ಮೈಸೂರು: ತಮ್ಮ ಇಡೀ ಬದುಕನ್ನು ಕನ್ನಡ ನಾಡಿನ ನಿರ್ಮಾಣಕ್ಕಾಗಿ ಮೀಸಲಿಟ್ಟ ಕನ್ನಡದ ಕಟ್ಟಾಳುಗಳನ್ನು ನಾವೆಲ್ಲರೂ ಸದಾ ಸ್ಮರಿಸೋಣ ಎಂದು ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ಅಧ್ಯಕ್ಷರಾದ ಈ ಸಂದೀಪ್ ಕರೆ ನೀಡಿದರು.
ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ವತಿಯಿಂದ 17ನೇ ವರ್ಷದ ಕನ್ನಡ ರಾಜ್ಯೋತ್ಸವ ಅಂಗವಾಗಿ ಆಯೋಜಿಸಿದ್ದ ವಿವಿಧ ಕಲಾತಂಡದೊಂದಿಗೆ ತಾಯಿ ಭುವನೇಶ್ವರಿ,ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಮೂರ್ತಿಯನ್ನು ಒಳಗೊಂಡ ಭವ್ಯ ಮೆರವಣಿಗೆಗೆ ಚಾಲನೆ ನೀಡಿ ಸಂದೀಪ್ ಮಾತನಾಡಿದರು.
ಅನೇಕ ನಾಯಕರು ನಾಡು ಕಟ್ಟಿ ಬೆಳೆಸಿದ್ದಾರೆ,
ಕನ್ನಡ ನಾಡು-ನುಡಿಗಾಗಿ ಶ್ರಮಿಸಿದ ಮಹನೀಯರು ನಮ್ಮೆಲ್ಲರಿಗೂ ಮಾದರಿ, ಕನ್ನಡ ಉಳಿಸಿ ಬೆಳೆಸುವುದು ನಮ್ಮೆಲ್ಲರ ಜವಾಬ್ದಾರಿ ಎಂದು ತಿಳಿಸಿದರು.
ಮೆರವಣಿಗೆಯು ನಗರದ ಹಳೆ ಸಂತೆಪೇಟೆಯಲ್ಲಿರುವ ನಂಜುಂಡೇಶ್ವರ ಸ್ವಾಮಿ ದೇವಸ್ಥಾನದ ಮುಂಭಾಗ
ಪ್ರಾರಂಭವಾಗಿ,ದೇವರಾಜ ಮಾರುಕಟ್ಟೆ ಮುಂಭಾಗ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಮಾಜಿ ಮಹಾಪೌರರಾದ ರವಿಕುಮಾರ್,ನಗರ ಪಾಲಿಕೆ ಮಾಜಿ ಸದಸ್ಯರಾದ ಪ್ರಶಾಂತ್ ಗೌಡ,ಅಧ್ಯಕ್ಷರಾದ ಬಿ ಸಂದೀಪ್,ಮಾದೇವ್, ಆನಂದ್, ಮಂಜು, ರಾಮರಾಜ,ರಮೇಶ್, ಸುಮನ್, ದೀಪಕ್ ಗೌಡ, ಹಿಬ್ಬು,ನಾಗರಾಜ್ ಸೇರಿದಂತೆ ಅನೇಕ ಅಭಿಮಾನಿಗಳು ಹಾಜರಿದ್ದರು.
