ಮೈಸೂರು: ಮೈಸೂರು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಪಿಯುಸಿಯಲ್ಲಿ ಮೈಸೂರು ಜಿಲ್ಲಾ ಟಾಪರ್ ಸಂಗೀತ ಮತ್ತು ಸ್ಪೂರ್ತಿ ಅವಳಿ ಸಹೋದರಿಯರಿಗೆ ಸನ್ಮಾನಿಸಿ ಅಭಿನಂದಿಸಲಾಯಿತು.
ಮೈಸೂರಿನ ಅಗ್ರಹಾರದ ನಿವಾಸಿಗಳಾದ ಸೌಂದರ್ಯ ವರ್ಧನ್ ಅವರ ಅವಳಿ ಪುತ್ರಿಯರಾದ ಸಂಗೀತ ಮತ್ತು ಸ್ಪೂರ್ತಿ ಅವರಿಗೆ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ವತಿಯಿಂದ ಅಭಿನಂದಿಸಲಾಯಿತು.
ವಿಶೇಷವಾಗಿ ಈ ಇಬ್ಬರು ಸಹೋದರಿಯರಲ್ಲಿ ಸಂಗೀತ 594 ಅಂಕ ಗಳಿಸಿ,ಮೈಸೂರು ಜಿಲ್ಲೆಗೆ ಪ್ರಥಮಸ್ಥಾನ ಪಡೆದಿದ್ದಾರೆ ಮತ್ತು ಸ್ಪೂರ್ತಿ 587 ಅಂಕಗಳನ್ನು ಪಡೆಯುವ ಮೂಲಕ ಮೈಸೂರಿನ ಹಿರಿಮೆಯನ್ನು ಹೆಚ್ಚಿಸಿದ್ದಾರೆ.
ಇವರಿಬ್ಬರೂ ಮೈಸೂರಿನ ಬಿಜಿಎಸ್ ಪದವಿಪೂರ್ವ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.
ಈ ಸಂದರ್ಭದಲ್ಲಿ ಮೈಸೂರು ನಗರ ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ ಪ್ರಕಾಶ್ ,ಹೊಯ್ಸಳ ಕರ್ನಾಟಕ ಸಂಘದ ಅಧ್ಯಕ್ಷರಾದ ಕೆ.ಆರ್.ಸತ್ಯನಾರಾಯಣ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇಧಿಕೆ ಸಂಘಟನಾ ಕಾರ್ಯದರ್ಶಿ ಜಗದೀಶ್ ಕಡಕೊಳ, ಜಯಸಿಂಹ, ಚಕ್ರಪಾಣಿ,ಸುಚೀಂದ್ರ ಹಾಗು ಪೋಷಕರಾದ ಸುಮಾ ಮತ್ತು ಸೌಂದರ್ಯ ವರ್ಧನ್ ಅವರು ಹಾಜರಿದ್ದರು.