ಮೈಸೂರು: ಮೈಸೂರಿನ ಸೈನಿಕ ಅಕಾಡೆಮಿ ವತಿಯಿಂದ ಕ್ರಾಂತಿ ವೀರ ಭಗತ್ ಸಿಂಗ್ ಹುಟ್ಟುಹಬ್ಬ ಆಚರಿಸಲಾಯಿತು.
ಮೈಸೂರಿನ ಬೆಳವಾಡಿ ಗ್ರಾಮ, ಸಿಲಿಕಾನ್ ವ್ಯಾಲಿ ಬಡಾವಣೆಯಲ್ಲಿರುವ ಮೈಸೂರಿನ ಸೈನಿಕ ಅಕಾಡೆಮಿಯು ಕ್ರಾಂತಿ ವೀರ ಭಗತ್ ಸಿಂಗ್ ಅವರ 117 ನೇ ಜನ್ಮದಿನವನ್ನು ವಿಶೇಷವಾಗಿ ಆಚರಿಸಿದರು.

ಸೈನಿಕ ಅಕಾಡೆಮಿ ಸಂಸ್ಥಾಪಕರು, ಸಹ ಸಂಸ್ಥಾಪಕರು, ಸಿಲಿಕಾನ್ ವ್ಯಾಲಿ ಬಡಾವಣೆಯ ಸದಸ್ಯರು, ಉಪನ್ಯಾಸಕರು, ಅಭ್ಯರ್ಥಿಗಳು ಸೇರಿ ಮಾಜಿ ಕಮಾಂಡೋ ಶ್ರೀಧರ್ ಸಿ ಎಂ ನೇತೃತ್ವದಲ್ಲಿ ಭಗತ್ ಸಿಂಗ್ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ, ಪೂಜೆ ನೆರವೇರಿಸಿ, ಮೌನಾಚರಣೆ ಮಾಡಿ ಮೇಣದಬತ್ತಿ ಬೆಳಗಿ ಪ್ರಾರ್ಥನೆ ಮಾಡಿದರು.
ನಂತರ ಎಲ್ಲರಿಗೂ ಸಿಹಿ ಹಂಚಲಾಯಿತು.