ಬೈಕ್ ಸವಾರರ ಮೇಲೆ ಒಂಟಿ ಸಲಗ ದಾಳಿ:ಲಾರಿಯಿಂದ ಬಚಾವ್

ಬಂಡೀಪುರ: ಬೈಕ್ ನಲ್ಲಿ ತೆರಳುತ್ತಿದ್ದ ಸವಾರರ ಮೇಲೆ ಒಂಟಿ ಸಲಗ ದಾಳಿ ನಡೆಸಿದ ಘಟನೆ ಬಂಡೀಪುರ ಅರಣ್ಯಪ್ರದೇಶದಲ್ಲಿ ನಡೆದಿದೆ.

ಅದೃಷ್ಟವಶಾತ್ ಇದೇ ವೇಳೆ ಬಂದ ಲಾರಿಯಿಂದ ಯುವಕರು ಬಚಾವಾಗಿದ್ದು ಈ ವಿಡಿಯೋ ವೈರಲ್ ಆಗಿದೆ.

ಬಂಡೀಪುರ ಮುಖ್ಯರಸ್ತೆಯಲ್ಲಿ ಬೈಕ್‌ನಲ್ಲಿ ತೆರಳುತ್ತಿದ್ದಾಗ ಒಂಟಿ ಸಲಗ ದಾಳಿ ನಡೆಸಿದೆ.ಒಬ್ಬ ಯುವಕ ಸ್ಥಳದಿಂದ ಓಡಿ ಪಾರಾದರೆ,ಮತ್ತೊಬ್ಬ ಅಸಹಾಯಕನಾಗಿ ಅಲ್ಲೇ ನಿಂತಿದ್ದ.

ಆನೆ ಯುವಕನ ಹತ್ತಿರ ಬರುವ ವೇಳೆಗೆ ಸರಿಯಾಗಿ ಲಾರಿಯೊಂದು ಆಗಮಿಸಿ ಜೋರಾಗಿ ಹಾರ್ನ್ ಮಾಡಿದ್ದರಿಂದ ಗಾಬರಿಯಾಗಿ ಸಲಗ ಹಿಂದೆ ಸರಿದಿದೆ.

ಲಾರಿ ಚಾಲಕನ ಸಮಯಪ್ರಜ್ಞೆಯಿಂದ ಅನಾಹುತ ತಪ್ಪಿದಂತಾಗಿದೆ,ನಂತರ
ಯುವಕರು ಅದೇ ಲಾರಿ ಹತ್ತಿ ಅಪಾಯದಿಂದ ಪಾರಾಗಿದ್ದಾರೆ.

ಯುವಕರ ಹೆಸರು ಗೊತಗತಾಗಿಲ್ಲ,ಮಾನಂದವಾಡಿಯಿಂದ ಮೈಸೂರಿಗೆ ಬರುತ್ತಿದ್ದರೆಂದು ಹೇಳಲಾಗಿದೆ.