ಮೈಸೂರು: ಮೈಸೂರಿನಲ್ಲಿ ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ವತಿಯಿಂದ ಸಾಹಸಸಿಂಹ ಭಾರತ ರತ್ನ ಡಾಕ್ಟರ್ ವಿಷ್ಣುವರ್ಧನ್ ರವರ
75ನೇ ವರ್ಷದ ಹುಟ್ಟುಹಬ್ಬ ಆಚರಿಸಲಾಯಿತು.
ನಗರದ ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿರುವ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಉದ್ಯಾನವನದಲ್ಲಿ ಕರ್ನಾಟಕ ರತ್ನ ಡಾಕ್ಟರ್ ವಿಷ್ಣುವರ್ಧನ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ನಂತರ ಕೇಕ್ ಕತ್ತರಿಸಿ ಅಭಿಮಾನಿಗಳಿಗೆ ಹಂಚಲಾಯಿತು.
ಈ ವೇಳೆ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮಡ್ಡಿಕೆರೆ ಗೋಪಾಲ್ ಅವರು,ಆ ಮೇರು ನಟನ ಆದರ್ಶಮಯ ಜೀವನ ಮಾದರಿ, ಸದಾಕಾಲ ಸ್ಥಿತ ಪ್ರಜ್ಞೆ ಹೊಂದಿದ್ದ ವಿಷ್ಣು ಅವರು, ಸಮಾಜವನ್ನು ಆರೋಗ್ಯಕರ ಚಿಂತನೆಗೆ ಹಚ್ಚುವಂತಹ ಸಿನಿಮಾಗಳಲ್ಲಿ ನಟಿಸುತ್ತಿದ್ದರು ಎಂದು ಸ್ಮರಿಸಿದರು.
ಕನ್ನಡದ ಬಗೆಗೆ ವಿಶೇಷ ಪ್ರೀತಿ ಹೊಂದಿದ್ದರು. ಕಳಂಕರಹಿತರಾಗಿ ಬಾಳಿದ ವಿಷ್ಣು ಅವರು ಯುವ ಸಮುದಾಯದ ಬಗ್ಗೆ ಹೆಚ್ಚು ಒಲವು ಬೆಳೆಸಿಕೊಂಡಿದ್ದರು ಎಂದು ಹೇಳಿದರು.
ಡಾಕ್ಟರ್ ವಿಷ್ಣುವರ್ಧನ್ ಅಭಿಮಾನಿಗಳ ಒಕ್ಕೂಟದ ಅಧ್ಯಕ್ಷ ಎಂ ಡಿ ಪಾರ್ಥಸಾರಥಿ
ಮಾತನಾಡಿ ಗುರುವಾರ ಉದ್ಬೂರು ಗೇಟ್ ಬಳಿಯ ಸಾಹಸಸಿಂಹ ಡಾಕ್ಟರ್ ವಿಷ್ಣುವರ್ಧನ್ ಸ್ಮಾರಕದಲ್ಲಿ ಹಲವಾರು ಸೇವಾ ಕಾರ್ಯಗಳನ್ನು ಅಭಿಮಾನಿಗಳು ಹಮ್ಮಿಕೊಂಡಿದ್ದು ಹೆಚ್ಚಿನ ಅಭಿಮಾನಿಗಳು ಈ ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಮಡ್ಡಿಕೆರೆ ಗೋಪಾಲ್, ಸಮಾಜ ಸೇವಕರಾದ ಕೆ ರಘುರಾಮ್ ವಾಜಪಾಯಿ, ಕರ್ನಾಟಕ ರಾಜ್ಯ ಬ್ರಾಹ್ಮಣ ಅಭಿವೃದ್ಧಿ ಪರಿಷತ್ ನ ಕಡಕೋಳ ಜಗದೀಶ್, ಕರುಣಾಮಯಿ ವಿಷ್ಣು ಅಭಿಮಾನಿ ಬಳಗದ ಅಧ್ಯಕ್ಷರಾದ ಎಸ್.ಎನ್ ರಾಜೇಶ್, ಟಿ ಎಸ್ ಅರುಣ್, ಉದ್ಯಮಿ ಕುಮಾರ್ ಆರಾಧ್ಯ, ಬಸವರಾಜ್, ಲಕ್ಷ್ಮಣ್, ಮಹಾದೇವ್, ಪಾನಿಪುರಿ ಸಂತೋಷ, ಕೃಷ್ಣಮೂರ್ತಿ, ಮಂಜು, ಮುಬಾರಕ್, ಈರುಳ್ಳಿ ಸುರೇಶ್, ಶಿವಕುಮಾರ್, ಪ್ರಸಾದಿ,ಅಭಿ ಮತ್ತಿತರರು ಹಾಜರಿದ್ದರು.