ಜಾತಿ ಗಣತಿ ವರದಿ ಪರಿಷ್ಕರಣೆ ಮಾಡದಿದ್ದರೆಬೀದಿಗಿಳಿದು ಬ್ರಾಹ್ಮಣರ ಹೋರಾಟ: ವಿಕ್ರಮ ಅಯ್ಯಂಗಾರ್

Spread the love

ಮೈಸೂರು: ರಾಜ್ಯದಲ್ಲಿ ಬ್ರಾಹ್ಮಣ ಸಮಾಜದಲ್ಲಿನ ಒಳಪಂಗಡಗಳನ್ನು ಬೇರ್ಪಡಿಸಿ ಜಾತಿ ಗಣತಿ ಮಾಡಲಾಗಿದೆ
ಇದು ಅನ್ಯಾಯ ಎಂದು ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ತಿಳಿಸಿದ್ದಾರೆ,

ಹೀಗಾಗಿ ಬ್ರಾಹ್ಮಣರು ಈ ಜಾತಿಗಣತಿಯನ್ನು ಒಪ್ಪುವುದಿಲ್ಲ ಎಂದು ಮಾಧ್ಯಮ ಹೇಳಿಕೆಯಲ್ಲಿ ವಿಕ್ರಂ ಅಯ್ಯಂಗಾರ್ ಕಡಕ್ಕಾಗಿ ಹೇಳಿದ್ದಾರೆ.

ರಾಜ್ಯದಲ್ಲಿ ಬ್ರಾಹ್ಮಣ ಸಮಾಜದ ಜನಸಂಖ್ಯೆ ಕಡಿಮೆ ಇದೆ. ಆದರೆ ಅದರಲ್ಲಿಯೇ ಒಳಪಂಗಡಗಳನ್ನು ವಿಂಗಡಿಸಿದ್ದು ಯಾವ ನ್ಯಾಯ ಎಂದು ಪ್ರಶ್ನಿಸಿದ್ದಾರೆ.

ಸಮಾಜದ ಎಲ್ಲಾ ಜನಾಂಗದಲ್ಲೂ ಒಳ ಪಂಗಡಗಳಿವೆ. ಅದನ್ನು ಬಿಟ್ಟು ಕೆಲವು ಸಮಾಜಗಳಲ್ಲಿ ಮಾತ್ರ ಒಳ ಪಂಗಡಗಳನ್ನು ತೋರಿಸಿದ್ದಾರೆ. ಈ ಜಾತಿಗಣತಿಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಜಾತಿ ಗಣತಿ ವರದಿ ಪರಿಷ್ಕರಣೆ ಮಾಡದಿದ್ದರೆ ಬ್ರಾಹ್ಮಣ ಸಮುದಾಯದವರು ಬೀದಿಗಿಳಿದು ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

ರಾಜ್ಯದಲ್ಲಿ ಬ್ರಾಹ್ಮಣರ ಸಂಖ್ಯೆಯನ್ನು 15,64,741 ಜಾತಿಗಣತಿಯಲ್ಲಿ ತೋರಿಸಲಾಗಿದೆ. ಇದರಲ್ಲಿಯೇ ಹವ್ಯಕ ಬ್ರಾಹ್ಮಣರು 85,595 ಮತ್ತು ವೈಷ್ಣವ ಬ್ರಾಹ್ಮಣರು 16,286 ಎಂದು ಬೇರ್ಪಡಿಸಲಾಗಿದೆ.

ಮೈಸೂರು ಜಿಲ್ಲೆಯಲ್ಲಿಯೇ 1.50 ಲಕ್ಷಕ್ಕಿಂತ ಅಧಿಕ ಬ್ರಾಹ್ಮಣರಿದ್ದಾರೆ. ಹಾಗಿದ್ದರೆ ರಾಜ್ಯದಲ್ಲಿ 15 ಲಕ್ಷ ಮಾತ್ರ ಬ್ರಾಹ್ಮಣರು ಇದ್ದಾರೆಯೇ ಎಂದು ವಿಕ್ರಂ ಅಯ್ಯಂಗಾರ್ ಪ್ರಶ್ನಿಸಿದ್ದಾರೆ.