ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದ ಬೈಕ್ ಸವಾರ!

ಮೈಸೂರು: ತಪ್ಪು ಮಾಡಿದ ಮೇಲೆ ದಂಡ ತಪ್ಪಿಸಿಕೊಳ್ಳಲು ದ್ವಿಚಕ್ರ ವಾಹನ ಸವಾರರು ಏನೇನೊ ತಲೆ ಉಪಯೋಗಿಸುತ್ತಾರೆ.
ಹಾಗೇನೆ‌ ಮೈಸೂರಿನಲ್ಲೊಬ್ಬ ಸವಾರ ಪೊಲೀಸರನ್ನ ಯಾಮಾರಿಸಲು ಹೋಗಿ‌ ಸಿಕ್ಕಿಬಿದ್ದಿದ್ದಾರೆ.

ಈತ ಮಾಡಿದ್ದಿಷ್ಟೆ.ದಂಡ ತಪ್ಪಿಸಿಕೊಳ್ಳಲು ನಂಬರ್ ಪ್ಲೇಟ್ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಬೈಕ್ ಚಾಲನೆ ಮಾಡಿ ಸಿಕ್ಕಿಬಿದ್ದಿದ್ದಾನೆ.

ವಾಹನ ಮಾಲೀಕನ ವಿರುದ್ದ ಲಕ್ಷ್ಮಿಪುರಂ ಪೊಲೀಸ್ ಠಾಣೆಯಲ್ಲಿ ಈಗ ಎಫ್.ಐ.ಆರ್.
ದಾಖಲಾಗಿದೆ.

ಯಮಹಾ ಬೈಕ್ KA09JY 0275 ನೊಂದಣಿ ಸಂಖ್ಯೆಯ ಪ್ಲೇಟ್ ನ ಕೊನೆಯ ಎರಡು ಸಂಖ್ಯೆ ಮೇಲೆ ಟಿಶ್ಯೂ ಪೇಪರ್ ಅಂಟಿಸಿ ಚಾಲನೆ ಮಾಡುತ್ತಿದ್ದ ವೇಳೆ ಕೆ.ಆರ್.ಟ್ರಾಫಿಕ್ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದು ಈಗ ದಂಡ‌ ಪೀಕಲೇಬೇಕಿದೆ.