ಮೈಸೂರು, ಮಾ.7: ಬಿಳಿಕೆರೆ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ನಾಗಭೂಷಣ್ ಅವರು ಬೆಂಗಳೂರಿನ ಶಾಲಾ ಶಿಕ್ಷಣ ಇಲಾಖೆ (ಪದವಿಪೂರ್ವ) ಸೂಪರ್ ಡೆಂಟ್ ಹುದ್ದೆಗೆ ಮುಂಬಡ್ತಿ ಹೊಂದಿದ್ದಾರೆ.
ಹಾಗಾಗಿ ನಾಗಭೂಷಣ್ ಅವರಿಗೆ ಮೈಸೂರು ಜಿಲ್ಲೆಯ ಶಾಲಾ ಶಿಕ್ಷಣ ಇಲಾಖೆ ( ಪದವಿ ಪೂರ್ವ) ಬೋಧಕೇತರ ಸಂಘದ ವತಿಯಿಂದ ಮಹಾರಾಣಿ ಪದವಿ ಪೂರ್ವ ಕಾಲೇಜಿನಲ್ಲಿ ಬಿಳ್ಕೊಡಗೆ ಸಮಾರಂಭ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದಲ್ಲಿ ಉಪ ನಿರ್ದೇಶಕರಾದ ಎಮ್ ಮರಿಸ್ವಾಮಿ, ಬೋದಕೇತರ ಸಂಘದ ರಾಜಕುಮಾರ, ವಿ ಎಂ ಮುಕುಂದ,ಕೃಪಾಕರ್,ಸುನಿಲ್, ಸಂತೋಷ್, ಚಂದ್ರಮ್ಮ ಮತ್ತು ಪ್ರಾಂಶುಪಾಲರಾದ ಸೋಮಣ್ಣ, ರಮಾನಂದ ರಾಮೇಗೌಡ, ಮಂಜೇಗೌಡ ಮತ್ತಿತರರು ಉಪಸ್ಥಿತರಿದ್ದರು