ದುಶ್ಚಟಗಳಿಂದ ದೂರವಿರಿ; ದೇಹಾನದೇಗುಲದಂತೆ ನೋಡಿ:ಡಾ.ಪಿ.ಶಿವರಾಜು

Spread the love

ಮೈಸೂರು: ದುಶ್ವಟಗಳಿಂದ ದೂರ ಇದ್ದು ದೇಹವನ್ನುದೇಗುಲದಂತೆನೋಡಿ ಕೊಳ್ಳಬೇಕು ಎಂದು ಅಪರ ಜಿಲ್ಲಾಧಿಕಾರಿ ಡಾ.ಶಿವರಾಜು ಸಲಹೆ ನೀಡಿದರು.

ಮಹಾರಾಜ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಆಯೋಜಿಸಿದ್ದ ಮದ್ಯ ಮತ್ತು ಮಾದಕ ವಸ್ತುಗಳ ದುಷ್ಪರಿಣಾಮ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಅವರು ಮಾತನಾಡಿದರು.

ಜೀವನದಲ್ಲಿ ಯಾರಾದರೂ ಏಳಿಗೆ ಕಂಡಿಲ್ಲ ಎಂದರೆ ಅವರು ಯಾವುದಾದರೊಂದು ದುಶ್ಚಟಗಳಿಗೆ ಬಲಿಯಾಗಿರುತ್ತಾರೆ. ಅಂತಹವರಿಗೆ ಸಮಾಜದಲ್ಲಿ ಯಾವುದೇ ರೀತಿಯ ಗೌರವ ಸಿಗುವುದಿಲ್ಲ. ಸಮಾಜದಲ್ಲಿ ನಮಗೆ ಗೌರವ ಸಿಗಬೇಕೆಂದರೆ ಶುಭ್ರವಾಗಿ ಬದುಕಬೇಕು ಹಾಗೂ ದೇಹವನ್ನು ಶುಚಿಯಾಗಿಟ್ಟುಕೊಳ್ಳಬೇಕು ಎಂದು ತಿಳಿಸಿದರು.

ಕಾಲೇಜು ಹಂತಗಳಲ್ಲಿ ವಿದ್ಯಾರ್ಥಿಗಳು ಸಾಧನೆಯ ಕಡೆ ಹೆಚ್ಚಿನ ಗಮನ ನೀಡಬೇಕು. ದುಶ್ಚಟಗಳಿಂದ ದೂರವಿರಬೇಕು. ಟಿ.ವಿ, ಮೊಬೈಲ್ ಗಳಿಗೆ ದಾಸರಾದರೆ ಮನೋರೋಗ ತಜ್ಞರ ಸಹಾಯದಿಂದ ಹೊರಬರಬಹುದು. ಆದರೆ ಸಿಗರೇಟ್, ಗಾಂಜಾದಂತಹ ದುಶ್ಚಟಗಳು ರಕ್ತದಲ್ಲಿ ಬೆರೆತು ಹೋದರೆ ಅದರಿಂದ ಹೊರಬರಲು ಬಹಳ ಕಠಿಣ ಎಂದು ಕಿವಿಮಾತು ಹೇಳಿದರು.

ವಿದ್ಯಾರ್ಥಿಗಳು ಚಲನಚಿತ್ರದಲ್ಲಿ ಬರುವ ಹೀರೋಗಳನ್ನು ಅನುಕರಣೆ ಮಾಡದೆ ನೀವೇ ಹೀರೋಗಳಾಗಬೇಕು ಇತರರಿಗೆ ಮಾದರಿಯಾಗಬೇಕು ಎಂದು ತಿಳಿಸಿದರು.

ಪತ್ರಕರ್ತ ಸಿ.ಕೆ.ಮಹೇಂದ್ರ ಮಾತನಾಡಿ, ಇಂತಹ ಕಾರ್ಯಕ್ರಮ ಎಲ್ಲಾ ಶಾಲೆಗಳಲ್ಲಿ ನಡೆಯಬೇಕು ಎಂದು ಆಶಿಸಿದರು.

ಮನೋರೋಗ ತಜ್ಞ ಡಾ.ಬಿ.ಎನ್.ರವೀಶ್ ಮಾತನಾಡಿ, ವಿದ್ಯಾಥಿಗಳಲ್ಲಿ ತಾಳ್ಮೆ ಹಾಗೂ ಶ್ರದ್ಧೆ ಕಾಣುತ್ತಿಲ್ಲ. ಇವೆರಡು ಇಲ್ಲ ಎಂದರೆ ಉತ್ತಮ ಆರೋಗ್ಯ ಪಡೆಯಲು ಸಾಧ್ಯವಿಲ್ಲ,
ಇತ್ತೀಚಿನ ದಿನಗಳಲ್ಲಿ ಹೋಟೆಲ್ ಊಟದ ಸೇವನೆ ಹೆಚ್ಚಾಗುತ್ತಿದೆ. ಇದು ನಮ್ಮ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ಮನೆಯಲ್ಲೇ ತಯಾರಿಸಿದ ಊಟ ಸೇವಿಸಬೇಕು ಎಂದು ಸಲಹೆ ನೀಡಿದರು.

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ.ಹರೀಶ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಜಿಲ್ಲಾ ಸರ್ವೇಕ್ಷಣಾ ಅಧಿಕಾರಿ ಡಾ ನಾಗರಾಜು, ಮಹಾರಾಜ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಉದಯಶಂಕರ್‌, ತಂಬಾಕು ವಿರೋಧಿ ವೇದಿಕೆ ಸಂಚಾಲಕರಾದ ವಸಂತಕುಮಾರ್ ಮೈಸೂರು ಮಠ್, ವಾರ್ತಾ ಇಲಾಖೆಯ ವಾರ್ತಾ ಸಹಾಯಕರಾದ ರಮೇಶ್ , ಮಹಾರಾಣಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕ ಪ್ರೊ.ಗೋವಿಂದ ರಾಜು ಪಾಲ್ಗೊಂಡಿದ್ದರು.