ಹಾಲಿ, ಮಾಜಿ ಶಾಸಕರ ವಿರುದ್ದ ಬಿಜೆಪಿ ಮುಖಂಡ ನಿಶಾಂತ್ ಕಿಡಿ

Spread the love

(ವರದಿ: ಸಿದ್ದರಾಜು,ಕೊಳ್ಳೇಗಾಲ)

ಕೊಳ್ಳೇಗಾಲ: ಮೂರು-ಮೂರು ಸಾರಿ ಕುಳಿತವರು ಏನು ಮಾಡದೆ ಈವಾಗ ಹೋಗಿ ಕುಳಿತು ನಾನ್ ಮಾಡ್ದೆ ನಾನ್ ಮಾಡ್ದೆ ಎಂದು ಏನು ಮಾಡದೆ ಹಳೇದನ್ನೇ ತೆಗೆದುಕೊಂಡು ಕುಳಿತರೆೆ ಅಪಘಾತಗಳು ಹೆಚ್ಚಾಗುತ್ತವೆ ಎಂದು ಹನೂರು ಬಿಜೆಪಿ ಮುಖಂಡ ನಿಶಾಂತ್ ಹಾಲಿ ಹಾಗೂ ಮಾಜಿ ಶಾಸಕರ ವಿರುದ್ದ ಕಿಡಿಕಾರಿದರು.

ತೆಳ್ಳನೂರು-ಬಂಡಳ್ಳಿ ಮಾರ್ಗದ ಬಸ್ ಅಪಘಾತದಲ್ಲಿ ಗಾಯಗೊಂಡು ಇಲ್ಲಿನ ಉಪವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿರುವ ಗಾಯಳುಗಳನ್ನು ಭೇಟಿ ಮಾಡಿ ಆರೋಗ್ಯ ವಿಚಾರಿಸಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದರು.

ಅವರ ಕುಟುಂಬಕ್ಕೆ ದೇವರು ಒಳ್ಳೆಯದು ಮಾಡಲಿ ಚಾಮರಾಜನಗರ ಮತ್ತು ಕೊಳ್ಳೇಗಾಲ ಆಸ್ಪತ್ರೆಯಲ್ಲಿ ದಾಖಲಾಗಿರುವ ಗಾಯಾಳುಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಅವರು ಸಂಪೂರ್ಣವಾಗಿ ಗುಣಮುಖರಾಗುವವರೆಗೂ ಆಸ್ಪತ್ರೆಯಲ್ಲಿ ಗುಣಮಟ್ಟದ ಚಿಕಿತ್ಸೆಯನ್ನು ವೈದ್ಯರಿಂದ ಕೊಡಿಸಲಾಗುವುದು ಎಂದು ಹೇಳಿದರು.

ನಿರ್ವಾಹಕ ನವೀನ್ ಕುಮಾರ್ ಸಾವು ಬಹಳ ನೋವು ತಂದಿದೆ. ಅಪಘಾತಗಳು ಸಂಭವಿಸಲು ಕೆಟ್ಟ ರಸ್ತೆಗಳೆ ಕಾರಣ, ತಾಲ್ಲೂಕು ಕೇಂದ್ರವಾಗಿ ಇಷ್ಟು ವರ್ಷಗಳು ಕಳೆದರು ಹನೂರು ಕ್ಷೇತ್ರದಲ್ಲಿ ರಸ್ತೆಗಳಾಗಿಲ್ಲ, ಸರ್ಕಾರ ಮೂಲಭೂತ ಸೌಕರ್ಯ ಕಲ್ಪಿಸಿಲ್ಲ ಎಂಬುದಕ್ಕೆ ಇದೇ ಸೂಕ್ತ ಉದಾಹರಣೆ ಎಂದು ಕಿಡಿಕಾರಿದರು.

ಇನ್ನು ಎಷ್ಟು ಜನರ ಪ್ರಾಣದ ಜೊತೆ ಚಲ್ಲಾಟವಾಡುತ್ತಾರೆ. ಸರ್ಕಾರಕ್ಕೆ ಇದು ಸರಿಯಾದ ಸಮಯ ಈಗಲಾದರೂ ಸರ್ಕಾರ ಕಣ್ತರೆದು ನೋಡಿ ಉತ್ತಮ ರಸ್ತೆ ಸೌಕರ್ಯ ಕೊಡಬೇಕು ಎಂದು ಮನವಿ ಮಾಡುತ್ತೇನೆ. ಕನಿಷ್ಟ ತೇಪೆ ಹಾಕುವ ಕೆಲಸವಾದರು ಜನ ನಿಟ್ಟಸಿರು ಬಿಡುತ್ತಾರೆ ಎಂದು ತಿಳಿಸಿದರು.

ಇದು ಯಾರ ವೈಪಲ್ಯ ಎಂಬ ಮಾದ್ಯಮ ಪ್ರತಿನಿಧಿಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು ಶಾಸಕರು ಜನನಾಯಕರು ತಾನೆ ಹೋಗಿ ಕೇಳಬೇಕು ಸರ್ಕಾರಕ್ಕೆ, ಸರ್ಕಾರದ ಕಣ್ಣುತೆರೆಸುವವರು ಯಾರು? ಮೂರು-ಮೂರು ಸಾರಿ ಕುಳಿತವರು ಏನು ಮಾಡದೆ ಈವಾಗ ಹೋಗಿ ಕುಳಿತು ನಾನ್ ಮಾಡ್ದೆ ನಾನ್ ಮಾಡ್ದೆ ಎಂದು ಏನು ಮಾಡದೆ ಹಳೆಯದನ್ನು ತೆಗೆದುಕೊಂಡು ಕುಳಿತರೆ ಇಂತಹ ಅಪಘಾತಗಳು ಇನ್ನೂ ನೂರಾಗುತ್ತವೆ ಎಂದು ಮಾರ್ಮಿಕವಾಗಿ ಹಾಲಿ ಶಾಸಕ ಎಂ.ಆರ್.ಮಂಜುನಾಥ್ ಹಾಗೂ ಮಾಜಿ ಶಾಸಕ ಆರ್.ನರೇಂದ್ರ ವಿರುದ್ದ ನಿಶಾಂತ್ ಕಿಡಿಕಾರಿದರು.

ಈ ಸಂಧರ್ಭದಲ್ಲಿ ತಾ.ಪಂ ಮಾಜಿ ಅಧ್ಯಕ್ಷ ಸುರೇಶ್, ತಿಮ್ಮರಾಜಿಪುರ ಪುಟ್ಟಣ್ಣ, ಯುವ ಮುಖಂಡ ಚೇತನ್, ಪಾಳ್ಯ ಸೋಮಣ್ಣ, ಉಪ್ಪಾರ ಮುಖಂಡ ನಾಗರಾಜು, ಅಪ್ಪು ಸ್ವಾಮಿ, ಕೃಷ್ಣಪ್ಪ, ಮಹದೇವಸ್ವಾಮಿ ಮತ್ತಿತರರು ಹಾಜರಿದ್ದರು.