ಮೈಸೂರು: ಮೈಸೂರು ಜಿಲ್ಲೆ , ಹುಣಸೂರು ತಾಲೂಕು ಬಿಳಿಕೆರೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಪಂಚಾಯತ್ ಗ್ರಾಮಭಿವೃದ್ಧಿ ಮತ್ತು ರೈತರ ಸೇವಾ ಸಮಿತಿ ವತಿಯಿಂದ
ಉಚಿತ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಯಿತು.
ಪಿಜಿ ಆರ್ ಎಸ್ ಎಸ್ ಬಿಳಿಕೆರೆ ಗ್ರಾಮ ಪಂಚಾಯಿತಿ ಸಹಯೋಗದಲ್ಲಿ ನಾರಾಯಣ ಆಸ್ಪತ್ರೆ ಮತ್ತು ಅನ್ನಪೂರ್ಣ ಆಸ್ಪತ್ರೆ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಉಚಿತ ಆರೋಗ್ಯ ತಪಾಸಣೆ ಶಿಬಿರದಲ್ಲಿ ಗ್ರಾಮದ 500ಕ್ಕೂ ಹೆಚ್ಚು ಮಂದಿ ತಪಾಸಣೆ ಮಾಡಿಸಿಕೊಂಡರು.
ಶಿಬಿರದ ಉದ್ಘಾಟನೆಯನ್ನು ಸಂಸ್ಥೆಯ ರಾಜ್ಯಾಧ್ಯಕ್ಷರಾದ ಯಾದವ್ ಹರೀಶ್ ಹಾಗೂ ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರು ಹಾಗೂ ಪಿ ಡಿ ಒ ನೆರವೇರಿಸಿದರು.
ಕಾರ್ಯಕ್ರಮದಲ್ಲಿ ಬಿಳಿಕೆರೆ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಮರತಾಯಮ್ಮ, ಸಹಾಯಕ ನಿರ್ದೇಶಕ ತಾಲೂಕು ಪಂಚಾಯತಿ ಹುಣಸೂರು ರಾಜೇಂದ್ರ ಕೆ ಎಲ್, ಪಿ ಡಿ ಒ ಎನ್ ಮಹಾದೇವಸ್ವಾಮಿ, ಪಿಜಿಆರ್ ಎಸ್ ಎಸ್ ಖಜಾಂಜಿ ಮಂಜುಳಾ ಎಸ್.,ಸಹ ಕಾರ್ಯದರ್ಶಿ ಪಲ್ಲವಿ ಎಚ್, ಸಂಚಾಲಕ ರಕ್ತದಾನಿ ಮಂಜು, ಹರಿಣಿ ಹಾಗೂ ನಾರಾಯಣ ಆಸ್ಪತ್ರೆಯ ವೈದ್ಯರಾದ ಗುಲ್ಜಾರ್, ಆಸ್ಪತ್ರೆ ಸಿಬ್ಬಂದಿ, ಕಣ್ಣಿನ ಆಸ್ಪತ್ರೆಯ ವೈದ್ಯರಾದ ಉದಯ್ ಮತ್ತು ಸಿಬ್ಬಂದಿ, ಬಿಳಿಕೆರೆ ಗ್ರಾಮದ ಹಿರಿಯ ನಾಗರಿಕರು ಮಹಿಳೆಯರು ಯುವಜನತೆ ಭಾಗವಹಿಸಿದ್ದರು.