ಪಾಕ್,ಬಾಂಗ್ಲಾ ಪ್ರಜೆಗಳನ್ನು ವಾಪಸು ಕಳಿಸುವಂತೆ ಬಿಜೆಪಿ ಪ್ರತಿಭಟನೆ

Spread the love

ಮೈಸೂರು: ಮೈಸೂರಿನಲ್ಲಿ ಅಕ್ರಮವಾಗಿ ನೆಲೆಸಿರುವ ಪಾಕಿಸ್ತಾನ ಮತ್ತು ಬಾಂಗ್ಲಾ ದೇಶದ ಪ್ರಜೆಗಳನ್ನು ಅವರವರ ದೇಶಕ್ಕೆ ವಾಪಸು ಕಳಿಸುವಂತೆ ಒತ್ತಾಯಿಸಿ ಬಿಜೆಪಿ ಮೈಸೂರು ಘಟಕದ ಸದಸ್ಯರು, ಮುಖಂಡರು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.

ಪ್ರತಿಭಟನಾ ಮೆರವಣಿಗೆಯಲ್ಲಿ ಶಾಸಕ ಟಿ.ಎಸ್.ಶ್ರೀವತ್ಸ, ಬಿಜೆಪಿ ಮೈಸೂರು ಅಧ್ಯಕ್ಷ ಎನ್ ನಾಗೇಂದ್ರ ಸೇರಿದಂತೆ ಹಲವಾರು ಮುಖಂಡರು ಪಾಲ್ಗೊಂಡಿದ್ದರು.

ಈ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಶ್ರೀವತ್ಸ ಅವರು ಕಾಶ್ಮೀರದ ಪಹಲ್ಗಾಮ್ ನಲ್ಲಿ ನಡೆದ ದುಷ್ಕೃತ್ಯದ ನಂತರ ದೇಶಾದ್ಯಂತ ಎಲ್ಲೆಲ್ಲಿ ಪಾಕ್ ಹಾಗೂ ಬಾಂಗ್ಲಾ ಪ್ರಜೆಗಳು ನೆಲೆಸಿದ್ದಾರೊ ಅವರು ವ್ಯಾಪಾರ, ಆರೋಗ್ಯ ಹೀಗೆ ಯಾವುದೇ ಕಾರಣದಿಂದ ನೆಲೆಸಿದ್ದರೂ ಅವರನ್ನು ಅವರ ದೇಶಕ್ಕೆ ವಾಪಸು ಕಳುಹಿಸುವಂತೆ ಕೇಂದ್ರ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಹೇಳಿದರು.

ಮೈಸೂರಿನಲ್ಲೂ ಅಕ್ರಮವಾಗಿ ಬಾಂಗ್ಲಾ ಮತ್ತು ಪಾಕಿಸ್ತಾನ ಪ್ರಜೆಗಳು ಅಕ್ರಮವಾಗಿ ನೆಲೆಯೂರಿದ್ದು ಅವರನ್ನು ಕೂಡಲೇ ಅವರ ದೇಶಗಳಿಗೆ ವಾಪಸ್ ಕಳಿಸಬೇಕೆಂದು ಆಗ್ರಹಿಸಿದರು.

ಮಾರ್ಚ್ ನಲ್ಲಿ ನಡೆದ ವಿಧಾನ ಮಂಡಲ ಅಧಿವೇಶನದ ವೇಳೆ ರಾಜ್ಯ ಸರ್ಕಾರವೇ ಮೈಸೂರಿನ ವಿವಿಧ ಪೊಲೀಸ್ ಠಾಣೆಗಳಲ್ಲಿ ಗಾಂಜಾ, ಅಫಿಮು, ಅಕ್ರಮ ವಾಸಿಗಳು, ಹಾಗೂ ತಲೆಮರಸಿಕೊಂಡವರು ಎಲ್ಲರೂ ಬಾಂಗ್ಲಾದೇಶಿಯರೇ ಆಗಿದ್ದಾರೆ ಎಂದು ಉತ್ತರ ಕೊಟ್ಟಿದೆ, ಹಾಗಾಗಿ ಅವರನ್ನೆಲ್ಲಾ ಹುಡುಕಿ ತಕ್ಷಣ ಎಲ್ಲರನ್ನೂ ಅವರ ದೇಶಗಳಿಗೆ ವಾಪಸು ಕಳುಹಿಸಬೇಕೆಂದು ಅಪರ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ ಎಂದು ತಿಳಿಸಿದರು.