ಚಾಮರಾಜನಗರ: ಶಾಲಾ ಶಿಕ್ಷಕರೊಬ್ಬರು ಬಸ್ ಚಾಲನೆ ಮಾಡಿ ಇಲಾಖಾವಾರು ವಿಚಾರಣೆ ನಡೆಸಿ ಅಮಾನತು ಮಾಡಿದ ಬೆನ್ನಲ್ಲೇ ವಿದ್ಯಾರ್ಥಿಗಳು ಪೋಷಕರು ಶಿಕ್ಷಕರ ಪರ ಪ್ರತಿಭಟನೆ ನಡೆಸಿದ್ದಾರು.
ಇದೀಗ ಈ ಪ್ರಕರಣಕ್ಕೆ ಸಂಬಂದಿಸಿದಂತೆ ಬಸ್ ಮಾಲೀಕರ ಮೇಲೂ ಪ್ರಕರಣ ದಾಖಲಿಸುವಂತೆ ಚಾಮರಾಜನಗರ ವರಿಷ್ಟಾದಿಕಾರಿಗಳಿಗೆ ಕದಂಬಸೇನೆ ರಾಜ್ಯಾದ್ಯಕ್ಷ ಅಂಬರೀಶ್ ದೂರು ಸಲ್ಲಿಸಿಧ್ದಾರೆ.

ಯಳಂದೂರು ತಾಲ್ಲೂಕಿನ ಗುಂಬಳ್ಳಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯ ವತಿಯಿಂದ ಕೈಗೊಂಡಿದ್ದ ಶಾಲಾ ಶೈಕ್ಷಣಿಕ ಪ್ರವಾಸಕ್ಕೆ ಖಾಸಗಿ ವಾಹನ ಸಂಖ್ಯೆ:ಕೆ.ಎಲ್.40.ಬಿ-9090 ಪಡೆದು ಶೈಕ್ಷಣಿಕ ಪ್ರವಾಸ ಕೈಗೊಂಡಿರುವುದು ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಉತ್ತಮ ಕಾಯಕ.
ಆದರೆ ಪ್ರವಾಸದಲ್ಲಿರುವಾಗ ಶಾಲೆಯ ಸಹಶಿಕ್ಷಕರಾದ ಶ್ರೀ ವೀರಭದ್ರಸ್ವಾಮಿ ಎಂಬುವವರು ಏಕಾಏಕಿ ಬಸ್ಸನ್ನು ಸ್ವತಃ ತಾವೇ ಚಾಲನೆ ಮಾಡಿರುವುದು ಸತಿಯಲ್ಲ.
ಶಿಕ್ಷಕ ಬಸ್ ಚಾಲನೆ ಮಾಡಿದ ದೃಶ್ಯವನ್ನು ಅವರ ವಿದ್ಯಾರ್ಥಿಗಳು ಹಾಗೂ ಸಹೋದ್ಯೋಗಿಗಳು ಸೆರೆ ಹಿಡಿದು ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ.
ತಾವು ಒಬ್ಬ ಶಿಕ್ಷಕನಾಗಿ ಕನಿಷ್ಠ ಕಾನೂನು ತಿಳುವಳಿಕೆಗೆ ಒತ್ತು ನೀಡದೇ, ಮೇಲಾಧಿಕಾರಿಗಳ ಗಮನಕ್ಕೂ ತಾರದೇ, ಏಕಾಏಕಿ ಬಸ್ ಚಾಲನೆ ಮಾಡಿರುವುದಲ್ಲದೇ, ಬಸ್ಸಿನಲ್ಲಿದ್ದ ಮಕ್ಕಳು ಹಾಗೂ ಅವರ ಪೋಷಕರು ಆತಂಕದ ಬಗ್ಗೆ ಕನಿಷ್ಠ ಕಾಳಜಿ ವಹಿಸಿಲ್ಲ, ಜೊತೆಗೆ ಮಕ್ಕಳ ಪ್ರಾಣದ ಜೊತೆಗೆ ಚೆಲ್ಲಾಟವಾಡಿದ್ದಾರೆ, ಅಧಿಕೃತ ಭಾರಿ ವಾಹನ ಚಾಲನಾ ಪರವಾನಗಿ ಮತ್ತು ಬ್ಯಾಡ್ಜ್ ಇಲ್ಲದಿದ್ದರೂ ಭಾರಿ ವಾಹನ ಚಲಾಯಿಸಿರುವುದು ಮೋಟಾರ್ ವಾಹನ ಕಾಯಿದೆ ಪ್ರಕಾರ ಅಪರಾಧವಾಗಿರುತ್ತದೆ ಎಂದು ಅಂಬರೀಶ್ ಹೇಳಿದ್ದಾರೆ.
ಮಕ್ಕಳಿಗೆ ನಾಗರೀಕತೆ ಮತ್ತು ಕಾನೂನಿನ ಬಗ್ಗೆ ಅರಿವು ಮೂಡಿಸುವ ಸ್ಥಾನದಲ್ಲಿದ್ದುಕೊಂಡು ತಾವೇ ತಮ್ಮ ಶಿಷ್ಯಂದಿರ ಮುಂದೆಯೇ ಈ ರೀತಿ ಕಾನೂನು ಬಾಹಿರ ನಡೆ ಅನುಸರಿಸಿರುವುದು ಮುಂದೆ ಅವರ ಶಿಷ್ಯರಲ್ಲೂ ಇದೇ ರೀತಿಯ ವರ್ತನೆ ಬೆಳೆಯಲು ಪ್ರಚೋದನೆ ನೀಡಿದಂತಾಗಿದೆ ಎಂದು ದೂರಿದ್ದಾರೆ.
ಮಕ್ಕಳ ರಕ್ಷಣೆ, ಪ್ರಾಣಾಪಾಯದ ಬಗ್ಗೆ ನಿಗಾ ಇಡಬೇಕಾದ ಶಿಕ್ಷಕರೇ, ಮಕ್ಕಳ ಪ್ರಾಣವನ್ನು ಒತ್ತೆ ಇಟ್ಟು ವಾಹನ ಚಲಾಯಿಸಿರುವುದು ಕಾನೂನು ರೀತಿ ಅಪರಾಧ.
ಹಾಗಾಗಿ ವಾಹನ ಚಾಲಕ ತನ್ನ ಬೇಜವಾಬ್ದಾರಿತನದಿಂದ ಶಿಕ್ಷಕರಿಗೆ ವಾಹನ ಚಾಲನೆ ಮಾಡಲು ಕೊಟ್ಟಿರುವುದು ಕೂಡಾ ಅಪರಾಧವೇ ಆಗಿದೆ.
ಕೂಡಲೇ ಮೇಲ್ಕಾಣಿಸಿದ ವ್ಯಕ್ತಿಗಳ ಮೇಲೆ ಕಾನೂನು ರೀತ್ಯ ಕಠಿಣ ಕ್ರಮ ತೆಗೆದುಕೊಂಡು, ಮುಂದೆ ಯಾವ ವ್ಯಕ್ತಿಯು ಈ ತರಹದ ಅಪಾಯಕಾರಿ ಕೆಲಸಕ್ಕೆ ಕೈ ಹಾಕದಂತೆ ಕಾನೂನು ಕ್ರಮ ಜರುಗಿಸಬೇಕೆಂದು ಅಂಬರೀಶ್ ಅವರು ಮನವಿ ಮಾಡಿದ್ದಾರೆ
ಬೇರೆ ಬೇರೆ ಕಡೆಗಳಲ್ಲಿ ಶಿಕ್ಷಕರ ಮತ್ತು ಸಿಬ್ಬಂದಿಗಳ ಬೇಜವಾಬ್ದಾರಿತನದಿಂದ ಮಕ್ಕಳ ಪ್ರಾಣಕ್ಕೆ ಕುತ್ತು ಬಂದಿರುವ ಉದಾಹರಣೆಗಳು ಕಂಡುಬಂದಿರುವುದರಿಂದ ಶಿಕ್ಷಕ, ಚಾಲಕ ಮತ್ತು ವಾಹನದ ಮಾಲೀಕರ ಮೇಲೆ ದೂರು ದಾಖಲಿಸಿಕೊಂಡು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಕದಂಬಸೇನೆ ರಾಜ್ಯಾದ್ಯಕ್ಷ ಅಂಬರೀಶ್ ಕೋರಿದ್ದಾರೆ.