ಬೆಂಗಳೂರು: ವಕೀಲರ ಕಚೇರಿಯನ್ನು ಅಕ್ರಮವಾಗಿ ಪ್ರವೇಶಿಸಿ, ದಾಖಲೆಗಳನ್ನು ಕಳ್ಳತನ ಮಾಡಿದ ಭಾರತ ಬ್ಯಾಂಕ್ (ಮುಂಬೈ) ಲಿ. ಸಿಬ್ಬಂದಿ ಹಾಗೂ ಮಾಜಿ ಭಾರತ ಸುಂದರಿ ಕಾಜಲ್ ಭಾಟಿಯಾ ಮತ್ತು ಇಂದುಮತಿ ವಿರುದ್ಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಗರದ ವಕೀಲರೊಬ್ಬರ ಕಚೇರಿಯನ್ನು ಅಕ್ರಮವಾಗಿ ಗುಂಪು ಕಟ್ಟಿಕೊಂಡು, ಅತಿಕ್ರಮ ಪ್ರವೇಶ ಮಾಡಿ, ಅಲ್ಲಿದ್ದ ದಾಖಲೆಗಳು ಮತ್ತು ಇನ್ನಿತರ ವಸ್ತುಗಳನ್ನು ಕಳ್ಳತನ ಮಾಡಲಾಗಿದೆ ಎಂದು ಆರೋಪಿಸಲಾಗಿದೆ.
ಅಲ್ಲದೆ ಸಾಕ್ಷ್ಯ ನಾಶ ಮಾಡಿದ್ದು ಈ ಬಗ್ಗೆ ನ್ಯಾಯಾಲಯದ ಆದೇಶದಂತೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಭಾರತ ಬ್ಯಾಂಕ್ (ಮುಂಬೈ) ಲಿ. ಸಿಬ್ಬಂದಿಗಳಾದ ಸಂದೇಶ ಎಂ, ಅರುಣ್ ಕೋಟ್ಯಾನ್, ಮುರಳೀಧರ ಕೋಟ್ಯಾನ್, ರವೀಂದ್ರ ಡಿ ಹಾಗೂ ಮಾಜಿ ಭಾರತ ಸುಂದರಿ ಕಾಜಲ್ ಭಾಟಿಯಾ ಮತ್ತು ಕಟ್ಟಡ ವ್ಯವಸ್ಥಾಪಕಿ ಇಂದುಮತಿ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.
ಪ್ರಕರಣ ದಾಖಲಿಸಿಕೊಂಡಿರುವ ಹೈಗ್ರೌಂಡ್ಸ್ ಠಾಣೆಯ ಪೊಲೀಸ್ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.