ಮೈಸೂರು: ಶ್ರಾವಣ ಮಾಸದವಿಪರೀತ
ಚಳಿ ಹಿನ್ನೆಲೆಯಲ್ಲಿ ಚಾಮುಂಡೇಶ್ವರಿ ಬಳಗದ
ಯುವಕರು ನಗರದ ರೈಲ್ವೆ ನಿಲ್ದಾಣ ಮತ್ತಿತರೆಡೆ ನಿರಾಶ್ರಿತರಿಗೆ ಕಂಬಳಿ ವಿತರಿಸಿ ಮಾನವೀಯತೆ ಮೆರೆದಿದ್ದಾರೆ.
ರೈಲು ನಿಲ್ದಾಣ, ಬಸ್ ನಿಲ್ದಾಣ, ಕೆಆರ್ ಆಸ್ಪತ್ರೆ ಸುತ್ತಮುತ್ತ, ರಸ್ತೆ ಬದಿಯಲ್ಲಿ ಮಲಗಿದ್ದ ನಿರಾಶ್ರಿತರು ಹಾಗೂ ಬಡವರಿಗೆ
ಉಚಿತವಾಗಿ ಹೊದಿಕೆ ವಿತರಿಸುವ ಮೂಲಕ ಮಾದರಿಯಾಗಿದ್ದಾರೆ.ಈ ಸೇವಾ ಕಾರ್ಯಕ್ಕೆ ಕೆಪಿಸಿಸಿ ಸದಸ್ಯ ನಜರ್ಬಾದ್ ನಟರಾಜ್ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅವರು
ನಮ್ಮ ಮೈಸೂರಲ್ಲಿ ನಿರಾಶ್ರಿತರು ಅಶಕ್ತರಲ್ಲಿ ಸ್ವಾಭಿಮಾನಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ, ಆದ ಕಾರಣ ಕಷ್ಟದಲ್ಲಿದ್ದೇವೆ ಸಹಾಯ ಮಾಡಿ ಎಂದು ಸಂಘಸಂಸ್ಥಗಳಿಗೆ ಅಥವಾ ಸರ್ಕಾರಕ್ಕೆ ಅರ್ಜಿ ಹಾಕಲ್ಲ ಅಥವಾ ಸರ್ಕಾರದವರೇ ಎಲ್ಲವನ್ನು ಸರಿದಾರಿಗೆ ತರೋದಕ್ಕೂ ಆಗುವುದಿಲ್ಲ, ಸಮಾಜವನ್ನ ಸರಿಪಡಿಸಲು ಸಂಘ ಸಂಸ್ಥೆಗಳ ಮತ್ತು ಸಾರ್ವಜನಿಕರ ಪಾತ್ರ ಬಹಳಮುಖ್ಯ, ಅಶಕ್ತರಿರುವ ಸ್ಥಳಕ್ಕೆ ಹೋಗಿ ಹೊದಿಕೆ ವಿತರಣೆ ಕಾರ್ಯಕ್ರಮ ನಡೆಯುವ ಮಾದರಿಯಲ್ಲೆ ಅವರಿಗೆ ಆರೋಗ್ಯ ತಪಾಸಣೆ ಮಾಡಿಸಲು ಶ್ರಮಿಸೋಣ ಎಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರುಗಳಾದ ರಮೇಶ್ ರಾಮಪ್ಪ, ಜಿ ರಾಘವೇಂದ್ರ, ದಿನೇಶ್, ಎಸ್ ಎನ್ ರಾಜೇಶ್,ರವಿಚಂದ್ರ, ಮೊಹನ್,ಬೈರತಿ ಲಿಂಗರಾಜು, ಅಮಿತ್ ಮತ್ತಿತರರು ಹಾಜರಿದ್ದರು.