ಬ್ರಾಹ್ಮಣ ಒಳಪಂಗಡಗಳು ಒಗ್ಗೂಡಲಿ-ನವೀನ್ ಕುಮಾರ್

Spread the love

ಮೈಸೂರು: ಸಮಾಜದಲ್ಲಿ ಬ್ರಾಹ್ಮಣ ಒಳಪಂಗಡಗಳು ಒಗ್ಗೂಡಬೇಕು,ತ್ರಿಮತಸ್ಥ ಬ್ರಾಹ್ಮಣರು‌‌ ಒಟ್ಟಾಗಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಬೇಕು ಎಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಉಪಾಧ್ಯಕ್ಷರಾದ ಎನ್.ಎಂ ನವೀನ್ ಕುಮಾರ್ ಕರೆ ನೀಡಿದರು

ಮೈಸೂರು ಬ್ರಾಹ್ಮಣ ಯುವ ವೇದಿಕೆ ವತಿಯಿಂದ ಒಂಟಿಕೊಪ್ಪಲು ಕಾಳಿದಾಸ ರಸ್ತೆಯಲ್ಲಿರುವ ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿ ದೇವಸ್ಥಾನದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ನೂತನ ಸದಸ್ಯರಿಗೆ ಗುರುತಿನ ಚೀಟಿ ವಿತರಣೆ ಮತ್ತು ವಿಪ್ರರ ಸಂಘಟನಾ ಸಭೆಯನ್ನು ಉದ್ಘಾಟಿಸಿ,ನಂತರ ನೂತನ ಸದ್ಯಸ್ವತ ಗುರುತಿನ ಚೀಟಿಯನ್ನು ವಿತರಿಸಿ ಅವರು ಮಾತನಾಡಿದರು.

ವಿಪ್ರರು ಸಂಘಟನಾತ್ಮಕವಾಗಿ ಮುಂದಾದರೆ ಬ್ರಾಹ್ಮಣ ಸಮುದಾಯ ಬೇರು ಮಟ್ಟದಲ್ಲಿ ಬಲಿಷ್ಠಗೊಳಿಸಬಹುದು, ದೇಶದ ಉಳಿದೆಲ್ಲ
ಸಮುದಾಯಗಳಿಗೆ ಮಾದರಿಯಾಗಿ ನಮ್ಮ ಮೂಲ ಸಂಸ್ಕಾರ, ಸಂಸ್ಕೃತಿಯನ್ನು ಉಜ್ವಲಗೊಳಿಸುವಲ್ಲಿ ಮುಂದಾಗಬೇಕು ಎಂದು ಸಲಹೆ‌ ನೀಡಿದರು.

ನಗರ ಪಾಲಿಕೆ ಮಾಜಿ ಸದಸ್ಯ ಮಾ.ವಿ. ರಾಂಪ್ರಸಾದ್ ಅವರು ಮಾತನಾಡಿ ಆರ್ಥಿಕವಾಗಿ ಹಿಂದುಳಿದ ಬ್ರಾಹ್ಮಣರು ಸರ್ಕಾರದ ಸವಲತ್ತುಗಳನ್ನ ಬಳಸಿಕೊಳ್ಳಬೇಕಾದರೆ ಸಂಘಟನಾತ್ಮಕವಾಗಿ ಸಂಘ ಸಂಸ್ಥೆಗಳ ಸಂಪರ್ಕದಲ್ಲಿರಬೇಕು, ಶಿಕ್ಷಣ ಉದ್ಯೋಗ ವೈದ್ಯಕೀಯ ಸಾಂಸ್ಕೃತಿಕ ಸೇರಿದಂತೆ ಬ್ರಾಹ್ಮಣ ಅಭಿವೃದ್ಧಿ ಪ್ರಾಧಿಕಾರ ಯೋಜನೆಗಳಿಗೆ ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದರು.

ಸಭಾದ ಅನಿಲ್ ಕುಮಾರ್, ಸಂಘಟನಾ ಕಾರ್ಯದರ್ಶಿ ಡಾ. ಲಕ್ಷ್ಮೀದೇವಿ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಅಧ್ಯಕ್ಷರಾದ ಎಚ್ ಎನ್ ಶ್ರೀಧರ್ ಮೂರ್ತಿ, ಸೌಭಾಗ್ಯ ಮೂರ್ತಿ,ಪುಷ್ಪ ಅಯ್ಯಂಗಾರ್,ಯೋಗ ನರಸಿಂಹ (ಮುರಳಿ), ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ ಪ್ರಧಾನ ಕಾರ್ಯದರ್ಶಿ ವಿಕ್ರಂ ಅಯ್ಯಂಗಾರ್, ಸಂಘಟನಾ‌ ಕಾರ್ಯದರ್ಶಿ‌ ಅಜಯ್ ಶಾಸ್ತ್ರಿ, ಕೆ ಎಂ ನಿಶಾಂತ್,ಸುಚೇಂದ್ರ, ಶಾಂತಮ್ಮ,ವನಜ, ಮಹೇಶ್ ಕಾಮತ್ ಮತ್ತಿತರರು ಭಾಗವಹಿಸಿದ್ದರು.