ಹನೂರು: ಆಟವಾಡುತ್ತಾ ಬೆಳೆಯಬೇಕಾದ ಮಗು ಈಗ ಆಸ್ಪತ್ರೆಗೆ ಅಲೆಯುವಂತಾಗಿದೆ,ಎಳವೆಯಲ್ಲೇ ಈ ಮಗುವಿಗೆ ಮಾರಣಾಂತಿಕ ಕಾಯಿಲೆ ಕಿತ್ತುತಿನ್ನುತ್ತಿದೆ.
ಹನೂರು ತಾಲ್ಲೂಕಿನ ಅಜ್ಜಿಪುರ ಗ್ರಾಪಂ ವ್ಯಾಪ್ತಿಯ ದೊಮ್ಮನಗದ್ದೆ ಗ್ರಾಮದ ಮುರುಗ ಮತ್ತು ಪ್ರಿಯಾಂಕ ದಂಪತಿಯ ಪುತ್ರ ಪ್ರಜ್ವಲ್ ಬ್ಲಡ್ ಕ್ಯಾನ್ಸರ್ ನಿಂದ ಬಳಲುತ್ತಿದ್ದು ಪೋಷಕರು ದುಖಿಃಸುತ್ತಿದ್ದಾರೆ.
ಈಗಿನ್ನೂ 1ನೇ ತರಗತಿಯಲ್ಲಿ ಪ್ರಜ್ವಲ್ ವ್ಯಾಸಂಗ ಮಾಡುತ್ತಿದ್ದು ಮೊಳಕೆಯಲ್ಲೆ ಅವನ ಬಾಳು ಕಮರಿಹೋಗುವಂತಾಗಿದೆ.
ಈಗಾಗಲೆ ಮನೆಯಲ್ಲಿದ್ದ ಚಿನ್ನ ಮಾರಿ ಹಾಗೂ ಸಂಬಂಧಿಕರಿಂದ ಸಾಲ ತಂದು ಚಿಕಿತ್ಸೆ ಕೊಡಿಸಲಾಗುತ್ತಿದೆ,ಆದರೆ ಪೋಷಕರು ಕಡು ಬಡವರಾಗಿರುವುದರಿಂದ ದಾನಿ ಗಳು ಸಹಕಾರ ನೀಡಬೇಕೆಂದು ಮನವಿ ಮಾಡಿದ್ದಾರೆ.
ಈಗಾಗಲೇ ಬಾಲಕನಿಗೆ ಚಿಕಿತ್ಸೆ ಪ್ರಾರಂಭಿಸಲಾಗಿದೆ,ಆದರೆ ಇನ್ನೂ ಹೆಚ್ಚಿನ ಚಿಕಿತ್ಸೆಗೆ ಹಣದ ಅವಶ್ಯಕತೆ ಇರುವುದರಿಂದ ದಾನಿಗಳು ಸಹಾಯ ಮಾಡಬೇಕೆಂದು ಪೊಷಕರು ಕೋರಿದ್ದಾರೆ.
ಮುರುಗ ಮತ್ತು ಪ್ರಿಯಾಂಕ ಅವರಿಗೆ ಇಬ್ಬರು ಮಕ್ಕಳಿದ್ದು ಪ್ರಜ್ವಲ್ ಮೊದಲನೆಯ ಮಗ.
ಈ ಬಗ್ಗೆ ಎಪ್ರಜ್ವಲ್ ತಂದೆ ಮುರುಗ ಮಾತನಾಡಿ, ನಾವು ಕಡು ಬಡವರಾಗಿದ್ದು ಕೂಲಿ ಮಾಡಿ ಜೀವನ ಸಾಗಿಸುತ್ತಿದ್ದೇವೆ. ಇಬ್ಬರು ಮಕ್ಕಳಲ್ಲಿ ಹಿರಿಯ ಮಗ ಪ್ರಜ್ವಲ್‌ಗೆ ಕ್ಯಾನ್ಸರ್ ಕಾಣಿಸಿಕೊಂಡಿದೆ ಏನು ಮಾಡುವುದೆಂದು ದಿಕ್ಕು ತೋಚದಂತಾಗಿದೆ ಎಂದು ಅಳಲು ತೋಡಿಕೊಂಡಿದ್ದಾರೆ.
ಪ್ರಜ್ವಲ್ ಹಾಗೂ ತಾಯಿ ಪ್ರಿಯಾಂಕ ಅವರ ಹೆಸರಿನಲ್ಲಿ ರಾಮಾಪುರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿ ಜಂಟಿ ಖಾತೆ ತೆರೆಯಲಾಗಿದ್ದು, ಖಾತೆ ಸಂಖ್ಯೆ 44308824080 ಇದಕ್ಕೆ ಅಥವಾ ಫೋನ್ ಪೇ ಸಂಖ್ಯೆ 8150858595ಕ್ಕೆ ಸಹಾಯ ಮಾಡುವಂತೆ ಕುಟುಂಬಸ್ಥರು ಮನವಿ ಮಾಡಿದ್ದಾರೆ.
