ಪಾವಗಡ: ನಾಯಿಗೆ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಕಾರನ್ನು ಪಕ್ಕಕ್ಕೆ ತಿರುಗಿಸಲು ಹೋಗಿ ಹಳ್ಳಕ್ಕೆ ಉರುಳಿದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟು ಮತ್ತೊಬ್ಬರು ಗಂಭೀರವಾಗಿ ಗಾಯಗೊಂಡ ಘಟನೆ ಪಾವಗಡ ಪಟ್ಟಣದ
ಹೊರವಲಯದಲ್ಲಿ ನಡೆದಿದೆ.
ಸತ್ಯ ಸಾಯಿ ಜಿಲ್ಲೆಯ ಮಡಕಶಿರಾ ತಾಲೂಕಿನ ರೇಕಲಕುಂಟೆ ಗ್ರಾಮದ
ಗೋಪಾಲಪ್ಪ(50) ಮೃತ ದುರ್ದೈವಿ.ನರಸಿಂಹಮೂರ್ತಿ (46) ಗಾಯಗೊಂಡಿದ್ದಾರೆ
ಕಣಿವೇನಹಳ್ಳಿ ಕ್ರಾಸ್ ಬಳಿ ನಿನ್ನೆ ಸಂಜೆ 4:30ರಲ್ಲಿ ಈ ಘಟನೆ ನಡೆದಿದೆ.
ಪಾವಗಡ ತಾಲೂಕಿನ ಕಡಪಲಕೆರೆಗೆ ನರಸಿಂಹ ಮೂರ್ತಿ ಅವರ ಮಗ ನರೇಶ್ ಅವರನ್ನು ಮಾತನಾಡಿಸಿಕೊಂಡು ಕಾರಿನಲ್ಲಿ ಹಿಂತಿರುವಾಗ ನಾಯಿ ಅಡ್ಡ ಬಂದ ಕಾರಣ ಅದನ್ನು ತಪ್ಪಿಸಲು ಹೋಗಿ ಪಕ್ಕದಲ್ಲಿದ್ದ ಹಳ್ಳಕ್ಕೆ ಕಾರು ಉರುಳಿದೆ.
ನರಸಿಂಹಮೂರ್ತಿ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ರವಾನಿಸಲಾಗಿದೆ.
ಸ್ಥಳಕ್ಕೆ ಮಧುಗಿರಿ ಡಿವೈಎಸ್ಪಿ ಮಂಜುನಾಥ್ ಪಾವಗಡ ಸಿಪಿಐ ಸುರೇಶ್ ಧಾವಿಸಿ ಪರಿಶೀಲನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಂಡಿದ್ದಾರೆ.