ಚಾಮುಂಡೇಶ್ವರಿ ಕ್ಷೇತ್ರದಲ್ಲಿ ತಿರಂಗಾ ಯಾತ್ರೆ ಬೈಕ್ ಜಾಥಾ ಮೂಲಕ ಸೈನ್ಯಕ್ಕೆ ಗೌರವ

Spread the love

ಮೈಸೂರು: ಆಪರೇಷನ್ ಸಿಂಧೂರ್ ಕಾರ್ಯಾಚರಣೆ ಮಾಡಿರುವ ಹೆಮ್ಮೆಯ ಭಾರತೀಯ ಸೈನ್ಯಕ್ಕೆ ಅಭಿಮಾನ ಪೂರ್ವಕ ಗೌರವವನ್ನು ಸಲ್ಲಿಸಲು ತಿರಂಗಾ ಯಾತ್ರೆ ಬೈಕ್ ಜಾಥಾವನ್ನು ರಾಷ್ಟ್ರ ರಕ್ಷಣೆಗಾಗಿ ನಾಗರಿಕರು ಸಂಘಟನೆ ವತಿಯಿಂದ ಹಮ್ಮಿಕೊಳ್ಳಲಾಯಿತು.

ಜಾಥಾಗೆ ರಾಮಕೃಷ್ಣನಗರದ ಸಾಯಿಬಾಬಾ ದೇವಸ್ಥಾನದ ಮುಂಭಾಗ ನಿವೃತ್ತ ಸೈನಿಕರ ಸಂಘದ ಅಧ್ಯಕ್ಷ ದಿವಾಕರ್, ಹವಾಲ್ದಾರ್ ಬಿದ್ದಪ್ಪ, ರವಿ ನಾಯಕಂಡ, ಬಿಜೆಪಿ ನಗರ ಪ್ರಧಾನ ಕಾರ್ಯದರ್ಶಿ ಬಿ.ಎಂ.ರಘು,
ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಉಪಾಧ್ಯಕ್ಷರು ಹಾಗೂ ವೈದ್ಯರಾದ ಡಾ. ಎಸ್.ಪಿ.ಯೋಗಣ್ಣ ಚಾಲನೆ ನೀಡಿದರು.

ಜಾಥಾವು ರಾಮಕೃಷ್ಣನಗರದ ದಕ್ಷಿಣೇಶ್ವರ ಮುಖ್ಯ ರಸ್ತೆ ಮೂಲಕ ಸಾಗಿ ರಾಮಕೃಷ್ಣ ಪರಮಹಂಸ ವೃತ್ತ, ಚದುರಂಗ ರಸ್ತೆ, ಸ್ವಾಮಿ ವಿವೇಕಾನಂದ ರಸ್ತೆ, ನಮೋ ವನ, ಶಾರದಾದೇವಿ ವೃತ್ತ, ಜನತಾನಗರ ಮೂಲಕ ಸಾಗಿ ಬೋಗಾದಿ ಎರಡನೇ ಹಂತದ ನಿರ್ಮಿತಿ ಕೇಂದ್ರದ ಬಳಿ ಮುಕ್ತಾಯವಾಯಿತು.

ದೇಶ ಭಕ್ತಿ ಗೀತೆಗಳೊಂದಿಗೆ ಸಾಗಿದ ಜಾಥಾದುದ್ದಕ್ಕೂ ಭಾರತ್ ಮಾತಾ ಕೀ ಜೈ, ವಂದೇ ಮಾತರಂ, ಜಮ್ಮು ಮತ್ತು ಕಾಶ್ಮೀರ ಭಾರತ ಮಾತೆಯ ಸಿಂಧೂರ, ಭಾರತೀಯ ಸೈನ್ಯಕ್ಕೆ ಜಯವಾಗಲಿ ಎಂಬ ಘೋಷಣೆಗಳನ್ನು ಕೂಗಲಾಯುತು. ಬೈಕುಗಳಿಗೆ ಹಾಕಿದ್ದ ತ್ರಿವರ್ಣ ಧ್ವಜ ಜಾಥಾಗೆ ಮೆರುಗು ನೀಡಿತು.

ತ್ರಿವರ್ಣ ಧ್ವಜದಲ್ಲಿ ಅಲಂಕೃತಗೊಂಡ ವಾಹನದಲ್ಲಿ ನಿವೃತ್ತ ಸೈನಿಕರನ್ನು ಮೆರವಣಿಗೆ ಮಾಡಿಸಲಾಯಿತು, ದಾರಿ ಮಧ್ಯೆ ಪುಷ್ಪಾರ್ಚನೆ ಮಾಡಲಾಯಿತು.

ಚಾಮುಂಡೇಶ್ವರಿ ಕ್ಷೇತ್ರದ ನಗರ ಮಂಡಲದ ಬಿಜೆಪಿ ಅಧ್ಯಕ್ಷರಾದ ರಾಕೇಶ್ ಭಟ್ ನೇತೃತ್ವದಲ್ಲಿ ಜಾಥಾ ನಡೆಯಿತು.

ಹಿರಿಯ ಮುಖಂಡರಾದ ಗೋಪಾಲ್ ರಾವ್, ಕ್ಷೇತ್ರದ ಪ್ರಧಾನ ಕಾರ್ಯದರ್ಶಿಗಳಾದ ಆರ್.ಸೋಮಶೇಖರ್, ಈರೇಗೌಡ, ಉಪಾಧ್ಯಕ್ಷರಾದ ಹೆಚ್.ಜಿ. ರಾಜಮಣಿ, ಬಿ.ಸಿ.ಶಶಿಕಾಂತ್, ಶಿವಕುಮಾರ್, ಶ್ರೀ ರಾಮಕೃಷ್ಣ ಪರಮಹಂಸ ಸೇವಾ ಪ್ರತಿಷ್ಠಾನದ ಕಾರ್ಯದರ್ಶಿ ಕೆಂಪಲಿಂಗರಾಜು, ಬಸವಣ್ಣ, ಮೈಸೂರು ಹನುಮಮಂತೋತ್ಸವ ಸಮಿತಿಯ ಸಂಜಯ್, ಯುವ ಮುಖಂಡರಾದ ಮಧು ಸೋಮಶೇಖರ್, ತ್ಯಾಗರಾಜ್ ನಾಯಕ್, ಚಂದ್ರಶೇಖರ ಸ್ವಾಮಿ, ಎನ್. ಪ್ರತಾಪ್, ಶ್ರೀನಿವಾಸ್ ಪ್ರಸಾದ್, ರಾಘವೇಂದ್ರ,
ಮಿರ್ಲೆ ಫಣೀಶ್, ಚಂದನ್ ಗೌಡ, ಅಭಿಷೇಕ್ ಗೌಡ, ಸುಚೀಂದ್ರ, ಶಿವು ಚಿಕ್ಕಕಾನ್ಯ, ದಾರಿಪುರ ಸುನಿಲ್, ಸಾಗರ್ ಸಿಂಗ್ ರಜಪೂತ್, ರಂಗೇಶ್, ಸೋಮಣ್ಣ, ಲೋಕೇಶ್ ನಾಯಕ್, ರಾಚಪ್ಪಾಜಿ, ಎ.ಎಂ.ಗಿರೀಶ್, ರಾಹುಲ್, ಸ್ಕಂದ, ಶಾಸ್ತ, ರಾಮಾನುಜ ಸಹಕಾರ ಸಂಘದ ನಿರ್ದೇಶಕ ಚಕ್ರಪಾಣಿ, ಕುಂಚಿಟಿಗರ ಸಂಘದ ನಿರ್ದೇಶಕ ಎನ್. ದೀಪಕ್, ಶ್ರೀ ರಾಮಚಂದ್ರಾಪುರ ಮಠದ ಮೈಸೂರು ವಲಯದ ಉಪಾಧ್ಯಕ್ಷರಾದ ಡಿ. ಶಂಕರನಾರಾಯಣ ಶಾಸ್ತ್ರಿ, ಕೃಷ್ಣ ಹೆಗಡೆ, ಕೊಕ್ಕಡ ವೆಂಕಟರಮಣ ಭಟ್, ಮಹಿಳಾ ಮುಖಂಡರಾದ ತುಳಸಿ, ವಿನುತಾ, ಎನ್.ಶುಭಶ್ರೀ, ರಮಾಭಾಯಿ, ಶೃತಿ, ಸರಸ್ವತಿ ನಿಲಯದ ಮಹೇಶ್, ಸ್ಥಳೀಯ ಮುಖಂಡರಾದ ಕಾಂತರಾಜ ಅರಸ್, ದೇವರಾಜ್, ಗೋಪಾಲ್, ಸಂಜಯ್, ಹೇಮಂತ್ ದಾಮೋದರ್, ನಂದೀಶ್ ನಾಯಕ್ ಸೇರಿದಂತೆ ನೂರಾರು ಜನ ಜಾಥಾದಲ್ಲಿ ಭಾಗವಹಿಸಿದ್ದರು.