ಮೈಸೂರು: ಬೆಂಗಳೂರಿನ ಅರಮನೆ ಆವರಣದಲ್ಲಿ ಇದೇ 18,19 ರಂದು ನಡೆಯಲಿರುವ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾ ಸಮ್ಮೇಳನ ಐತಿಹಾಸಿಕ ಸಮ್ಮೇಳನ ಎಂದು ಬಿ. ಆರ್. ನಟರಾಜ್ ಜೊಯಿಸ್ ತಿಳಿಸಿದರು.
ಮೈಸೂರು ಜಿಲ್ಲಾ ಪತ್ರಕರ್ತರ ಭವನದಲ್ಲಿ ಇಂದು ಸುದ್ದಿಗೋಷ್ಠಿಯಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಸಮ್ಮೇಳನ ಸಮಿತಿ ಉಪಾಧ್ಯಕ್ಷರೂ ಆದ ಬಿ. ಆರ್. ನಟರಾಜ್ ಜೋಯಿಸ್ ಮಾತನಾಡಿದರು.
ಇದೊಂದು ಐತಿಹಾಸಿಕ ಸಮ್ಮೇಳನ, ದೇಶದಲ್ಲಿ ಬ್ರಾಹ್ಮಣರ ಪ್ರಾಮುಖ್ಯತೆ ಮತ್ತು ಬ್ರಾಹ್ಮಣರ ಶಕ್ತಿಯ ವಿರಾಟ್ ಸ್ವರೂಪ ಬ್ರಾಹ್ಮಣ ರ ಇತಿಹಾಸದ ಪುಟ ಪುಟದಲ್ಲು ಈ ಸನಾತನ ಧರ್ಮದ ಬ್ರಾಹ್ಮಣ ಬಲಪ್ರದರ್ಶನವಾಗಲಿದೆ, ಬ್ರಾಹ್ಮಣ ಹಗುರನಲ್ಲ ಬ್ರಾಹ್ಮಣ ಬಲಾಡ್ಯ ಎಂಬುದನ್ನು ತೋರಿಸಬೇಕಿದೆ,ಬ್ರಹ್ಮ ಬಲಂ.. ತೇಜೊಬಲಂ ಎಂಬುದನ್ನು ಜಗತ್ತಿಗೆ ತೋರಿಸಲು ಮನೆ ಮಂದಿ ಜ.18.19.ರಂದು ಸಮ್ಮೇಳನ ದಲ್ಲಿ ಬಾಗವಹಿಸಿ ನಮ್ಮಹಿರಿಮೆಯನ್ನು ಅನಾವರಣ ಮಾಡೊಣ ಎಂದು ಜೋಯಿಸ್ ಕರೆ ನೀಡಿದರು.

ಇದೇ ವೇಳೆ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ 50ನೆ ವರ್ಷದ ಸುವರ್ಣ ಸಂಬ್ರಮದ ಮಹಾ ಸಮ್ಮೇಳನ ವಿಶ್ವಾಮಿತ್ರದ ಪೊಸ್ಟರ್ ಬಿಡುಗಡೆ ಮಾಡಲಾಯಿತು.
ಸುದ್ದಿಗೋಷ್ಠಿ ಯಲ್ಲಿ ಬ್ರಾಹ್ಮಣ ಹಿರಿಯ ಮುಖಂಡರಾದ ರಘುರಾಂ ವಾಜಪೇಯಿ, ಲತಾಮೋಹನ್, ಶ್ರೀರಂಗಸ್ವಾಮಿ ಉಪಸ್ಥಿತರಿದ್ದರು.