ಮೈಸೂರು:ಮೈಸೂರು ಸಂಸ್ಥಾನದ ಮಹಾರಾಜರೊಂದಿಗೆ ಮಾರ್ಗದರ್ಶಕರಾಗಿ ಮಹತ್ವದ ಪಾತ್ರ ವಹಿಸಿದ್ದವರು ರಾಜಗುರು ತಾಯ್ಯರವರು ಎಂದು ಶಾಸಕ ಕೆ.ಹರೀಶ್ ಗೌಡ ಹೇಳಿದರು.
ಮಗ್ಗೆ ವೆಂಕಟಕೃಷ್ಣಯ್ಯ ತಾತಯ್ಯನವರ 180ನೇ ಜಯಂತಿ ಅಂಗವಾಗಿ ಮೈಸೂರು ಅನಾಥಾಲಯ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ನಗರ ಬಸ್ ನಿಲ್ದಾಣದ ಮುಂಭಾಗದ ತಾತಯ್ಯ ಉದ್ಯಾನದಲ್ಲಿ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ತಾತಯ್ಯ ರವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಂತರ ಶಾಸಕರು ಮಾತನಾಡಿದರು.
ಪತ್ರಿಕಾ ರಂಗದ ಪ್ರೋತ್ಸಾಹ ಮತ್ತು ಪತ್ರಕರ್ತರ ಕರ್ತವ್ಯ ನಿರ್ವಹಣೆ ಪತ್ರಿಕೆ ಮುದ್ರಣದಿಂದ ಓದುಗರ ಮನೆಯಂಗಳದವರೆಗೂ ಸಾಧ್ವಿ, ವೃತ್ತಾಂತ, ಚಿಂತಾಮಣಿ, ಮೈಸೂರು ಹೆರಾಲ್ಡ್ ಮುಂತಾದ ಪತ್ರಿಕೆಗಳ ಮೂಲಕ ಕನ್ನಡ ಪತ್ರಿಕೋದ್ಯಮಕ್ಕೆ ಭದ್ರ ಬುನಾದಿ ಹಾಕಿದ ಪತ್ರಿಕಾ ಭೀಷ್ಮ ತಾಯ್ಯನವರು ಎಂದು ಬಣ್ಣಿಸಿದರು.
ಸ್ವಾತಂತ್ರ್ಯ ಸಂಗ್ರಾಮದಲ್ಲಿ ವಿದ್ಯಾರ್ಥಿಗಳಿಗೆ ಯುವಕರಿಗೆ ಪತ್ರಿಕೆಗಳ ಮೂಲಕ ದೇಶಪ್ರೇಮ ಜಾಗೃತಿ ಮೂಡಿಸುತ್ತಿದ್ದರು, ಸಮಾಜದಲ್ಲಿ ಅಸ್ಪೃಶ್ಯತೆ, ಜೀತ ಪದ್ದತಿ ವಿರುದ್ಧ ಜನಾಂದೋಲನ ಹೋರಾಟ ಮಾಡಿದವರು ತಾತಯ್ಯನವರು ಎಂದು ತಿಳಿಸಿದರು.
ವಲಯ ಆಯುಕ್ತರಾದ ಪ್ರಭಾ, ಹಿರಿಯ ಸಮಾಜ ಸೇವಕ ಕೆ.ರಘುರಂ ವಾಜಪೇಯಿ, ಅನಾಥಾಲಯ ಕಾರ್ಯದರ್ಶಿ ಸುಂದರೇಶನ್, ಹೇಮಲತಾ, ನಿರೂಪಕ ಅಜಯ್ ಶಾಸ್ತ್ರಿ, ನಂಜುಂಡಿ, ರವಿಚಂದ್ರ ನವೀನ್, ರಂಗನಾಥ್, ಇಂಜಿನಿಯರ್ ತೇಜಸ್ವನಿ, ಶಾಂತರಾಜು, ಕೃಷ್ಣಪ್ಪ ಮತ್ತಿತರರು ಹಾಜರಿದ್ದರು.