ಮೈಸೂರು: ಅಂತರರಾಷ್ಟ್ರೀಯ ವಿಶೇಷ ಚೇತನ ಕ್ರೀಡಾಪಟು ಅಲೋಕ್ ಜೈನ್ ಅವರು ಆರ್‌ಸಿಬಿ ಗೆಲುವಿಗೆ ಶುಭ ಹಾರೈಸಿದ್ದಾರೆ.

ಐಪಿಎಲ್ ನಲ್ಲಿ ಆರ್ ಸಿ ಬಿ
ವಿಜಯ ಸಾಧಿಸಲಿ ಎಂದು ವಿಕಲ ಚೇತನ ಕ್ರೀಡಾಪಟು ಅಲೋಕ್ ಜೈನ್ ಆರ್‌ಸಿಬಿ ಫ್ಲಾಗ್ ಹಿಡಿದು ಶುಭ ಹಾರೈಸಿದರು.

ಈ ವೇಳೆ ಮಾತನಾಡಿದ ಅಲೋಕ್ ಜೈನ್ ,ಈ ಬಾರಿ ನಮ್ಮೆಲ್ಲರ ಕನಸು ಈಡೇರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನಾವು 18 ವರ್ಷಗಳಿಂದ ಐಪಿಎಲ್ ಕಪ್ ಗಾಗಿ ಕಾಯುತ್ತಿದ್ದೆವು,ಈ ಬಾರಿ ಇದು ಕೈಗೂಡಲಿದೆ ಅದಕ್ಕಾಗಿ ಕಾಯುತ್ತಿದ್ದೇವೆ,ಆರ್ ಸಿ ಬಿ ತಂಡ ಈ ಬಾರಿ ಚೆನ್ನಾಗಿ ಆಡುತ್ತಿದೆ ಹಾಗಾಗಿ ಗೆಲುವು ನಮ್ಮದೇ ಎಂದು ಅಲೋಕ್ ಜೈನ್ ಹೇಳಿದರು.