ಮೈಸೂರು: ಪ್ರಾಣಿಪಕ್ಷಿಗಳು ಮತ್ತು ಪರಿಸರ ಉಳಿಸುವ ಸೇವಾ ಮನೋಭಾವ ಬೆಳಸಿಕೊಳ್ಳಬೇಕೆಂದು ಮಾಜಿ ಸಂಸದ ಪ್ರತಾಪ್ ಸಿಂಹ ಸಲಹೆ ನೀಡಿದರು.
ಮೈಸೂರಿನಲ್ಲಿ ಬೇಸಿಗೆಯ ತಾಪಮಾನದಿಂದ ಜೀವಸಂಕುಲ ತತ್ತರಿಸುತ್ತಿದ್ದು
ಪ್ರಾಣಿಪಕ್ಷಿಗಳನ್ನು ಸಂರಕ್ಷಿಸುವ ನಿಟ್ಟಿನಲ್ಲಿ ಹಮ್ಮಿಕೊಂಡಿರುವ ಮೂಕಸ್ಪಂದನೆ ಜಾಗೃತಿ ಅಭಿಯಾನಕ್ಕೆ ಚಾಲನೆ ನೀಡಿದ ವೇಳೆ ಅವರು ಮಾತನಾಡಿದರು.

2 ತಿಂಗಳ ಕಾಲ ನಿರಂತರವಾಗಿ ಮೈಸೂರಿನ ವಿವಿಧ ಪ್ರದೇಶಗಳಲ್ಲಿ ಮೂಕ ಸ್ಪಂದನ ಅಭಿಯಾನ ಹಮ್ಮಿಕೊಳ್ಳಲಾಗಿದ್ದು,
ಕೆಎಂಪಿಕೆ ಚಾರಿಟಬಲ್ ಟ್ರಸ್ಟ್ ವತಿಯಿಂದ
ಚಾಮರಾಜ ಕ್ಷೇತ್ರದ ವಾರ್ಡ್ ನಂಬರ್ 23ರ ದಿವಾನ್ಸ್ ರಸ್ತೆಯಲ್ಲಿ ಮರಗಿಡಗಳಲ್ಲಿ ಆಹಾರ ನೀರಿನ ಬಟ್ಟಲು ಅಳವಡಿಸುವ ಮೂಲಕ ಪ್ರತಾಪ್ ಸಿಂಹ ಅಭಿಯಾನಕ್ಕೆ ಚಾಲನೆ ನೀಡಿದರು.
ಭೂಮಿಯ ಮೇಲೆ ಕಾಲ ಬದಲಾವಣೆ ಜಗದ ನಿಯಮ ಅದಕ್ಕೆ ಹೊಂದಿಕೊಂಡು ಜೀವಿಸುವುದು ಪ್ರತಿಯೊಬ್ಬರ ಕರ್ತವ್ಯ, ಮನುಷ್ಯ ಪ್ರತಿಯೊಂದಕ್ಕೂ ಪರಿಸರದ ಮೇಲೆ ಅವಲಂಬಿತನಾಗುತ್ತಾನೆ ಆದರೆ ಪ್ರಾಣಿಪಕ್ಷಿಗಳ ಪರಿಸರ ಉಳಿಸುವ ಸೇವಾಮನೋಭಾವ ಬೆಳಸಿಕೊಳ್ಳಬೇಕು ಎಂದು ತಿಳಿಸಿದರು.
ಹೆಚ್ಚು ಸಸಿಗಳನ್ನು ನೆಡಲು ಮುಂದಾದರೆ ಪ್ರಾಣಿಪಕ್ಷಿಗಳ ರಕ್ಷಣೆಯಾಗುತ್ತದೆ, ಭವಿಷ್ಯದ ಪರಿಸರ ಸಂರಕ್ಷಣೆಯ ಪರಿಕಲ್ಪನೆಯ ನಿಟ್ಟಿನಲ್ಲಿ ಮೈಸೂರು ಅರಸರು ಮೃಗಾಲಯ ಕುಕ್ಕರಹಳ್ಳಿ ಕೆರೆ, ಕಾರಂಜಿ ಕೆರೆ, ಮಾದರಿ ಬಡಾವಣೆಗಳ ಉದ್ಯಾನವನಗಳನ್ನು ನಿರ್ಮಿಸಿದ್ದಾರೆ ಅದನ್ನು ಉಳಿಸಿಕೊಂಡು ಹೋಗುವುದು ಮೈಸೂರಿಗರ ಕರ್ತವ್ಯ ಎಂದು ಹೇಳಿದರು.
ಹಿಂದೆ ಮೈಸೂರಿನ ಪ್ರತಿ ಮನೆಗಳ ಮುಂದೆ ಹಸು ಕರು ಪಕ್ಷಿಗಳು ನೀರು ಕುಡಿಯಲು ಕಲ್ಲಿನ ನೀರಿನ ತೊಟ್ಟಿ ಯನ್ನು ಇಡುತ್ತಿದ್ದರು ಪಶು ಪಕ್ಷಿಗಳು ಆನಂದದಿಂದ ನೀರು ಕುಡಿದು ದಾಹ ತಾಣಿಸಿಕೊಳ್ಳುತ್ತಿದ್ದವು ,ಆದರೆ ಈ ದಿನಗಳಲ್ಲಿ ಅವೆಲ್ಲ ಕಣ್ಮರೆ ಆಗಿವೆ ಎಂದು ವಿಷಾದಿಸಿದರು.
ಮಾನವ ತನ್ನ ಕ್ಷೇಮಕ್ಕಾಗಿ ಬಡಾವಣೆಗಳನ್ನು ನಿರ್ಮಿಸಿ ಕೊಂಡು ಕೆರೆ ಕಟ್ಟೆ ಗಳನ್ನು ಮುಚ್ಚಿ ವೃಕ್ಷಗಳನ್ನು ಕತ್ತರಿಸಿ ಅಮಾಯಕ ಮೂಕ ಜೀವಿಗಳಿಗೆ ನೀರು ನೆರಳು ಇಲ್ಲದಂತೆ ಮಾಡಿರುವುದು ದುರಂತ, ಈ ಬೇಸಿಗೆಯ ಧಗೆಯಲ್ಲಿ ನೀರು ಆಹಾರ ನೀಡಿ ಸಕಲ ಜೀವರಾಶಿಗಳನ್ನು ಕಾಪಾಡಲು ಮುಂದಾಗಬೇಕೆಂದು ಪ್ರತಾಪ್ ಸಿಂಹ ಕರೆ ನೀಡಿದರು.

ಈ ಸಂದರ್ಭದಲ್ಲಿ ಕೆಎಂಪಿ ಕೆ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ವಿಕ್ರಮ ಅಯ್ಯಂಗಾರ್, ನಗರ ಪಾಲಿಕೆ ಮಾಜಿ ಸಧಸ್ಯ ಸುಬ್ಬಯ್ಯ, ಆರ್ ಪರಮೇಶ್ ಗೌಡ, ಕಿರಣ್ ಗೌಡ,ಎಸ್ ಎನ್ ರಾಜೇಶ್, ಚೇತನ್, ನಂಜಪ್ಪ, ಬೈರತಿ ಲಿಂಗರಾಜು, ವಿನೋದ್ ಅರಸ್,ನಾಗೇಶ್ ಯಾದವ್, ಶ್ರೀನಿವಾಸ್, ಶ್ರವಣ್ ಮಾಲಿ, ಮಹಾನ್ ಶ್ರೇಯಸ್, ಅಮಿತ್, ನಾಣಿ ಗೌಡ, ಕೀರ್ತಿ, ಸುಚೇಂದ್ರ ತರರು ಹಾಜರಿದ್ದರು.