ಮೈಸೂರು: ಭಗೀರಥ ಚಲನಚಿತ್ರ ಬಿಡುಗಡೆಯಾಗಿ ಮೂರನೇ ವಾರದತ್ತ ದಾಪುಗಾಲಿಡುತ್ತಿದ್ದು, ಸಿನಿಮಾ ನೋಡಿದ ಪ್ರತಿಯೊಬ್ಬರು ಭಗೀರಥನನ್ನು ಮೆಚ್ಚಿ ಹಾಡಿ ಹೊಗಳಿದ್ದಾರೆ.
ಬಹಳ ವರ್ಷಗಳ ನಂತರ ಒಂದು ಕೌಟುಂಬಿಕ ಚಿತ್ರ ಸಕುಟುಂಬ ಸಮೇತವಾಗಿ ನೋಡಬಹುದೆಂದು ಪ್ರೇಕ್ಷಕರು ಹೇಳುತ್ತಿದ್ದಾರೆ.
ಇಂದಿಗೆ ಚಿತ್ರ ಬಿಡುಗಡೆಯಾಗಿ ಮೂರನೇ ವಾರದ ಕಾರಣ ಮೈಸೂರಿನ ಪ್ರಭ ಚಿತ್ರ ಮಂದಿರದ ಮುಂಭಾಗ ಕುಂಬಳ ಕಾಯಿ ಹೊಡೆದು, ಇಡುಗಾಯಿ ಹಾಕಿ ನಂತರ ಪ್ರೇಕ್ಷಕರಿಗೆ ಸಿಹಿ ಹಂಚಲಾಯಿತು.
ಈ ಸಂದರ್ಭದಲ್ಲಿ ಉತ್ತಮ ಕೌಟುಂಬಿಕ ಚಿತ್ರ ಶತದಿನೋತ್ಸವ ಆಚರಿಸಲಿ ಎಂದು ಪ್ರೇಕ್ಷಕರು, ಜೆಪಿ ಅವರ ಅಭಿಮಾನಿಗಳು ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಕರ್ನಾಟಕ ಸೇನಾ ಪಡೆಯ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಪ್ರದೀಪ್, ಅಖಿಲ ಕರ್ನಾಟಕ ಒಕ್ಕಲಿಗರ ಗೌರವಾಧ್ಯಕ್ಷ ಗೋವಿಂದೇಗೌಡ, ಸುರೇಶ್ ಗೋಲ್ಡ್, ಹನುಮಂತಯ್ಯ, ಸಿಂಧುವಳ್ಳಿ ಶಿವಕುಮಾರ್, ಪ್ರಭುಶಂಕರ, ರಘು, ನಾಗರಾಜು, ರವೀಶ್, ನೇಹಾ, ದರ್ಶನ್ ಗೌಡ, ಕೃಷ್ಣಪ್ಪ, ಪ್ರಭಾಕರ್, ಹನುಮಂತೇಗೌಡ, ಭಾಗ್ಯಮ್ಮ, ಲಹರಿ, ಮಂಜುಳಾ, ವಿಷ್ಣು ಮತ್ತಿತರರು ಹಾಜರಿದ್ದರು.
