ಎ .ಕೆ.ಬಿ.ಎಮ್.ಎಸ್ ಚುನಾವಣೆ; ಭಾನುಪ್ರಕಾಶ್ ಶರ್ಮಾಗೆ ಬೆಂಬಲ- ನಟರಾಜ್ ಜೋಯಿಸ್

Spread the love

ಮೈಸೂರು: ಶ್ರೀರಾಂಪುರದಲ್ಲಿರುವ ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಂಗ ಸಂಸ್ಥೆ ಶಾಕಂಬರಿ ಧಾರ್ಮಿಕ ಕೇಂದ್ರದಲ್ಲಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ಚುನಾವಣೆ ಪ್ರಚಾರ ಸಭೆ ಹಮ್ಮಿಕೊಳ್ಳಲಾಯಿತು.

ಮೈಸೂರು ಜಿಲ್ಲಾ ಬ್ರಾಹ್ಮಣ ಮಹಾಸಭಾ ಅಧ್ಯಕ್ಷರಾದ ಡಾ.ನಟರಾಜ್ ಜೋಯಿಸ್ ಅವರು ಪಾಲ್ಗೊಂಡು ಏಪ್ರಿಲ್ 13ರಂದು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ವೇದಮೂರ್ತಿ ಡಾ.ಭಾನುಪ್ರಕಾಶ್ ಶರ್ಮಾ ಹಾಗೂ ಮೈಸೂರು ಜಿಲ್ಲಾ ಪ್ರತಿನಿಧಿ ಸ್ಥಾನಕ್ಕೆ ಸ್ಪರ್ಧಿಸಿರುವ ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿಟಿ ಪ್ರಕಾಶ್ ಹಾಗೂ ಮೈಸೂರು ಬ್ರಾಹ್ಮಣ ಯುವ ವೇದಿಕೆಯ ಸಂಘಟನಾ ಕಾರ್ಯದರ್ಶಿ ಜಗದೀಶ್ ಕುಮಾರ್ ರವರನ್ನು ಸನ್ಮಾನಿಸಿ ಬೆಂಬಲ ಸೂಚಿಸಿದರು

ಇದೇ ವೇಳೆ ಡಾ. ಬಿ.ಆರ್ ನಟರಾಜ ಜೋಯಿಸ್ ಅವರು ಮಾತನಾಡಿ, ಮೈಸೂರಿನಲ್ಲಿ ಬ್ರಾಹ್ಮಣ ಸಮುದಾಯದ 4150 ಮಂದಿ ಎಕೆಬಿಎಮ್ಎಸ್ ಸದಸ್ಯರಾಗಿದ್ದು ಮುಂದಿನ‌ ದಿನದಲ್ಲಿ ಬೃಹತ್ ಸದಸ್ಯತ್ವ ಅಭಿಯಾನ ಹಮ್ಮಿಕೊಂಡು ಆರೋಗ್ಯವಿಮೆ ಸೇರಿದಂತೆ ಹಲವಾರು ಅಭಿವೃದ್ಧಿ ಕಾರ್ಯಗಳನ್ನು ತರಲು ಯೋಜನೆ ರೂಪಿಸಲಾಗಿದೆ, ಸಮುದಾಯಕ್ಕಾಗಿ ಶ್ರಮಿಸುತ್ತಾ ಬಂದಿರುವ ವೈದಿಕ ರತ್ನ ಎಂದೆ ಬಿರುದು ಪಡೆದಿರುವ ಭಾನುಪ್ರಕಾಶ್ ಶರ್ಮ ಮತ್ತು ಬ್ರಾಹ್ಮಣ ಸಂಘದ ಅಧ್ಯಕ್ಷರಾದ ಡಿ.ಟಿ. ಪ್ರಕಾಶ್ ಹಾಗೂ ಬ್ರಾಹ್ಮಣ ಯುವ ವೇದಿಕೆಯ ಕಡಕೊಳ ಜಗದೀಶ್ ರವರಿಗೆ ಸದಸ್ಯರು ಮತಚಾಲಾಯಿಸಬೇಕೆಂದು ಕರೆ ನೀಡಿದರು.

ಸಭೆಯಲ್ಲಿ ಹಿರಿಯ ಸಮಾಜಸೇವಕರಾದ ಕೆ ರಘುರಾಮ್ ವಾಜಪಾಯಿ, ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ ರಾಜ್ಯ ಉಪಾಧ್ಯಕ್ಷರಾದ ಪುಷ್ಪ ಅಯ್ಯಂಗಾರ್, ವಿಜಯಲಕ್ಷ್ಮಿ, ಜಯಸಿಂಹ, ಸುಂದರ ಮೂರ್ತಿ ಹಾಗೂ ವಿಪ್ರ ಮುಖಂಡರು ಪಾಲ್ಗೊಂಡಿದ್ದರು.