ಪ್ರಾಂಶುಪಾಲರಾಗಿ ಮಾಡುವ ಭರವಸೆ ನೀಡಿ ವಂಚನೆ:ಸಿಎಆರ್ ಮುಖ್ಯಪೇದೆ ವಿರುದ್ಧ ಪ್ರಕರಣ

Spread the love

ಮೈಸೂರು: ಪಿಯು ಕಾಲೇಜಿಗೆ ಉಪ ಪ್ರಾಂಶುಪಾಲರಾಗಿ ಹಾಗೂ ಟ್ರಸ್ಟ್ ಗೆ ಟ್ರಸ್ಟಿಯನ್ನಾಗಿ ನೇಮಕ ಮಾಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಗೆ ಸಿಎಆರ್ ಮುಖ್ಯಪೇದೆ ಹಾಗೂ ಪತ್ನಿ 7.45 ಲಕ್ಷ ವಂಚಿಸಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.

ಘಟನೆ ಸಂಬಂಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಸಿಎಆರ್ ಮುಖ್ಯಪೇದೆ ಹಾಗೂ ಅವರ ಪತ್ನಿ ಹಾಗೂ ಟ್ರಸ್ಟ್ ನ 5 ಮಂದಿ ಸದಸ್ಯರುಗಳ ಮೇಲೆ ಪ್ರಕರಣ ದಾಖಲಾಗಿದೆ.

ಅಕ್ಷರ ಫೌಂಡೇಶನ್ ಸಂಸ್ಥಾಪಕರಾದ ಸುನಿಲ್ ಎಂಬುವರು ವಂಚನೆಗೆ ಒಳಗಾದವರು.

ಸುನಿಲ್ ಶಿಕ್ಷಣ ಕ್ಷೇತ್ರದಲ್ಲಿ‌ ಸಾಕಷ್ಟು ಹೆಸರು ಗಳಿಸಿದ್ದಾರೆ.ಸಿಎಆರ್ ಮುಖ್ಯಪೇದೆ ರಾಮಕೃಷ್ಣನಗರದಲ್ಲಿ ಗುರುಕಲ್ಪ ಟ್ರಸ್ಟ್ ಮೂಲಕ ವಿಶ್ವಮಾನವ ಪಿಯು ಕಾಲೇಜ್ ನಡೆಸುತ್ತಿದ್ದಾರೆ.

ಇದಕ್ಕೆ ಮುಖ್ಯ ಪೇದೆ ಅವರ ಪತ್ನಿ ಹಾಗೂ 5 ಮಂದಿ ಟ್ರಸ್ಟಿಗಳಿದ್ದಾರೆ.ಶಿಕ್ಷಣ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿರುವ ಸುನಿಲ್ ಅವರನ್ನ ವಿಶ್ವಮಾನವ ಪಿಯು ಕಾಲೇಜಿಗೆ ಉಪಪ್ರಾಂಶುಪಾಲರಾಗಿ ಬರುವಂತೆ ಮನವಿ ಮಾಡಿದ್ದಾರೆ.

ಸುನಿಲ್ ಆರಂಭದಲ್ಲಿ ತಿರಸ್ಕರಿಸಿದ್ದಾರೆ.ಪಟ್ಟುಬಿಡದ ಹೆಡ್ ಕಾನ್ಸ್ಟೇಬಲ್ ದುಂಬಾಲು ಬಿದ್ದು ಉತ್ತಮ ವೇತನ ನೀಡುವ ಆಮಿಷ ಒಡ್ಡಿದ್ದಾರೆ. ಉತ್ತಮ ವೇತನ ದೊರೆಯುವ ಭರವಸೆ ನೀಡಿದ ಹಿನ್ನಲೆಯಲ್ಲಿ ಸುನಿಲ್ ಆಫರ್ ಒಪ್ಪಿಕೊಂಡಿದ್ದಾರೆ.

ಕೆಲವು ದಿನಗಳು ವಿಶ್ವಮಾನವ ಪಿಯು ಕಾಲೇಜಿನ ಪ್ರತಿನಿಧಿಯಾಗಿ ಹಲವಾರು ಶಾಲೆಗಳಿಗೆ ತೆರಳಿ ವಿಧ್ಯಾರ್ಥಿಗಳಿಗೆ ಕ್ಯಾಂಪೇನ್ ಮಾಡಿದ್ದಾರೆ.

ಕೆಲವು ದಿನಗಳ ನಂತರ ಕಾಲೇಜ್ ಗೆ ಹಣದ ಕೊರತೆ ಇರುವುದರಿಂದ ಮುಖ್ಯ ಪೇದೆ ಆರ್ಥಿಕ ಸಹಾಯ ಕೇಳಿದ್ದಾರೆ.10 ಲಕ್ಷ ನೀಡಿದರೆ ಗುರುಕಲ್ಪ ಟ್ರಸ್ಟ್ ಗೆ ಟ್ರಸ್ಟಿಯಾಗಿ ನೇಮಕ ಮಾಡಿಕೊಳ್ಳುವುದಾಗಿ ಭರವಸೆ ನೀಡಿದ್ದಾರೆ.

ಆದರೆ ಸುನಿಲ್ ಅವರು 10 ಲಕ್ಷ ಹೊರೆ ಎಂನಿಸಿ ಆಫರ್ ನಿರಾಕರಿಸಿದ್ದಾರೆ.ಪಟ್ಟು ಬಿಡದ ಹೆಡ್ ಕಾನ್ಸಟೇಬಲ್ ಪತ್ನಿ ಜೊತೆ ಬಂದು ಸುನಿಲ್ ರವರನ್ನ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಣ ಹೂಡಿಕೆ ವಿಚಾರದಲ್ಲಿ ತಮ್ಮ ಸಂಬಂಧಿಕರಾದ ಛಾಯಾದೇವಿ ಎಂಬುವರ ಬಳಿ ಪ್ರಸ್ತಾಪಿಸಿದ ಸುನಿಲ್ 10 ಲಕ್ಷ ನೀಡಿದ್ದಾರೆ.ಈ ವೇಳೆ ಟ್ರಸ್ಟಿಯಾಗಿ ಮಾಡಿಕೊಳ್ಳುವ ಬಗ್ಗೆ ಒಪ್ಪಂದ ಮಾಡಿ ಅಗ್ರಿಮೆಂಟ್ ಗೆ ಸಹಿ ಹಾಕಿ ಹಣದ ಭದ್ರತೆಗಾಗಿ ಚೆಕ್ ಗಳನ್ನ ನೀಡಿದ್ದಾರೆ.

ಹಣ ಕೊಟ್ಟು ತಿಂಗಳು ಉರುಳಿದರೂ ಟ್ರಸ್ಟಿಯಾಗಿ ಮಾಡಿಕೊಳ್ಳಲು ಆಸಕ್ತಿ ತೋರಿಸದೆ ಸಬೂಬು ಹೇಳಿದ್ದಾರೆ.

ಸಧ್ಯ ಟ್ರಸ್ಟಿಯಾಗಿ ಮಾಡಿಕೊಳ್ಳಲು ಸಾಧ್ಯವಿಲ್ಲ ನಿಮ್ಮ ಹಣ ಸಾಲ ಎಂದು ಪರಿಗಣಿಸಿ ಬಡ್ಡಿ ನೀಡುವುದಾಗಿ ತಿಳಿಸಿದ್ದಾರೆ.ಟ್ರಸ್ಟಿಗಳ ಸಭೆಯಲ್ಲಿ ಈ ವಿಚಾರ ಪ್ರಸ್ತಾಪ ಮಾಡಿದಾಗ ಹೆಡ್ಕಾನ್ಸ್ಟೆಬಲ್ ಹಾಗೂ ಪತ್ನಿ ಉಡಾಫೆ ಉತ್ತರ ಕೊಟ್ಟಿದ್ದಾರೆ.

ಟ್ರಸ್ಟಿಯೂ ಆಗದೆ ಉಪ ಪ್ರಾಂಶುಪಾಲರನ್ನಾಗಿಯೂ ಮಾಡದೆ ವಂಚಿಸಿದ್ದಾರೆ.ಹಣ ಹಿಂದಿರುಗಿಸುವಂತೆ ಸುನಿಲ್ ಪಟ್ಟು ಹಿಡಿದಾಗ ಇತರರಿಂದ 2.55 ಲಕ್ಷ ಹಿಂದಿರುಗಿಸಿ ಉಳಿದ ಹಣ ನೀಡದೆ ಸತಾಯಿಸಿದ್ದಾರೆ.

ಅಲ್ಲದ ಆತ ನೀಡಿದ ಚೆಕ್ ಗಳು ಬೌನ್ಸ್ ಆಗಿದೆ.ಹಾಗಾಗಿ ಬೇರೆ ದಾರಿ ಕಾಣದೆ ಸುನಿಲ್ ಪೊಲೀಸರ ಮೊರೆ ಹೋಗಿದ್ದಾರೆ. ಮತ್ತೊಮ್ಮೆ ಕೊಟ್ಟ ಚೆಕ್ ಗಳೂ ಸಹ ಬೌನ್ಸ್ ಆಗಿವೆ.ಪೊಲೀಸ್ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಆತ ಹಣ ಹಿಂದಿರುಗಿಸದೆ ಏನು ಬೇಕಾದರೂ ಮಾಡಿಕೋ ಎಂದು ಉಡಾಫೆಯಿಂದ ವರ್ತಿಸಿದ್ದಾರೆ.

ಕಡೆಗೆ ಸುನಿಲ್ ಸವರು ಹೆಡ್ ಕಾನ್ಸ್ಟೆಬಲ್ ಮತ್ತು ಅವರ ಪತ್ನಿ ಹಾಗೂ ಗುರುಕಲ್ಪ ಟ್ರಸ್ಟ್ ನ 5 ಮಂದಿ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.