ಮೈಸೂರು: ಸ್ಪೀಕರ್ ಸ್ಥಾನಕ್ಕೆ ಅಗೌರವ ತೋರಿದ ಆರೋಪದ ಮೇಲೆ ಬಿಜೆಪಿಯ 18 ಶಾಸಕರನ್ನು ಅಮಾನತು ಮಾಡಿದ ಸ್ಪೀಕರ್ ಯು.ಟಿ ಖಾದರ್ ಅವರ ನಡೆಯನ್ನ ಕಾಂಗ್ರೆಸ್ ಶಾಸಕ ಕೆ.ಹರೀಶ್ ಗೌಡ ಸಮರ್ಥಿಸಿಕೊಂಡಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಪ್ರತಿಕ್ರಿಯಿಸಿದ ಶಾಸಕರು, ನಾನು ಶಾಸಕನಾಗಿ 2 ವರ್ಷಗಳಾಗುತ್ತಿದೆ, ಹಲವು ಕಲಾಪಗಳಲ್ಲಿ ಭಾಗವಹಿಸಿದ್ದೇನೆ, ಇಷ್ಟೊಂದು ರೂಡ್ ಆಗಿ ವರ್ತಿಸಿದವರನ್ನ ನಾನು ನೋಡಿರಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಸಭಾಧ್ಯಕ್ಷರ ಸ್ಥಾನ ಒಂದು ಗೌರವಯುತ ಸ್ಥಾನ, ಆ ಸ್ಥಾನಕ್ಕೆ ಅಗೌರವ ಬರುವ ಹಾಗೆ ಬಿಜೆಪಿಯವರು ನಡೆದುಕೊಂಡಿರುವುದು ಖಂಡನೀಯ ಎಂದು ಹೇಳಿದರು.
ಇದೆಲ್ಲವನ್ನ ನೋಡಿದಾಗ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಾವು ಇದ್ದೀವಾ ಎನಿಸಿತು. ಇದೊಂದು ಘೋರ ಅಪರಾಧ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿಯವರ ಪುಂಡಾಟಿಕೆ ಹೆಚ್ಚಾಗಿದೆ, ಇವರ ನಡೆ ಸದನದಲ್ಲಿ ಹೇಸಿಗೆ ಹುಟ್ಟಿಸಿದೆ. ಹತಾಶರಾಗಿ ಈ ರೀತಿ ಗುಳ್ಳೆನರಿಗಳಂತೆ ವರ್ತಿಸುತಿದ್ದಾರೆ ಎಂದು ಹರೀಶ್ ಗೌಡ ಕಿಡಿಕಾರಿದರು.