ಮೈಸೂರು: ಕನ್ನಡ ಭಾಷೆ ಉಳಿಯಬೇಕಾದರೆ ಪ್ರತಿಯೊಬ್ಬ ಕನ್ನಡಿಗ ಭಾಷೆಯ ಬಗ್ಗೆ ಅಭಿಮಾನ ಬೆಳೆಸಿಕೊಳ್ಳಬೇಕು ಎಂದು ಶಾಸಕ ಹರೀಶ್ ಗೌಡ ಕರೆ ನೀಡಿದರು.
ನಗರದ ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ವತಿಯಿಂದ 17ನೇ ವರ್ಷದ ಕನ್ನಡ ರಾಜ್ಯೋತ್ಸವದ ಪ್ರಯುಕ್ತ
ಹಮ್ಮಿಕೊಂಡಿರುವ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳನ್ನು ಹರೀಶ್ ಗೌಡ ಅವರ ಕೆ ಜಿ ಕೊಪ್ಪಲಿ ನಲ್ಲಿರುವ ಕಚೇರಿಯಲ್ಲಿ ಬಿಡುಗಡೆಗೊಳಿಸಲಾಯಿತು.
ಈ ವೇಳೆ ಮಾತನಾಡಿದ ಶಾಸಕರು,ಪ್ರತಿಯೊಬ್ಬರೂ
ಭಾಷಾಭಿಮಾನ ಬೆಳೆಸಿಕೊಂಡಾಗ ಮಾತ್ರ ಕನ್ನಡ ಸಮೃದ್ಧವಾಗಿ ಬೆಳೆಯಲು ಸಾಧ್ಯ ಎಂದು ಹೇಳಿದರು.
ವರ್ಷಕ್ಕೊಮ್ಮೆ ರಾಜ್ಯೋತ್ಸವ ಆಚರಿಸಿದರೆ ಸಾಲದು, ಕನ್ನಡ ಬೆಳವಣಿಗೆಯ ಬಗ್ಗೆ ನಿತ್ಯ ಚಿಂತನೆ ನಡೆಯಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮ ಯಶಸ್ವಿಗೊಳ್ಳಲಿ ಎಂದು ಹರೀಶ್‌ಗೌಡ ಶುಭ ಹಾರೈಸಿದರು.
ನವಂಬರ್ 3ರಂದು ಸೋಮವಾರ ಮಧ್ಯಾಹ್ನ 3 ಗಂಟೆಗೆ ಹಳೆ ಸಂತೆಪೇಟೆಯ ನಂಜುಂಡೇಶ್ವರ ದೇವಸ್ಥಾನದ ಮುಂಭಾಗ ಕನ್ನಡದ ತೇರು ಭವ್ಯ ಮೆರವಣಿಗೆ ಪ್ರಾರಂಭಗೊಂಡು ದೇವರಾಜ ಮಾರ್ಕೆಟ್ ನಲ್ಲಿ ಅಂತ್ಯಗೊಳ್ಳುವುದು.
ಭುವನೇಶ್ವರಿ, ನಾಲ್ವಡಿ ಕೃಷ್ಣರಾಜ ಒಡೆಯರ್, ಭಾರತ ರತ್ನ ಸರ್ ಎಂ ವಿಶ್ವೇಶ್ವರಯ್ಯ ಅವರ ಭಾವಚಿತ್ರ ಹಾಗೂ ವಿವಿಧ ಕಲಾತಂಡಗಳ ಜೊತೆ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ಈ ಕಾರ್ಯಕ್ರಮಕ್ಕೆ ಸಂಸದರಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್, ಶಾಸಕರಾದ ಹರೀಶ್ ಗೌಡ ಸೇರಿದಂತೆ ಇನ್ನಿತರ ಮುಖಂಡರುಗಳು ಭಾಗಿಯಾಗಲಿದ್ದಾರೆ.
ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡ ಪ್ರೇಮಿಗಳು ಹಾಗೂ ಸಾರ್ವಜನಿಕರು ಕಾರ್ಯಕ್ರಮಕ್ಕೆ ಆಗಮಿಸಿ ಯಶಸ್ವಿಗೊಳಿಸಬೇಕೆಂದು
ದೇವರಾಜ ಮಾರ್ಕೆಟ್ ಯುವ ಬ್ರಿಗೇಡ್ ಅಧ್ಯಕ್ಷ ಬಿ.ಸಂದೀಪ್ ಈ ವೇಳೆ ಮನವಿ ಮಾಡಿದರು
ಈ ಸಂದರ್ಭದಲ್ಲಿ ನವೀನ್, ಕಾರ್ತಿಕ್ ಗೌಡ, ಹಿಬ್ಬು, ಪುರುಷೋತ್ತಮ್, ಸಾಗರ್, ಮುಂತಾದವರು ಹಾಜರಿದ್ದರು

