ಬೈಕ್ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ ಸಿಕ್ಕಿಬಿದ್ದ ಯುವಕ

Spread the love

ಮೈಸೂರು: ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದರೆ ದಂಡ ತಪ್ಪಿಸಿಕೊಳ್ಳಲು ಯುವಕನೊಬ್ಬ ಬೈಕ್ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿ
ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

ಇದೀಗ ವಾಹನವನ್ನ ವಶಪಡಿಸಿಕೊಂಡಿರುವ ವಿವಿ ಪುರಂ ಠಾಣೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಕೆಸರೆ ಬಡಾವಣೆ ನಿವಾಸಿ ಮೊಹಮದ್ ಮುಜಾಹಿಲ್ ಸಂಚಾರಿ ಪೊಲೀಸರ ಕೈಗೆ ಸಿಕ್ಕಿಬಿದ್ದ ಯುವಕ.

ರಾಯಲ್ ಎನ್ಫೀಲ್ಡ್‌ ದ್ವಿಚಕ್ರ ವಾಹನದ
ನೊಂದಣಿ ಸಂಖ್ಯೆಗೆ ಸ್ಟಿಕ್ಕರ್ ಅಂಟಿಸಿದ್ದ,ಈಗ ಅದು ವಿವಿಪುರಂ ಠಾಣೆ ವಶದಲ್ಲಿದೆ.

ವಿವಿಪುರಂ ಸಂಚಾರಿ ಪೊಲೀಸರು ಆಕಾಶವಾಣಿ ಜಂಕ್ಷನ್ ಬಳಿ ಕೋಬ್ರಾ ಗಸ್ತಿನಲ್ಲಿದ್ದಾಗ ನೊಂದಣಿ ಸಂಖ್ಯೆ ಮೇಲೆ ಕಪ್ಪು ಸ್ಟಿಕ್ಕರ್ ಅಂಟಿಸಿರುವ ರಾಯಲ್ ಎನ್ಫೀಲ್ಡ್ ಬಂದಿದೆ.

ಬೈಕ್ ತಡೆಹಿಡಿದು ಯುವಕನನ್ನ ಪ್ರಶ್ನಿಸಿದಾಗ ಉತ್ತರಿಸಲಾಗದೆ ಗಲಿಬಿಲಿಗೊಂಡಿದ್ದಾನೆ,ನೊಂದಣಿ ಸಂಖ್ಯೆ KA09 EV4884 ನಂಬರ್‌ನ ಕೊನೆ ಮೂರು ನಂಬರ್ (884) ಗೆ ಕಪ್ಪು ಸ್ಟಿಕ್ಕರ್ ಅಂಟಿಸಿದ್ದಾನೆ.

ವಾಹನವನ್ನ ವಶಕ್ಕೆ ಪಡೆದು ಪರಿಶೀಲನೆ ನಡೆಸಿದಾಗ ಸಂಚಾರಿ ನಿಯಮಗಳನ್ನ ಉಲ್ಲಂಘಿಸಿದ ವೇಳೆ ವಿಧಿಸುವ ದಂಡ ತಪ್ಪಿಸಿಕೊಳ್ಳಲು ಉದ್ದೇಶಪೂರ್ವಕವಾಗಿ ಸ್ಟಿಕ್ಕರ್ ಅಂಟಿಸಿರುವುದು ದೃಢಪಟ್ಟಿದೆ.

ಮೊಹಮದ್ ಮುಜಾಹಿಲ್ ಹಾಗೂ ಆತನ ವಾಹನವನ್ನು ಸಂಚಾರಿ ಠಾಣೆ ಎಎಸ್ಸೈ ವೀರಭದ್ರಪ್ಪ ನವರು ವಶಕ್ಕೆ ಪಡೆದು‌ ವಿವಿ ಪುರಂ ಠಾಣೆಗೆ ಒಪ್ಪಿಸಿ ಪ್ರಕರಣ ದಾಖಲಿಸಿದ್ದಾರೆ.