ಬಿಜೆಪಿ ಎಸ್.ಟಿ. ಮೋರ್ಚಾದಿಂದ ವಾಲ್ಮೀಕಿ ಜಯಂತಿ ಆಚರಣೆ

Spread the love

ಮೈಸೂರು: ಬಿಜೆಪಿ ಚಾಮುಂಡೇಶ್ವರಿ ಕ್ಷೇತ್ರ ನಗರ ಮಂಡಲದ ಎಸ್.ಟಿ. ಮೋರ್ಚಾದಿಂದ ಶಾರದಾದೇವಿನಗರದ ನಮೋ ವನದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆ ಮಾಡಲಾಯಿತು.

ಕಾರ್ಯಕ್ರಮದಲ್ಲಿ ವಾಲ್ಮೀಕಿ ಮಹರ್ಷಿಗಳ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿ ಸಿಹಿ ವಿತರಿಸಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಅಧ್ಯಕ್ಷ ರಾಕೇಶ್ ಭಟ್, ಪ್ರಧಾನ ಕಾರ್ಯದರ್ಶಿ ಆರ್. ಸೋಮಶೇಖರ್, ಎಸ್ ಟಿ ಮೋರ್ಚಾ ಅಧ್ಯಕ್ಷ ಟಿ.ರಾಜ ನಾಯಕ್, ಪ್ರಧಾನ ಕಾರ್ಯದರ್ಶಿಗಳಾದ ಪ್ರಜ್ವಲ್, ಸ್ವಾಮಿ, ನಗರ ಉಪಾಧ್ಯಕ್ಷ ತ್ಯಾಗರಾಜ್, ಎಸ್ ಸಿ ಮೋರ್ಚಾದ ನಗರ ಉಪಾಧ್ಯಕ್ಷ ಎನ್ ಪ್ರತಾಪ್, ಮುಖಂಡರಾದ ಹೆಚ್.ಜಿ. ರಾಜಮಣಿ, ಬಿ.ಸಿ.ಶಶಿಕಾಂತ್, ಶಿವಕುಮಾರ್, ವಿನುತಾ, ತುಳಸಿ, ಚಂದ್ರಶೇಖರ ಸ್ವಾಮಿ, ಚಂದನ್ ಗೌಡ, ರಾಘವೇಂದ್ರ, ರವಿ ಉತ್ತಪ್ಪ, ಮಹೇಶ್, ಮಹಾದೇವ, ರಾಧಾ ಮುತಾಲಿಕ್, ಗೋಪಾಲ್ ಭಾಗವಹಿಸಿದ್ದರು.