ರಕ್ತದಾನದ ಮೂಲಕ ಬಸವರಾಜು ಅವರ ಹುಟ್ಟುಹಬ್ಬ ಆಚರಣೆ

Spread the love

ಮೈಸೂರು: ಬಸವಮಾರ್ಗ ಸಂಸ್ಥಾಪಕ ಬಸವರಾಜು ಅವರ 50ನೇ ವರ್ಷದ ಹುಟ್ಟುಹಬ್ಬವನ್ನು ರಕ್ತದಾನ ಮಾಡುವ ಮೂಲಕ ವಿಶೇಷವಾಗಿ ಆಚರಿಸಲಾಯಿತು ‌

ಮೈಸೂರಿನ ವಿಜಯನಗರದ ಬಸವ ಮಾರ್ಗ ಫೌಂಡೇಶನ್ ಸಂಸ್ಥೆಯಲ್ಲಿ ಲಯನ್ಸ್ ಜೀವಧಾರ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ಸ್ವಯಂ ಪ್ರೇರಿತ ರಕ್ತದಾನ ಶಿಬಿರದಲ್ಲಿ ಸ್ನೇಹಿತರು, ಅಭಿಮಾನಿಗಳು ಸೇರಿ 70ಕ್ಕೂ ಹೆಚ್ಚು ಮಂದಿ ರಕ್ತದಾನ ಮಾಡಿದರು.

ಈ ಸಂಧರ್ಭದಲ್ಲಿ ಬಸವರಾಜು ಫೌಂಡೇಶನ್ ಅಧ್ಯಕ್ಷ ಬಸವರಾಜು ಅವರು ಮಾತನಾಡಿ ಸಮಾಜಮುಖಿ ಸೇವಾ ಕಾರ್ಯದೊಂದಿಗೆ ಪ್ರತಿವರ್ಷ ಹುಟ್ಟುಹಬ್ಬವನ್ನ ನನ್ನ ಸ್ನೇಹಿತರು
ಆಚರಿಸುತ್ತಾರೆ ಅವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ಹೇಳಿದರು.

ಪ್ರತಿ ಬಾರಿ ರಕ್ತದಾನ ಶಿಬಿರ, ಆರೋಗ್ಯ ಶಿಬಿರಗಳನ್ನ ಆಯೋಜಿಸುತ್ತಾ ಬರುತ್ತಿದ್ದಾರೆ, ಆರೋಗ್ಯವಂತ ಸಮಾಜ ನಿರ್ಮಾಣ ಮಾಡುವತ್ತ ಯುವಕರು ಮುಂದಾಗಬೇಕು ಎಂದು ಬಸವರಾಜು ಕರೆ ನೀಡಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ,ಸಮಾಜ ಸೇವಕರು ಹಾಗೂ ಉದ್ಯಮಿಗಳಾದ ಬಸವರಾಜು ಅವರ ಹುಟ್ಟುಹಬ್ಬವನ್ನು ಸ್ವಯಂ ಪ್ರೇರಿತ ರಕ್ತದಾನ ಮಾಡುವ ಮೂಲಕ ಸಮಾಜಮುಖಿ ಕೆಲಸ ಮಾಡುತ್ತಿರುವ ಅವರ ಅಭಿಮಾನಿಗಳು ಹಾಗೂ ಸ್ನೇಹಿತರಿಗೆ ಹೃತ್ಪೂರ್ವಕ ಧನ್ಯವಾದಗಳು ಎಂದು ಹೇಳಿದರು.

ಸಮಾಜದಿಂದ ಗಳಿಸಿದ್ದನ್ನು ಸಮಾಜಕ್ಕೆ ಹಿಂತಿರುಗಿಸುವ ಕಾರ್ಯದಲ್ಲಿ ಮುಖಂಡ ಬಸವರಾಜ್ ನಿರಂತರವಾಗಿ ಸಮಾಜ ಸೇವೆ ಮಾಡಿಕೊಂಡು ಬರುತ್ತಿದ್ದಾರೆ, ಅವರು ನಿರಂತರವಾಗಿ ವಿದ್ಯಾರ್ಥಿಗಳಿಗೆ ಬಡವರಿಗೆ ಹಿರಿಯ ನಾಗರಿಕರಿಗೆ ಮೂಲ ಅಗತ್ಯವನ್ನು ಒದಗಿಸುತ್ತ ಬರುತ್ತಿದ್ದಾರೆ ಅವರಿಗೆ ಮತ್ತಷ್ಟು ಸೇವೆ ಮಾಡುವಂತಹ ಅವಕಾಶ ಸಿಗಲೆಂದು ಆಶಿಸುತ್ತೇನೆ ಎಂದು ಹೇಳಿದರು

ಈ ವೇಳೆ‌ ಕೆ ಆರ್ ಬ್ಯಾಂಕ್ ಅಧ್ಯಕ್ಷ ಬಸವರಾಜು,ಕೆಪಿಸಿಸಿ ಸದಸ್ಯ ನಜರಬಾದ್ ನಟರಾಜ್, ನಿರೂಪಕ ಅಜಯ್ ಶಾಸ್ತ್ರಿ, ಜಿ ರಾಘವೇಂದ್ರ, ಪಾಂಡು, ದೀಪಕ್ ಮತ್ತಿತರರು ಹಾಜರಿದ್ದರು.