ಹಬ್ಬ,ಹರಿದಿನಗಳಿಗೆ ವಿಶೇಷ ಸ್ಥಾನ: ಟಿ. ಎಸ್.ಶ್ರೀವತ್ಸ

Spread the love

ಮೈಸೂರು: ಹಬ್ಬಹರಿದಿನಗಳು ತನ್ನದೆಯಾದ ಹಿನ್ನೆಲೆ,ಪರಂಪರೆ, ವಿಶೇಷ ಸ್ಥಾನಮಾನ ಹೊಂದಿವೆ ಎಂದು ಶಾಸಕ ಟಿ.ಎಸ್.ಶ್ರೀವತ್ಸ ತಿಳಿಸಿದರು.

ದಸರಾ ಹಾಗೂ ನವರಾತ್ರಿ ಹಬ್ಬ ಬಹುದೊಡ್ಡ ಸಾಂಸ್ಕೃತಿಕ ಸಂಭ್ರಮವಾಗಿದೆ,ಮೈಸೂರಿನಲ್ಲಿ
ಈ ಹಬ್ಬದಲ್ಲಿ ದಸರಾ ಗೊಂಬೆಗಳನ್ನು ಕೊರಿಸುವ ಮೂಲಕ ವಿಶೇಷವಾಗಿ ಆಚರಿಸುವುದು ಸಂತಸ ತಂದಿದೆ ಎಂದು ಹೇಳಿದರು.

ನಗರದ ಕುವೆಂಪು ನಗರದಲ್ಲಿರುವ ಶ್ರೀ ಮಾತಾ ವಿದ್ಯಾಸಂಸ್ಥೆಯಲ್ಲಿ ಪದ್ಮಶ್ರೀ ಹಾಗೂ ರವಿಶಂಕರ್ ಅವರು
ಅವರ ಶಾಲೆಯ ಬೊಂಬೆ ಮನೆಯಲ್ಲಿ ಕೂರಿಸಿರುವ ಬೊಂಬೆಗಳನ್ನು
ವೀಕ್ಷಿಸಿ ಶ್ರೀವತ್ಸ ಮಾತನಾಡಿದರು.

ಸಂಸ್ಕೃತಿ ಮತ್ತು ನಮ್ಮ ಪರಂಪರೆಯ ಉಳಿವಿಗಾಗಿ ಹೋರಾಡುವ ಸಂದರ್ಭ ಎದುರಾಗಿದೆ ಪ್ರತಿಯೊಬ್ಬರು ಅದಕ್ಕಾಗಿ ಶ್ರಮಿಸಬೇಕು.ನಮ್ಮ ಸಂಪ್ರದಾಯ ಮತ್ತು ಧಾರ್ಮಿಕತೆಯ ರಕ್ಷಣೆಗಾಗಿ ಪ್ರತಿಯೊಬ್ಬ ಹಿಂದುಗಳು ಒಗ್ಗಟ್ಟಾಗಿ ಮುಂದಿನ ಪೀಳಿಗೆಗೆ ಸಂರಕ್ಷಿಸಬೇಕು ಎಂದು ಕರೆ ನೀಡಿದರು.