ನಗರ ಮೀಸಲು ಪಡೆ‌ ಮುಖ್ಯಪೇದೆ ಸಸ್ಪೆಂಡ್

ಮೈಸೂರು: ಶಿಕ್ಷಣ ತಜ್ಞರೊಬ್ಬರಿಗೆ ಅಧಿಕಾರದ ಆಮಿಷವೊಡ್ಡಿ 7.45 ಲಕ್ಷ ವಂಚಿಸಿದ ಪ್ರಕರಣ ಸಂಬಂಧ ನಗರ ಮೀಸಲು ಪಡೆ‌ ಮುಖ್ಯಪೇದೆ ಚೆನ್ನಕೇಶವ ಅವರನ್ನ ಅಮಾನತು‌ ಮಾಡಲಾಗಿದೆ.

ವಂಚನೆಗೆ ಒಳಗಾದ ವ್ಯಕ್ತಿ ಚೆನ್ನಕೇಶವ ಹಾಗೂ ಅವರ ಪತ್ನಿ ಸೇರಿದಂತೆ ಹಲವರ ಮೇಲೆ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಹಿನ್ನಲೆಯಲ್ಲಿ ಇಲಾಖೆ ವತಿಯಿಂದ ಕ್ರಮ ಕೈಗೊಳ್ಳಲಾಗಿದೆ.

ಅಕ್ಷರ ಫೌಂಡೇಶನ್ ಸಂಸ್ಥೆಯ ಸಂಸ್ಥಾಪಕರಾದ ಸುನಿಲ್ ಎಂಬುವರಿಗೆ ವಂಚಿಸಿದ ಆರೋಪ ಚೆನ್ನಕೇಶವ ಮೇಲಿದೆ.

ಚೆನ್ನಕೇಶವ ಹಾಗೂ ಅವರ ಪತ್ನಿ ಕಾಲೇಜ್ ಒಂದನ್ನ ನಡೆಸುತ್ತಿದ್ದರು.ಜೊತೆಗೆ ಟ್ರಸ್ಟ್ ಸಹ ಇತ್ತು.

ಕಾಲೇಜಿಗೆ ಉಪಪ್ರಾಂಶುಪಾಲರಾಗಿ ಹಾಗೂ ಟ್ರಸ್ಟಿಯಾಗಿ ಸೇರಿಸಿಕೊಳ್ಳುವುದು ಎಂದು ಸುನಿಲ್ ಅವರಿಗೆ ಆಮಿಷ ಒಡ್ಡಿ 10 ಲಕ್ಷ ಪಡೆದಿದ್ದರು.

ಹಣ ಪಡೆದ ನಂತರ ಸುನಿಲ್ ಅವರಿಗೆ ಯಾವುದೇ ಅಧಿಕಾರ ನೀಡದೆ ಹಣವನ್ನೂ ಹಿಂದಿರುಗಿಸದೆ ನಿರ್ಲಕ್ಯ ಮಾಡಲಾಗಿತ್ತು.

ತೀವ್ರ ಒತ್ತಡ ಹೇರಿದಾಗ 2.55 ಲಕ್ಷ ಹಿಂದಿರುಗಿಸಿ 7.45 ಲಕ್ಷ ವಂಚಿಸಿದ್ದಾರೆ.ಹಾಗಾಗಿ ಸುನಿಲ್ ಅವರು ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.

ಹಾಗಾಗಿ ಇಲಾಖಾ ವಿಚಾರಣೆ ಪೂರ್ಣಗೊಳ್ಳುವವರೆಗೂ ಚೆನ್ನಕೇಶವ ಅವರನ್ನ ಅಮಾನತಿನಲ್ಲಿ ಇಡಲಾಗಿದೆ.