ಮೈಸೂರು, ಜೂ.2: ಸತತವಾಗಿ ನಾಲ್ಕು ವರ್ಷಗಳಿಂದ ಮೈಸೂರು ಜಿಲ್ಲೆಯಲ್ಲಿ ಒಂದು ಹೆಜ್ಜೆ ರಕ್ತದಾನ ಬಳಗ 1200 ರಕ್ತ ದಾನಿಗಳ ಜೊತೆ ರಕ್ತದಾನ ಮಾಡಿಸುತ್ತಾ ಮಾಡುತ್ತಾ ಬಂದಿದ್ದಾರೆ.
ಯುವತಿಯರು ಹೆಚ್ಚಿನ ದಿನದಲ್ಲಿ ರಕ್ತದಾನ ಮಾಡುತ್ತಾ ಬರುತ್ತಿದ್ದರು, ಆದರೆ ಇತ್ತೀಚಿನ ದಿನದಲ್ಲಿ ರಕ್ತದಾನ ಮಾಡುವುದು ಕಡಿಮೆಯಾಗಿದೆ ಕೋವಿಡ್ ಹಿನ್ನೆಲೆಯಲ್ಲಿ ಯುವಕರು ರಕ್ತದಾನ ಮಾಡಲು ಭಯಪಡುತ್ತಿದ್ದಾರೆ, ಶಾಲಾ ಕಾಲೇಜುಗಳಲ್ಲಿ ರಕ್ತದಾನ ಶಿಬಿರ ಮಾಡಿಸಲು ಹಿಂದೇಟು ಹಾಕುತ್ತಿದ್ದಾರೆ ಇದರಿಂದ ಅಪಘಾತ, ಶಾಸ್ತ್ರ ಚಿಕಿತ್ಸೆ ಯಂತಹ ತುರ್ತು ಸಂದರ್ಭದಲ್ಲಿ ರಕ್ತಕ್ಕಾಗಿ ರೋಗಿಗಳ ಪರದಾಟ ಹೆಚ್ಚಾಗಿದೆ.
ಎಂದು ಒಂದು ಹೆಜ್ಜೆ ರಕ್ತದಾನಿ ಬಳಗದ ಅಧ್ಯಕ್ಷ ರಕ್ತದಾನಿ ಮಂಜು ತಿಳಿಸಿದ್ದಾರೆ.

ರಕ್ತದಾನ ಮಾಡುವವರು ಮುಂದೆ ಬರುವಂತೆ ಸರ್ಕಾರ ಹೆಚ್ಚಿನ ಜಾಗೃತಿ ಮೂಡಿಸಬೇಕೆಂದು ರಕ್ತದಾನಿ ಮಂಜು ಮನವಿ ಮಾಡಿದ್ದಾರೆ.
ಪ್ರತಿಯೊಬ್ಬರೂ ಕೂಡ ಒಂದು ಹೆಜ್ಜೆ ಮುಂದೆ ಬಂದು ರಕ್ತದಾನ ಮಾಡುವ ಮುಖಾಂತರ ನಮ್ಮ ಜೊತೆ ಕೈಜೋಡಿಸಬೇಕೆಂದು ಅವರು ಕೋರಿದ್ದಾರೆ.
ಇಲ್ಲಿಯವರೆಗೂ 3000 ಜನಕ್ಕೆ ರಕ್ತದಾನ ಮಾಡಿಸುವಲ್ಲಿ ಒಂದು ಹೆಜ್ಜೆ ರಕ್ತ ದಾನಿ ಬಳಗ ಯಶಸ್ವಿಯಾಗಿದೆ, ಎಲ್ಲಾ ರಕ್ತದಾನಿ ದೇವರುಗಳಿಂದ ಈ ಒಂದು ಪುಣ್ಯದ ಕೆಲಸ ಆಗುತ್ತಿದೆ ಎಂದು ರಕ್ತದಾನಿ ಮಂಜು ಅವರು ತಿಳಿಸಿದ್ದಾರೆ.
ರಕ್ತದಾನ ಮಾಡುವವರು 18 ವರ್ಷ ಮೇಲ್ಪಟ್ಟವರಾಗಿರಬೇಕು ಪ್ರತಿ ಮೂರು ತಿಂಗಳಿಗೊಮ್ಮೆ ಯುವಕರು ರಕ್ತದಾನ ಮಾಡಬಹುದು, ಮಹಿಳೆಯರು 4 ತಿಂಗಳಿಗೆ ಒಮ್ಮೆ ರಕ್ತದಾನ ಮಾಡಬಹುದು ನಿಮ್ಮ ಆರೋಗ್ಯದ ಜೊತೆಗೆ ಇನ್ನೊಬ್ಬರ ಜೀವ ಉಳಿಸುವಂತಹ ಕೆಲಸಕ್ಕೆ ಪ್ರತಿಯೊಬ್ಬರೂ ಕೂಡ ಕೈಜೋಡಿಸಿ ಎಂದು ಅವರು ಮನವಿ ಮಾಡಿದ್ದಾರೆ.
ರಕ್ತದ ಅವಶ್ಯಕತೆ ಇರುವವರು ಮತ್ತು ರಕ್ತದಾನ ಮಾಡಲು ಬಯಸುವವರು ಈ ಕೆಳಗೆ ಕೊಟ್ಟಿರುವ ವಾಟ್ಸಾಪ್ ನಂಬರಿಗೆ ನಿಮ್ಮ ಹೆಸರು, ಊರು ರಕ್ತದ ಗುಂಪನ್ನು ತಿಳಿಸಬಹುದು ಎಂದು ರಕ್ತದಾನಿ ಮಂಜು ಕೋರಿದ್ದಾರೆ.
ಅಧ್ಯಕ್ಷರು, ಒಂದು ಹೆಜ್ಜೆ ರಕ್ತದಾನಿ ಬಳಗ, ಮೈಸೂರು ಜಿಲ್ಲೆ. ವಾಟ್ಸಪ್ ನಂಬರ್ :9740176567 ಈ ನಂಬರ್ ನಲ್ಲಿ ಸಂಪರ್ಕಿಸಬಹುದು.