ಬಿಹಾರ ಚುನಾವಣೆ:ಎನ್ ಡಿ ಎ ಬಂದರೆನಿತೀಶ್ ಕುಮಾರ್ ಸಿಎಂ-ನಿತ್ಯಾನಂದ ರೈ

Spread the love

ಪಾಟ್ನಾ: 2025 ರ ಬಿಹಾರ ವಿಧಾನಸಭಾ ಚುನಾವಣೆಯ ನಂತರ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬಂದರೆ ನಿತೀಶ್ ಕುಮಾರ್ ಮುಖ್ಯಮಂತ್ರಿಯಾಗುವರು ಎಂದು ಕೇಂದ್ರ ಸಚಿವ ನಿತ್ಯಾನಂದ ರೈ ಹೇಳಿದ್ದಾರೆ.

ಚುನಾವಣೆ ನಂತರ ನಿತೀಶ್ ಕುಮಾರ್ ಎನ್‌ಡಿಎ ಸಿಎಂ ಆಗಲಿದ್ದಾರೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಆಪ್ತರಲ್ಲಿ ಒಬ್ಬರಾದ ಬಿಜೆಪಿಯ ಹಿರಿಯ ನಾಯಕ ನಿತ್ಯಾನಂದ ರೈ ಹೇಳಿದ್ದಾರೆ.

ಇದೇ ಅಕ್ಟೋಬರ್-ನವೆಂಬರ್ ನಲ್ಲಿ ನಡೆಯಲಿರುವ ಚುನಾವಣೆಗೂ ಮುನ್ನ ಎನ್‌ಡಿಎ ಸಿಎಂ ಅಭ್ಯರ್ಥಿ ಕುರಿತು ನಡೆಯುತ್ತಿರುವ ಊಹಾಪೋಹಗಳ ಮಧ್ಯೆ ರೈ ಅವರ ಈ ಹೇಳಿಕೆ ಮಹತ್ವ ಪಡೆದುಕೊಂಡಿದೆ.

ಬಿಜೆಪಿಯ ವರಿಷ್ಠರು ನಿತೀಶ್ ಕುಮಾರ್ ಅವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಿಸಲು ಹಿಂಜರಿಯುತ್ತಿದ್ದಾರೆ ಎಂಬ ಮಾತುಗಳು ಕೇಳಿಬಂದಿತ್ತು. ಈ ಊಹಾಪೋಹಗಳಿಗೆ ನಿತ್ಯಾನಂದ ರೈ ತೆರೆ ಎಳೆಯಲು ಯತ್ನಸಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ.

ನಿತೀಶ್ ಕುಮಾರ್ ಅವರ ನಾಯಕತ್ವದಲ್ಲಿಯೇ ಎನ್ ಡಿಎ ಚುನಾವಣೆ ಎದುರಿಸಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಗೃಹ ಸಚಿವ ಅಮಿತ್ ಶಾ ಸೇರಿದಂತೆ ಹಲವು ನಾಯಕರು ಕೂಡಾ ಹೇಳುತ್ತಿದ್ದಾರೆ,ಕಾದು ನೋಡಬೇಕು ಏನಾಗುವುದೊ ಎಂಬುದನ್ನು.