ಭಾರೀ ಲಾರಿ ಬೈಕ್ ಗೆ ಡಿಕ್ಕಿ:ನವವಿವಾಹಿತೆ ಸಾ*ವು:ವಿಷಯ ತಿಳಿದು ಅಜ್ಜಿಯೂ ಸಾವು

ಬೆಂಗಳೂರು: ಭಾರೀ ಲಾರಿ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಅರಿಶಿನ ಕುಂಕುಮಕ್ಕೆ ಹೋಗುತ್ತಿದ್ದ ನವವಿವಾಹಿತೆ ದಾರುಣವಾಗಿ ಮೃತಪಟ್ಟ ಘಟನೆ ಬೆಂಗಳೂರಿನ ಲಗ್ಗೆರೆ ಬ್ರಿಡ್ಜ್ ಬಳಿ ನಡೆದಿದೆ.

ಈ ಆಘಾತದ ಸುದ್ದಿ ತಿಳಿದು ನವವಿವಾಹಿತೆಯ ಅಜ್ಜಿ ಶಾಕ್ ನಿಂದ ಸಾವನ್ನಪ್ಪಿದ್ದಾರೆ.

ಮಲ್ಲೇಶ್ವರಂ ನಿವಾಸಿ ಗೀತಾ (23) ಮೃತಪಟ್ಟ ನವವಿವಾಹಿತೆ.ಆಕೆಯ ಪತಿ ಸುನಿಲ್ ತೀವ್ರವಾಗಿ ಗಾಯಗೊಂಡಿದ್ದಾರೆ.

ಮೂರು ತಿಂಗಳ ಹಿಂದೆಯಸ್ಟೇ ಈ ದಂಪತಿ ಮದುವೆಯಾಗಿದ್ದರು. ಸುನಿಲ್ ಅವರ ಅಕ್ಕನ ಮನೆಗೆ ಅರಿಶಿನ,ಕುಂಕುಮಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು.

ಲಗ್ಗೆರೆ ಬ್ರಿಡ್ಜ್ ಬಳಿ ಬೈಕ್‌ಗೆ ಭಾರೀ ಲಾರಿ ಡಿಕ್ಕಿ ಹೊಡೆದಿದೆ.ಈ ವೇಳೆ ಗೀತಾ ಬೈಕ್‌ನಿಂದ ಕೆಳಗೆ ಬಿದ್ದಿದ್ದು, ಅವರ ಮೇಲೆ ಲಾರಿ ಹರಿದಿದೆ.

ಈ ವಿಷಯ ತಿಳಿಯುತ್ತಿದ್ದಂತೆ ಚನ್ನಪಟ್ಟಣದಲ್ಲಿ ವಾಸವಿದ್ದ ಗೀತಾ ಅವರ ಅಜ್ಜಿ ತೀವ್ರ ಆಘಾತದಿಂದ ಮೃತಪಟ್ಟಿದ್ದಾರೆ. ಈ ಘಟನೆ ರಾಜಾಜಿನಗರ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.

ರಾಜಾಜಿನಗರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪಘಾತ ಸಂಬಂಧ ಪ್ರಕರಣ ದಾಖಲಾಗಿದೆ.