ರಕ್ತದಾನ ಮಾಡಿ ರೋಗಿಯ ಜೀವ ಉಳಿಸಿದ ಯಾದವ್ ಹರೀಶ್

ಮೈಸೂರು: ಮೈಸೂರಿನ ಕಾಮಾಕ್ಷಿ ಆಸ್ಪತ್ರೆಯಲ್ಲಿ ರೋಗಿಯೊಬ್ಬರಿಗೆ ತುರ್ತು ಒ ಪಾಸಿಟಿವ್ ರಕ್ತದ ಅವಶ್ಯಕತೆ ಇದ್ದ ಕಾರಣ ಪಿ ಜಿ ಆರ್ ಎಸ್ ಎಸ್ ಸಂಸ್ಥಾಪಕ ರಾಜ್ಯಾಧ್ಯಕ್ಷ ಯಾದವ್ ಹರೀಶ್ ಅವರು ರಕ್ತದಾನ ಮಾಡಿ ಜೀವ ಉಳಿಸಿದ್ದಾರೆ.

ಯಾದವ್ ಹರೀಶ್ ಅವರು ಇದು ಸೇರಿ 17ನೇ ಬಾರಿ ರಕ್ತದಾನ ಮಾಡಿ ಮಾದರಿಯಾಗಿದ್ದಾರೆ.

ಅವರಿಗೆ ಒಂದು ಹೆಜ್ಜೆ ರಕ್ತದಾನಿಗಳ ಬಳಗದ ವತಿಯಿಂದ ಕರುನಾಡ ರಕ್ತ ಸೇನಾನಿ ಎಂದು ಪ್ರಶಂಸನೀಯ ಪತ್ರ ನೀಡಿ ಗೌರವಿಸಲಾಯಿತು.

ಈ ವೇಳೆ ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷರಾದ ರಕ್ತದಾನಿ ಮಂಜು ಮತ್ತು ರವಿ ಅವರು ರಕ್ತದಾನ ಮಾಡಿದ ಪಿ ಜಿ ಆರ್ ಎಸ್ ಎಸ್ ಸಂಸ್ಥಾಪಕರಾದ ಯಾದವ್ ಹರೀಶ್ ಅವರಿಗೆ ಶುಭ ಕೋರಿದರು.