ಮೈಸೂರು: 8ನೇ ಶತಮಾನದಲ್ಲಿ ಸನಾತನ ಧರ್ಮ ಉನ್ನತ ಸ್ತರದಲ್ಲಿತ್ತು, ಇದನ್ನು ಪುನರುತ್ಥಾನಗೊಳಿಸಿದ ಕೀರ್ತಿ ಆದಿ ಶಂಕರಾಚಾರ್ಯರಿಗೆ ಸಲ್ಲುತ್ತದೆ ಎಂದು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್ ಹೇಳಿದರು.
ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ವೀರ ಯೋಧರ ಹೆಸರಿನಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಆದಿ ಜಗದ್ಗುರು ಶಂಕರಾಚಾರ್ಯರ ಜಯಂತಿ ಅಂಗವಾಗಿ ಶೃಂಗೇರಿಯ ಶಾರದಾಂಬ ದೇವಸ್ಥಾನದ ಸ್ವಚ್ಛತಾ ಸಿಬ್ಬಂದಿಗಳಿಗೆ ಸೀರೆ ವಿತರಿಸಿ ಮಾತನಾಡಿದ ಅವರು,ಸನಾತನ ಧರ್ಮಕ್ಕೆ ಶಂಕರಾಚಾರ್ಯರ ಕೊಡುಗೆ ಅಪಾರ ಎಂದು ಬಣ್ಣಿಸಿದರು.

8ನೇ ವಯಸ್ಸಿನಲ್ಲಿ ವೇದ, ಉಪನಿಷತ್ತುಗಳ ಕಂಠಪಾಠದಿಂದ ಅದ್ವೈತ ಸಿದ್ದಾಂತವನ್ನು ಪ್ರತಿಪಾದಿಸಿ ಆಧ್ಯಾತ್ಮಿಕ ಲೋಕಕ್ಕೆ ಬಹುದೊಡ್ಡ ಕೊಡುಗೆ ನೀಡಿದವರು. ಅದ್ವೈತ ಸಿದ್ಧಾಂತದ ಮಹಾವಾಕ್ಯಗಳಾದ ಅಯಮಾತ್ಮ ಬ್ರಹ್ಮ, ಪ್ರಜ್ಞಾನಂ ಬ್ರಹ್ಮ, ಅಹಂ ಬ್ರಹ್ಮಾಸ್ಮಿ, ತತ್ವಮಸಿ ವಾಕ್ಯದ ವಿಶ್ಲೇಷಣೆ ನೀಡಿ ಮನುಕುಲವನ್ನು ಉದ್ದಾರಗೊಳಿಸಿದರು ಎಂದು ವಿಕ್ರಮ್ ಅಯ್ಯಂಗಾರ್ ತಿಳಿಸಿದರು.
ಈ ಸಂದರ್ಭದಲ್ಲಿ ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ವಿನಯ್ ಕಣಗಾಲ್,ಶಿಕ್ಷಣ ತಜ್ಞರಾದ ದೀಪ,ಅನುಸೂಯ,ಸುಗುಣಾವತಿ, ಶಾರದಾ ಮತ್ತಿತರರು ಹಾಜರಿದ್ದರು.