ ಪ್ರವಾಸಕ್ಕೆ ಬಂದಿದ್ದ ಶಾಲಾ ಬಸ್ ಉರುಳಿದ ಪರಿಣಾಮ ಮೈಸೂರಿನ ವಿದ್ಯಾರ್ಥಿ ಮೃತಪಟ್ಟಿದ್ದಾನೆ.

ಮೈಸೂರಿನ ಪವನ್ (15) ಎಂಬ ವಿದ್ಯಾರ್ಥಿ ಮೃತಪಟ್ಟ ದುರ್ದೈವಿ.ಅಪಘಾತದಲ್ಲಿ 26 ಮಂದಿ ಗಾಯಗೊಂಡಿದ್ದಾರೆ.

ಗಾಯಗೊಂಡ ವಿದ್ಯಾರ್ಥಿಗಳಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ, ಕೆಲವರ ಸ್ಥಿತಿ ಗಂಭೀರವಾಗಿದೆ.

ಮೈಸೂರಿನ ತರಳಬಾಳು ವಿದ್ಯಾ ಸಂಸ್ಥೆಯ ಶಾಲಾ ಮಕ್ಕಳು ಗೋಕರ್ಣಕ್ಕೆ ಪ್ರವಾಸಕ್ಕೆ ಹೊರಟಿದ್ದರು. ಸುಳೆ ಮುರ್ಕಿ ಕ್ರಾಸ್ ಬಳಿ ಬಸ್‌ ಚಾಲಕನ ನಿಯಂತ್ರಣ ಕಳೆದುಕೊಂಡು ಉರುಳಿಬಿದ್ದಿದೆ.

ಈ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಶಾಲಾ ಬಸ್ ಉರುಳಿ ವಿದ್ಯಾರ್ಥಿ ಸಾವು Read More

ಕಾಮುಕನಿಗೆ ದರ್ಮದೇಟು ಹಾಕಿದ ಜನ

ಮೈಸೂರು: ಅಕ್ರಮ ಸಂಬಂಧ ಬೆಳೆಸುವಂತೆ ಗೃಹಿಣಿ ಹಿಂದೆ ಬಿದ್ದ ಕಾಮುಕನಿಗೆ ಜನ ಧರ್ಮದೇಟು ಹಾಕಿದ ಪ್ರಸಂಗ ಮೈಸೂರಿನಲ್ಲಿ ನಡೆದಿದೆ.

ಕಾಮುಕನ ಕಿರುಕುಳದಿಂದ ನೊಂದ ಮಹಿಳೆ ಮೈಸೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ಹುಣಸೂರು ತಾಲೂಕು ಬಿಳಿಕೆರೆ ಹೋಬಳಿಯ ಚಿಕ್ಕಬೆಂಚನಹಳ್ಳಿ ನಿವಾಸಿ ಮಹೇಶ್ ವಿರುದ್ದ ಪ್ರಕರಣ ದಾಖಲಾಗಿದೆ.

ಗೃಹಿಣಿ ಮೈಸೂರಿನ ಹೂಟಗಳ್ಳಿ ಕೈಗಾರಿಕಾ ಪ್ರದೇಶದಲ್ಲಿರುವ ಖಾಸಗಿ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ.ಪಕ್ಕದ ಮನೆಯ ನಿವಾಸಿ ಮಹೇಶ್ ಸಹ ಮೈಸೂರಿನಲ್ಲೇ ಕೆಲಸ ಮಾಡುತ್ತಿದ್ದಾನೆ.

ಪ್ರತಿದಿನ ಗೃಹಿಣಿಯ ಹಿಂದೆ ಬರುತ್ತಿದ್ದ ಮಹೇಶ ತನ್ನ ಜೊತೆ ಸಂಬಂಧ ಬೆಳೆಸುವಂತೆ ಒತ್ತಾಯಿಸಿದ್ದಾನೆ.ಕೆಲಸಕ್ಕೆ ಹೋಗುವ ಸ್ಥಳಕ್ಕೆ ಬಂದು ಟಾರ್ಚರ್ ನೀಡುತ್ತಿದ್ದ.

ಎಂಜಾಯ್ ಮಾಡೋಣ,ಹಣ ಕೊಡ್ತೀನಿ ಎಂದು ಮಾನಸಿಕವಾಗಿ ಕಿರುಕುಳ ನೀಡಿದ್ದಾನೆ.ತನ್ನ ಜೊತೆ ಬರದೆ ಇದ್ದರೆ ಫೋಟೋ ಹಾಗೂ ವಿಡಿಯೋಗಳನ್ನ ಮಾರ್ಫ್ ಮಾಡಿ ಇಂಟರ್ನೆಟ್ ನಲ್ಲಿ ಹಾಕಿ ಮಾನತೆಗೆದು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾನೆ.

ಈ ಸಂಬಂಧ ಗೃಹಿಣಿ ತನ್ನ ಪತಿಯ ಅಣ್ಣನಿಗೆ ತಿಳಿಸಿದ್ದಾರೆ. ಮಹೇಶ್ ನೀಡುತ್ತಿದ್ದ ಕಿರುಕುಳವನ್ನ ಭಾವ ಕಣ್ಣಾರೆ ಕಂಡಾಗ ಆತ ಪರಾರಿಯಾಗಿದ್ದಾನೆ.

ಮಹೇಶ್ ನನ್ನು ಚೇಸ್ ಮಾಡಿದ ಭಾವ ಬಿಳಿಕೆರೆ ಬಳಿ ಹಿಡಿದು ಜನರೊಂದಿಗೆ ಹಿಗ್ಗಮುಗ್ಗ ಥಳಿಸಿದ್ದಾರೆ.

ಮಹೇಶ್ ಆಸ್ಪತ್ರೆ ಸೇರಿದ್ದಾನೆ.ಹಲ್ಲೆ ನಡೆಸಿದ ಹಿನ್ನಲೆ ಗೃಹಿಣಿಯ ಭಾವನ ಮೇಲೆ ಬಿಳಿಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನಲೆ ಗೃಹಿಣಿ ಬಿಳಿಕೆರೆ ಠಾಣೆಗೆ ತೆರಳಿ ತನಗೆ ನೀಡುತ್ತಿದ್ದ ಕಿರುಕುಳದ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ.ಹೂಟಗಳ್ಳಿಯಲ್ಲಿ ಕಿರುಕುಳ ನೀಡಿದ ಹಿನ್ನಲೆ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಹೇಶ್ ವಿರುದ್ದ ದೂರು ದಾಖಲಾಗಿದೆ.

ಕಾಮುಕನಿಗೆ ದರ್ಮದೇಟು ಹಾಕಿದ ಜನ Read More

ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ರೂ ದೋಚಿದ ಖದೀಮರು

ಮೈಸೂರು: ಫ್ರಾಡ್ ಮೆಸೇಜ್ ಓಪನ್ ಮಾಡಿ 21 ನಿಮಿಷದಲ್ಲಿ ಖದೀಮರು ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ರೂ ದೋಚಿರುವ ಘಟನೆ ನಗರದಲ್ಲಿ ‌ನಡೆದಿದೆ.

ಪ್ಯಾಕರ್ಸ್ ಅಂಡ್ ಮೂವರ್ಸ್ ಮಾಲೀಕ ಚಂದ್ರಶೇಖರ್ ಅವರು ಮೋಸ ಹೋಗಿದ್ದು,ಹೆಬ್ಬಾಳ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಖಾಸಗಿ ಬ್ಯಾಂಕ್ ಒಂದರಲ್ಲಿ ಕ್ರೆಡಿಟ್ ಕಾರ್ಡ್ ಹೊಂದಿರುವ ಚಂದ್ರಶೇಖರ್ ಅವರಿಗೆ ಕರೆ ಬಂದಿದೆ.ಬ್ಯಾಂಕ್ ನಿಂದ ಆಫೀಸರ್ ಗಳು ಮಾತನಾಡಿದಂತೆ ವಂಚಕರು ಪ್ಲ್ಯಾನ್ ಮಾಡಿ ಮಾಹಿತಿ ಪಡೆಯಲು ಯತ್ನಿಸಿದ್ದಾರೆ.

ಇದೊಂದು ಫ್ರಾಡ್ ಕಾಲ್ ಎಂದು ನಿರ್ಧರಿಸಿದ ಚಂದ್ರಶೇಖರ್ ಕರೆ ಸ್ಥಗಿತಗೊಳಿಸಿದ್ದಾರೆ.

ನಂತರ 26 ಸಾವಿರ ಕ್ರೆಡಿಟ್ ಆಗಿರುವುದಾಗಿ ಮೆಸೇಜ್ ಬಂದಿದೆ.ಮೆಸೇಜ್ ಓಪನ್ ಮಾಡಿದ ಕೇವಲ 21 ನಿಮಿಷದಲ್ಲಿ ವಂಚಕರು ಹಂತಹಂತವಾಗಿ 1.98,880ರೂ ಲಪಟಾಯುಸಿದ್ದಾರೆ.

ಕೆಲವೇ ನಿಮಿಷಗಳಲ್ಲಿ ಹಲವು ಓಟಿಪಿ ಗಳು ಬಂದ ಹಿನ್ನಲೆ ಕೂಡಲೇ ಚಂದ್ರಶೇಖರ್ ತಮ್ಮ ಖಾತೆ ಬ್ಲಾಕ್ ಮಾಡಿಸಿ 1930 ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕ್ರೆಡಿಟ್ ಕಾರ್ಡ್ ನಿಂದ 1.98 ಲಕ್ಷ ರೂ ದೋಚಿದ ಖದೀಮರು Read More

ಅಪಘಾತ: ಬೆಸ್ಕಾಂ ಎಮ್‌ ಡಿ ಮಹಾಂತೇಶ್ ಬೀಳಗಿ ಸೇರಿ ಮೂವರು ನಿಧನ

ಕಲಬುರಗಿ: ಕಲಬುರಗಿ ಯ ಜೇವರ್ಗಿ ಬಳಿ ನಡೆದ ರಸ್ತೆ ಅಪಘಾತದಲ್ಲಿ
ಬೆಸ್ಕಾಂ ಎಮ್‌ಡಿ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಮೃತಪಟ್ಟಿದ್ದಾರೆ.

ವಿಜಯಪುರದಿಂದ ಕಲಬುರಗಿಗೆ ಸಂಬಂಧಿಕರ ಮದುವೆ ಕಾರ್ಯಕ್ಕೆ ತೆರಳುತ್ತಿದ್ದಾಗ ಜೇವರ್ಗಿ ತಾಲೂಕಿನ ಗೌನಹಳ್ಳಿ ಬಳಿ ‍ಬೀಳಗಿ ಅವರ ಇನ್ನೋವಾ ಕಾರು ಮರಕ್ಕೆ ಅಪ್ಪಳಿಸಿದೆ.

ಅಪಘಾತದಲ್ಲಿ ಸ್ಥಳದಲ್ಲೇ ಇಬ್ಬರು ಮೃತಪಟ್ಟಿದ್ದಾರೆ. ಗಂಭೀರ ಗಾಯಗೊಂಡಿದ್ದ ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ಕರೆತರುವಷ್ಟರಲ್ಲಿ ಮೃತಪಟ್ಟಿದ್ದರು.

ಆಸ್ಪತ್ರೆಗೆ ಎಸ್‌ಪಿ ಅಡ್ಡೂರು ಶ್ರೀನಿವಾಸುಲು, ಡಿಎಚ್‌ಒ ಶರಣಬಸಪ್ಪ ಕ್ಯಾತನಾಳ್ ಸೇರಿ ಹಲವು ಅಧಿಕಾರಿಗಳು ಭೇಟಿ ನೀಡಿದ್ದಾರೆ.

ಕರ್ನಾಟಕ ರಾಜ್ಯ ಖನಿಜ ನಿಗಮದ ವ್ಯವಸ್ಥಾಪಕ ನಿರ್ದೇಶಕರಾಗಿದ್ದ ಮಹಾಂತೇಶ್ ಬೀಳಗಿ ಅವರಿಗೆ 51 ವರ್ಷ. ಅವರು ಹಲವು ಜಿಲ್ಲೆಗಳಲ್ಲಿ ಜಿಲ್ಲಾಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿದ್ದಾರೆ.

ಅಪಘಾತ: ಬೆಸ್ಕಾಂ ಎಮ್‌ ಡಿ ಮಹಾಂತೇಶ್ ಬೀಳಗಿ ಸೇರಿ ಮೂವರು ನಿಧನ Read More

ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ದಾಳಿ

ಮೈಸೂರು: ಜಿಲ್ಲೆಯ ನಂಜನಗೂಡಿನಲ್ಲಿ ಮತ್ತೆ ಲಾಂಗು ಮಚ್ಚು ಝಳಪಿಸಿದ್ದು,
ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ದಾಳಿ ಮಾಡಿ ಹಲ್ಲೆ ನಡೆಸಲಾಗಿದೆ.

10 ಜನರ ತಂಡ ಮಾರಕಾಸ್ತ್ರಗಳಿಂದ ಧನರಾಜ್ ಭೋಲಾ ಮೇಲೆ
ದಾಳಿ ನಡೆಸಿದ್ದಾರೆ.

ನಂಜನಗೂಡು ಪಟ್ಟಣದ ಶಂಕರಪುರ ಬಡಾವಣೆ ಬಳಿ ಬೈಕ್ ನಲ್ಲಿ ಬರುತ್ತಿದ್ದಾಗ ಮಾರಕಾಸ್ತ್ರಗಳಿಂದ ದಾಳಿ ನಡೆಸಲಾಗಿದೆ.

ನಂಜನಗೂಡು ನಗರಸಭಾ ಅಧ್ಯಕ್ಷ ಶ್ರೀಕಂಠಸ್ವಾಮಿ ಭಾವಮೈದುನ ರಘು ಹಾಗೂ ಇತರರು ಅಟ್ಯಾಕ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆಯಿಂದ ಧನರಾಜ್ ಭೋಲಾ ನ ಬೆರಳುಗಳು ಕಟ್ ಆಗಿದೆ.
ಪ್ರಕರಣಕ್ಕೆ ಸಂಬಂಧಿಸಿದಂತೆ ರಘು ಹಾಗೂ ಕಾರ್ತಿಕ್ ಎಂಬುವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಧನರಾಜ್ ಭೋಲಾ ನನ್ನು ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ರೌಡಿ ಶೀಟರ್ ಧನರಾಜ್ ಭೋಲಾ ಮೇಲೆ ದಾಳಿ Read More

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ

ಮಂಡ್ಯ: ಸಾಲಭಾದೆ ತಾಳಲಾರದೆ ರೈತ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲ್ಲೂಕಿನಲ್ಲಿ ನಡೆದಿದೆ.

ಅಗಟಹಳ್ಳಿಗ್ರಾಮದ ತ್ರಿಪುರ ಸುಂದರ (42)ಆತ್ಮಹತ್ಯೆ ಮಾಡಿಕೊಂಡ ರೈತ.

ಬೆಳೆ ಸಾಲ, ಕೈ ಸಾಲ, ಮೈಕ್ರೋ ಫೈನಾನ್ಸ್ ನಲ್ಲಿ ಸಾಲ ಸೇರಿ ಸುಮಾರು 10 ಲಕ್ಷದವರೆಗೂ ಸಾಲ ಮಾಡಿಕೊಂಡಿದ್ದರು.

ರೇಷ್ಮೆಗೆ ಸಿಂಪಡಿಸುವ ಔಷಧಿ ಸೇವಿಸಿ ತ್ರಿಪುರ ಸುಂದರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಪಾಂಡವಪುರ ಗ್ರಾಮಾಂತರ ಠಾಣೆ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಸಾಲಭಾದೆ ತಾಳಲಾರದೆ ರೈತ ಆತ್ಮಹತ್ಯೆ Read More