ಬಸ್‌ ಚಾಲನೆ ಮಾಡಿದ್ದ ಶಿಕ್ಷಕ ಅಮಾನತು

Spread the love

ಚಾಮರಾಜನಗರ: ಪ್ರವಾಸದ ವೇಳೆ ಬಸ್ ಚಾಲನೆ ಮಾಡಿದ್ದು ಸಾಬೀತಾದ ಕಾರಣ ಶಿಕ್ಷಣ ಇಲಾಖೆ ವಿಚಾರಣೆ ಮಾಡಿ ಸಹಶಿಕ್ಷಕರೋಬ್ಬರನ್ನು ಅಮಾನತು ಮಾಡಿದೆ

ಜಿಲ್ಲೆಯ ಯಳಂದೂರು ತಾಲ್ಲೋಕಿನ ಗುಂಬಳ್ಳಿ ಶಾಲೆಯ
ಸಹ ಶಿಕ್ಷಕ ವೀರಭದ್ರಸ್ವಾಮಿ ಎಂಬುವರನ್ನು ಅಮಾನತು ಪಡಿಸಿ ಆದೇಶ ಹೊರಡಿಸಲಾಗಿದೆ.

ಪ್ರವಾಸದ ವೇಳೆ ಬಸ್ ಚಾಲನೆ ಮಾಡಿದ್ದ ವಿಡಿಯೊ ವೈರಲ್ ಆಗಿತ್ತು.

ಕದಂಬ ಸೇನೆಯ ಅಂಬರೀಶ್ ಎಂಬುವರು ಸಾರ್ವಜನಿಕ ಹಿತಾಸಕ್ತಿ ಮೇರೆಗೆ ಇಲಾಖೆಗೆ ದೂರು ಸಲ್ಲಿಸಿದ್ದರು.

ಇಲಾಖೆ ವಿಚಾರಣೆ ನಡೆಸಿ ಉಪನಿರ್ದೇಶಕ(ಆಡಳಿತ) ರಾಮಚಂದ್ರ ರಾಜೇ ಅರಸ್ ಅವರು ಶಿಕ್ಷಕ ವೀರಭದ್ರಸ್ವಾಮಿ ಅವರನ್ನು
ಅಮಾನತುಪಡಿಸಿ ಆದೇಶ ಹೊರಡಿಸಿದ್ದಾರೆ.