ಭೈರವಿ ಗೌಡತಿಯರ ಬಳಗದಿಂದ ಶಿಕ್ಷಕರಿಗೆ ಸನ್ಮಾನ

Spread the love

ಮೈಸೂರು: ನಗರದ ವಿಜಯನಗರ ದಲ್ಲಿರುವ ಕನ್ನಡ ಸಾಹಿತ್ಯ ಭವನದಲ್ಲಿ
ಭೈರವಿ ಗೌಡತಿಯರ ಬಳಗದ ವತಿಯಿಂದ ಚಾಮುಂಡೇಶ್ವರಿ ಪೂಜೆ, ಶಿಕ್ಷಕರ ದಿನಾಚರಣೆ ಹಾಗೂ ದಾಂಡಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಸುಮಾರು 150ಕ್ಕೂ ಹೆಚ್ಚು ಸದಸ್ಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

ಬಳಗದ ಅಧ್ಯಕ್ಷರಾದ ರೇವತಿ ಕೃಷ್ಣಪ್ಪ ಅಧ್ಯಕ್ಷತೆ ವಹಿಸಿದ್ದರು.ಈ ಸಂದರ್ಭದಲ್ಲಿ ರಾಷ್ಟ್ರ ಪ್ರಶಸ್ತಿ ಪುರಸ್ಕೃತ ಶಿಕ್ಷಕರಾದಂತ ಕೆ ಎಸ್ ಮಧುಸೂದನ್ ಹಾಗೂ ಬಳಗದ ಸದಸ್ಯರಾಗಿರುವ ಶಿಕ್ಷಕಿಯರಾದ ಪ್ರೊಫೆಸರ್ ಸುಮಿತ್ರ , ಡಾ ಲಕ್ಷ್ಮಿ ಪಿ, ಅನುಸೂಯ ಎಚ್, ಡಾಕ್ಟರ್ ಜಿ ಎನ್ ಪೂರ್ಣಿಮಾ, ಸಿಂಧುಶ್ರೀ ಎಲ್ ಎಸ್, ನೇತ್ರಾವತಿ,ಚಾಂದಿನಿ ಕುಮಾರ್, ಡಾ ಪವಿತ್ರ ಆರ್ ಎಚ್ , ಡಾ ನಯನ ಎಂ ಜಿ
ಅವರುಗನ್ನು ಸನ್ಮಾನಿಸಲಾಯಿತು.

ನಂತರ ಬಳಗದ ಸದಸ್ಯರು ನಡೆದ ದಾಂಡಿಯ ಕಾರ್ಯಕ್ರಮವನ್ನು ಸಂಭ್ರಮ ಸಡಗರದಿಂದ ಆಚರಿಸಿದರು.

ಈ ಸಂದರ್ಭದಲ್ಲಿ ಬಳಗದ ಗೌರವ ಅಧ್ಯಕ್ಷರಾದ ರಾಧಾ ಲಂಕೇಗೌಡ, ಪದಾಧಿಕಾರಿಗಳಾದ ಹೇಮ ನಂದೀಶ್, ಕೋಮಲ ವೆಂಕಟೇಶ್,ಸುಶೀಲ ಬಸವರಾಜು ಮತ್ತು ಬಳಗದ ಸದಸ್ಯರು ಉಪಸ್ಥಿತರಿದ್ದರು.