ಶತದಿನ ಪೂರೈಸಿದ ಭಗೀರಥ ಚಲನಚಿತ್ರ:ನಾಳೆ ಸ್ಟಾರ್ ಮೆರವಣಿಗೆ

ಮೈಸೂರು: ಕಾವೇರಿ ಕ್ರಿಯಾ ಸಮಿತಿ ಅಧ್ಯಕ್ಷರು ಹಾಗೂ ಡೇರಿಂಗ್ ಸ್ಟಾರ್ ಎಸ್ ಜಯ ಪ್ರಕಾಶ್ ಅಭಿನಯಿಸಿರುವ ಭಗೀರಥ ಚಲನಚಿತ್ರ ಶತದಿನ ಪೂರೈಸಿರುವ ಹಿನ್ನೆಲೆಯಲ್ಲಿ ಡಾ. ರಾಜಕುಮಾರ್ ಸಂಘದ ನೇತೃತ್ವದಲ್ಲಿ ನಾಳೆ ಸ್ಟಾರ್ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.

ಸುದ್ದಿಗೋಷ್ಠಿಯಲ್ಲಿ ಈ ವಿಷಯವನ್ನು ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ರಾಜಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ ತಿಳಿಸಿದರು.

ಜೆಪಿ ಅಭಿಮಾನಿ ಬಳಗ ಸೇರಿದಂತೆ, ಅನೇಕ ಸಂಘ ಸಂಸ್ಥೆಗಳು ಮೆರವಣಿಗೆ ಮೂಲಕ ಭಗೀರಥ ಚಲನಚಿತ್ರ ತಂಡಕ್ಕೆ ಪ್ರೋತ್ಸಾಹ ನೀಡುವ ಜೊತೆಗೆ ಅಭಿನಂದನೆಯನ್ನು ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ನಾಳೆ ಶನಿವಾರದಂದು ಬೆಳಗ್ಗೆ 11 ಗಂಟೆಗೆ ಗನ್ ಹೌಸ್ ಮುಂಭಾಗದಿಂದ ಹೊರಟು ಪ್ರಭಾ ಟಾಕೀಸ್ ವರೆಗೆ ಮೆರವಣಿಗೆ ನಡೆಯಲಿದೆ.

ಈ ಚಿತ್ರವನ್ನು ರಾಜ್ಯಾದ್ಯಂತ ವೀಕ್ಷಿಸಿದ ಸಮಸ್ತ ಕರ್ನಾಟಕದ ವೀಕ್ಷಕರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತೇವೆ ಹಾಗೂ ನಾಳೆ ಪ್ರಭಾ ಟಾಕೀಸ್ ನಲ್ಲಿ ಸಿಹಿ ಹಂಚಲಾಗುವುದೆಂದು ತಿಳಿಸಿದರು.

ಕರ್ನಾಟಕ ಸೇನಾ ಪಡೆ ಅಧ್ಯಕ್ಷ ತೇಜೇಶ್ ಲೋಕೇಶ್ ಗೌಡ, ಡಾ. ರಾಜಕುಮಾರ್ ಸಂಘದ ಅಧ್ಯಕ್ಷ ಮಹದೇವಸ್ವಾಮಿ ಅವರೊಂದಿಗೆ ವರಕೂಡು ಕೃಷ್ಣೇಗೌಡ, ಭಾಗ್ಯಮ್ಮ, ಮಂಜುಳಾ,ಕೃಷ್ಣಪ್ಪ, ಹನುಮಂತಯ್ಯ, ರಘು ಅರಸ್, ಮಹೇಶ್ ಕುಮಾರ್ ಉಪಸ್ಥಿತರಿದ್ದರು.