ಮೈಸೂರು: ಸೆ.22 ರಿಂದ ನಡೆಯಲಿರುವ ಜಾತಿಗಣತಿ ಕುರಿತು ಕುಂಚಿಟಿಗರ ಸಂಘದಿಂದ ಕುಂಚಿಟಿಗ ಸಮುದಾಯದವರಿಗೆ ಜಾಗೃತಿ ಮಂಡಿಸಲಾಯಿತು.
ಮೈಸೂರಿನಲ್ಲಿ ನಡೆದ ಕುಂಚಿಟಿಗರ ಸಂಘದ ಸಭೆಯಲ್ಲಿ ಕರ್ನಾಟಕ ರಾಜ್ಯದ್ಯಂತ ಇರುವ ಕುಂಚಿಟಿಗರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಸಮೀಕ್ಷೆಯಲ್ಲಿ ಕುಂಚಿಟಿಗ ಜನಾಂಗ ಸ್ವತಂತ್ರ ಜಾತಿ ಎಂದು ಬರೆಸಲು
ಒಮ್ಮತದ ತೀರ್ಮಾನ ಕೈಗೊಳ್ಳಲಾಯಿತು.
ಸಭೆಯಲ್ಲಿ ಮೈಸೂರು ಕುಂಚಿಟಿಗರ ಸಂಘದ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ಕುಂಚಿಟಿಗರ ಸಂಘದ ಮಹಾಮಂಡಲದ ಅಧ್ಯಕ್ಷರು ಹಾಸನ ಜಿಲ್ಲಾ ಕುಂಚಿಟಿಗರ ಸಂಘದ ಅಧ್ಯಕ್ಷರು,ಚಾಮರಾಜನಗರ, ಕೊಳ್ಳೇಗಾಲ ತಾಲೂಕು,ಪಿರಿಯಾಪಟ್ಟಣ,ತುಮಕೂರು, ಶಿರಾ, ಚಿತ್ರದುರ್ಗ, ಹಿರಿಯೂರು, ಮಡಕಸಿರ, ಕನಕಪುರ ಕುಂಚಿಟಿಗರ ಸಂಘಗಳ ಪದಾಧಿಕಾರಿಗಳು ಭಾಗವಹಿಸಿ ಕುಂಚಿಟಿಗ ಜನಾಂಗವನ್ನು ಸ್ವತಂತ್ರ ಜಾತಿಯೆಂದು ಸರ್ಕಾರ ಕೊಟ್ಟಿರುವ ಕೋಡ್ ನಂಬರ್ A-0795 ಎಂದು ಬರಸಬೇಕೆಂದು ಸಭೆಯಲ್ಲಿ ಒಮ್ಮತದಿಂದ ತೀರ್ಮಾನವನ್ನು ತೆಗೆದುಕೊಳ್ಳಲಾಯಿತು
ಕುಂಚಿಟಿಗ ಜಾತಿಯಲ್ಲಿ ಯಾವುದೇ ಉಪ ಜಾತಿ ಇರುವುದಿಲ್ಲ ಎಂದು ಮುಖಂಡರು ನಿರ್ಣಯ ತೆಗೆದುಕೊಂಡರು.